ಉದ್ಯಾವರ ಸೇತುವೆಗೆ ಕೆಎಸ್ ಆರ್ ಟಿಸಿ ಡಿಕ್ಕಿ ➤ ಪ್ರಯಾಣಿಕರು ಅಪಾಯದಿಂದ ಪಾರು..!!!

(ನ್ಯೂಸ್ ಕಡಬ) newskadaba.com ಉಡುಪಿ, ಮೇ.29., ಕೆ.ಎಸ್‍ಆರ್. ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಘಟನೆ ಉಡುಪಿ ಉದ್ಯಾವರದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶುಕ್ರವಾರ ನಡೆದಿದೆ. ಮಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಕೆ.ಎಸ್‍ಆರ್. ಟಿಸಿ ಬಸ್ಸು ಚಾಲಕನ ನಿಯತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸದ್ಯ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದೆ.

ಉದ್ಯಾವರ ಸೇತುವೆಗೆ ಕೆಎಸ್ ಆರ್ ಟಿಸಿ ಡಿಕ್ಕಿ ➤ ಪ್ರಯಾಣಿಕರು ಅಪಾಯದಿಂದ ಪಾರು..!!! Read More »

ಕರಾವಳಿ

ರಾಜ್ಯಸಭಾ ಕಛೇರಿ ಅಧಿಕಾರಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ. ಮೇ. 29, ರಾಜ್ಯಸಭಾ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಅಧಿಕಾರಿಗೆ ಸೋಂಕು ತಗುಲಿರುವ ಕಾರಣದಿಂದ ರಾಜ್ಯಸಭೆ ಕಚೇರಿಯ ಒಂದು ಭಾಗವನ್ನು ಸೀಲ್‌ಡೌನ್ ಮಾಡಲಾಗಿದ್ದು, ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭಾ ಕಛೇರಿ ಅಧಿಕಾರಿಗೆ ಕೊರೋನಾ ಪಾಸಿಟಿವ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಯಾದಗಿರಿಯಲ್ಲಿ ಕೋವಿಡ್ ಸ್ಪೋಟ ➤ ಬರೋಬ್ಬರಿ 60 ಜನರಿಗೆ ಸೋಂಕು ದೃಢ

(ನ್ಯೂಸ್ ಕಡಬ) newskadaba.com ಯಾದಗಿರಿ, ಮೇ.29: ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್-19 ಮಹಾಸ್ಪೋಟ ಸಂಭವಿಸಿದ್ದು, ಬರೋಬ್ಬರಿ 60 ಜನರಲ್ಲಿ ಸೋಂಕು ತಾಗಿರುವುದು ದೃಡವಾಗಿದೆ. ಎರಡು ವರ್ಷದ ಬಾಲಕ, ಮೂರು ವರ್ಷದ ಬಾಲಕಿ ಪಿ ಮತ್ತಿಬ್ಬವರು ಬಾಲಕರಾ ಮತ್ತು ಪಿ -2699, 5 ವರ್ಷದ ಬಾಲಕ ಪಿ-2670, 8 ವರ್ಷದ ಬಾಲಕಿ 2669 ಹಾಗೂ ಬಾಲಕ ಪಿ- 2682 ಸೇರಿ 17 ಜನ ಅಪ್ರಾಪ್ತರಲ್ಲಿ ಸೋಂಕು ವಕ್ಕರಿಸಿದೆ.   ಜಿಲ್ಲೆಯಲ್ಲಿ ಒಂದಂಕಿಗೆ ಇಳಿದಿದ್ದ ಸೋಂಕಿತರ ಸಂಖ್ಯೆ ಇಂದು ಏಕಾಏಕಿ 60

ಯಾದಗಿರಿಯಲ್ಲಿ ಕೋವಿಡ್ ಸ್ಪೋಟ ➤ ಬರೋಬ್ಬರಿ 60 ಜನರಿಗೆ ಸೋಂಕು ದೃಢ Read More »

ಕರ್ನಾಟಕ

ಕಡಬ ತಾಲೂಕು ಮಟ್ಟದ ನೆರೆ ಮುಂಜಾಗ್ರತಾ ಸಭೆ ➤ ಸಮಿತಿ ರಚನೆಗೆ ತಹಸೀಲ್ದಾರ್ ಸೂಚನೆ

(ನ್ಯೂಸ್ ಕಡಬ) newskadaba.com ಕಡಬ,ಮೇ.29:  ಗ್ರಾಮ ಪಂಚಾಯತ್ ಮಟ್ಟದಲ್ಲಿ ನೆರೆ ಮುಂಜಾಗ್ರತಾ ಸಮಿತಿ ರಚಿಸಿಕೊಂಡು ಮುಂದಿನ ಮಳೆಗಾಲದಲ್ಲಿ ಯಾವುದೇ ಪರಿಸ್ಥಿತಿ ಬಂದರೂ ಸಮರ್ಥವಾಗಿ ಎದುರಿಸಲು ಸನ್ನದ್ದರಾಗುವಂತೆ ಅಧಿಕಾರಿಗಳಿಗೆ ತಹಸೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಸೂಚನೆ ನೀಡಿದ್ದಾರೆ. ಅವರು ಕಡಬ ತಾಲೂಕು ಮಟ್ಟದ ನೆರೆ ಮುಂಜಾಗ್ರತಾ ಸಭೆಯಲ್ಲಿ ಮಾತನಾಡಿ, ಮುಂಬರುವ ಮಳೆಗಾಲದಲ್ಲಿ ನೆರೆ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಿಕೊಂಡು ಸ್ಥಳೀಯವಾಗಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೆಲಸ ನಿರ್ವಹಿಸಲು ಅಗತ್ಯವಿರುವ ಸಾರ್ವಜನಿಕರನ್ನು ಗುರುತಿಸಿಕೊಂಡು ಅವರ

ಕಡಬ ತಾಲೂಕು ಮಟ್ಟದ ನೆರೆ ಮುಂಜಾಗ್ರತಾ ಸಭೆ ➤ ಸಮಿತಿ ರಚನೆಗೆ ತಹಸೀಲ್ದಾರ್ ಸೂಚನೆ Read More »

ಕರಾವಳಿ

ಮಂಗಳೂರಿನಲ್ಲಿ ನಡು ರಸ್ತೆಯಲ್ಲಿ 50ಮೀ ಎತ್ತರಕ್ಕೆ ಚಿಮ್ಮಿದ ಗ್ಯಾಸ್ ಸಿಲಿಂಡರ್…!!!

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.29., ನಡು ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು 50 ಮೀ ಎತ್ತರಕ್ಕೆ ಚಿಮ್ಮಿದ ಘಟಣೆ ಮಂಗಳೂರಿನ ಜಪ್ಪು ಮಾರ್ಕೆಟ್ ಬಳಿ ಶುಕ್ರವಾರ ನಡೆದಿದೆ. ಮಾರ್ಕೆಟ್‍ನ ಗ್ಯಾಸ್ ಸಿಲಿಂಡರ್ ಏಜೆನ್ಸಿ ಅಂಗಡಿಯಲ್ಲಿ ಲೀಕ್ ಆಗಿದ್ದ ಸಿಲಿಂಡರನ್ನು ಸ್ಥಳೀಯರು ಅಂಗಡಿಯಿಂದ ಹೊರಗೆ ತಂದಿದ್ದರು. ಅಷ್ಟರಲ್ಲೇ ಗ್ಯಾಸ್ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡು ಕೆಲವೇ ಕ್ಷಣದಲ್ಲಿ ಸ್ಪೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಸಿಲಿಂಡರ್ ಸುಮಾರು 50 ಮೀಟರ್ ಎತ್ತರಕ್ಕೆ ಚಿಮ್ಮಿದ್ದು, ಅದೃಷ್ಟವಶಾತ್ ಪಕ್ಕದಲ್ಲೇ ಇದ್ದ ಜನರಿಗೆ ಯಾವುದೇ

ಮಂಗಳೂರಿನಲ್ಲಿ ನಡು ರಸ್ತೆಯಲ್ಲಿ 50ಮೀ ಎತ್ತರಕ್ಕೆ ಚಿಮ್ಮಿದ ಗ್ಯಾಸ್ ಸಿಲಿಂಡರ್…!!! Read More »

ಕರಾವಳಿ

ಕರಾವಳಿಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ➤ ಉಡುಪಿಯಲ್ಲಿ 15, ದ.ಕ 0

(ನ್ಯೂಸ್ ಕಡಬ) newskadaba.com ಉಡುಪಿ/ದಕ್ಷಿಣ ಕನ್ನಡ ,ಮೇ.29: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ದಕ್ಷಿಣ ಕನ್ನಡಕ್ಕೆ ಕೊರೋನಾ ಶುಭ ಶುಕ್ರವಾರವಾಗಿದೆ. ಆದ್ರೇ ಕೃಷ್ಣ ನಗರಿ ಉಡುಪಿ ಗೆ ಅಶುಭವಾಗೆದೆ. ಯಾಕಂದ್ರೇ ಇಂದು ಮಧ್ಯಾಣ್ನದ ವೇಳೆ ಗೆ ಉಡುಪಿಯಲ್ಲಿ 15 ಹೊಸ ಸೋಂಕು ಪ್ರಕರಣಗಳು ದೃಢವಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 164ಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಇಂದು ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ.       ಇಂದಿನ ಎಲ್ಲಾ

ಕರಾವಳಿಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ➤ ಉಡುಪಿಯಲ್ಲಿ 15, ದ.ಕ 0 Read More »

ಕರಾವಳಿ, ಕರ್ನಾಟಕ

ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿರುವವರಿಗೆ ಬಿಗ್ ಶಾಕ್ ➤ ಕಡಬ ಪೊಲೀಸರಿಂದ ವಾಹನಗಳ ವ್ಹೀಲ್ ಲಾಕ್..!!

(ನ್ಯೂಸ್ ಕಡಬ) newskadaba.com ಕಡಬ, ಮೇ.29. ರಸ್ತೆಯ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿ ತೆರಳಿದವರಿಗೆ ಕಡಬ ಪೊಲೀಸರು ವ್ಹೀಲ್ ಲಾಕ್‌ ಮಾಡುವ ಮೂಲಕ ಶಾಕ್ ನೀಡಿದ್ದಾರೆ. ಕಡಬ ಪೇಟೆಗೆ ಆಗಮಿಸುತ್ತಿದ್ದ ಕೆಲವರು ವಾಹನಗಳನ್ನು ಬೇಕಾಬಿಟ್ಟಿಯಾಗಿ ರಸ್ತೆಯಲ್ಲೇ ನಿಲ್ಲಿಸಿ ತೆರಳುತ್ತಿದ್ದರು. ಇಂತಹ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಕಡಬ ಪೊಲೀಸರು ವ್ಹೀಲ್ ಲಾಕ್ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಈ ಮೂಲಕ ಕಡಬ ಪೊಲೀಸರು ಪೇಟೆಯ ಟ್ರಾಫಿಕ್ ಸಮಸ್ಯೆಗೆ ಕೊಂಚ ಮಟ್ಟಿನ ಪರಿಹಾರವನ್ನು ಕಂಡು ಹುಡುಕಿದ್ದಾರೆ.

ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿರುವವರಿಗೆ ಬಿಗ್ ಶಾಕ್ ➤ ಕಡಬ ಪೊಲೀಸರಿಂದ ವಾಹನಗಳ ವ್ಹೀಲ್ ಲಾಕ್..!! Read More »

ಕರಾವಳಿ, ಕ್ರೈಮ್ ನ್ಯೂಸ್

ಜೂನ್ 1ರಿಂದ ರಾಜ್ಯದ ಜನತೆಗೆ ಕೊಂಚ ರಿಲೀಫ್..!!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.29. ಕೊರೋನಾ ಹಿನ್ನಲೆಯಲ್ಲಿ 5.0 ಹಂತದ ಲಾಕ್ ಡೌನ್ ಜೂನ್.1 ರಿಂದ ಮತ್ತೆ ಮುಂದುವವರಿಯಲಿದೆ. ಮುಂದಿನ ಲಾಕ್‍ಡೌನ್ ರಾಜ್ಯದಲ್ಲಿ ಕೊಂಚ ಸಡಿಲಿಕೆ ಕಾಣಲಿದ್ದು, ಹೊಟೇಲ್, ಜಿಮ್, ಹಾಗೂ ಎಲ್ಲಾ ಧರ್ಮದ ದೇವಾಲಯಗಳನ್ನು ತೆರೆಯಲು ಅನುಮತಿ ದೊರಕಿದೆ. ರಾಜ್ಯದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ತೀರ್ಮಾಣ ತೆಗೆದು ಕೊಂಡಿದ್ದಾರೆ, ಮುಂದಿನ ಹಂತದ ಲಾಕ್‍ಡೌನ್ ಸಡಿಲಿಕೆ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಎಲ್ಲಾ ಸಚಿವರಿಂದ ಅಭಿಪ್ರಾಯ ಸಂಗ್ರಹಿಸಿ ಹೊಟೇಲ್, ಜಿಮ್, ದೇವಸ್ಥಾನ, ಮಸೀದಿ, ಚರ್ಚ್

ಜೂನ್ 1ರಿಂದ ರಾಜ್ಯದ ಜನತೆಗೆ ಕೊಂಚ ರಿಲೀಫ್..!!! Read More »

ಕರ್ನಾಟಕ

ಬೆಟ್ಟಂಪಾಡಿ: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಟ್ಟಂಪಾಡಿ, ಮೇ. 29, ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಟ್ಟಂಪಾಡಿಯ ಮಿತ್ತಡ್ಕ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೃತರನ್ನು ಮಿತ್ತಡ್ಕ ದಿ. ಶೀನ ಪೂಜಾರಿಯವರ ಪತ್ನಿ ಲಲಿತಾ ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಸುಮಾರು 9 ಗಂಟೆಯವರೆಗೆ ಮನೆಯಲ್ಲಿಯೇ ಇದ್ದ ಲಲಿತಾರವರು ಏಕಾಏಕಿ ಮನೆಯಲ್ಲಿ ನಾಪತ್ತೆಯಾಗಿದ್ದು, ಮನೆಯವರು ಹುಡುಕಾಟ ನಡೆಸಿದ ವೇಳೆ ಮನೆಯ ಸಮೀಪದ ಬಾವಿಯಲ್ಲಿ ಅವರ ಶವ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರು ಹಲವು ಸಮಯಗಳಿಂದ ಅನಾರೋಗ್ಯದಿಂದ

ಬೆಟ್ಟಂಪಾಡಿ: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

5ನೇ ಹಂತದ ಲಾಕ್ ಡೌನ್ ತಯಾರಿ ➤ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಗೃಹ ಸಚಿವರ ಮಾತುಕತೆ

(ನ್ಯೂಸ್ ಕಡಬ) newskadaba.com ನವದೆಹಲಿ ,ಮೇ.29: ದೇಶಾದ್ಯಂತ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ವಿಧಿಸಲಾಗಿದ್ದು, 4 ಹಂತದ ನೇ ಲಾಕ್ ಡೌನ್ ಮೇ 31ಕ್ಕೆ ಮುಕ್ತಾಯಗೊಳ್ಳುತ್ತಿದೆ. 5 ನೇ ಹಂತದ ಲಾಕ್ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ ರಾತ್ರಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದರು. ಮುಖ್ಯಮಂತ್ರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿದ ಅಮಿತ್ ಶಾ ಲಾಕ್ ಡೌನ್  ಬಗ್ಗೆ ಮೇ 31ರ ಬಳಿಕ ಯಾವ ರೀತಿಯ ನಿಯಮಾವಳಿಗಳಿರಬೇಕು? ನೂತನ

5ನೇ ಹಂತದ ಲಾಕ್ ಡೌನ್ ತಯಾರಿ ➤ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಗೃಹ ಸಚಿವರ ಮಾತುಕತೆ Read More »

ರಾಷ್ಟ್ರೀಯ ನ್ಯೂಸ್
Scroll to Top