ಮಂಗಳೂರಿನಲ್ಲಿ ನಡು ರಸ್ತೆಯಲ್ಲಿ 50ಮೀ ಎತ್ತರಕ್ಕೆ ಚಿಮ್ಮಿದ ಗ್ಯಾಸ್ ಸಿಲಿಂಡರ್…!!!

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.29., ನಡು ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು 50 ಮೀ ಎತ್ತರಕ್ಕೆ ಚಿಮ್ಮಿದ ಘಟಣೆ ಮಂಗಳೂರಿನ ಜಪ್ಪು ಮಾರ್ಕೆಟ್ ಬಳಿ ಶುಕ್ರವಾರ ನಡೆದಿದೆ.


ಮಾರ್ಕೆಟ್‍ನ ಗ್ಯಾಸ್ ಸಿಲಿಂಡರ್ ಏಜೆನ್ಸಿ ಅಂಗಡಿಯಲ್ಲಿ ಲೀಕ್ ಆಗಿದ್ದ ಸಿಲಿಂಡರನ್ನು ಸ್ಥಳೀಯರು ಅಂಗಡಿಯಿಂದ ಹೊರಗೆ ತಂದಿದ್ದರು. ಅಷ್ಟರಲ್ಲೇ ಗ್ಯಾಸ್ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡು ಕೆಲವೇ ಕ್ಷಣದಲ್ಲಿ ಸ್ಪೋಟಗೊಂಡಿದೆ.


ಸ್ಪೋಟದ ತೀವ್ರತೆಗೆ ಸಿಲಿಂಡರ್ ಸುಮಾರು 50 ಮೀಟರ್ ಎತ್ತರಕ್ಕೆ ಚಿಮ್ಮಿದ್ದು, ಅದೃಷ್ಟವಶಾತ್ ಪಕ್ಕದಲ್ಲೇ ಇದ್ದ ಜನರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

Scroll to Top