ರಾಜ್ಯದಲ್ಲಿ ನಾಳೆ ಕಫ್ರ್ಯೂ ಇರಲ್ಲ ➤ ಬಿಎಸ್ ವೈ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.30., ಕೊರೊನಾ ಹಿನ್ನಲೆಯಲ್ಲಿ ಪ್ರತಿ ಭಾನುವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಮಾಡಬೇಕೆಂದು ಮುಖ್ಯಮಂತ್ರಿ ಬಿಎಸ್ ವೈ ಆದೇಶಿಸಿದ್ದರು. ಆದರೆ ಇದೀಗ ಸಾರ್ವಜನಿಕರ ಒತ್ತಾಯ ಮೇರೆಗೆ ಹಾಗೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಮೇ 31 ಭಾನುವಾರದ ಸಂಪೂರ್ಣ ಲಾಕ್‍ಡೌನ್ ಇರುವುದಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಪ್ರತಿ ದಿನದಂತೆ ಭಾನುವಾರವೂ ವಾಹನ ಸಂಚಾರ ಮಾಡಲಿದೆ. ಹೊಟೇಲ್, ಸೆಲೂನ್, ತರಕಾರಿ, ದಿನಸಿ ಅಂಗಡಿಗಳು, ಮದ್ಯದಂಗಡಿಗಳು ತೆರೆದಿರುತ್ತದೆ. ಎಂದಿನಂತೆ ರಾತ್ರಿ 7 […]

ರಾಜ್ಯದಲ್ಲಿ ನಾಳೆ ಕಫ್ರ್ಯೂ ಇರಲ್ಲ ➤ ಬಿಎಸ್ ವೈ ಸ್ಪಷ್ಟನೆ Read More »

ಕರಾವಳಿ, ಕರ್ನಾಟಕ

ಮಂಗಳೂರು: ಕೊರೊನಾ ವಿರುದ್ಧ ಹೋರಾಡಿ ಸಾವನ್ನು ಗೆದ್ದು ಬಂದ ಅಸ್ತಮಾ ರೋಗಿ..!!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.30., ಕೊರೊನಾ… ಕೊರೊನಾ….  ಕೊರೊನಾ….. ಎಲ್ಲಿ ಹೋದರೂ ಅಲ್ಲಿ ಕೊರೊನಾದೆ ಸುದ್ಧಿ… ಅದೆಷ್ಟೋ ಮಂದಿ ಕೊರೊನಾಗೆ ಬಲಿಯಾಗಿದ್ದು, ಮತ್ತೆ ಕೆಲವರೂ ಸಾವನ್ನೂ ಗೆದ್ದು ಬಂದವರೂ ಇದ್ದಾರೆ. ಅಂತಹುದೇ ಪವಾಡ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ 68 ವರ್ಷದ ವೃದ್ಧೆಯೊಬ್ಬರು ಕೊರೊನಾ ಗೆದ್ದು ಬಂದಿದ್ದಾರೆ. ಸುರತ್ಕಲ್ ಮೂಲದ 68 ವರ್ಷದ ಮಹಿಳೆ ಹೃದಯ ಸಂಬಂಧಿ ಖಾಯಿಲೆಂಯಿಂದ ಬಳಲುತ್ತಿದ್ದ ಇವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಮೇ 15ರಂದು ರಿಪೋರ್ಟಲ್ಲಿ

ಮಂಗಳೂರು: ಕೊರೊನಾ ವಿರುದ್ಧ ಹೋರಾಡಿ ಸಾವನ್ನು ಗೆದ್ದು ಬಂದ ಅಸ್ತಮಾ ರೋಗಿ..!!! Read More »

ಕರಾವಳಿ

ಖ್ಯಾತ ಹಿಂದಿ ಗೀತ ರಚನೆಕಾರ ಇನ್ನಿಲ್ಲ ➤ `ಯೋಗೇಶ್ ಗೌರ್’ ನಿಧನಕ್ಕೆ ಸಂತಾಪ ವ್ಯಕ್ತ

(ನ್ಯೂಸ್ ಕಡಬ) newskadaba.com ಮುಂಬೈ, ಮೇ. 30 : ಬಾಲಿವುಡ್ ಖ್ಯಾತ ಗೀತ ರಚನೆಕಾರ ಯೋಗೇಶ್ ಗೌರ್ (77) ಅನಾರೋಗ್ಯ ಸಮಸ್ಯೆಯಿಂದ ಶುಕ್ರವಾರ ನಿಧನರಾಗಿದ್ದಾರೆ. ಯೋಗೇಶ್ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.     ಅದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ನಿಧನರಾಗಿದ್ದಾರೆ. ಯೋಗೇಶ್ ಅವರು 70 ರ ದಶಕದ ಹಿಂದಿ ಚಿತ್ರರಂಗದಲ್ಲಿ ಪ್ರಮುಖ ಗೀತ ರಚನೆಕಾರರಾಗಿದ್ದರು.1960 ಮತ್ತು 70ರ ದಶಕದಲ್ಲಿ ಯೋಗೇಶ್‌ ಬೇಡಿಕೆಯ ಗೀತರಚನಾಕಾರ ಆಗಿದ್ದರು. ‘ಸಖಿ ರಾಬಿನ್‌’, ‘ಚೋಟಿ ಸಿ ಬಾತ್‌’,

ಖ್ಯಾತ ಹಿಂದಿ ಗೀತ ರಚನೆಕಾರ ಇನ್ನಿಲ್ಲ ➤ `ಯೋಗೇಶ್ ಗೌರ್’ ನಿಧನಕ್ಕೆ ಸಂತಾಪ ವ್ಯಕ್ತ Read More »

ಅಂತರ್ರಾಷ್ಟ್ರೀಯ ನ್ಯೂಸ್

ಮಹಾಮಾರಿಗೆ 265 ಮಂದಿ ಬಲಿ ➤ ಭಾರತದಲ್ಲಿ ಒಂದೇ ದಿನ 7,964 ಮಂದಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ 30:ಕೊರೋನಾ ರೌದ್ರಅವತಾರಕ್ಕೆ ಇಡೀ ದೇಶವೇ ತತ್ತರಿಸಿ ಹೋಗಿದೆ. ದಿನದಿಂದ ದಿನಕ್ಕೆ ಕೋವಿಡ್ 19ಗೆ ಜನ ಬಲಿಯಾಗುತ್ತಿದ್ದಾರೆ. ಹೀಗಿರುವಾಗ, ಭಾರತದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಹೊಸದಾಗಿ ಮತ್ತೆ 7,964 ಮಂದಿಗೆ ಕೊರೊನಾ ವೈರಸ್ ಸೋಂಕು ದೃಡವಾಗಿದೆ. 265 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.     ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 265 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ

ಮಹಾಮಾರಿಗೆ 265 ಮಂದಿ ಬಲಿ ➤ ಭಾರತದಲ್ಲಿ ಒಂದೇ ದಿನ 7,964 ಮಂದಿಗೆ ಕೊರೋನಾ ಪಾಸಿಟಿವ್ Read More »

ಅಂತರ್ರಾಷ್ಟ್ರೀಯ ನ್ಯೂಸ್

ಭಾನುವಾರದ ಕೊರೋನಾ ಕರ್ಫ್ಯೂ ➤ ಈ ಭಾನುವಾರ ಲಾಕ್ಡೌನ್ನಲ್ಲಿ ಏನಿರುತ್ತೆ ಏನಿರಲ್ಲ?

(ನ್ಯೂಸ್ ಕಡಬ) newskadaba.com,ಬೆಂಗಳೂರು ಮೇ.30: ಭಾನುವಾರದ ಲಾಕ್ ಡೌನ್ ಹೆಚ್ಚು ಕಟ್ಟುನಿಟ್ಟಾಗಿ ಜಾರಿಯಾಗುವ ಸಾಧ್ಯತೆ ಇದೆ. ಕೊರೋನಾ ವೈರಸ್ ಸೋಂಕು ಹೆಚ್ಚೆಚ್ಚು ವ್ಯಾಪಿಸುತ್ತಿರುವುದರಿಂದ ರಾಜ್ಯ ಸರ್ಕಾರ ಭಾನುವಾರದ ಲಾಕ್ ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿದೆ. ಕಳೆದ ಭಾನುವಾರ ಲಾಕ್ ಡೌನ್ ಇದ್ದರೂ ಜನರು ಆರಾಮವಾಗಿ ಓಡಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಎಚ್ಚರಿಕೆ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಇವತ್ತು ಶನಿವಾರ ಸಂಜೆ 7ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೂ ಕರ್ಫ್ಯೂ ಜಾರಿ ಮಾಡಲಾಗಿದೆ.   ಭಾನುವಾರ

ಭಾನುವಾರದ ಕೊರೋನಾ ಕರ್ಫ್ಯೂ ➤ ಈ ಭಾನುವಾರ ಲಾಕ್ಡೌನ್ನಲ್ಲಿ ಏನಿರುತ್ತೆ ಏನಿರಲ್ಲ? Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಉಪ್ಪಿನಂಗಡಿ: ಕೊರೊನಾ ವದಂತಿಗೆ ಅತಂತ್ರವಾದ ಮೃತದೇಹ..! ➤ ಎಸ್ಐ ಈರಯ್ಯರ ಮಧ್ಯ ಪ್ರವೇಶದಿಂದ ಸಮಸ್ಯೆ ಇತ್ಯರ್ಥ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮೇ.29. ಮೃತಪಟ್ಟ ವ್ಯಕ್ತಿಗೆ ಜ್ವರ ಇತ್ತು ಎಂಬ ವದಂತಿ ಹಬ್ಬಿದ್ದರಿಂದ ಕೊರೋನಾ ಭಯದಿಂದ ಯಾರೂ ಹತ್ತಿರ ಸುಳಿಯದ ಕಾರಣ ಮೃತದೇಹವು ಅತಂತ್ರವಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉಪ್ಪಿನಂಗಡಿಯ ಹೊಟೇಲ್ ಒಂದರಲ್ಲಿ ಕಾರ್ಮಿಕರಾಗಿದ್ದ ಉಡುಪಿಯ ವ್ಯಕ್ತಿಯೋರ್ವರು ಬುಧವಾರದಂದು ಕುಸಿದು‌ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಅವರು ಜ್ವರದಿಂದ ಬಳಲುತ್ತಿದ್ದರು ಎಂಬ ವದಂತಿ ಹಬ್ಬಿದ ಕಾರಣ ಕೊರೊನಾ ಭಯದಿಂದಾಗಿ ಎಲ್ಲರೂ ಮೃತದೇಹದ ಬಳಿ ಬರಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ಉಪ್ಪಿನಂಗಡಿ: ಕೊರೊನಾ ವದಂತಿಗೆ ಅತಂತ್ರವಾದ ಮೃತದೇಹ..! ➤ ಎಸ್ಐ ಈರಯ್ಯರ ಮಧ್ಯ ಪ್ರವೇಶದಿಂದ ಸಮಸ್ಯೆ ಇತ್ಯರ್ಥ Read More »

ಕರ್ನಾಟಕ

ರಾಜ್ಯದಲ್ಲಿಂದು 248 ಹೊಸ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 2,781ಕ್ಕೆ ಏರಿಕೆ

ಬೆಂಗಳೂರು, ಮೇ 29: ನಿನ್ನೆ ಸಂಜೆ 5ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ ರಾಜ್ಯದಲ್ಲಿ ಹೊಸ 248 ಕೊರೋನ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2,781ಕ್ಕೇರಿಕೆಯಾಗಿದೆ. ಇದುವರೆಗೂ 48 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು ಬೆಂಗಳೂರು ನಗರದಲ್ಲಿ 12, ಮಂಡ್ಯ 02, ಕಲಬುರಗಿ 61, ಯಾದಗಿರಿ 60, ದಾವಣಗೆರೆ 04, ಉಡುಪಿ 15, ಹಾಸನ 04, ಚಿಕ್ಕಬಳ್ಳಾಪುರ 5, ರಾಯಚೂರು 62, ಮೈಸೂರು 02, ವಿಜಯಪುರ 04,

ರಾಜ್ಯದಲ್ಲಿಂದು 248 ಹೊಸ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 2,781ಕ್ಕೆ ಏರಿಕೆ Read More »

ಕರ್ನಾಟಕ

ಗುಡುಗು, ಬಿರುಗಾಳಿಸಹಿತ ಭಾರೀ ಮಳೆ ➤ ಬೆಚ್ಚಿ ಬಿದ್ದ ಬೆಂಗಳೂರಿಗರು

(ನ್ಯೂಸ್ ಕಡಬ) newskadaba.com ಬೆಂಗಳೂರು. ಮೇ,29:  ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಸಂಜೆಯ ವೇಳೆ ಮಳೆಯ ಅಬ್ಬರ ಜೋರಾಗಿದೆ. 2-3 ದಿನಗಳಿಂದ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುತ್ತಿದೆ. ಇಂದು ಸಂಜೆ ಕೂಡ ಬೆಂಗಳೂರಿನ ಹಲವು ಭಾಗಗಳಲ್ಲಿ ಗಾಳಿ ಸಹಿತ ಮಳೆಯಾಗಿದೆ.     ಬೆಂಗಳೂರಿನ ದಕ್ಷಿಣ ಭಾಗಗಳಾದ ಬಸವನಗುಡಿ, ಜಯನಗರ, ಬನಶಂಕರಿ, ಬಿಟಿಎಂ ಲೇಔಟ್ ಸುತ್ತಮುತ್ತ ಸುರಿಯುತ್ತಿದ್ದ ಮಳೆ ಇಂದು ಬೆಂಗಳೂರು ಉತ್ತರ ಭಾಗದತ್ತ ತಿರುಗಿದೆ. ಮೆಜೆಸ್ಟಿಕ್, ಯಶವಂತಪುರ, ಮಲ್ಲೇಶ್ವರಂ, ಹೆಬ್ಬಾಳದ ಸುತ್ತಮುತ್ತ ಮಿಂಚು, ಗುಡುಗು, ಬಿರುಗಾಳಿ ಸಹಿತ

ಗುಡುಗು, ಬಿರುಗಾಳಿಸಹಿತ ಭಾರೀ ಮಳೆ ➤ ಬೆಚ್ಚಿ ಬಿದ್ದ ಬೆಂಗಳೂರಿಗರು Read More »

ಕರ್ನಾಟಕ

ಛತ್ತೀಸ್‌ಗಢ ಪ್ರಥಮ ಮುಖ್ಯಮಂತ್ರಿ ಅಜಿತ್ ಜೋಗಿ ನಿಧನ

ರಾಯಪುರ್, ಮೇ 29: ಛತ್ತೀಸ್‌ಗಢದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಅಜಿತ್ ಜೋಗಿ (74) ದೀರ್ಘ ಕಾಲದ ಅನಾರೋಗ್ಯದಿಂದ ಶುಕ್ರವಾರ ಸಂಜೆ 3:30ಕ್ಕೆ ರಾಯಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಂದು ಅವರಿಗೆ ಎರಡು ಬಾರಿ ಹೃದಯಾಘಾತವಾಗಿದ್ದು, ಕೂಡಲೇ ರಾಯಪುರ್‌ದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಮೊದಲೇ ಅಜಿತ್ ಜೋಗಿ ಅನಾರೋಗ್ಯಕ್ಕೊಳಗಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದರು. ಅಜಿತ್ ಜೋಗಿ ಅವರ ನಿಧನಕ್ಕೆ ರಾಜಕೀಯ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಛತ್ತೀಸ್‌ಗಢ ಅಸ್ತಿತ್ವಕ್ಕೆ ಬಂದ ನಂತರ ನವೆಂಬರ್ 2000 ರಿಂದ 2003 ನವೆಂಬರ್

ಛತ್ತೀಸ್‌ಗಢ ಪ್ರಥಮ ಮುಖ್ಯಮಂತ್ರಿ ಅಜಿತ್ ಜೋಗಿ ನಿಧನ Read More »

ರಾಷ್ಟ್ರೀಯ ನ್ಯೂಸ್

ನಿಂದಿಸಿದ್ದಕ್ಕೆ ಆಸಿಡ್‌ ದಾಳಿ ➤ ಆರೋಪಿ ಪೋಲಿಸರ ವಶಕ್ಕೆ

(ನ್ಯೂಸ್ ಕಡಬ)newskadaba.com ಮೈಸೂರು ,ಮೇ.29:  ನಿಂದಿಸಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ಹುಣಸೂರಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬಿಳಿಕೆರೆಯ ನಿವಾಸಿ ಕಾಳಪ್ಪ ನಾಯಕ್(35) ಆಸಿಡ್ ದಾಳಿಗೆ ಒಳಗಾದವರು. ಆಸಿಡ್ ದಾಳಿಯಿಂದ ಮುಖದ ಬಲ ಭಾಗ, ಕಿವಿ ಹಾಗೂ ಬೆನ್ನಿಗೆ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.     ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಆಸಿಡ್ ದಾಳಿ ನಡೆಸಿದ ಬಿಳಿಕೆರೆಯ ಚಂದ್ರಶೇಖರಾಚಾರಿ(40) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕಾಳಪ್ಪ ನಾಯಕ ನಿಂದಿಸಿದ್ದಕ್ಕೆ

ನಿಂದಿಸಿದ್ದಕ್ಕೆ ಆಸಿಡ್‌ ದಾಳಿ ➤ ಆರೋಪಿ ಪೋಲಿಸರ ವಶಕ್ಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top