ಮೂಡಬಿದಿರೆ: ಇನ್ನೂ ಮುಕ್ತಿ ಕಾಣದ ಸೀರೆ ಸುತ್ತಿದ ಸ್ನಾನಗೃಹಗಳು

(ನ್ಯೂಸ್ ಕಡಬ)newskadaba.com ಮೂಡುಬಿದಿರೆ. ಜೂ. 7, ಸ್ವಚ್ಛತೆ ಹಾಗೂ ಬಯಲು ಶೌಚಮುಕ್ತ ಸಮಾಜಕ್ಕಾಗಿ ಸಾಕಷ್ಟು ಪ್ರಯತ್ನ ನಡೆದಿದ್ದರೂ ಮೂಡುಬಿದಿರೆಯ ವಿವಿಧೆಡೆ ಸಮರ್ಪಕ ಫ‌ಲ ಕೊಟ್ಟಿಲ್ಲ. ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ಗ್ರಾಮದ ಹಲವೆಡೆ ಸುಮಾರು 40ಕ್ಕಿಂತಲೂ ಅಧಿಕ ಮನೆಗಳಲ್ಲಿ ಶೌಚಾಲಯಗಳಿಲ್ಲ. ಇಲ್ಲೆಲ್ಲ ಬಯಲು ಶೌಚ ಇನ್ನೂ ಚಾಲ್ತಿಯಲ್ಲಿದೆ.   ಹಲವೆಡೆ ಅನಧಿಕೃತ ಮನೆಗಳಿದ್ದರೂ ಅವುಗಳನ್ನು ಡೀಮ್ಡ್ ಫಾರೆಸ್ಟ್‌ ಕಾಟ ಕಾಡುತ್ತಿದೆ. ಪ್ಲಾಸ್ಟಿಕ್‌ ಶೀಟ್‌ ಹೊದೆಸಿದ ಮನೆಗಳೂ ಇವೆ. ಇಂಥ ಮನೆಗಳ ಪಕ್ಕದಲ್ಲಿ ನಾಲ್ಕು ಕಂಬ ಹಾಕಿ ಅದಕ್ಕೆ ಸೀರೆಗಳನ್ನು ಸುತ್ತಿ […]

ಮೂಡಬಿದಿರೆ: ಇನ್ನೂ ಮುಕ್ತಿ ಕಾಣದ ಸೀರೆ ಸುತ್ತಿದ ಸ್ನಾನಗೃಹಗಳು Read More »

ಕರ್ನಾಟಕ

ಈ ಬಾರಿಯ ಹಜ್ಜ್ ಗಾಗಿ ಕಟ್ಟಿದ ಶುಲ್ಕ ಮರುಪಾವತಿ ➤ ಕೇಂದ್ರ ಹಜ್ಜ್ ಕಮಿಟಿ ಸ್ಪಷ್ಟನೆ

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ. ಜೂ. 7, ಕೊರೋನ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ ಹಜ್ಜ್ ಪ್ರಕ್ರಿಯೆ ಕೈಗೊಳ್ಳುವ ಸಾಧ್ಯತೆಗಳಿಲ್ಲದಿರುವುದರಿಂದ ಹಜ್ಜ್ ಯಾತ್ರೆಗೆ ಬೇಕಾಗಿ ಕಟ್ಟಿದ ಹಣವನ್ನು ಮರುಪಾವತಿಸಲಾಗುವುದು ಎಂದು ಕೇಂದ್ರ ಹಜ್ಜ್ ಕಮಿಟಿ ಎಕ್ಸಿಕ್ಯೂಟಿವ್ ಆಫಿಸರ್ ಡಾ. ಮಕ್ಸೂದ್ ಅಹ್ಮದ್ ಖಾನ್ ರವರು ಸೂಚನೆ ನೀಡಿದ್ದಾರೆ. ಈ ವಿವರವನ್ನು ಕೇರಳ ಹಜ್ಜ್ ಕಮಿಟಿ ಅಧ್ಯಕ್ಷ ಸಿ. ಮುಹಮ್ಮದ್ ಫೈಝಿ ತಿಳಿಸಿದ್ದಾರೆಂದು ಪತ್ರಿಕೆ ವರದಿ ಮಾಡಿದೆ. ಕೇಂದ್ರ ಹಜ್ಜ್ ಕಮಿಟಿಯು ಈ ಆದೇಶವನ್ನು ಹೊರಡಿಸಿದ್ದು, ಭಾರತದಿಂದ ಹಜ್ಜ್‌ಗೆ ವಿಮಾನ

ಈ ಬಾರಿಯ ಹಜ್ಜ್ ಗಾಗಿ ಕಟ್ಟಿದ ಶುಲ್ಕ ಮರುಪಾವತಿ ➤ ಕೇಂದ್ರ ಹಜ್ಜ್ ಕಮಿಟಿ ಸ್ಪಷ್ಟನೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಈ ದಿನದ ರಾಶಿಫಲ ಪ್ರಧಾನ ತಾಂತ್ರಿಕ್ ಗಿರಿಧರ್ ಭಟ್ ರವರಿಂದ

ಶ್ರೀ ನಾರಸಿಂಹ ಸ್ವಾಮಿ ಸ್ಮರಣೆಯನ್ನು ಮಾಡುತ್ತಾ ಈ ದಿನದ ರಾಶಿಗಳ ಶುಭಾಶುಭಫಲಗಳನ್ನು ತಿಳಿಯೋಣ. ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಷಯ, ದಾಂಪತ್ಯ, ಕೌಟುಂಬಿಕ ಕಲಹ, ಇನ್ನು ಇತ್ಯಾದಿ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಸ್ತ್ರೋಕ್ತ ತಾಂತ್ರಿಕ್ ವಿಧಾನಗಳಿಂದ ಪರಿಹಾರ ಶತಸಿದ್ಧ. ಇಂದೇ ಕರೆ ಮಾಡಿ. 9945410150 ಮೇಷ ರಾಶಿ ನಿಮ್ಮ ಲಕ್ಷಣವು ತುಂಬಾ ಆಕರ್ಷಿತವಾಗಿ ಇಂದು ಕಾಣಬಹುದು. ಪ್ರವಾಸ ಮನರಂಜನೆಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತೀರಿ ಹಾಗೂ

ಈ ದಿನದ ರಾಶಿಫಲ ಪ್ರಧಾನ ತಾಂತ್ರಿಕ್ ಗಿರಿಧರ್ ಭಟ್ ರವರಿಂದ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ರಾಜ್ಯದಲ್ಲಿಂದು 378 ಮಂದಿಗೆ ಕೊರೋನ: ಸೋಂಕಿತರ ಸಂಖ್ಯೆ 5,213ಕ್ಕೆ ಏರಿಕೆ

ಬೆಂಗಳೂರು, ಜೂ.6: ರಾಜ್ಯದಲ್ಲಿ ಇಂದು 378 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5,213ಕ್ಕೆ ಏರಿಕೆಯಾಗಿದೆ. ಇಂದು ಹೊಸದಾಗಿ ಪತ್ತೆಯಾದ 378 ಪ್ರಕರಣಗಳ ಪೈಕಿ 333 ಮಂದಿ ಅಂತಾರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದು, ಉಡುಪಿಯಲ್ಲಿ ಅತಿ ಹೆಚ್ಚು 121 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಕೊರೋನದಿಂದ ಇದುವರೆಗೆ 59 ಮಂದಿ ಮೃತಪಟ್ಟಿದ್ದು, 1,968 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿಂದು 378 ಮಂದಿಗೆ ಕೊರೋನ: ಸೋಂಕಿತರ ಸಂಖ್ಯೆ 5,213ಕ್ಕೆ ಏರಿಕೆ Read More »

ಕರಾವಳಿ

ನಾಳೆ ‘ರವಿವಾರ ಲಾಕ್‌ಡೌನ್’ ಇಲ್ಲ

ಬೆಂಗಳೂರು, ಜೂ.6: ಕೊರೋನ ನಿಯಂತ್ರಣಕ್ಕಾಗಿ ಈ ಹಿಂದೆ ರಾಜ್ಯ ಸರಕಾರ ಆದೇಶಿಸಿದ್ದ ‘ರವಿವಾರದ ಲಾಕ್‌ಡೌನ್’ ಜೂ.7ರಂದು ಇರುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಸಚಿವಾಲಯದ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಸದ ಬಳಿಕ ಕೊರೋನ ಸೋಂಕು ನಿಯಂತ್ರಣದ ಮತ್ತೊಂದು ವಿಧಾನವಾಗಿ ರವಿವಾರದ ಲಾಕ್‌ಡೌನ್‌ಗೆ ರಾಜ್ಯ ಸರಕಾರ ಆದೇಶಿಸಿತ್ತು. ಬಳಿಕ ಮೇ 24ರಂದು ಲಾಕ್ ಡೌನ್ ಮಾಡಲಾಗಿತ್ತು. ರಾಜ್ಯದಲ್ಲಿ ಈ ಲಾಕ್‌ಡೌನ್ ಬಹುತೇಕ ಯಶಸ್ವಿಯಾಗಿತ್ತು. ಆದರೆ ಅದರ ನಂತರದ ಮೇ 31ರಂದು ಈ ಲಾಕ್‌ಡೌನ್ ತೆರವುಗೊಳಿಸಲಾಗಿತ್ತು. ಸದ್ಯ ಬಹುತೇಕ ಎಲ್ಲಾ

ನಾಳೆ ‘ರವಿವಾರ ಲಾಕ್‌ಡೌನ್’ ಇಲ್ಲ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮುಲ್ಕಿಯಲ್ಲಿ ಉದ್ಯಮಿ ಕೊಲೆ ➤ ಪೊಲೀಸರಿಂದ ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.6: ಮುಲ್ಕಿಯಲ್ಲಿ ದುರ್ಷರ್ಮಿಗಳಿಂದ ಹಲ್ಲೆಗೊಳಪಟ್ಟು ಮೃತರಾದ ಉದ್ಯಮಿ ಅಬ್ದುಲ್ಲತೀಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮುಲ್ಕಿ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.   ಬಂಧಿತರನ್ನು ಮುಲ್ಕಿ ಕಾರ್ನಾಡ್ ಬಪ್ಪನಾಡು ನಿವಾಸಿ ಮೊಹ್ಮದ್ ಹಾಸಿಮ್ (27), ನಿಸಾರ್ @ರಿಯಾಝ್ (33), ಮೊಹಮ್ಮದ್ ರಾಝೀಂ (24) ಮತ್ತು ಬಡಾ ಉಚ್ಚಿಲ ನಿವಾಸಿ ಅಬೂಬಕ್ಕರ್ ಸಿದ್ದಿಕ್ (27) ಎಂದು ಗುರುತಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಹತ್ಯಾರು, ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದು, ಕೃತ್ಯಕ್ಕೆ ಕಾರಣವಾದ ಅಂಶಗಳ ಬಗ್ಗೆ ಮತ್ತು ದಸ್ತಗಿರಿಗೆ

ಮುಲ್ಕಿಯಲ್ಲಿ ಉದ್ಯಮಿ ಕೊಲೆ ➤ ಪೊಲೀಸರಿಂದ ನಾಲ್ವರ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕರಾವಳಿಯಲ್ಲಿ ಕೋವಿಡ್ ಆತಂಕ ➤ KSRTC, ಖಾಸಗಿ ಬಸ್ ಸಂಚಾರ ಅನುಮಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.6:  ಕರಾವಳಿಯಲ್ಲಿ ಕೋವಿಡ್ ಆತಂಕ ಸೃಷ್ಟಿಸುತ್ತಿದ್ದು, ಇಲ್ಲಿಂದ ದೂರ ಊರುಗಳಿಗೆ ಹವಾನಿಯಂತ್ರಿತ (ಎಸಿ) ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್ ಸಂಚಾರ ಸದ್ಯಕ್ಕೆ ಇರುವುದು ಅನುಮಾನ ವ್ಯಕ್ತವಾಗಿದೆ.   ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಈ ಹಿಂದೆ ಪ್ರತೀ ದಿನ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯಗಳಿಗೆ ಸುಮಾರು 50ಕ್ಕೂ ಮಿಕ್ಕಿ ಎಸಿ ಬಸ್‌ಗಳು ಸಂಚರಿಸುತ್ತಿದ್ದವು. ಮಂಗಳೂರು, ಪುತ್ತೂರು ವಿಭಾಗಗಳಿಂದ ನಾನ್ ಎಸಿ ಸ್ಲಿಪರ್ ಬಸ್ ಈಗಾಗಲೇ ಆರಂಭಗೊಂಡಿದೆ. ಧರ್ಮಸ್ಥಳ, ಸುಳ್ಯ ಮತ್ತು

ಕರಾವಳಿಯಲ್ಲಿ ಕೋವಿಡ್ ಆತಂಕ ➤ KSRTC, ಖಾಸಗಿ ಬಸ್ ಸಂಚಾರ ಅನುಮಾನ Read More »

ಕರಾವಳಿ, ಕರ್ನಾಟಕ

ಮಹಿಳೆಯೋರ್ವರಿಗೆ ಕೊರೋನಾ ಪಾಸಿಟಿವ್ ➤ ಉಪ್ಪಿನಂಗಡಿಯಲ್ಲಿ ಹೆಚ್ಚಿದ ಆತಂಕ

(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ,ಜೂ.6: ಟ್ರಾವೆಲ್ ಹಿಸ್ಟರಿ ಸಿಗದ ಮಹಿಳೆಯೋರ್ವರಿಗೆ ಕೊರೋನಾ ಪಾಸಿಟಿವ್ ದೃಢವಾಗಿದ್ದು ಉಪ್ಪಿನಂಗಡಿ ನೆಕ್ಕಿಲಾಡಿ ಆತಂಕ ಮನೆ ಮಾಡಿದೆ. ಇವರು ನೆಕ್ಕಿಲಾಡಿಯ ಗ್ರಾಮದ ಶಾಂತಿನಗರ- ಅಂಬೇಲ ಮಧ್ಯೆಯ ಬೇರಿಕೆಯ ನಿವಾಸಿಯಾಗಿದ್ದಾರೆ. ಈ ಮಹಿಳೆಯು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅನಾರೋಗ್ಯದ ಕಾರಣದಿಂದ ದಾಖಲಾಗಿದ್ದು, ಜ್ವರದ ಹಿನ್ನೆಲೆಯಲ್ಲಿ ಅಲ್ಲಿ ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಶುಕ್ರವಾರ ಬಂದಿದ್ದು, ಈ ಸಂದರ್ಭ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾಗಿದೆ.ಈ ಮಹಿಳೆಯ ಪತಿ ಅಡಿಕೆ ವ್ಯಾಪಾರಿಯಾಗಿದ್ದು, ಉಪ್ಪಿನಂಗಡಿಯಲ್ಲಿ

ಮಹಿಳೆಯೋರ್ವರಿಗೆ ಕೊರೋನಾ ಪಾಸಿಟಿವ್ ➤ ಉಪ್ಪಿನಂಗಡಿಯಲ್ಲಿ ಹೆಚ್ಚಿದ ಆತಂಕ Read More »

ಕರಾವಳಿ, ಕರ್ನಾಟಕ

ಕೋಡಿಂಬಾಳದಲ್ಲಿ ಡೆಂಗ್ಯೂ ಪತ್ತೆ➤ ಜ್ವರ ಪೀಡಿತರ ಮನೆಗೆ ಅಧಿಕಾರಿಗಳ ಭೇಟಿ

(ನ್ಯೂಸ್ ಕಡಬ) newskadaba.com ಕೋಡಿಂಬಾಳ ,ಜೂ.6: ಕೋಡಿಂಬಾಳದಲ್ಲಿ ಡೆಂಗ್ಯೂ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯಾರಿ ಶುಕ್ರವಾರ ಭೇಟಿ ನೀಡಿ ಜ್ವರ ಪೀಡಿತರ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಳೆದ ವರ್ಷ ಇದೇ ಪರಿಸರದಲ್ಲಿ ಮಹಿಳೆಯೊಬ್ಬರು ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದರು, ಇದೀಗ ಮತ್ತೆ ಡೆಂಗ್ಯೂ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ಜ್ವರ ಪೀಡಿತರ ಮನೆಗೆ ಭೇಟಿ ನೀಡಿದ್ದಾರೆ.   ಕೋಡಿಂಬಾಳ ಗ್ರಾಮದ ಮುಳಿಯ ನಿವಾಸಿಗಳಾದ ಲೋಹಿತ್, ತೇಜಸ್ವಿನಿ ಹಾಗೂ ಶೃತಿ ಎಂಬವರಿಗೆ

ಕೋಡಿಂಬಾಳದಲ್ಲಿ ಡೆಂಗ್ಯೂ ಪತ್ತೆ➤ ಜ್ವರ ಪೀಡಿತರ ಮನೆಗೆ ಅಧಿಕಾರಿಗಳ ಭೇಟಿ Read More »

ಕರಾವಳಿ, ಕರ್ನಾಟಕ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಓಪನ್ ➤ ನಿಯಮ ಪಾಲನೆ ಕಡ್ಡಾಯ

(ನ್ಯೂಸ್ ಕಡಬ) newskadaba.com.ಕುಕ್ಕೆ ಸುಬ್ರಹ್ಮಣ್ಯ ,ಜೂ.6: ಸೋಮವಾರದಿಂದ ರಾಜ್ಯದಾದ್ಯಂತ ದೇವಾಲಯಗಳು ಭಕ್ತರಿಗಾಗಿ ತೆರೆಯಲಿದೆ. ಹಾಗೆಯೇ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ದೇವರ ದರ್ಶನಕ್ಕಾಗಿ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯಾದ್ಯಾಂತ ಕೋರೋನಾ ಅಟ್ಟಹಾಸಕ್ಕೆ ಬಹುತೇಕ ಎಲ್ಲಾ ದೇವಾಲಗಳು ಸಂಪೂರ್ಣವಾಗಿ ಬಂದ್ ಮಾಡಲು ಸರ್ಕಾರ ಆದೇಶ ಹೊರಡಿಸಿತ್ತು. ಸತತ 2 ತಿಂಗಳ ಲಾಕ್ ಡೌನ್ ಬಳಿಕ ಈಗ ಮತ್ತೇ ಸರ್ಕಾರ ಹಲವು ಮುಂಜಾಗ್ರತ ಕ್ರಮಗಳನ್ನ ಕೈಗೊಂಡು ದೇವಾಲಯಗಳ ಬಾಗಿಲು ತೆರೆಯಲು ಆದೇಶ ಹೊರಡಿಸಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಓಪನ್ ➤ ನಿಯಮ ಪಾಲನೆ ಕಡ್ಡಾಯ Read More »

ಕರಾವಳಿ, ಕರ್ನಾಟಕ
Scroll to Top