ಮಹಾರಾಷ್ಟದಿಂದ ಕಡಬಕ್ಕೆ ಬಂದ ಯುವಕ ➤ ಸರ್ಕಾರಿ ಶಾಲೆಯಲ್ಲಿ ಕ್ವಾರೈಂಟೈನ್

(ನ್ಯೂಸ್ ಕಡಬ) newskadaba.com ಬಿಳಿನೆಲೆ. ಜೂ. 8, ಮಹಾರಾಷ್ಟ್ರದಿಂದ ಬಂದ ಯುವಕನನ್ನ ಬಿಳಿನೆಲೆಯ ಸರ್ಕಾರಿ ಶಾಲೆಯಲ್ಲಿ ಕ್ವಾರೈಂಟೈನ್ ಮಾಡಲಾಗಿದೆ. ಬಿಳಿನೆಲೆ ಕೈಕಂಬ ಮೂಲದ ಯುವಕನೋರ್ವ, ಮಹಾರಾಷ್ಟ್ರದಿಂದ ಮಂಗಳೂರಿಗೆ ರೈಲಿನಲ್ಲಿ ಆಗಮಿಸಿದ್ದು, ಬಳಿಕ ಮಂಗಳೂರಿನಿಂದ ಕಾರಿನಲ್ಲಿ ಬಿಳಿನೆಲೆಯ ಕೈಕಂಬಕ್ಕೆ ತಲುಪಿದ್ದಾರೆ. ಈ ಹಿನ್ನಲೆಯಿಂದಾಗಿ ಯುವಕನನ್ನು 7 ದಿನಗಳ ಕಾಲ ಬಿಳಿನೆಲೆಯ ಸರ್ಕಾರಿ ಶಾಲೆಯೊಂದರಲ್ಲಿ ಕ್ವಾರೈಂಟೈನ್ ಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.    

ಮಹಾರಾಷ್ಟದಿಂದ ಕಡಬಕ್ಕೆ ಬಂದ ಯುವಕ ➤ ಸರ್ಕಾರಿ ಶಾಲೆಯಲ್ಲಿ ಕ್ವಾರೈಂಟೈನ್ Read More »

ಕರಾವಳಿ, ಕರ್ನಾಟಕ

ಈ ದಿನದ ರಾಶಿ ಫಲ ಗಿರಿಧರ ಭಟ್ ರವರಿಂದ ಮಾಹಿತಿ

ಶ್ರೀ ಮಂಜುನಾಥೇಶ್ವರ ಸ್ವಾಮಿ ಸ್ಮರಣೆಯನ್ನು ಮಾಡುತ್ತಾ ಈ ದಿನದ ರಾಶಿಗಳ ಶುಭಾಶುಭಫಲಗಳನ್ನು ತಿಳಿಯೋಣ. ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಷಯ, ದಾಂಪತ್ಯ, ಕೌಟುಂಬಿಕ ಕಲಹ, ಇನ್ನು ಇತ್ಯಾದಿ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಸ್ತ್ರೋಕ್ತ ತಾಂತ್ರಿಕ್ ವಿಧಾನಗಳಿಂದ ಪರಿಹಾರ ಶತಸಿದ್ಧ. ಇಂದೇ ಕರೆ ಮಾಡಿ. 9945410150 ಮೇಷ ರಾಶಿ ನಿಮ್ಮಲ್ಲಿ ಹೊಳೆಯುವ ಆರ್ಥಿಕ ದಾರಿಯು ನಿಮ್ಮ ಭವಿಷ್ಯವನ್ನು ಸುಸ್ಥಿರದಲ್ಲಿ ಇಡಲಿದೆ. ನಿಮ್ಮ ಕೆಲಸಗಳಿಗೆ ಸಮಾಜದಲ್ಲಿ ಉತ್ತಮ

ಈ ದಿನದ ರಾಶಿ ಫಲ ಗಿರಿಧರ ಭಟ್ ರವರಿಂದ ಮಾಹಿತಿ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಕನ್ನಡದ ಖ್ಯಾತ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ➤ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.07. ಸ್ಯಾಂಡಲ್​ವುಡ್​ ನ ಖ್ಯಾತ ನಟ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದಾಗಿ ಭಾನುವಾರದಂದು ಮೃತಪಟ್ಟಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು. ಚಿರಂಜೀವಿ ಸರ್ಜಾ ನಟಿ ಮೇಘನಾ ರಾಜ್​ ಅವರನ್ನು ವಿವಾಹವಾಗಿದ್ದರು. ಚಿರಂಜೀವಿ ಸರ್ಜಾಗೆ ಉಸಿರಾಟದ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಶನಿವಾರದಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕನ್ನಡದ ಖ್ಯಾತ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ➤ ಹೃದಯಾಘಾತದಿಂದ ನಿಧನ Read More »

ಕರ್ನಾಟಕ

ಜೂ. 8ರಿಂದ ರಾಜ್ಯದ ಎಲ್ಲಾ ಶಿಕ್ಷಕರು ಶಾಲೆಗಳಿಗೆ ಹಾಜರಾಗಬೇಕು ➤ ಸಚಿವ ಸುರೇಶ್ ಕುಮಾರ್

(ನ್ಯೂಸ್ ಕಡಬ)newskadaba.com ಜೂ. 7, ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಶಿಕ್ಷಕರು ಜೂ.8 ರಿಂದ ಶಾಲಾ ಕಛೇರಿಯಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ. ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಜೂ.8ರಂದು ಶಾಲೆಗೆ ಹಾಜರಾಗಿ ಶಾಲೆ ಪುನರಾರಂಭದ ಕುರಿತು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದ್ದು,  ಹಾಗೆಯೇ ರಾಜ್ಯಾದ್ಯಂತ ದೂರದ ಊರುಗಳಿಂದ ಬರುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಜೂನ್ 8ರಿಂದ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲು

ಜೂ. 8ರಿಂದ ರಾಜ್ಯದ ಎಲ್ಲಾ ಶಿಕ್ಷಕರು ಶಾಲೆಗಳಿಗೆ ಹಾಜರಾಗಬೇಕು ➤ ಸಚಿವ ಸುರೇಶ್ ಕುಮಾರ್ Read More »

ಕರಾವಳಿ

ಕಡಬ: 162 ಮಂದಿಗೆ ಹೋಂ ಕ್ವಾರಂಟೈನ್

(ನ್ಯೂಸ್ ಕಡಬ)newskadaba.com ಕಡಬ. ಜೂ. 7, ಕಡಬದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕಡಬದ ಬ್ಯಾಂಕೊಂದರ ಸಿಬ್ಬಂದಿಗಳು ಸೇರಿದಂತೆ ಸುಮಾರು 162 ಮಂದಿಗೆ ಹೋಂ ಕ್ವಾರಂಟೈನ್ ಮಾಡುವ ಬಗ್ಗೆ ಚರ್ಚೆ ನಡೆದಿದ್ದು, ಪಟ್ಟಿ ಬಿಡುಗಡೆ ಮಾಡಲಾಗಿದೆ. ಕೊರೋನಾ ಪಾಸಿಟಿವ್ ಬಂದ ವ್ಯಕ್ತಿ ಭೇಟಿ ನೀಡಿದ ಕಡಬದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 22 ಮಂದಿ ಸಿಬ್ಬಂದಿಗಳು ಸೇರಿದಂತೆ ಬ್ಯಾಂಕ್ ಗೆ ಭೇಟಿ ಮಾಡಿದ 140 ಮಂದಿ ಸೇರಿ ಒಟ್ಟು 162 ಮಂದಿಯನ್ನು ಸುರಕ್ಷತಾ ದೃಷ್ಟಿಯಿಂದ

ಕಡಬ: 162 ಮಂದಿಗೆ ಹೋಂ ಕ್ವಾರಂಟೈನ್ Read More »

ಕರಾವಳಿ

ಸೇತುವೆಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಬೆಂಗಳೂರು. ಜೂ. 7, ಯುವಕನೋರ್ವ ಮೈಸೂರು ರಸ್ತೆಯ ನಾಯಂಡಹಳ್ಳಿ ಮೇಲ್ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ಮಂತರಪಾಳ್ಯದ ಸುರೇಶ್ ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ಮೇಲ್ಸೇತುವೆಯಿಂದ ಏಕಾಏಕಿ ಜಿಗಿದ ಇವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಇವರನ್ನು ಸಾರ್ವಜನಿಕರು ಮತ್ತು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೇತುವೆಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಜಮ್ಮು- ಕಾಶ್ಮೀರ ಎನ್ ಕೌಂಟರ್ ➤ ಮೂವರು ಉಗ್ರರು ಬಲೆಗೆ

(ನ್ಯೂಸ್ ಕಡಬ)newskadaba.com ಶ್ರೀನಗರ: ಜೂ. 7, ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ರಕ್ಷಣಾಪಡೆಯು ಜಂಟಿ ಕಾರ್ಯಾಚರಣೆ ಆರಂಭಿಸಿದ ವೇಳೆ ಉಗ್ರರು ದಾಳಿ ಆರಂಭಿಸಿದ ಕಾರಣ ಅಲ್ಲಿ ಗುಂಡಿನ ಚಕಮಕಿ ನಡೆದಿದೆ‌. ಅಲ್ಲಿನ ಪ್ರಾಥಮಿಕ ವರದಿಯ ಪ್ರಕಾರ ಕನಿಷ್ಠ ಮೂವರು ಉಗ್ರರು ರಕ್ಷಣಾ ಪಡೆಯ ಕಾರ್ಯಾಚರಣೆ ವೇಳೆ ಸಿಲುಕಿದ್ದಾರೆ. ರಕ್ಷಣಾ ಪಡೆಗಳ ಬಳಿ ಸಿಲುಕಿದ್ದ ಉಗ್ರರು ಪರಾರಿಯಾಗಲು ಬೇಕಾಗಿ ಗುಂಡಿನ ದಾಳಿ ನಡೆಸಿದ್ದರಿಂದ ರಕ್ಷಣಾ ಪಡೆಯು ಪ್ರತಿದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್

ಜಮ್ಮು- ಕಾಶ್ಮೀರ ಎನ್ ಕೌಂಟರ್ ➤ ಮೂವರು ಉಗ್ರರು ಬಲೆಗೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ನೆಟ್ ವರ್ಕ್ ಸಮಸ್ಯೆ ಬಗೆಹರಿಸುವಂತೆ ಶಾಸಕರಿಗೆ ಮೂರನೇ ಸುತ್ತಿನ ಅರ್ಜಿ

(ನ್ಯೂಸ್ ಕಡಬ)newskadaba.com ಕುದ್ಲೂರು. ಜೂ. 7, ಕುದ್ಲೂರು ಪರಿಸರದಲ್ಲಿ ಮೊಬೈಲ್ ನೆಟ್ ವರ್ಕ್ ತೀರಾ ಸಿಗುತ್ತಿಲ್ಲ. ದೈನಂದಿನ ಸಂಪರ್ಕ ಹಾಗೂ ಅಂತರ್ಜಾಲ ವಿನಿಯೋಗಕ್ಕೆ ನೆಟ್ ವರ್ಕ್ ಇಲ್ಲದೇ ಇರುವುದರಿಂದ ಬಹಳ ಕಷ್ಟವಾಗುತ್ತಿದೆ. ಇದೀಗ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಮಕ್ಕಳ ವಿಧ್ಯಾಭ್ಯಾಸ ಕೂಡಾ ಆನ್ ಲೈನ್, ಇಂಟರ್ ನೆಟ್ ಮೊರೆಹೋಗಿರುವುದರಿಂದ ಮಕ್ಕಳ ವಿಧ್ಯಾಭ್ಯಾಸಕ್ಕೆ ಕೂಡಾ ಚ್ಯುತಿ ಬರುತ್ತಿದೆ. ಮಕ್ಕಳು ಮನೆಯ ಹಂಚು, ಗುಡ್ಡೆಯನ್ನು ಹತ್ತಿ ನೆಟ್ ವರ್ಕಿಗಾಗಿ ಪರದಾಡುತ್ತಿದ್ದಾರೆ. ನಮ್ಮೂರಿಗೆ ಸಮರ್ಪಕವಾಗಿ ನೆಟ್ ವರ್ಕ್ ಸಿಗುವಂತೆ ಟವರ್

ನೆಟ್ ವರ್ಕ್ ಸಮಸ್ಯೆ ಬಗೆಹರಿಸುವಂತೆ ಶಾಸಕರಿಗೆ ಮೂರನೇ ಸುತ್ತಿನ ಅರ್ಜಿ Read More »

ಕರಾವಳಿ

ಕೊೈಲ: ರಸ್ತೆ ಕಾಮಗಾರಿಗೆ 1.25 ಕೋಟಿ ರೂಪಾಯಿ ಅನುದಾನ ಮಂಜೂರು ➤ ಎಸ್. ಅಂಗಾರ

(ನ್ಯೂಸ್ ಕಡಬ) newskadaba.com ಕಡಬ, ಜೂನ್.7., ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಕೊೈಲ-ಹಿರೇಬಂಡಾಡಿ-ಉಪ್ಪಿನಂಗಡಿ ರಸ್ತೆಯಲ್ಲಿ ಕೊೈಲದಿಂದ ನೆಹರುತೋಟ ತನಕದ ರಸ್ತೆ ಡಾಂಬಾರೀಕರಣ ಕಾಮಗಾರಿಗೆ ಶನಿವಾರ ಶಿಲಾನ್ಯಾಸ ನಡೆಯಿತು. ಶಾಸಕ ಎಸ್. ಅಂಗಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಈ ರಸ್ತೆಯ ಡಾಂಬರೀಕರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಸುಮಾರು 1.25 ಕೋಟಿ ರೂಪಾಯಿ ಅನುದಾನ ಮಂಜೂರು ಆಗಿದ್ದು, ಈ ಭಾಗದ ಜನರ ಬಹುಕಾಲದ ಸಮಸ್ಯೆಯೊಂದು ಪರಿಹಾರ ಆಗುವಂತಾಗಿದೆ ಎಂದರು. ಈ ರಸ್ತೆಯಲ್ಲಿ ಬಹಳಷ್ಟು ಕಡೆ ಏರು ತಗ್ಗು ಇದ್ದು, ಇದನ್ನು

ಕೊೈಲ: ರಸ್ತೆ ಕಾಮಗಾರಿಗೆ 1.25 ಕೋಟಿ ರೂಪಾಯಿ ಅನುದಾನ ಮಂಜೂರು ➤ ಎಸ್. ಅಂಗಾರ Read More »

ಕರಾವಳಿ

ವಿದ್ಯುತ್ ಬಿಲ್ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ ➤ ಅಧಿಕಾರಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು. ಜೂ. 7, ಲಾಕ್‌ಡೌನ್‌ ಸಮಯದಲ್ಲಿ ವಿದ್ಯುತ್‌ ಬಿಲ್‌ ಅಧಿಕ ಬಂದಿರುವುದಾಗಿ ಸಾರ್ವಜನಿಕರಿಂದ ವ್ಯಕ್ತವಾಗಿರುವ ಮನವಿಗಳಿಗೆ ತಕ್ಷಣ ಸ್ಪಂದಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಛೇರಿಯಲ್ಲಿ ಶನಿವಾರ ಇದರ ಕುರಿತಾಗಿ ಉನ್ನತ ಮಟ್ಟದ ಸಭೆ ನಡೆಸಿದ ಸಚಿವರು, ಮಾರ್ಚ್‌-ಎಪ್ರಿಲ್‌ ಬಿಲ್ಲನ್ನು ಒಟ್ಟಿಗೆ ನೀಡಿರುವುದರಿಂದ ಮೊತ್ತ ಅಧಿಕವಾಗಿರುವುದು ಸಹಜ. ಆದರೆ ಪ್ರತೀ ಯುನಿಟ್‌ ದರ ಲೆಕ್ಕ ಹಾಕುವಾಗ ಸಮರ್ಪಕವಾಗಿಲ್ಲ ಎಂದು ಸಾರ್ವಜನಿಕರಿಂದ ಅತೃಪ್ತಿ ವ್ಯಕ್ತವಾಗಿದೆ.

ವಿದ್ಯುತ್ ಬಿಲ್ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ ➤ ಅಧಿಕಾರಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಸೂಚನೆ Read More »

ಕರಾವಳಿ
Scroll to Top