ಮಹಾರಾಷ್ಟದಿಂದ ಕಡಬಕ್ಕೆ ಬಂದ ಯುವಕ ➤ ಸರ್ಕಾರಿ ಶಾಲೆಯಲ್ಲಿ ಕ್ವಾರೈಂಟೈನ್

(ನ್ಯೂಸ್ ಕಡಬ) newskadaba.com ಬಿಳಿನೆಲೆ. ಜೂ. 8, ಮಹಾರಾಷ್ಟ್ರದಿಂದ ಬಂದ ಯುವಕನನ್ನ ಬಿಳಿನೆಲೆಯ ಸರ್ಕಾರಿ ಶಾಲೆಯಲ್ಲಿ ಕ್ವಾರೈಂಟೈನ್ ಮಾಡಲಾಗಿದೆ.

ಬಿಳಿನೆಲೆ ಕೈಕಂಬ ಮೂಲದ ಯುವಕನೋರ್ವ, ಮಹಾರಾಷ್ಟ್ರದಿಂದ ಮಂಗಳೂರಿಗೆ ರೈಲಿನಲ್ಲಿ ಆಗಮಿಸಿದ್ದು, ಬಳಿಕ ಮಂಗಳೂರಿನಿಂದ ಕಾರಿನಲ್ಲಿ ಬಿಳಿನೆಲೆಯ ಕೈಕಂಬಕ್ಕೆ ತಲುಪಿದ್ದಾರೆ. ಈ ಹಿನ್ನಲೆಯಿಂದಾಗಿ ಯುವಕನನ್ನು 7 ದಿನಗಳ ಕಾಲ ಬಿಳಿನೆಲೆಯ ಸರ್ಕಾರಿ ಶಾಲೆಯೊಂದರಲ್ಲಿ ಕ್ವಾರೈಂಟೈನ್ ಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

 

Scroll to Top