ಕೊಡಿಯಾಲ್ ಬೈಲು: ಗೋಮಾಳಕ್ಕೆ ಆಕಸ್ಮಿಕ ಬೆಂಕಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 18. ಇಲ್ಲಿನ ಎಂಜಿಎಂ ಪ್ರೌಢಶಾಲೆಯ ಬಳಿಯಿರುವ ಗೋಮಾಳಕ್ಕೆ ಬೆಂಕಿ ಆವರಿಸಿ ಗಾಂಧಿವನದ ಗಿಡಗಳಿಗೂ ಹಾನಿಯಾದ ಘಟನೆ ಇಂದು ನಡೆದಿದೆ. ಬೆಂಕಿ ಆವರಿಸಿಕೊಂಡ ತಕ್ಷಣವೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಗಿದ್ದು, ಅವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಡಿಯಾಲ್ ಬೈಲು: ಗೋಮಾಳಕ್ಕೆ ಆಕಸ್ಮಿಕ ಬೆಂಕಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಲಂಕಾರು: ಅಪಾಯವನ್ನು ತಪ್ಪಿಸಲು ಹೋಗಿ ಚರಂಡಿಗಿಳಿದ ಅಟೋರಿಕ್ಷಾ

(ನ್ಯೂಸ್ ಕಡಬ) newskadaba.com ಆಲಂಕಾರು, ಜ. 18. ಆಟೋ ರಿಕ್ಷಾವೊಂದು ಅಪಘಾತವನ್ನು ತಪ್ಪಿಸಲು ಹೋಗಿ ರಸ್ತೆ ಬದಿಯಲ್ಲಿದ್ದ ಚರಂಡಿಗೆ ಬಿದ್ದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೊಯಿಲ ಎಂಬಲ್ಲಿ ನಡೆದಿದೆ. ಉಪ್ಪಿನಂಗಡಿಯಿಂದ ಕಡಬಕ್ಕೆ ತೆರಳುತ್ತಿದ್ದ ಆಟೋ ರಿಕ್ಷಾವೊಂದು ವಿರುದ್ದ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ವಾಹನದಿಂದ ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಲು ಹೋಗಿ ಹೊಂಡಕ್ಕೆ ಬಿದ್ದಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.

ಆಲಂಕಾರು: ಅಪಾಯವನ್ನು ತಪ್ಪಿಸಲು ಹೋಗಿ ಚರಂಡಿಗಿಳಿದ ಅಟೋರಿಕ್ಷಾ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅನೈತಿಕ ವಿಚಾರ ಶಂಕಿಸಿ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಂದ ಪಾಪಿ ಪತಿ…!

(ನ್ಯೂಸ್ ಕಡಬ) newskadaba.com ಮೈಸೂರು, ಜ. 18. ಪತಿಯೋರ್ವ ಪತ್ನಿಯನ್ನೇ ಉಸಿರುಗಟ್ಟಿಸಿ ಹತ್ಯೆ ಮಾಡಿದ ಘಟನೆ ಹುಣಸೂರಿನಲ್ಲಿ ನಡೆದಿದೆ. ಮೃತರನ್ನು ಹುಣಸೂರಿನ ಕಲ್ಕುಣಿಕೆ ಮಾರಿಗುಡಿ ಬೀದಿ ನಿವಾಸಿ ರವಿ ಎಂಬವನ ಪತ್ನಿ ಸೌಮ್ಯ(31) ಎಂದು ಗುರುತಿಸಲಾಗಿದೆ. ಇವರು ಮಂಡ್ಯದ ಸಾತನೂರು ಗ್ರಾಮದವರಾಗಿದ್ದು, 11 ವರ್ಷಗಳ ಹಿಂದೆ ರವಿಯನ್ನು ವಿವಾಹವಾಗಿದ್ದರು. ಇವರು ಆಶಾ ಕಾರ್ಯಕರ್ತೆ ಆಗಿ ದುಡಿಯುತ್ತಿದ್ದರು ಎಂದು ತಿಲಕಿದು ಬಂದಿದೆ. ಈ ದಂಪತಿಗೆ 9 ಹಾಗೂ 7 ವರ್ಷದ ಎರಡು ಗಂಡು ಮಕ್ಕಳಿದ್ದಾರೆ. ಕಳೆದ 6 ತಿಂಗಳಿನಿಂದ

ಅನೈತಿಕ ವಿಚಾರ ಶಂಕಿಸಿ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಂದ ಪಾಪಿ ಪತಿ…! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕುಂತೂರು: ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಪೆರಾಬೆ, ಜ. 18. ಇಲ್ಲಿನ ಮನೆಯೊಂದರಲ್ಲಿ ಕೆಲ ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬರ ಕೊಳೆತ ಮೃತ ದೇಹವೊಂದು ಕುಂತೂರು ಗ್ರಾಮದ ಎರ್ಮಾಳು ಎಂಬಲ್ಲಿ ಪತ್ತೆಯಾಗಿದೆ. ಮೃತರನ್ನು ಬಾಲು ಕೊರಗ ಎಂದು ಗುರುತಿಸಲಾಗಿದೆ. ಇಲ್ಲಿನ ಮನೆಯೊಂದರಲ್ಲಿ ದುರ್ವಾಸನೆ ಬೀರುತ್ತಿದ್ದ ಕಾರಣ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಬಾಲು ಕೊರಗ ಎಂಬುವವರು ಮಲಗಿದಲ್ಲಿಯೇ ಮೃತ ಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಬಳಿಕ ಪೊಲೀಸರ ನೇತೃತ್ವದಲ್ಲಿ ಮೃತ ಸಂಬಂಧಿಕರ ಉಪಸ್ಥಿತಿಯಲ್ಲಿ ಸ್ಥಳೀಯರು ಸೇರಿ

ಕುಂತೂರು: ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಬ್ರಹ್ಮಣ್ಯ: ಬಸ್ ನಲ್ಲಿ ಬಿಟ್ಟುಹೋದ ಬ್ಯಾಗನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕೆಎಸ್ಸಾರ್ಟಿಸಿ ಚಾಲಕ ಮತ್ತು ನಿರ್ವಾಹಕ

(ನ್ಯೂಸ್ ಕಡಬ) newskadaba.com ಸುಬ್ರಮಣ್ಯ, ಜ. 18. ಪ್ರಯಾಣಿಕರೋರ್ವರು ಬಸ್ಸಿನಲ್ಲಿ ಮರೆತು ಹೋಗಿದ್ದ ಬ್ಯಾಗನ್ನು ಅದರ ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಕೆಎಸ್​.ಆರ್​.ಟಿಸಿ ಚಾಲಕ ಮತ್ತು ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ. ಜನವರಿ 16 ರಂದು ಸುಬ್ರಹ್ಮಣ್ಯ ರೈಲ್ವೇ ನಿಲ್ದಾಣದಿಂದ ಧರ್ಮಸ್ಥಳಕ್ಕೆತೆರಳುತ್ತಿದ್ದ ಪ್ರಯಾಣಿಕರೋರ್ವರು ಬೆಲೆಬಾಳುವ ಲ್ಯಾಪ್​-ಟಾಪ್​ ಇದ್ದ ಬ್ಯಾಗನ್ನು ಬಸ್ಸಿನಲ್ಲಿಯೇ ಮರೆತು ಹೋಗಿದ್ದರು. ಇದನ್ನು ಗಮನಿಸಿದ ಚಾಲಕ ಈಸುಬ್​ ಅಲಿ ಮತ್ತು ನಿರ್ವಾಹಕ ಮಂಜು ತಕ್ಷಣವೇ ಪ್ರಯಾಣಿಕನನ್ನು ಹುಡುಕಲು ಆರಂಭಿಸಿದ್ದಾರೆ. ಇವರಿಬ್ಬರ ಪ್ರಯತ್ನದ ಫಲವಾಗಿ ಕೊನೆಗೂ ಬ್ಯಾಗ್​ ಬಿಟ್ಟು ಹೋಗಿದ್ದ

ಸುಬ್ರಹ್ಮಣ್ಯ: ಬಸ್ ನಲ್ಲಿ ಬಿಟ್ಟುಹೋದ ಬ್ಯಾಗನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕೆಎಸ್ಸಾರ್ಟಿಸಿ ಚಾಲಕ ಮತ್ತು ನಿರ್ವಾಹಕ Read More »

ಕರಾವಳಿ, ಕರ್ನಾಟಕ

ಪ್ರತೀ ವರ್ಷ ನಡೆಯುತ್ತಿದ್ದ ಗಣರಾಜ್ಯೋತ್ಸವ ದಿನದ ಫಲಪುಷ್ಪ ಪ್ರದರ್ಶನ ರದ್ದು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 18. ಗಣರಾಜ್ಯೋತ್ಸವದಂದು ಲಾಲ್ ಭಾಗ್ ನಲ್ಲಿ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನವನ್ನು ಈ ವರ್ಷ ರದ್ದು ಮಾಡಲಾಗಿದೆ. ಮುಖ್ಯಮಂತ್ರಿಯವರು ಎರಡು ದಿನಗಳ ಮೊದಲು ಫಲಪುಷ್ಪ ಪ್ರದರ್ಶನಕ್ಕೆ ಅನುಮತಿ ನೀಡಿದ್ದರಾದರೂ ಬಿಬಿಎಂಪಿ ಅನುಮತಿ ನಿರಾಕರಣೆ ಮಾಡಿದ ಹಿನ್ನೆಲೆ ಇದನ್ನು ರದ್ದು ಮಾಡಲಾಗಿದೆ. 2021ರ ಸ್ವಾತಂತ್ರ್ಯೋತ್ಸವ ವೇಳೆ ಈ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಪ್ರತೀ ವರ್ಷ ನಡೆಯುತ್ತಿದ್ದ ಗಣರಾಜ್ಯೋತ್ಸವ ದಿನದ ಫಲಪುಷ್ಪ ಪ್ರದರ್ಶನ ರದ್ದು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಗ್ರರನ್ನು ಸದೆಬಡಿದ ವೀರ ಯೋಧ ಝುಬೇರ್ ಹಳೆನೇರಂಕಿ ಅವರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 18. ಉಗ್ರಗಾಮಿಗಳು ನಡೆಸಿದ ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಇಬ್ಬರು ಉಗ್ರಗಾಮಿಗಳನ್ನು ಕೊಂದ ವೀರಯೋಧ ಆತೂರು ಸಮೀಪದ ಹಳೆನೇರಂಕಿಯ ಝುಬೇರ್ ನೇರಂಕಿ ಅವರನ್ನು ಟೀಮ್ ಬಿ ಹ್ಯೂಮನ್ ಹಾಗೂ ಟ್ಯಾಲೆಂಟ್‌ ರಿಸರ್ಚ್ ಫೌಂಡೇಶನ್ ನಿಂದ ಕಂಕನಾಡಿಯ ವಿಶ್ವಾಸ್ ಕ್ರೌನ್ ನ ಟ್ಯಾಲೆಂಟ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು 2018 ಫೆಬ್ರವರಿಯ ಘಟನೆ ಬಹಳ ಮಹತ್ವದ್ದು, ಒಂದೂವರೆ ದಿನಗಳ ಕಾಲ ಕಾರ್ಯಾಚರಣೆ ನಡೆಸಿ, ವೈರಿಗಳನ್ನು ಸದೆಬಡಿಯುವಲ್ಲಿ ಯಶಸ್ವಿಯಾದವು ಎಂದರು. ಯುವಕರು

ಉಗ್ರರನ್ನು ಸದೆಬಡಿದ ವೀರ ಯೋಧ ಝುಬೇರ್ ಹಳೆನೇರಂಕಿ ಅವರಿಗೆ ಸನ್ಮಾನ Read More »

ಕರಾವಳಿ, ಕರ್ನಾಟಕ

ಮದುವೆಗೆ ಒತ್ತಾಯಿಸಿದ ಮಗನನ್ನೇ ಕೊಂದ ತಂದೆ..!

(ನ್ಯೂಸ್ ಕಡಬ) newskadaba.com ಹೈದರಾಬಾದ್, ಜ. 18. ಮದುವೆ ಮಾಡುವಂತೆ ಒತ್ತಾಯಿಸಿದ ಮಗನನ್ನೇ ತಂದೆ ಕೊಡಲಿಯಿಂದ ಕೊಚ್ಚಿ ಕೊಂದ ಘಟನೆ ಹೈದರಾಬಾದ್ ರಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಕೊಲೆಯಾದವರನ್ನು ನರೇಶ್ ಎಂಸು ಗುರುತಿಸಲಾಗಿದೆ. ಎಲ್ಲಯ್ಯ ಮಗನನ್ನು ಕೊಂದ ಆರೋಪಿ ತಂದೆ. ಮಗನು ಮದುವೆಯಾಗುವಂತೆ ಪ್ರತೀ ನಿತ್ಯ ಹಿಂಸೆ ಮಾಡುತ್ತಾನೆ, ಈ ವಿಷಯದಲ್ಲಿ ತಂದೆ-ಮಗನಿಗೆ ದಿನಾಲೂ ಜಗಳವಾಗುತ್ತಿತ್ತು. ಶನಿವಾರದಂದು ಸಂಜೆ ಈ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆಯಾಗಿದ್ದು, ಈ ವೇಳೆ ಸಿಟ್ಟಿನಿಂದ ಹತ್ತಿರದಲ್ಲಿದ್ದ ಕೊಡಲಿಯಿಂದ ಬಲವಾಗಿ ಹೊಡೆದಿದ್ದಾನೆ. ಹೊಡೆತಕ್ಕೆ ಗಂಭೀರ

ಮದುವೆಗೆ ಒತ್ತಾಯಿಸಿದ ಮಗನನ್ನೇ ಕೊಂದ ತಂದೆ..! Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಿಗಮದಿಂದ ಯುವಕರಿಗೆ ಬೈಕ್ ಖರೀದಿಗೆ ಸಾಲ -ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 18. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಪ್ರಸ್ತುತ ಸಾಲಿಗೆ “ಇ-ವಾಣಿಜ್ಯ ಸಂಸ್ಥೆಗಳು ಮನೆ ಬಾಗಿಲಿಗೆ ತಮ್ಮ ಉತ್ಪನ್ನಗಳನ್ನು ತಲುಪಿಸುವ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ-1, ಪ್ರವರ್ಗ 2ಎ, 3ಎ ಮತ್ತು 3ಬಿಗೆ ಸೇರಿದ  (ವಿಶ್ವಕರ್ಮ, ಉಪ್ಪಾರ, ಅಂಬಿಗ, ಮಡಿವಾಳ, ಸವಿತಾ, ಅಲೆಮಾರಿ/ಅರೆ ಅಲೆಮಾರಿ ಜನಾಂಗದವರು ಹಾಗೂ ಮತೀಯ ಅಲ್ಪಸಂಖ್ಯಾತರನ್ನು ಹೊರತು ಪಡಿಸಿ) ಯುವಕರಿಗೆ ಬೈಕ್ ಕೊಂಡುಕೊಳ್ಳಲು ನಿಗಮದಿಂದ ರೂ. 25,000/- ಗಳ ಸಹಾಯಧನ ಹಾಗೂ ಉಳಿಕೆ ಮೊತ್ತ

ನಿಗಮದಿಂದ ಯುವಕರಿಗೆ ಬೈಕ್ ಖರೀದಿಗೆ ಸಾಲ -ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಮಂಗಳೂರು: ವೀರ ಹನುಮಾನ್ ವ್ಯಾಯಾಮ ಶಾಲೆಯ ಸುವರ್ಣ ಮಹೋತ್ಸವ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 18. ದಿ. ಉಸ್ತಾದ್ ಮೋಹನ್ ದಾಸ್ ಮಾಸ್ಟರ್ ರವರು ಸ್ಥಾಪಿಸಿದ  ಶ್ರೀ ವೀರ ಹನುಮಾನ್ ವ್ಯಾಯಾಮ ಶಾಲೆ (ರಿ), ಉರ್ವ, ಮಂಗಳೂರು ಇದರ ಸುವರ್ಣ ಮಹೋತ್ಸವ ಇತ್ತೀಚಿಗೆ ಉರ್ವ ಮೈದಾನದಲ್ಲಿ ನಡೆಯಿತು. ಶಾಸಕ ವೇದವ್ಯಾಸ ಕಾಮತ್ ಅವರು ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಮೇಯರ್ ದಿವಾಕರ್ ಪಾಂಡೇಶ್ವರ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರದಾನ ಅರ್ಚಕರಾದ ಕೆ.ರಾಮ ಭಟ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.

ಮಂಗಳೂರು: ವೀರ ಹನುಮಾನ್ ವ್ಯಾಯಾಮ ಶಾಲೆಯ ಸುವರ್ಣ ಮಹೋತ್ಸವ Read More »

ಕರಾವಳಿ, ಕರ್ನಾಟಕ
Scroll to Top