ಮಂಗಳೂರು: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ➤ ಇಬ್ಬರು ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 24.‌ ಅತ್ತಾವರದ ಲಾಡ್ಜ್ ವೊಂದಕ್ಕೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ ಘಟನೆ ನಡೆದಿದೆ. ಮಹಿಳೆಯೊಬ್ಬರ ದೂರನಂತೆ ಅತ್ತಾವರದ ಲಾಡ್ಜ್ ವೊಂದಕ್ಕೆ ದಾಳಿ ನಡೆಸಿದ್ದು, ಅಲ್ಲಿನ 211 ಮತ್ತು 212 ಸಂಖ್ಯೆಯ ಕೊಠಡಿಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಕಂಡುಬಂದಿದೆ. ಇದರನ್ವಯ ಇಬ್ಬರು ಗ್ರಾಹಕರನ್ನು ವಶಕ್ಕೆ ಪಡೆದು, ಅವರ ಹೇಳಿಕೆಗನುಸಾರವಾಗಿ ಲಾಡ್ಜ್ ವ್ವವಸ್ಥಾಪಕ ಚಂದ್ರಶೇಖರ್ ಹಾಗೂ ರೂಂ ಬಾಯ್ ಹರೀಶ್ ಪೂಜಾರಿ ಎಂಬವರನ್ನು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ಈ ಕುರಿತು ಪ್ರಕರಣ […]

ಮಂಗಳೂರು: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ➤ ಇಬ್ಬರು ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಬ್ರಹ್ಮಣ್ಯ ಉಪವಲಯಾಧಿಕಾರಿಯಾಗಿ ರವಿಚಂದ್ರ ಪಡುಬೆಟ್ಟು ಭಡ್ತಿ

(ನ್ಯೂಸ್ ಕಡಬ) newskadaba.com ಕಡಬ, ಜ. 24. ಅರಣ್ಯ ರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿಚಂದ್ರ ಪಡುಬೆಟ್ಟು ಎಂಬವರು ಸುಬ್ರಹ್ಮಣ್ಯ ಉಪವಲಯ ಅರಣ್ಯಾಧಿಕಾರಿಯಾಗಿ ಮುಂಭಡ್ತಿ ಹೊಂದಿದ್ದಾರೆ.  2005ರಲ್ಲಿ ಅರಣ್ಯ ವೀಕ್ಷಕರಾಗಿ ಕರ್ತವ್ಯಕ್ಕೆ ಸೇರಿಕೊಂಡ ಬಳಿಕ 2010ರಲ್ಲಿ ಅರಣ್ಯ ರಕ್ಷಕರಾಗಿ ಭಡ್ತಿ ಹೊಂದಿದ್ದರು. ಇದೀಗ 2021ರಲ್ಲಿ ಸುಬ್ರಹ್ಮಣ್ಯ ಉಪವಲಯ ಅರಣ್ಯಾಧಿಕಾರಿಯಾಗಿ ಭಡ್ತಿ ಹೊಂದಿದ್ದಾರೆ. ಕರ್ನಾಟಕ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ ಮಂಗಳೂರು ವಿಭಾಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ನೆಲ್ಯಾಡಿ‌ ಗ್ರಾಮದ ಪಡುಬೆಟ್ಟುವಿನ ಮಾಲೆವು ಮುಗೇರ ಮತ್ತು ಮುದರು

ಸುಬ್ರಹ್ಮಣ್ಯ ಉಪವಲಯಾಧಿಕಾರಿಯಾಗಿ ರವಿಚಂದ್ರ ಪಡುಬೆಟ್ಟು ಭಡ್ತಿ Read More »

ಕರಾವಳಿ, ಕರ್ನಾಟಕ

ಕಡಲ ತೀರ ತ್ಯಾಜ್ಯಗುಂಡಿಯಲ್ಲ ➤ ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 24. ದಿನನಿತ್ಯ ಕಡಲತೀರಕ್ಕೆ ವಿಹಾರಕ್ಕೆ ಬರುವ ಪ್ರವಾಸಿಗರು ಮತ್ತು ಸ್ಥಳೀಯರು ಕಡಲ ತೀರವನ್ನು ಕಲುಷಿತಗೊಳಿಸುತ್ತಿರುವುದು ಬಹಳ ಖೇದಕರ ವಿಚಾರವಾಗಿದೆ. ವಾರಾಂತ್ಯದ ಮೋಜುಮಸ್ತಿಗೆ ಬರುವ ಯುವಕ, ಯುವತಿಯರು ಕಡಲತೀರದಲ್ಲಿ ಪ್ಲಾಸ್ಟಿಕ್ ಬಾಟಲ್, ಕವರ್‍ಗಳು ಮತ್ತು ಬಿಯರ್ ಬಾಟಲ್‍ಗಳನ್ನು ಎಸೆಯುವುದು ಅಕ್ಷಮ್ಯ ಅಪರಾಧ. ಕಡಲ ತೀರ ಎನ್ನುವುದು ತ್ಯಾಜ್ಯ ಗುಂಡಿಯಲ್ಲ. ಕಡಲತೀರವನ್ನು ಕಲುಷಿತಗೊಳಿಸುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು

ಕಡಲ ತೀರ ತ್ಯಾಜ್ಯಗುಂಡಿಯಲ್ಲ ➤ ಡಾ|| ಚೂಂತಾರು Read More »

ಕರಾವಳಿ, ಕರ್ನಾಟಕ

ಬೆಳ್ತಂಗಡಿ: ‘ತಾಂಟ್ ರೆ ಬಾ ತಾಂಟ್’ ಎಂದು ಹೇಳಿ 25 ಮಂದಿಯಿಂದ ಇಬ್ಬರಿಗೆ ಹಲ್ಲೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 24. ಸರಿಸುಮಾರು 25ಕ್ಕಿಂತಲೂ ಅಧಿಕ ಜನರ ತಂಡವೊಂದು ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಹಲ್ಲೆಗೊಳಗಾದವರನ್ನು ಬೆಳ್ತಂಗಡಿ ತಾಲೂಕಿನ ಸುದೇಮುಗೇರು ನಿವಾಸಿ ಮಹಮ್ಮದ್ ಅಲ್ತಾಫ್ (21) ಎಂದು ಗುರುತಿಸಲಾಗಿದೆ. ಅಲ್ತಾಫ್ ಎಂಬವರು ಉಜಿರೆಯ ಎಂಪಾಯರ್ ಹೋಟೆಲ್ ನಲ್ಲಿ ಜ್ಯೂಸ್ ಮೇಕರ್ ಆಗಿ ಕೆಲಸ ಮಾಡಿಕೊಂಡಿದ್ದು, ಒಂದು ವಾರದ ಹಿಂದೆ ಹೋಟೆಲ್ ಗೆ ಬಂದ ಗಿರಾಕಿಗಳಲ್ಲಿ ಕೆಲವರು ಗುರಾಯಿಸಿ ನೋಡಿದ್ದಕ್ಕೆ ಅವರಲ್ಲಿ ನೀನು ಯಾಕೆ ನನ್ನನ್ನು ಗುರಾಯಿಸಿ ನೋಡಿದ್ದಿ ಎಂದು

ಬೆಳ್ತಂಗಡಿ: ‘ತಾಂಟ್ ರೆ ಬಾ ತಾಂಟ್’ ಎಂದು ಹೇಳಿ 25 ಮಂದಿಯಿಂದ ಇಬ್ಬರಿಗೆ ಹಲ್ಲೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಾಸರಗೋಡು: ಹಾಡಹಗಲೇ ದುಷ್ಕರ್ಮಿಗಳಿಂದ ವ್ಯಕ್ತಿಯ ಕೊಲೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 24. ಹಾಡುಹಗಲೇ ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳ ಗುಂಪೊಂದು ಥಳಿಸಿ ಕೊಲೆಗೈದ ಘಟನೆ ಶನಿವಾರ ಮಧ್ಯಾಹ್ನ ಕಾಸರಗೋಡು ನಗರದಲ್ಲಿ ನಡೆದಿದೆ. ಮೃತರನ್ನು ಚೆಮ್ನಾಡ್ ದೇಳಿಯ ಮುಹಮ್ಮದ್ ರಫೀಕ್ (48) ಎಂದು ಗುರುತಿಸಲಾಗಿದೆ. ಇವರು ಖಾಸಗಿ ಆಸ್ಪತ್ರೆಯೊಂದರ ಸಮೀಪದ ಮೆಡಿಕಲ್ ಸ್ಟೋರ್ ನಲ್ಲಿ ಔಷಧಿ ಖರೀದಿಸುತ್ತಿದ್ದ ಸಂದರ್ಭ ಅಲ್ಲಿಗೆ ಆಗಮಿಸಿದ ಗುಂಪೊಂದು ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ರಫೀಕ್ ಆಸ್ಪತ್ರೆಗೆ ಕರೆದೊಯ್ದರೂ ಆಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಕಾಸರಗೋಡು ಡಿವೈ.ಎಸ್.ಪಿ. ಪಿ.ಬಾಲಕೃಷ್ಣನ್

ಕಾಸರಗೋಡು: ಹಾಡಹಗಲೇ ದುಷ್ಕರ್ಮಿಗಳಿಂದ ವ್ಯಕ್ತಿಯ ಕೊಲೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇದೇ ಫೆಬ್ರವರಿಯಿಂದ‌ ಬಿಗ್ ಬಾಸ್ 8ನೇ ಆವೃತ್ತಿ‌ಆರಂಭ ➤ ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 24. ಕನ್ನಡ ಕಿರುತೆರೆಯ ಬಹುದೊಡ್ಡ ಶೋ ಅಗಿರುವ ಬಿಗ್​ ಬಾಸ್​ ಇದರ 8 ನೇ ಆವೃತ್ತಿ ಇದೇ ಫೆಬ್ರವರಿಯಿಂದ ಶುರುವಾಗಲಿದೆ ಎಂದು ಕಲರ್ಸ್​​ ಕನ್ನಡ ಬ್ಯುಸಿನೆಸ್​​ ಹೆಡ್​​​ ಪರಮೇಶ್ವರ್​​ ಗುಂಡ್ಕಲ್​​ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಬಿಗ್ ಬಾಸ್ ನಡೆಸಿಕೊಡುವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು​​, ಕನ್ನಡದ ಬಿಗ್​​ ಬಾಸ್​​ ಇದೇ ಫೆಬ್ರವರಿಯಿಂದ ಶುರುವಾಗಲಿದೆ ಎಂದು ತಿಳಿಸಿದ್ದಾರೆ.

ಇದೇ ಫೆಬ್ರವರಿಯಿಂದ‌ ಬಿಗ್ ಬಾಸ್ 8ನೇ ಆವೃತ್ತಿ‌ಆರಂಭ ➤ ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ Read More »

ಕರ್ನಾಟಕ

ಜಾತಿ ನಿಂದನೆ ಆರೋಪ ➤ ‘ಝೀ ಕನ್ನಡ’ ಮುಖ್ಯಸ್ಥ ಸೇರಿ ಹಲವರ ವಿರುದ್ದ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 24. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪದಡಿ ಝೀ ಕನ್ನಡ ವಾಹಿನಿ ಮುಖ್ಯಸ್ಥ ಸೇರಿದಂತೆ ಹಲವರ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್‍.ಐ.ಆರ್ ದಾಖಲಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಈ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ತನಿಖೆಯನ್ನು ಎಸಿಪಿಯವರು ನಡೆಸಲಿದ್ದು, ಅವರೇ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಜಾತಿ ನಿಂದನೆ ಆರೋಪ ➤ ‘ಝೀ ಕನ್ನಡ’ ಮುಖ್ಯಸ್ಥ ಸೇರಿ ಹಲವರ ವಿರುದ್ದ ಪ್ರಕರಣ ದಾಖಲು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಪಯಸ್ವಿನಿ ನದಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 24. ಇಲ್ಲಿನ ಕೇರ್ಪಳ ಎಂಬಲ್ಲಿನ ಮಹಿಳೆಯೋರ್ವರು ಜ.18ರಂದು ಕಾಣೆಯಾಗಿದ್ದು, ಇದೀಗ ಅವರ ಮೃತದೇಹವು ಪಯಸ್ವಿನಿ ಹೊಳೆಯಲ್ಲಿ ಪತ್ತೆಯಾಗಿದೆ. ಸುಳ್ಯದ ಕೇರ್ಪಳದಲ್ಲಿ ಬಾಡಿಗೆ ಕೋಣೆಯಲ್ಲಿರುವ ಆನಂದ ಎಂಬವರ ಪತ್ನಿ ಚಂದ್ರಾವತಿಯವರ ಮೊಬೈಲ್ ಫೋನ್ ಮತ್ತು ಪರ್ಸ್ ನದಿಯಲ್ಲಿದ್ದುದನ್ನು ಕಂಡು ಸ್ಥಳೀಯರು, ಅಗ್ನಿಶಾಮಕ ದಳ ಹಾಗೂ ಗೃಹರಕ್ಷಕ ದಳದವರು ಸೇರಿ ಹೊಳೆಯಲ್ಲಿ ಹುಡುಕಾಟ ನಡೆಸಿದ್ದರೂ ಮೃತದೇಹ ಪತ್ತೆಯಾಗಿರಲಿಲ್ಲ ಹಾಗೂ ಮನೆಗೂ ಹಿಂತಿರುಗಿರಲಿಲ್ಲ. ಇದೀಗ ಜ.23 ರಂದು ನಾರ್ಕೋಡು ಸಮೀಪ ಪಯಸ್ವಿನಿ ಹೊಳೆಯ ನೀರಲ್ಲಿ

ಸುಳ್ಯ: ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಪಯಸ್ವಿನಿ ನದಿಯಲ್ಲಿ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಅಶ್ವತ್ಥ ಮರ ಬಿದ್ದು ವಾಹನಗಳು ಜಖಂ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 24. ಇಲ್ಲಿನ ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನದ ಮುಂದೆ ಇದ್ದ ಅಶ್ವತ್ಥ ಕಟ್ಟೆಯ ಹಳೆಯದಾದ ಮರವೊಂದು ಬುಡ ಸಮೇತ ಉರುಳಿ ಬಿದ್ದ ಪರಿಣಾಮ ‌ಟ್ಯಾಂಕರ್, ಜೆಸಿಬಿ ಹಾಗೂ ಕಾರಿಗೆ ಹಾನಿಯಾಗಿದೆ. ಬೆಳಗ್ಗಿನ ಜಾವ ಈ ಘಟನೆ ನಡೆದಿದ್ದು ಮರದಡಿ ನಿಲ್ಲಿಸಿದ್ದ ಒಂದು ನೀರಿನ ಟ್ಯಾಂಕರ್, ಜೆಸಿಬಿ ಮತ್ತು ಒಂದು ಕಾರಿನ ಮೇಲೆ ಮರದ ಕೊಂಬೆಗಳು ಬಿದ್ದು ಹಾನಿಯಾಗಿದೆ. ಈ ಸಂದರ್ಭ ಆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಪ್ರಾಣ ಹಾನಿ ಸಂಭವಿಸಿಲ್ಲ.

ಮಂಗಳೂರು: ಅಶ್ವತ್ಥ ಮರ ಬಿದ್ದು ವಾಹನಗಳು ಜಖಂ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ತೊಕ್ಕೊಟ್ಟು: ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿ ➤ ವೃದ್ದ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 24. ಪಾದಚಾರಿ ವೃದ್ದರೋರ್ವರಿಗರ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ವೃದ್ದ ಸ್ಥಳದಲ್ಲೇ ಮೃತಪಟ್ಟ ಘಟನೆ ನಸುಕಿನ ಜಾವ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.   ಮೃತರನ್ನು ಪಾಣೆಮಂಗಳೂರಿನ ನಿವಾಸಿ ಹಮ್ಮಬ್ಬ (60) ಎಂದು ಗುರುತಿಸಲಾಗಿದೆ. ಇವರು ತೊಕ್ಕೊಟ್ಟು ಸಹರಾ ಆಸ್ಪತ್ರೆಯ ಎದುರು ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ವಾಹನವು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ತೊಕ್ಕೊಟ್ಟಿನ ಕಲ್ಲಾಪಿನಲ್ಲಿರುವ ಸಂಬಂಧಿಕರ ಮ‌ನೆಗೆ ಬಂದಿದ್ದರೆನ್ನಲಾಗಿದೆ. ಮಂಗಳೂರು

ತೊಕ್ಕೊಟ್ಟು: ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿ ➤ ವೃದ್ದ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top