ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ ➤ ನಾಲ್ವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 22. ಭಾರೀ ಪ್ರಮಾಣದ ಗಾಂಜಾ ಮಾರಾಟಕ್ಕೆತ್ನಿಸುತ್ತಿದ್ದ ಎರಡು ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ತೆಲಂಗಾಣ ಮೂಲದ ವಿಠಲ್ ಚೌಹಾನ್ ಹಾಗೂ ಬೀದರ್ ನಿವಾಸಿಗಳಾದ ಸಂಜೀವ ಕುಮಾರ್, ಕಲ್ಲಪ್ಪ ಎಂದು ಗುರುತಿಸಲಾಗಿದೆ. ಮಂಗಳೂರು ಹೊರವಲಯದ ದೇರಳಕಟ್ಟೆಯಿಂದ ಮುಡಿಪು ಕಡೆಗೆ ಗಾಂಜಾ ಸಾಗಾಟದ ಕುರಿತು ಖಚಿತ ಮಾಹಿತಿಯ ಪಡೆದ ಸಿಸಿಬಿ ತಂಡ ದಾಳಿ ನಡೆಸಿ, ಗಾಂಜಾ ಸಾಗಾಟಕ್ಕೆ ಬಳಕೆ ಮಾಡಿದ ಮಹಾರಾಷ್ಟ್ರ ನೋಂದಾಯಿತ ಕಾರು, 15 […]

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ ➤ ನಾಲ್ವರು ಆರೋಪಿಗಳ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಿಕ್ಷಾ ಹಾಗೂ ಕಂಟೇನರ್ ನಡುವೆ ಢಿಕ್ಕಿ ➤ 7 ಮಂದಿ ಮೃತ್ಯು, 15ಕ್ಕೂ ಅಧಿಕ ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಹೈದ್ರಾಬಾದ್, ಜ. 22. ಆಟೋ ರಿಕ್ಷಾ ಹಾಗೂ ಕಂಟೇನರ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 15ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅಂಗಡಿಪೇಟ್ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಆಟೋ ಚಾಲಕ ಮಲ್ಲೇಶ್, ಪೆದ್ದಮ್ಮ, ನೋಮಲ ಸೈದಮ್ಮ ಕೊಟ್ಟಂ, ಇದ್ದಮ್ಮ, ಮಲ್ಲಮ್ಮ ಹಾಗೂ ಅಂಜನಮ್ಮ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ 13 ಮಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಮೃತಪಟ್ಟವರೆಲ್ಲರೂ ಕೂಲಿ

ರಿಕ್ಷಾ ಹಾಗೂ ಕಂಟೇನರ್ ನಡುವೆ ಢಿಕ್ಕಿ ➤ 7 ಮಂದಿ ಮೃತ್ಯು, 15ಕ್ಕೂ ಅಧಿಕ ಮಂದಿಗೆ ಗಾಯ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಬಡ್ಡಿ ಆಡುತ್ತಿದ್ದ ವೇಳೆಯೇ ಕಬಡ್ಡಿ ಪ್ರೇಮಿ ಮೃತ್ಯು

(ನ್ಯೂಸ್ ಕಡಬ) newskadaba.com ಛತ್ತೀಸಗಢ, ಜ. 22. ಕಬಡ್ಡಿ ಪ್ರೇಮಿ ಯುವಕನೋರ್ವ ಕಬಡ್ಡಿ ಆಡುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಛತ್ತೀಸಗಢ ಧಾಮ್‌ ತಾರಿ ಜಿಲ್ಲೆಯ ಗೋಜಿ ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಕೋಕಾಡಿ ಗ್ರಾಮದ ನರೇಂದ್ರ ಸಾಹು ಎಂದು ಗುರುತಿಸಲಾಗಿದೆ. ಈತ ರಾತ್ರಿ ವೇಳೆ ನಡೆದ ಕಬಡ್ಡಿ ಪಂದ್ಯಾಟದಲ್ಲಿ ರೈಡರ್ ಆಗಿ ಎದುರಾಳಿಗಳ ಕೋರ್ಟ್‌ಗ ಕಾಲಿರಿಸಿದ್ದು, ಬಳಿಕ ಈತನನ್ನು ಎದುರಾಳಿ ತಂಡವು ಹಿಡಿದಿದೆ. ಈ ವೇಳೆ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ತಕ್ಷಣವೇ ಸಾಹುನನ್ನು ಆಸ್ಪತ್ರೆಗೆ

ಕಬಡ್ಡಿ ಆಡುತ್ತಿದ್ದ ವೇಳೆಯೇ ಕಬಡ್ಡಿ ಪ್ರೇಮಿ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ವೇಶ್ಯಾವಾಟಿಕೆ ದಂಧೆ ➤ ಸುಳ್ಯದ ಯುವಕ ಸೇರಿದಂತೆ ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಕಟಪಾಡಿ, ಜ. 22. ವೇಶ್ಯಾವಾಟಿಕೆಯ ಗುಂಪೊಂದು ಅಪ್ರಾಪ್ತ ಬಾಲಕಿಯನ್ನು ಬಲವಂತದಿಂದ ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.   ಬಂಧಿತ ಆರೋಪಿಗಳನ್ನು ಮೂಲತಃ ಸುಳ್ಯ ತಾಲೂಕಿನ ಕರಿಕ್ಕಳ ಪಂಬೆತ್ಪಾಡಿ ನಿವಾಸಿ ಗುಲಾಬಿ ನಾಯ್ಕ್‌ (29), ಕುಂದಾಪುರ ಹೊಸೂರು ನಿವಾಸಿ ಮಂಜುನಾಥ (26), ಬ್ರಹ್ಮಾವರ ಕೀಳಿಂಜೆ ನಿವಾಸಿ ಶಶಿಧರ (42), ಉಡುಪಿ ತೆಂಕನಿಡಿಯೂರಿನ ರೋವೆಲ್‌ ಸೂರಜ್‌(47) ಎಂದು ಗುರುತಿಸಲಾಗಿದೆ. ಸಂತ್ರಸ್ತ ಬಾಲಕಿಯು ಸಹೋದರಿ ತಂಗಿ

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ವೇಶ್ಯಾವಾಟಿಕೆ ದಂಧೆ ➤ ಸುಳ್ಯದ ಯುವಕ ಸೇರಿದಂತೆ ನಾಲ್ವರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಜ್ಯೂಸ್ ನಲ್ಲಿ ಅಮಲು ಪದಾರ್ಥ ಸೇರಿಸಿ ಯುವತಿಯ ಅತ್ಯಾಚಾರ ➤ ಉಪ್ಪಿನಂಗಡಿಯ ಯುವಕನ ವಿರುದ್ದ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಾರ್ಕಳ, ಜ. 22. ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ಕಾರಿನಲ್ಲಿ ಕರೆದೊಯ್ದು ಅಮಲು ಪದಾರ್ಥ ನೀಡಿ ಅತ್ಯಾಚಾರವೆಸಗಿ ಜೀವ ಬೆದರಿಕೆ ಹಾಕಿದ ಘಟನೆ ಕಾರ್ಕಳದಲ್ಲಿ ನಡೆದಿದೆ. ಆರೋಪಿಯನ್ನು ಉಪ್ಪಿನಂಗಡಿ ನಿವಾಸಿ ಪ್ರಾಣೇಶ್ ಎಂದು ಗುರುತಿಸಲಾಗಿದೆ. ಯುವತಿ ಕಾಲೇಜಿಗೆಂದು ತೆರಳಲು ಬಸ್ಸಿಗೆ ಕಾಯುತ್ತಿದ್ದ ವೇಳೆ ಆಕೆಯ ದೊಡ್ಡಪ್ಪನ ಪರಿಚಯದ ಪ್ರಾಣೇಶ್ ಎಂಬಾತ ಅದೇ ಮಾರ್ಗದಲ್ಲಿ ಕಾರಿನಲ್ಲಿ ಬಂದು ಡ್ರಾಪ್ ಕೊಡುವುದಾಗಿ ನಂಬಿಸಿ ಕರೆದುಕೊಂಡು ಹೋಗಿದ್ದಾನೆ. ಆಕೆ ಇಳಿಯಬೇಕಾಗಿದ್ದ ಸ್ಥಳ ತಲುಪಿದರೂ ಕಾರನ್ನು ನಿಲ್ಲಿಸದೆ ಉಪ್ಪಿನಂಗಡಿ ಕಡೆಗೆ ಕಾರನ್ನು

ಜ್ಯೂಸ್ ನಲ್ಲಿ ಅಮಲು ಪದಾರ್ಥ ಸೇರಿಸಿ ಯುವತಿಯ ಅತ್ಯಾಚಾರ ➤ ಉಪ್ಪಿನಂಗಡಿಯ ಯುವಕನ ವಿರುದ್ದ ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಬಿ-ಫಾರ್ಮಾ ವಿದ್ಯಾರ್ಥಿಗೆ ರಾಗಿಂಗ್ ➤ ಒಂಭತ್ತು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.22. ಕೇರಳ ಮೂಲದ ವಿದ್ಯಾರ್ಥಿಗೆ ರ್ಯಾಗಿಂಗ್ ಮಾಡಿದ ಆರೋಪದಲ್ಲಿ ನಗರದ ಖಾಸಗಿ ಕಾಲೇಜಿನ ಒಂಭತ್ತು ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ಪೊಲೀಸರು ಶುಕ್ರವಾರದಂದು ಬಂಧಿಸಿದ್ದಾರೆ. ಮೊದಲ ವರ್ಷದ ಬಿ-ಫಾರ್ಮಾ ವಿದ್ಯಾರ್ಥಿಗೆ ತಲೆಕೂದಲು ಮತ್ತು ಮೀಸೆ ತೆಗೆದು ಬರುವಂತೆ ಹಿರಿಯ ವಿದ್ಯಾರ್ಥಿಗಳು ಒತ್ತಡ ಹೇರಿದ್ದಲ್ಲದೆ, ಹಿರಿಯ ವಿದ್ಯಾರ್ಥಿಗಳ ಮಾತು ಕೇಳದ ಪ್ರಥಮ ವರ್ಷದ ವಿದ್ಯಾರ್ಥಿಗೆ ಹಲ್ಲೆ ನಡೆಸಲಾಗಿತ್ತು. ಈ ಬಗ್ಗೆ ವಿದ್ಯಾರ್ಥಿ ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿ ಕರ್ನಾಟಕ

ಮಂಗಳೂರು: ಬಿ-ಫಾರ್ಮಾ ವಿದ್ಯಾರ್ಥಿಗೆ ರಾಗಿಂಗ್ ➤ ಒಂಭತ್ತು ಮಂದಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಜ. 24 ರಂದು ಮೆರವಣಿಗೆ ಮೂಲಕ ಸಚಿವ ಎಸ್.ಅಂಗಾರರಿಗೆ ಅಭಿನಂದನೆ

(ನ್ಯೂಸ್ ಕಡಬ) newskadaba.com ಕಡಬ, ಜ. 22. ನೂತನ ಸಚಿವರಾಗಿ ನರೆಮಕಗೊಂಡ ಎಸ್.ಅಂಗಾರ ಅವರಿಗೆ ಅಭಿನಂದನಾ ಸಭೆಯು ಬೆಳಂದೂರು, ನೆಲ್ಯಾಡಿ ಹಾಗೂ ಕಡಬ ಬಿಜೆಪಿ ಶಕ್ತಿಕೇಂದ್ರಗಳ ವತಿಯಿಂದ ಜ.24ರಂದು ಸಾಯಂಕಾಲ 3.00 ಗಂಟೆಗೆ ಕಡಬ ಶ್ರೀ ದುರ್ಗಾಂಬಿಕಾ ಸಭಾ ಭವನದಲ್ಲಿ ನಡೆಯಲಿದೆ. ಈ ಕುರಿತು ದ.ಕ ಜಿಲ್ಲಾ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕ ಕೃಷ್ಣ ಶೆಟ್ಟಿ ಕಡಬ ಪತ್ರೀಕಾಗೋಷ್ಟಿಯಲ್ಲಿ ಮಾತನಾಡಿ, ಮೊದಲು ಕಡಬ ಎಪಿಎಂಸಿ ಪ್ರಾಂಗಣ ಬಳಿಯಿಂದ ಸಚಿವರನ್ನು ಮೆರವಣಿಗೆ ಮೂಲಕ ಶ್ರೀ ದುರ್ಗಾಂಬಿಕಾ ಸಭಾ ಭವನಕ್ಕೆ

ಕಡಬ: ಜ. 24 ರಂದು ಮೆರವಣಿಗೆ ಮೂಲಕ ಸಚಿವ ಎಸ್.ಅಂಗಾರರಿಗೆ ಅಭಿನಂದನೆ Read More »

ಕರಾವಳಿ, ಕರ್ನಾಟಕ

ಕಡಬ: ಬೆಳಗಿನ ಜಾವ ವಿದ್ಯಾರ್ಥಿಗಳ ಮನೆ-ಮನೆ ಭೇಟಿ ಮಾಡಿದ ಶಿಕ್ಷಣಾಧಿಕಾರಿ

(ನ್ಯೂಸ್ ಕಡಬ) newskadaba.com ಕಡಬ, ಜ. 22. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಉತ್ತಮ ಪಡಿಸುವ ಉದ್ದೇಶದಿಂದ ಶಿಕ್ಷಣಾಧಿಕಾರಿ ಲೋಕೇಶ್ ಅವರು ಹಮ್ಮಿಕೊಂಡ ವಿದ್ಯಾರ್ಥಿಗಳ ಮನೆ ಮನೆ ಭೇಟಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಾಲೂಕಿನ ಬಿಳಿನೆಲೆ, ಪದವು ಹಾಗೂ ಕಡಬ ಸೇರಿದಂತೆ ವಿವಿಧ ಭಾಗದ ವಿದ್ಯಾರ್ಥಿಗಳ ಮನೆಗೆ ಸ್ಥಳೀಯ ಶಿಕ್ಷಕರ ಜೊತೆ ನಸುಕಿನ ವೇಳೆಯೇ ಮನೆ ಮನೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಯನ್ನು ಗಮನಿಸಿ, ಮುಂಜಾನೆ ಐದು ಗಂಟೆಗೆ ಎಬ್ಬಿಸಿ ಓದುವುದರಲ್ಲಿ ಮಗ್ನರಾಗುವಂತೆ ಮಾಡುವ ಕಾರ್ಯದ ಸಮರ್ಪಕ

ಕಡಬ: ಬೆಳಗಿನ ಜಾವ ವಿದ್ಯಾರ್ಥಿಗಳ ಮನೆ-ಮನೆ ಭೇಟಿ ಮಾಡಿದ ಶಿಕ್ಷಣಾಧಿಕಾರಿ Read More »

ಕರಾವಳಿ, ಕರ್ನಾಟಕ

ಧಾರ್ಮಿಕ ಕ್ಷೇತ್ರ ಕಲ್ಲುಗುಂಡಿ ಚರ್ಚ್ ಗೆ ಟಿ.ಎಂ.ಶಹೀದ್ ಭೇಟಿ

(ನ್ಯೂಸ್ ಕಡಬ) newskadaba.com ಅರಂತೋಡು, ಜ. 22. ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸುಮಾರು 3 ದಶಕಗಳಿಂದ ಕ್ರಿಯಾಶೀಲರಾಗಿದ್ದ ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಮ್.ಶಹೀದ್ ರವರ 50 ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಸುವರ್ಣ ಸಂಭ್ರಮದ ಅಂಗವಾಗಿ ಧಾರ್ಮಿಕ ಕ್ಷೇತ್ರವಾದ ಕಲ್ಲುಗುಂಡಿ ಸಂತ ಪ್ರಾನ್ಸಿಸ್ ಕ್ಲೇವಿಯರ್ ಚರ್ಚ್ ಗೆ ಭೇಟಿ ನೀಡಿದರು. ಚರ್ಚ್ ಧರ್ಮಗುರು ಫಾದರ್ ಪಾವ್ಲ್ ಕ್ರಾಸ್ತಾ ಟಿ.ಎಮ್.ಶಹೀದ್ ರವರಿಗೆ ಶುಭಾಶಯ ಸಲ್ಲಿಸಿ ಮಾತನಾಡಿ, ಜೀವನದಲ್ಲಿ ಉದ್ದೇಶ ಇಲ್ಲದೇ ಬದುಕುವರನ್ನು ಒಟ್ಟಿನಲ್ಲಿ ಏತಕ್ಕಾಗಿ

ಧಾರ್ಮಿಕ ಕ್ಷೇತ್ರ ಕಲ್ಲುಗುಂಡಿ ಚರ್ಚ್ ಗೆ ಟಿ.ಎಂ.ಶಹೀದ್ ಭೇಟಿ Read More »

ಕರಾವಳಿ, ಕರ್ನಾಟಕ

ಸುಳ್ಯ: ಸಾಮಾಜಿಕ ಧುರೀಣ ಟಿ.ಎಮ್.ಶಹೀದ್ ರವರ 50 ನೇ ಸುವರ್ಣ ಸಂಭ್ರಮ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಅರಂತೋಡು, ಜ. 22. ರಾಜಕೀಯ, ಧಾರ್ಮಿಕ , ಸಾಮಾಜಿಕ, ಶೈಕ್ಷಣಿಕ, ಸಹಕಾರಿ, ಕ್ರೀಡಾ ಹಾಗೂ ಕೃಷಿ ಕ್ಷೇತ್ರದಲ್ಲಿ 3 ದಶಕದಿಂದ ಕ್ರಿಯಾಶೀಲರಾಗಿದ್ದ ಅರಂತೋಡು ಟಿ.ಎಮ್.ಶಹೀದ್ ರವರ 50ನೇ ಸುವರ್ಣ ಸಂಭ್ರಮ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ( ಮೌಲೀದ್ ಪಾರಾಯಣ) ಜ.21 ರಂದು ತೆಕ್ಕಿಲ್ ಟಿ.ಎಮ್.ಶಹೀದ್ ನಿವಾಸದಲ್ಲಿ ನಡೆಯಿತು. ಧಾರ್ಮಿಕ ಕಾರ್ಯಕ್ರಮವನ್ನು ಸ್ಥಳೀಯ ಮಸೀದಿ ಖತೀಬರಾದ ಬಹು ಅಲ್ಹಾಜ್ ಇಸ್ಹಾಖ್ ಬಾಖವಿನೇರವೆರಿಸಿದರು. ಪೇರಡ್ಕ ಮಸೀದಿ ಖತೀಬರಾದ ಸುಹೇಲ್ ದಾರಿಮಿ, ನವಾಝ್ ದಾರಿಮಿ, ಝಕರಿಯಾ ದಾರಿಮಿ ಆರ್ಕಾನ,

ಸುಳ್ಯ: ಸಾಮಾಜಿಕ ಧುರೀಣ ಟಿ.ಎಮ್.ಶಹೀದ್ ರವರ 50 ನೇ ಸುವರ್ಣ ಸಂಭ್ರಮ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ
Scroll to Top