ಸುಬ್ರಹ್ಮಣ್ಯ ಉಪವಲಯಾಧಿಕಾರಿಯಾಗಿ ರವಿಚಂದ್ರ ಪಡುಬೆಟ್ಟು ಭಡ್ತಿ



(ನ್ಯೂಸ್ ಕಡಬ) newskadaba.com ಕಡಬ, ಜ. 24. ಅರಣ್ಯ ರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿಚಂದ್ರ ಪಡುಬೆಟ್ಟು ಎಂಬವರು ಸುಬ್ರಹ್ಮಣ್ಯ ಉಪವಲಯ ಅರಣ್ಯಾಧಿಕಾರಿಯಾಗಿ ಮುಂಭಡ್ತಿ ಹೊಂದಿದ್ದಾರೆ.  2005ರಲ್ಲಿ ಅರಣ್ಯ ವೀಕ್ಷಕರಾಗಿ ಕರ್ತವ್ಯಕ್ಕೆ ಸೇರಿಕೊಂಡ ಬಳಿಕ 2010ರಲ್ಲಿ ಅರಣ್ಯ ರಕ್ಷಕರಾಗಿ ಭಡ್ತಿ ಹೊಂದಿದ್ದರು. ಇದೀಗ 2021ರಲ್ಲಿ ಸುಬ್ರಹ್ಮಣ್ಯ ಉಪವಲಯ ಅರಣ್ಯಾಧಿಕಾರಿಯಾಗಿ ಭಡ್ತಿ ಹೊಂದಿದ್ದಾರೆ. ಕರ್ನಾಟಕ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ ಮಂಗಳೂರು ವಿಭಾಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ನೆಲ್ಯಾಡಿ‌ ಗ್ರಾಮದ ಪಡುಬೆಟ್ಟುವಿನ ಮಾಲೆವು ಮುಗೇರ ಮತ್ತು ಮುದರು ದಂಪತಿಗಳ ಪುತ್ರ.







error: Content is protected !!
Scroll to Top