ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು ‘ಕನಿ ಮರನಂಡು’ ಏಡಿ ಪ್ರಭೇದ – News Kadaba

ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು ‘ಕನಿ ಮರನಂಡು’ ಏಡಿ ಪ್ರಭೇದ

(ನ್ಯೂಸ್‌ ಕಡಬ) newskadaba.com,  ಜು.08 ವಿಟ್ಲ: ಕರ್ನಾಟಕದ ಪಶ್ಚಿಮ ಘಟ್ಟಗಳ ಜೀವವೈವಿಧ್ಯಕ್ಕೆ ಮತ್ತೊಂದು ಅಪರೂಪದ ಸೇರ್ಪಡೆಯಾಗಿದೆ. ಭಾರತದ ಏಕೈಕ ನೈಜ ಮರವಾಸಿ ಸಿಹಿನೀರಿನ ಏಡಿ ಪ್ರಭೇದವಾದ ‘ಕನಿ ಮರನಂಡು’ ಮೊದಲ ಬಾರಿಗೆ ಆಗುಂಬೆಯಲ್ಲಿ ಪತ್ತೆಯಾಗಿದೆ. ಇದುವರೆಗೆ ಕೇರಳದ ಆಗಸ್ತ್ಯಮಲೆ ಜೈವಿಕ ವಲಯಕ್ಕೆ ಮಾತ್ರ ಸೀಮಿತವಾಗಿದ್ದ ಈ ಪ್ರಭೇದ, ಇದೀಗ ಕರ್ನಾಟಕದಲ್ಲೂ ಇರುವುದು ಸಂಶೋಧಕರಾದ ಜೋಯೆಲ್ ಕೊರೆಯ, ಪವನ್ ಚಿಕ್ಕನಾರಾಯಣಸ್ವಾಮಿ ಹಾಗೂ ವಿಜಯ್ ಕುಮಾರ್ ಅವರ ಅಧ್ಯಯನದಿಂದ ದೃಢಪಟ್ಟಿದೆ.

‘ಗೆಕಾರ್ಸಿನುಸಿಡೆ’ ಕುಟುಂಬಕ್ಕೆ ಸೇರಿದ ಈ ಏಡಿ, ಸಂಪೂರ್ಣವಾಗಿ ಮರಗಳಲ್ಲೇ ವಾಸಿಸುವ ಭಾರತದ ಏಕೈಕ ಪ್ರಭೇದವಾಗಿದೆ.ಉದ್ದವಾದ ಕಾಲುಗಳು, ಅಂಡಾಕಾರದ ಕವಚ, ಹಳದಿ-ಕಿತ್ತಳೆ ಬಣ್ಣದ ಕೊಕ್ಕು ಹಾಗೂ ನೀಲಿ-ಕಪ್ಪು ಬಣ್ಣದ ದೇಹವನ್ನು ಹೊಂದಿದೆ.ನಿತ್ಯಹರಿದ್ವರ್ಣ ಕಾಡುಗಳ ಮರಗಳ ಕಾಂಡದಲ್ಲಿರುವ ನೀರು ತುಂಬಿದ ಕುಳಿಗಳಲ್ಲಿ ಇವು ಜೀವಿಸುತ್ತವೆ. ಎಲೆಗಳು, ಬೀಜಗಳು ಹಾಗೂ ಸಣ್ಣ ಕೀಟಗಳು ಇವುಗಳ ಮುಖ್ಯ ಆಹಾರ.

ಇದುವರೆಗೆ ಸಂಪೂರ್ಣ ಮರವಾಸಿ ಎಂದುಕೊಳ್ಳಲಾಗಿದ್ದ ಈ ಏಡಿಗಳು, ಆಗುಂಬೆಯ ಮೈರಿಸ್ಟಿಕಾ ಜೌಗು ಪ್ರದೇಶದ ಬಳಿ ನೆಲದ ಮೇಲೂ ಸಂಚರಿಸುತ್ತಿರುವುದು ಕಂಡುಬಂದಿದೆ. ಮಳೆಗಾಲದಲ್ಲಿ ಸಂಗಾತಿಯ ಹುಡುಕಾಟ ಅಥವಾ ಹೊಸ ವಾಸಸ್ಥಳದ ಅನ್ವೇಷಣೆಗಾಗಿ ಇವು ನೆಲಕ್ಕಿಳಿಯುತ್ತವೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.

ಪಶ್ಚಿಮ ಘಟ್ಟಗಳ ಜೀವವೈವಿಧ್ಯ ಅಧ್ಯಯನಕ್ಕೆ ಈ ಶೋಧನೆ ಮಹತ್ವದ ಕೊಡುಗೆಯಾಗಿದ್ದು, ಈ ಪ್ರಭೇದದ ಸಂರಕ್ಷಣೆ ಮತ್ತು ನಡವಳಿಕೆಯ ಕುರಿತು ಹೆಚ್ಚಿನ ವೈಜ್ಞಾನಿಕ ಸಮೀಕ್ಷೆಯ ಅಗತ್ಯವಿದೆ ಎಂದು ಸಂಶೋಧಕರು ಶಿಫಾರಸು ಮಾಡಿದ್ದಾರೆ.

Scroll to Top