ಅಧಿಕಾರಿಗಳ ಬೇಜವಾಬ್ದಾರಿಗೆ ಮೂಕಜೀವಿಗಳು ಬಲಿ- ಫಲ್ಗುಣಿ ನದಿಯಲ್ಲಿ ನೂರಾರು ಸತ್ತ ಮೀನುಗಳು ಪತ್ತೆ..!

(ನ್ಯೂಸ್ ಕಡಬ) newskadaba.com ಜೂ. 08. ಮಂಗಳೂರಿನ ಬೆಂಗ್ರೆ, ಸುಲ್ತಾನ್ ಬತ್ತೇರಿ ಹಾಗೂ ಬೊಕ್ಕಪಟ್ಣ ಭಾಗದ ಫಲ್ಗುಣಿ ನದಿಯಲ್ಲಿ ಶನಿವಾರದಂದು ನೂರಾರು ಮೀನುಗಳು ಸತ್ತುಬಿದ್ದಿದ್ದು, ರಾಸಾಯನಿಕ ಮಾಲಿನ್ಯದಿಂದಾಗಿ ಉಸಿರಾಡಲು ಸಾಧ್ಯವಾಗದೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಸೇತುವೆ ಕಾಮಗಾರಿಗೆ ಹಾಕಲಾಗಿದ್ದ ತಡೆಗೋಡೆಯಿಂದಾಗಿ ಕಳೆದ 5 ತಿಂಗಳುಗಳಿಂದ ನದಿಯಲ್ಲಿ ಕೈಗಾರಿಕಾ ರಾಸಾಯನಿಕ ತ್ಯಾಜ್ಯ ಹಾಗೂ ಒಳಚರಂಡಿ ನೀರು ಒಂದೇ ಕಡೆ ಸಂಗ್ರಹವಾಗಿತ್ತು. ಅಲ್ಲದೇ ಇದೀಗ ಮಳೆಯಿಂದಾಗಿ ನದಿಯಲ್ಲಿ ಹೊಸ ನೀರು ಬಂದಾಗ ಮೇಲ್ಮುಖವಾಗಿ ಈಜಿದ ಮೀನುಗಳು, ನೀರಿನಲ್ಲಿದ್ದ ತೀವ್ರ ರಾಸಾಯನಿಕ ಮಾಲಿನ್ಯದಿಂದಾಗಿ […]

ಅಧಿಕಾರಿಗಳ ಬೇಜವಾಬ್ದಾರಿಗೆ ಮೂಕಜೀವಿಗಳು ಬಲಿ- ಫಲ್ಗುಣಿ ನದಿಯಲ್ಲಿ ನೂರಾರು ಸತ್ತ ಮೀನುಗಳು ಪತ್ತೆ..! Read More »

ಕರಾವಳಿ

ಕಾಂಗ್ರೆಸ್ ಮುಖಂಡ, ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ ನಿಧನ

(ನ್ಯೂಸ್ ಕಡಬ) newskadaba.com,  ಜೂ.08  ಬೆಂಗಳೂರು: ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಸೂರಜ್ ಹೆಗ್ಡೆ (55) ಅವರು ಭಾನುವಾರ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಮೊಮ್ಮಗರಾದ ಇವರು, ರಾಷ್ಟ್ರೀಯ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ರಾಜಕೀಯ ಪ್ರವೇಶಿಸಿದ್ದರು. ತಮಿಳುನಾಡು ಮತ್ತು ಪುದುಚೇರಿ ಕಾಂಗ್ರೆಸ್ ಉಸ್ತುವಾರಿಯಾಗಿಯೂ ಸೇವೆ ಸಲ್ಲಿಸಿದ್ದ ಇವರು ಪಕ್ಷದ ನಿಷ್ಠಾವಂತ ಹಾಗೂ ಪ್ರಬಲ ನಾಯಕರಾಗಿದ್ದರು. ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಅವರನ್ನು

ಕಾಂಗ್ರೆಸ್ ಮುಖಂಡ, ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ ನಿಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಮೆರಿಕದಲ್ಲಿ ಪಿಜ್ಜಾ ಡೆಲಿವರಿ ಮಾಡಲು ಹೋದ ಭಾರತೀಯ ಯುವಕನ ಮೇಲೆ ಶೂಟೌಟ್; ಚಿಕಿತ್ಸೆ ಫಲಿಸದೆ ಮೃತ್ಯು!

(ನ್ಯೂಸ್ ಕಡಬ) newskadaba.com,  ಜೂ.08  ವಾಷಿಂಗ್ಟನ್: ಅಮೆರಿಕದ ಫಿಲಡೆಲ್ಫಿಯಾದಲ್ಲಿ ತೆಲಂಗಾಣ ಮೂಲದ 28 ವರ್ಷದ ಅನ್ಶುಲ್ ಕುಂಚ ಎಂಬ ಭಾರತೀಯ ಯುವಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರ ತಂತ್ರದ ಮೂಲಕ ಹತ್ಯೆ ಮಾಡಿದ್ದಾರೆ.ಮಲ್ಟಿನ್ಯಾಷನಲ್ ಕಂಪನಿಯ ಉದ್ಯೋಗಿಯಾಗಿದ್ದ ಅನ್ಶುಲ್, ಪಾರ್ಟ್-ಟೈಮ್ ಆಗಿ ಪಿಜ್ಜಾ ಡೆಲಿವರಿ ಕೆಲಸ ಮಾಡುತ್ತಿದ್ದರು. ಶನಿವಾರ ತಡರಾತ್ರಿ ನಿರ್ಜನ ಪ್ರದೇಶವೊಂದಕ್ಕೆ ಬಂದ ನಕಲಿ ಆರ್ಡರ್ ನಂಬಿ ಡೆಲಿವರಿ ನೀಡಲು ಹೋದಾಗ, ಹೊಂಚು ಹಾಕಿ ಕುಳಿತಿದ್ದ ಅಪರಿಚಿತರು ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ

ಅಮೆರಿಕದಲ್ಲಿ ಪಿಜ್ಜಾ ಡೆಲಿವರಿ ಮಾಡಲು ಹೋದ ಭಾರತೀಯ ಯುವಕನ ಮೇಲೆ ಶೂಟೌಟ್; ಚಿಕಿತ್ಸೆ ಫಲಿಸದೆ ಮೃತ್ಯು! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರಾವಳಿಯಲ್ಲಿ ರೆಡ್ ಅಲರ್ಟ್: ಜೂನ್ 8-10 ಭಾರಿ ಮಳೆ ಮುನ್ಸೂಚನೆ

(ನ್ಯೂಸ್ ಕಡಬ) newskadaba.com ಜೂ. 08. ಕರಾವಳಿಯಲ್ಲಿ ಮುಂಗಾರು ತೀವ್ರಗೊಂಡ ಹಿನ್ನೆಲೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಜೂನ್ 8 ರಿಂದ 10 ರವರೆಗೆ ರೆಡ್ ಅಲರ್ಟ್ ಘೋಷಿಸಿದೆ. ಮುಂದಿನ 3 ದಿನಗಳ ಕಾಲ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಅರಬ್ಬಿ ಸಮುದ್ರದಲ್ಲಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಜೂನ್ 10 ರವರೆಗೆ ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಳೆದ 24

ಕರಾವಳಿಯಲ್ಲಿ ರೆಡ್ ಅಲರ್ಟ್: ಜೂನ್ 8-10 ಭಾರಿ ಮಳೆ ಮುನ್ಸೂಚನೆ Read More »

ಕರಾವಳಿ, ಕರ್ನಾಟಕ

ಕೊಟ್ಟಿಯೂರು ದೇವಸ್ಥಾನದಲ್ಲಿ ಕರ್ನಾಟಕ ಭಕ್ತರ ಮೇಲೆ ದುರ್ವರ್ತನೆ – ನೂಕುನುಗ್ಗಲು, ಭಾರೀ ಅವ್ಯವಸ್ಥೆ

(ನ್ಯೂಸ್ ಕಡಬ) newskadaba.com ಜೂ. 08. ಕೇರಳದ ಕಣ್ಣೂರು ಜಿಲ್ಲೆಯ ಕೊಟ್ಟಿಯೂರು ದೇವಸ್ಥಾನದ ‘ವೈಶಾಖ ಮಹೋತ್ಸವ‘ದಲ್ಲಿ ಭಕ್ತರ ನಿಯಂತ್ರಣ ತಪ್ಪಿ ನೂಕುನುಗ್ಗಲು ಉಂಟಾಗಿದ್ದು, ಕರ್ನಾಟಕದ ಭಕ್ತರನ್ನು ತಳ್ಳುವುದು ಹಾಗೂ ಭದ್ರತಾ ಸಿಬ್ಬಂದಿ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿವೆ. 1,000 ರೂ. ವಿಶೇಷ ಟಿಕೆಟ್ ಪಡೆದರೂ ಸೂಕ್ತ ದರ್ಶನ ನೀಡುತ್ತಿಲ್ಲ ಮತ್ತು ಕನ್ನಡಿಗರಿಗೆ ಗೌರವ ಸಿಗುತ್ತಿಲ್ಲ ಎಂದು ಭಕ್ತರು ಕಿಡಿಕಾರಿದ್ದಾರೆ ಎನ್ನಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ಈ ಧೋರಣೆಯಿಂದ ಬೇಸತ್ತಿರುವ ಕನ್ನಡಿಗರು, “ಕರ್ನಾಟಕದ

ಕೊಟ್ಟಿಯೂರು ದೇವಸ್ಥಾನದಲ್ಲಿ ಕರ್ನಾಟಕ ಭಕ್ತರ ಮೇಲೆ ದುರ್ವರ್ತನೆ – ನೂಕುನುಗ್ಗಲು, ಭಾರೀ ಅವ್ಯವಸ್ಥೆ Read More »

ರಾಷ್ಟ್ರೀಯ ನ್ಯೂಸ್

ಬುರ್ಖಾ ಧರಿಸಿ ಗೆಳೆಯನನ್ನೇ ಕೊಂದ ಪಾಪಿ: ಚಿನ್ನದ ಸರಕ್ಕಾಗಿ 18 ವರ್ಷದ ಸ್ನೇಹ ಕೊಲೆಯಲ್ಲಿ ಅಂತ್ಯ

(ನ್ಯೂಸ್‌ ಕಡಬ) newskadaba.com,  ಜೂ.06 ದೆಹಲಿ: ₹5 ಲಕ್ಷದ ಚಿನ್ನದ ಸರಕ್ಕಾಗಿ 18 ವರ್ಷದ ಸ್ನೇಹಿತನ ಕೊಲೆ! ಉತ್ತರ ಪ್ರದೇಶದಲ್ಲಿ ಕೇವಲ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರಕ್ಕಾಗಿ ಮೋಹಿತ್ ದ್ವಿವೇದಿ ಎಂಬಾತ ತನ್ನ 18 ವರ್ಷದ ಹಳೆಯ ಸ್ನೇಹಿತ, ಕೋಚಿಂಗ್ ಸಂಸ್ಥೆ ಮಾಲೀಕ ಪ್ರಕಾಶ್ ಚಂದ್ರ ಗುಪ್ತ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಮೇ 31ರ ಐಪಿಎಲ್ ಫೈನಲ್ ರಾತ್ರಿ, ಯುಟ್ಯೂಬ್ ನೋಡಿ ಸ್ಕೆಚ್ ಹಾಕಿದ್ದ ಆರೋಪಿ ಬುರ್ಖಾ ಧರಿಸಿ ಬಂದು ಈ ಕೃತ್ಯ

ಬುರ್ಖಾ ಧರಿಸಿ ಗೆಳೆಯನನ್ನೇ ಕೊಂದ ಪಾಪಿ: ಚಿನ್ನದ ಸರಕ್ಕಾಗಿ 18 ವರ್ಷದ ಸ್ನೇಹ ಕೊಲೆಯಲ್ಲಿ ಅಂತ್ಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದೆಹಲಿಯ ಜಂತರ್‌ ಮಂತರ್‌ನಲ್ಲಿ ʻಕಾಕ್ರೋಚ್‌ʼ ಜನತಾ ಪಾರ್ಟಿಯ ಪ್ರತಿಭಟನೆ ಕಿಚ್ಚು

(ನ್ಯೂಸ್‌ ಕಡಬ) newskadaba.com,  ಜೂ.06 ದೆಹಲಿ: ನೀಟ್ ಪರೀಕ್ಷೆ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ ವತಿಯಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಆರಂಭವಾಗಿದೆ. ಅಮೆರಿಕದ ಬೋಸ್ಟನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಹಾಗೂ ಪಕ್ಷದ ಮುಖ್ಯಸ್ಥ ಅಭಿಜಿತ್ ದೀಪ್ಕೆ ಅವರು ಪ್ರತಿಭಟನೆಯ ಮುಂದಾಳತ್ವ ವಹಿಸಲು ದೆಹಲಿಗೆ ಆಗಮಿಸಿದ್ದಾರೆ.ಪ್ರಸಿದ್ಧ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಚಳವಳಿಗೆ ಮತ್ತಷ್ಟು ತೀವ್ರತೆ

ದೆಹಲಿಯ ಜಂತರ್‌ ಮಂತರ್‌ನಲ್ಲಿ ʻಕಾಕ್ರೋಚ್‌ʼ ಜನತಾ ಪಾರ್ಟಿಯ ಪ್ರತಿಭಟನೆ ಕಿಚ್ಚು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು : ಕೇರಳದ ಲಾಟರಿ ಖರೀದಿಸಿದ ವ್ಯಕ್ತಿಗೆ ವಂಚನೆ – ಪ್ರಕರಣ ದಾಖಲು

(ನ್ಯೂಸ್‌ ಕಡಬ) newskadaba.com,  ಜೂ.06 ಮಂಗಳೂರು: ಫೇಸ್‌ಬುಕ್‌ನಲ್ಲಿ ಬಂದ ಕೇರಳ ಲಾಟರಿಯ ನಕಲಿ ಜಾಹೀರಾತು ನಂಬಿ ಸುರತ್ಕಲ್ ನಿವಾಸಿಯೊಬ್ಬರು ₹1.85 ಲಕ್ಷ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇ 29ರಂದು ಫೇಸ್‌ಬುಕ್‌ನಲ್ಲಿ ₹50 ರ ಲಾಟರಿ ಜಾಹೀರಾತು ನೋಡಿ ಸಂತ್ರಸ್ತರು ₹100 ಪಾವತಿಸಿ ಆನ್‌ಲೈನ್‌ನಲ್ಲಿ 2 ಟಿಕೆಟ್ ಖರೀದಿಸಿದ್ದರು. ಅಂದೇ ಸಂಜೆ ಕರೆ ಮಾಡಿದ ಅಪರಿಚಿತರು, “ನಿಮಗೆ ₹12 ಲಕ್ಷ ಬಹುಮಾನ ಬಂದಿದೆ” ಎಂದು ನಂಬಿಸಿದ್ದರು. ಬಳಿಕ ಬಹುಮಾನದ ಹಣ

ಮಂಗಳೂರು : ಕೇರಳದ ಲಾಟರಿ ಖರೀದಿಸಿದ ವ್ಯಕ್ತಿಗೆ ವಂಚನೆ – ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಂಗ್ರೆಸ್‌ಗೆ ರಾಮಲಿಂಗಾರೆಡ್ಡಿ ಶಾಕ್: ಹೈಕಮಾಂಡ್‌ನ ‘ಡಬಲ್ ಆಫರ್’ ತಿರಸ್ಕರಿಸಿದ ಹಿರಿಯ ನಾಯಕ!

(ನ್ಯೂಸ್‌ ಕಡಬ) newskadaba.com,  ಜೂ.06 : ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ನಡೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರೆಡ್ಡಿ ಅವರನ್ನು ಭೇಟಿ ಮಾಡಿ, ಸಹಕಾರ ಮತ್ತು ಮುಜರಾಯಿ ಎರಡೂ ಪ್ರಮುಖ ಖಾತೆಗಳನ್ನು ಒಟ್ಟಿಗೆ ವಹಿಸಿಕೊಳ್ಳುವ ಆಫರ್ ನೀಡಿದ್ದಾರೆ.ಸ್ವಾಭಿಮಾನ ಹಾಗೂ ತಮ್ಮ ರಾಜಕೀಯ ನಿಲುವುಗಳಿಗೆ ಬದ್ಧರಾಗಿರುವ ರಾಮಲಿಂಗಾರೆಡ್ಡಿ, ಹೈಕಮಾಂಡ್‌ನ ಈ ರಾಜಿ ಸೂತ್ರವನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಕಾಂಗ್ರೆಸ್‌ಗೆ ರಾಮಲಿಂಗಾರೆಡ್ಡಿ ಶಾಕ್: ಹೈಕಮಾಂಡ್‌ನ ‘ಡಬಲ್ ಆಫರ್’ ತಿರಸ್ಕರಿಸಿದ ಹಿರಿಯ ನಾಯಕ! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹಿರಿಯ ಪತ್ರಕರ್ತ ಜನಾರ್ದನ ಮರವಂತೆ ಇನ್ನಿಲ್ಲ

(ನ್ಯೂಸ್‌ ಕಡಬ) newskadaba.com,  ಜೂ.06 ಕುಂದಾಪುರ: ರಾಷ್ಟ್ರೀಯ ಮಟ್ಟದ ಪಂಚಾಯತ್ ರಾಜ್ ತಜ್ಞ, ಹಿರಿಯ ಪತ್ರಕರ್ತ ಹಾಗೂ ನಿವೃತ್ತ ಪ್ರಾಂಶುಪಾಲರಾದ ಜನಾರ್ದನ ಮರವಂತೆ (88) ಅವರು ಶನಿವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇಂಗ್ಲೀಷ್ ಉಪನ್ಯಾಸಕರಾಗಿದ್ದ ಅವರು, ‘ಪ್ರಜಾವಾಣಿ’ ಹಾಗೂ ‘ಉದಯವಾಣಿ’ ಪತ್ರಿಕೆಗಳ ವರದಿಗಾರರಾಗಿ, ಬೈಂದೂರು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಮತ್ತು ಮರವಂತೆ ಗ್ರಾ.ಪಂ. ಅಧ್ಯಕ್ಷರಾಗಿ ರಾಷ್ಟ್ರ ಮಟ್ಟದ ಮನ್ನಣೆ ತಂದುಕೊಟ್ಟಿದ್ದರು. ಜೂನ್ 7ರ ಭಾನುವಾರ ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮರವಂತೆಯ ‘ಸಾಧನಾ

ಹಿರಿಯ ಪತ್ರಕರ್ತ ಜನಾರ್ದನ ಮರವಂತೆ ಇನ್ನಿಲ್ಲ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top