ಕರ್ನಾಟಕ

ಅನ್ನಭಾಗ್ಯ: 5 ಕೆಜಿ ಅಕ್ಕಿ ಬದಲು ಇಂದಿರಾ ಕಿಟ್ ವಿತರಣೆ

(ನ್ಯೂಸ್‌ ಕಡಬ) newskadaba.com,  ಅ.10 ಬೆಂಗಳೂರು: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಒಟ್ಟು 10 ಕೆಜಿ ಅಕ್ಕಿ ನೀಡುತ್ತಿದ್ದು, ಇನ್ನುಮುಂದೆ ಹೆಚ್ಚುವರಿಯಾಗಿ ನೀಡುತ್ತಿರುವ ಐದು ಕೆಜಿ ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ವಿತರಣೆ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು, ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಾಟ, ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ […]

ಅನ್ನಭಾಗ್ಯ: 5 ಕೆಜಿ ಅಕ್ಕಿ ಬದಲು ಇಂದಿರಾ ಕಿಟ್ ವಿತರಣೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಿಮೆಂಟ್ ಲಾರಿ, ಬಸ್ ನಡುವೆ ಭೀಕರ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು

(ನ್ಯೂಸ್‌ ಕಡಬ) newskadaba.com,  ಅ.10 ಮೈಸೂರು: ಸಿಮೆಂಟ್ ಲಾರಿ, ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಕೊಡಗು ಹೆದ್ದಾರಿಯಲ್ಲಿ ನಡೆದಿದೆ.ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬನ್ನಿಕುಪ್ಪೆ ಸಮೀಪ ಈ ಅಪಘಾತ ಸಂಭವಿಸಿದೆ. ಅಪಘಾತದ ಭೀಕರತೆಗೆ ಬಸ್ ಚಾಲಕ ಹಾಗೂ ಕ್ಲೀನರ್ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೈಸೂರಿನಿಂದ ಕೇರಳ ಕಡೆಗೆ ತೆರಳುತ್ತಿದ್ದ ಲಾರಿಗೆ, ಕೇರಳದಿಂದ ಮೈಸೂರಿನ ಕಡೆ ಬರುತ್ತಿದ್ದ ಬಸ್ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು,

ಸಿಮೆಂಟ್ ಲಾರಿ, ಬಸ್ ನಡುವೆ ಭೀಕರ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಣಂಬೂರಿನಲ್ಲಿ ವ್ಯಕ್ತಿಯೊಬ್ಬರು ಮೀನು ಹಿಡಿಯಲು ಹೋಗಿ ನೀರು ಪಾಲು

(ನ್ಯೂಸ್‌ ಕಡಬ) newskadaba.com,  ಅ.09 ಮಂಗಳೂರು: ತೋಟ ಬೆಂಗ್ರೆ ಅಳಿವೆ ಬಾಗಿಲು ಬಳಿ ನದಿಯಲ್ಲಿ ಬಲೆ ಹಾಕಿ ಮೀನು ಹಿಡಿಯಲು, ಮೀನುಗಾರಿಕೆಗೆ ಹೋದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ‌ ಘಟನೆ ನಡೆದಿದೆ. ಮನೋಹರ್ ಪುತ್ರನ್ (53) ಮೃತ ವ್ಯಕ್ತಿ.ಬುಧವಾರ ಸಂಜೆ 6:30ಕ್ಕೆ‌ ಈ ಘಟನೆ ನಡೆದಿದೆ.. ಇವರು ಬಲೆ ಹಾಕಿ ಮೀನು ಹಿಡಿಯಲು ಹೋದಾಗ ನೀರಿಗೆ ಬಿದ್ದು ಮೃತ ಪಟ್ಟಿರುತ್ತಾರೆ. ಬಳಿಕ ಸ್ಥಳಿಯರು ಹಾಗೂ ಪಣಂಬೂರು ಠಾಣಾ ಪೋಲಿಸ್ ಅಧಿಕಾರಿಗಳ ಸಹಾಯದಿಂದ ಹುಡುಕಾಟ ನಡೆಸಲಾಯಿತು. ಸುಮಾರು ರಾತ್ರಿ 9:30 ಸಮಯ ಮೃತದೇಹ

ಪಣಂಬೂರಿನಲ್ಲಿ ವ್ಯಕ್ತಿಯೊಬ್ಬರು ಮೀನು ಹಿಡಿಯಲು ಹೋಗಿ ನೀರು ಪಾಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರು: ಕೆಲಸ ಮಾಡುತ್ತಿದ್ದ ಜ್ಯುವೆಲರಿ ಅಂಗಡಿಯಲ್ಲೇ ಚಿನ್ನ ಕದ್ದ ಇಬ್ಬರು ಸೆರೆ

(ನ್ಯೂಸ್‌ ಕಡಬ) newskadaba.com,  ಅ.09 ಬೆಂಗಳೂರು:  –ಕೆಲಸ ಮಾಡಿಕೊಂಡಿದ್ದ ಅಂಗಡಿಯಲ್ಲಿಯೇ, ಚಿನ್ನಾಭರಣಗಳನ್ನು ಕಳುವು ಮಾಡಿದ್ದ ಇಬ್ಬರನ್ನು ಬಂಧಿಸಿರುವ ಜಾಲಹಳ್ಳಿ ಪೊಲೀಸರು ೪೫ ಲಕ್ಷ ಮೌಲ್ಯದ ೪೨೯.೦೨ ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮಹವೀರ್ ಸಿಂಗ್ (೨೦)ಕುಲದೀಪ್ ಸಿಂಗ್(೨೨)ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ೪೫ ಲಕ್ಷ ಮೌಲ್ಯದ ೪೨೯.೦೨ ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ. ಜಾಲಹಳ್ಳಿಯ ಮುತ್ಯಾಲನಗರದಲ್ಲಿ ಜ್ಯೂವೆಲರಿ ಅಂಗಡಿಯ ಮಾಲೀಕ ಹಾಗೂ ಅವರ ಪುತ್ರ ಸೆ.೨೬ ರಂದು ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೋಗಿದ್ದ ಸಮಯದಲ್ಲಿ ಕೆಲಸಕ್ಕಿದ್ದ

ಬೆಂಗಳೂರು: ಕೆಲಸ ಮಾಡುತ್ತಿದ್ದ ಜ್ಯುವೆಲರಿ ಅಂಗಡಿಯಲ್ಲೇ ಚಿನ್ನ ಕದ್ದ ಇಬ್ಬರು ಸೆರೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ ಸರಕಾರಿ ಜಾಗದ ಮರ ಕಡಿತ – ಅರಣ್ಯ ಅಧಿಕಾರಿಗಳ ದಾಳಿ

(ನ್ಯೂಸ್‌ ಕಡಬ) newskadaba.com,  ಅ.09 ಬೆಳ್ತಂಗಡಿ: ಸವಣಾಲು ಗ್ರಾಮದ ಪಲ್ಲದಡಿಯಲ್ಲಿರುವ ಸರಕಾರಿ ಜಾಗದಿಂದ ಮರಗಳನ್ನು ಕಡಿದು ಮಾರಾಟದ ಉದ್ದೇಶ‌ದಿಂದ ಸಾಗಿಸುವ ಸಿದ್ಧತೆಯಲ್ಲಿದ್ದ ಸಂದರ್ಭ ವೇಣೂರು ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಮರಮಟ್ಟುಗಳು ಸೇರಿದಂತೆ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಸರಕಾರಿ ಜಾಗದಲ್ಲಿದ್ದ 15ರಿಂದ 20 ಅಕೇಶಿಯಾ ಹಾಗೂ ಮ್ಯಾಂಜಿಯಮ್‌ ಮರಗಳನ್ನು ಕಡಿಯಲಾಗಿದೆ. ಈ ಕುರಿತು ಖಚಿತ ಮಾಹಿತಿಯಂತೆ ವೇಣೂರು ವಲಯ ಅರಣ್ಯಾಧಿಕಾರಿ ಭರತ್‌ ಯು.ಜಿ. ನೇತೃತ್ವದ ತಂಡ ದಾಳಿ ನಡೆಸಿದ್ದು, ಕಡಿದಿರುವ ಒಂದಷ್ಟು ಮರಗಳು

ಬೆಳ್ತಂಗಡಿ ಸರಕಾರಿ ಜಾಗದ ಮರ ಕಡಿತ – ಅರಣ್ಯ ಅಧಿಕಾರಿಗಳ ದಾಳಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರು- ಮೈಸೂರು ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಭಾರಿ ಏರಿಕೆ

(ನ್ಯೂಸ್‌ ಕಡಬ) newskadaba.com,  ಸೆ. 30 ಬೆಂಗಳೂರು: ಈ ಬಾರಿ ಮೈಸೂರು ದಸರಾ  ನೋಡಲೆಂದು ಹೊರಟವರಿಗೆ ಕೆಎಸ್‌ಆರ್‌ಟಿಸಿ ಶಾಕ್‌ ನೀಡಿದೆ. ಬೆಂಗಳೂರು- ಮೈಸೂರು ಬಸ್​ ಟಿಕೆಟ್​ ದರ ಹೆಚ್ಚಳವಾಗಿದೆ. ಸಾಲು ಸಾಲಾಗಿ ರಜೆಗಳು ಬಂದಿರುವುದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಟಿಕೆಟ್‌ ಬೇಡಿಕೆ ಹತ್ತು ಪಟ್ಟು ಹೆಚ್ಚಿದೆ. ಹೀಗಾಗಿ ಕೆಎಸ್​​​ಆರ್​ಟಿಸಿ ಮಾತ್ರವಲ್ಲ, ಖಾಸಗಿ ಬಸ್​​ಗಳು ಕೂಡ ಹಬ್ಬವನ್ನೇ ನೆಪವಾಗಿ ಇಟ್ಟುಕೊಂಡು ಪ್ರಯಾಣ ದರ ಏರಿಕೆ ಮಾಡಿವೆ. ಎಷ್ಟು ಏರಿಕೆ? ಕೆಎಸ್ಆರ್ಟಿಸಿ ನಿಗಮ 20ರಿಂದ 30 ರುಪಾಯಿ ಟಿಕೆಟ್

ಬೆಂಗಳೂರು- ಮೈಸೂರು ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಭಾರಿ ಏರಿಕೆ Read More »

ಕರ್ನಾಟಕ

‘ಸಂಗೋನ್ ಮುಗ್ಧಾನ ಕಲಾವಿದೆರ್’ ತಂಡದ ಸ್ಥಾಪಕ ಕಲಾವಿದರಾದ ಸುನಿಲ್ ಪಿಂಟೋ ನಿಧನ

(ನ್ಯೂಸ್‌ ಕಡಬ) newskadaba.com,  ಸೆ. 30 ಹಾಸನ : ಜನಪ್ರಿಯ ಕೊಂಕಣಿ ನಟ ಸುನಿಲ್ ಪಿಂಟೋ(47) ಅವರು ಸೋಮವಾರ ಸಂಜೆ ಹೊಸಪೇಟೆಯ ತಮ್ಮ ಕೃಷಿ ಜಮೀನಿನಲ್ಲಿರುವಾಗ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.ಸುನಿಲ್ ಅವರು ಯುವಕನಾಗಿರುವಾಗಲೇ ಮನರಂಜನಾ ಲೋಕಕ್ಕೆ ಪ್ರವೇಶಿಸಿ, ನಾಟಕಗಳು ಮತ್ತು ಹಾಸ್ಯ ಸರಣಿಗಳಲ್ಲಿ ಸಕ್ರಿಯವಾಗಿ ಅಭಿನಯಿಸಿದ್ದರು. ಬಳಿಕ ದುಬೈಗೆ ತೆರಳಿದ ನಂತರ, ಅವರು ಮೂಡಬಿದಿರೆಯ ‘ಉದೆಂತಿಚೆ ನೆಕೆತ್ರಾಂ’ ತಂಡದ ಸದಸ್ಯರಾದರು. ಅಲ್ಲಿ ಪ್ರದೀಪ್ ಬಾರ್ಬೋಜಾ ನಿರ್ದೇಶನದ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ಪಡೆದರು. ರಂಗಭೂಮಿಯ ಮೇಲಿನ ಅವರ ಈ ಪ್ರೀತಿಯೇ

‘ಸಂಗೋನ್ ಮುಗ್ಧಾನ ಕಲಾವಿದೆರ್’ ತಂಡದ ಸ್ಥಾಪಕ ಕಲಾವಿದರಾದ ಸುನಿಲ್ ಪಿಂಟೋ ನಿಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ

ಹಾಸನದ ಮನೆಯೊಂದರಲ್ಲಿ ನಿಗೂಢ ಸ್ಫೋಟ: ದಂಪತಿಗೆ ಗಂಭೀರ ಗಾಯ

(ನ್ಯೂಸ್‌ ಕಡಬ) newskadaba.com,  ಸೆ. 30 ಹಾಸನ: ಮನೆಯೊಂದರಲ್ಲಿ ನಿಗೂಢ ಸ್ಫೋಟ ಸಂಭವಿಸಿ ದಂಪತಿ ಗಂಭೀರವಾಗಿ ಗಾಯಗೊಂಡ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ(ಸೆ.29) ರಾತ್ರಿ ಈ ಘಟನೆ ನಡೆದಿದೆ .ಮನೆಯೊಂದರಲ್ಲಿ ನಿಗೂಢ ಸ್ಫೋಟ ಸಂಭವಿಸಿದ ಘಟನೆ ಹಾಸನ ಜಿಲ್ಲೆ, ಆಲೂರು ತಾಲೂಕಿನ ಹಳೇಆಲೂರು ಗ್ರಾಮದಲ್ಲಿ ನಡೆದಿದೆ. ಇನ್ನೂ ಈ  ವೇಳೆ ಸ್ಫೋಟದಿಂದ ಗಾಯಗೊಂಡ ದಂಪತಿಯನ್ನು ಸುದರ್ಶನ್ ಆಚಾರ್ (32) ಹಾಗೂ ಕಾವ್ಯ (27) ಎಂದು ಗುರುತಿಸಲಾಗಿದೆ. ಸ್ಪೋಟ ಸಂಭವಿಸುತ್ತಿದ್ದಂತೆ ಅಕ್ಕಪಕ್ಕದಲ್ಲಿನ ಮನೆಯವರು ಭಯಭೀತರಾಗಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ

ಹಾಸನದ ಮನೆಯೊಂದರಲ್ಲಿ ನಿಗೂಢ ಸ್ಫೋಟ: ದಂಪತಿಗೆ ಗಂಭೀರ ಗಾಯ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ರಸ್ತೆಗೆ ಇಳಿಸಿದ್ರೆ ಸೆಕ್ಷನ್ 420 ಅಡಿಯಲ್ಲಿ ವಂಚನೆ ಪ್ರಕರಣ ದಾಖಲೆ

(ನ್ಯೂಸ್‌ ಕಡಬ) newskadaba.com,  ಸೆ. 30 ಬೆಂಗಳೂರು :  ನಂಬರ್ ಪ್ಲೇಟ್ ಇಲ್ಲದೇ ವಾಹನ ರಸ್ತೆಗಿಳಿಸಿದ್ರೆ ಸೆಕ್ಷನ್ 420 ಅಡಿ ಕೇಸ್ ದಾಖಲಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ಕೆಲವರು ಸಂಚಾರಿ ನಿಯಮ ಉಲ್ಲಂಘನೆ ಮರೆಮಾಚಲು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಕೆಲ ಪುಂಡರು ವಾಹನಗಳಿಗೆ ನಂಬರ್ ಪ್ಲೇಟ್ ಹಾಕದೆ, ನಂಬರ್ ಪ್ಲೇಟ್ ವಿಕಾರಗೊಳಿಸಿ ಓಡಾಡುತ್ತಿದ್ದಾರೆ. ಅಂತವರನ್ನು ಮಟ್ಟ ಹಾಕಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಪಶ್ಚಿಮ ವಿಭಾಗ ಒಂದರಲ್ಲೇ 40ಕ್ಕೂ ಹೆಚ್ಚು

ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ರಸ್ತೆಗೆ ಇಳಿಸಿದ್ರೆ ಸೆಕ್ಷನ್ 420 ಅಡಿಯಲ್ಲಿ ವಂಚನೆ ಪ್ರಕರಣ ದಾಖಲೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆನೇಕಲ್‌ನಲ್ಲಿ ಅಮಾನವೀಯ ಕೃತ್ಯ; ವರದಕ್ಷಿಣೆಗಾಗಿ ಮಹಿಳೆಗೆ ಕಿರುಕುಳ

(ನ್ಯೂಸ್‌ ಕಡಬ) newskadaba.com,  ಸೆ.29 ಬೆಂಗಳೂರು: ರಾಜ್ಯದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ವರದಕ್ಷಿಣೆಗಾಗಿ ಮಹಿಳೆಗೆ ಕಿರುಕುಳ ನೀಡಿರುವ ಪತಿಯ ಮನೆಯರು, ಆಕೆಯ ಕೂದಲು ಹಿಡಿದು ಎಳೆದಾಡಿ ಕಾಲಿನಿಂದ ಒದ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಆನೇಕಲ್‌ನ ನಾರಾಯಣಪುರದಲ್ಲಿ ಈ ನಡೆದಿದೆ. ಆನೇಕಲ್ ಪಟ್ಟಣದ ನಾರಾಯಣಪುರದಲ್ಲಿ ಪತಿ ಅರುಣ್, ಅತ್ತೆ ಪ್ರಭಾವತಿ, ಮಾವ ಚೌಡಪ್ಪ ಮೂವರು ಸೇರಿಕೊಂಡು ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ.5 ವರ್ಷಗಳ ಹಿಂದೆ ಅರುಣ್ ಜತೆ ಶ್ರೀಲಜಾ ಮದುವೆಯಾಗಿದ್ದರು. ದಂಪತಿಗೆ 4 ವರ್ಷದ ಹೆಣ್ಣು ಮಗು ಕೂಡ ಇದೆ.

ಆನೇಕಲ್‌ನಲ್ಲಿ ಅಮಾನವೀಯ ಕೃತ್ಯ; ವರದಕ್ಷಿಣೆಗಾಗಿ ಮಹಿಳೆಗೆ ಕಿರುಕುಳ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top