ಸೌಜನ್ಯ ತಾಯಿ ಷಡ್ಯಂತ್ರಕ್ಕೆ ಬಲಿಯಾಗಿರಬಹುದು, ಅವರನ್ನು ವಿಚಾರಣೆ ನಡೆಸಿ: ಸೂಲಿಬೆಲೆ

(ನ್ಯೂಸ್‌ ಕಡಬ) newskadaba.com, ಆ.23:‌‌ ಸೌಜನ್ಯ ತಾಯಿ ಕೂಡ ಷಡ್ಯಂತ್ರಕ್ಕೆ ಬಲಿಯಾಗಿರಬಹುದು. ಹಾಗಾಗಿ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಜಾತಾ ಭಟ್ಅವರನ್ನು ಹೇಗೆ ಗುಂಪು ಷಡ್ಯಂತ್ರ ಮಾಡಿ ಧರ್ಮಸ್ಥಳದ ವಿರುದ್ದ ಅಪಪ್ರಚಾರ ಮಾಡಿತ್ತು. ಸುಜಾತಾ ಭಟ್ಅವರನ್ನು ಮುಂದಿಟ್ಟುಕೊಂಡು ದಿನದಿಂದ ದಿನಕ್ಕೆ ಕಟ್ಟುಕಥೆ ಹೆಣೆದಿತ್ತು. ಇದೀಗ ಸುಜಾತಾ ಭಟ್ಅವರೇ ಯಾರೋ ತನ್ನನ್ನು ಹೆದರಿಸಿ ಹೀಗೆ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ ಎಂದಿದ್ದಾರೆ.

ಸೌಜನ್ಯ ಮೇಲೆ ಅತ್ಯಾಚಾರವಾಗಿದೆ. ಆಕೆಗೆ ನ್ಯಾಯ ಸಿಗಬೇಕು. ಅತ್ಯಾಚಾರಿಗಳು ಜೈಲು ಸೇರಬೇಕು ಎಂದು ಆಗ್ರಹಿಸುತ್ತೇನೆ. ನಾನು ಬದ್ದತೆ ಇಟ್ಟುಕೊಂಡೇ ಮಾತನಾಡುತ್ತಿದ್ದೇನೆ. ಈಗ ಹೇಗೆ ಮಾಸ್ಕ್ಮ್ಯಾನ್‌, ಸುಜಾತಾ ಭಟ್ಷಡ್ಯಂತ್ರದ ಭಾಗವಾಗಿದ್ದಾರೋ ಅದೇ ರೀತಿ ಸೌಜನ್ಯಾಳ ತಾಯಿ ಕೂಡ ಯಾವುದೋ ಷಡ್ಯಂತ್ರಕ್ಕೆ ಒಳಗಾಗಿದ್ದಾರಾ ಎಂಬ ಶಂಕೆ ಇದೆ. ಹಾಗಾಗಿ ಅವರನ್ನು ವಿಚಾರಣೆ ನಡೆಸಬೇಕು ಎಂದಿದ್ದಾರೆ.

 

Scroll to Top