ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಗಣೇಶೋತ್ಸವ



(ನ್ಯೂಸ್ ಕಡಬ) newskadaba.com ಆ. 23. ಶ್ರೀ ವಿದ್ಯಾಗಣಪತಿ ಸೇವಾ ಟ್ರಸ್ಟ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗ ಇದರ 40 ನೇ ವರ್ಷದ ಗಣೇಶೋತ್ಸವವು ಆಗಸ್ಟ್ 27 ರಿಂದ ಆಗಸ್ಟ್ 31 ರವರೆಗೆ ಮಂಗಳೂರಿನ ಕೆ.ಎಸ್.ಆರ್.ಟಿ.ಸಿ ಬಿಜೈ ಬಸ್ಸು ನಿಲ್ದಾಣದ ಆವರಣದಲ್ಲಿ ನಡೆಯಲಿದೆ.
ಪ್ರತೀ ದಿನ ಸಂಜೆ 4ರಿಂದ ಭಜನಾ ಕಾರ್ಯಕ್ರಮ ಹಾಗೂ ಸಂಜೆ 7 ರಿಂದ ಜರಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಗಸ್ಟ್ 27ರಂದು ನೃತ್ಯ ವೈಭವ, ಆಗಸ್ಟ್ 28 ರಂದು ಭಕ್ತಿ ರಸಮಂಜರಿ, ಆಗಸ್ಟ್  29 ರಂದು ಪರಮಾತ್ಮ ಪಂಜುರ್ಲಿ ತುಳು ನಾಟಕ, ಆಗಸ್ಟ್ 30 ರಂದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ ಶಶಿಪ್ರಭ ಪರಿಣಯ ಯಕ್ಷಗಾನ, ಆಗಸ್ಟ್ 31 ರಂದು ಮದ್ಯಾಹ್ನ ಭಕ್ತಿ ರಸಮಂಜರಿ ಹಾಗೂ ಸಂಜೆ ಶ್ರೀ ವಿದ್ಯಾಗಣಪತಿ ದೇವರ ವೈಭವದ ಶೋಭಾ ಯಾತ್ರೆಯು ವಿವಿಧ ಕಲಾ ತಂಡಗಳೊಂದಿಗೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.







error: Content is protected !!
Scroll to Top