ಕರ್ನಾಟಕ

ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.27. ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಎನ್. ಧರಂ ಸಿಂಗ್ ಕೆಲ ದಿನಗಳ ಅನಾರೋಗ್ಯದಿಂದಾಗಿ ಹೃದಯಾಘಾತದಿಂದಾಗಿ ಗುರುವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ಗ್ರಾಮವೊಂದರಲ್ಲಿ 1936 ಡಿಸೆಂಬರ್ 25 ರಂದು ಜನಿಸಿದ್ದ ಇವರು ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ನಗರದ ವಿಕ್ರಮ್‌ ಆಸ್ಪತ್ರೆಗೆ ದಾಖಲಾಗಿದ್ದು, ನಂತರ ಅವರ ಆರೋಗ್ಯ ಸ್ಥಿತಿ ಸುಧಾರಿಸಿತ್ತು. ಆದರೆ ಮತ್ತೆ ಆರೋಗ್ಯ ಹದಗೆಟ್ಟ […]

ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ವಿಧಿವಶ Read More »

ಕರ್ನಾಟಕ

ರೌಡಿಶೀಟರ್ ಪವನ್ ರಾಜ್ ಕೊಲೆ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.26. ಮಂಗಳೂರಿನ ಹೊರವಲಯದ ವಾಮಂಜೂರಿನಲ್ಲಿ ಮಂಗಳವಾರದಂದು ನಡೆದಿದ್ದ ಕೊಲೆ ಪ್ರಕರಣವನ್ನು ಕೃತ್ಯ ನಡೆದ 24 ಗಂಟೆಗಳೊಳಗಾಗಿ ಪೊಲೀಸರು ಬೇಧಿಸಿದ್ದಾರೆ. ಮಂಗಳವಾರದಂದು ರೌಡಿಶೀಟರ್ ಪವನ್ ರಾಜ್ ಶೆಟ್ಟಿಯನ್ನು ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಮಂಗಳೂರು ಗ್ರಾಮಾಂತರ ಪೋಲೀಸರು ಇದೀಗ ಹತ್ಯೆಗೆ ಸಂಬಂಧಿಸಿದಂತೆ ವಾಮಂಜೂರಿನ ಬಿಪಿನ್, ಶರಣ್ ಹಾಗೂ ಹರೀಶ್ ರವರನ್ನು ಬಂಧಿಸಿದ್ದಾರೆ. ಪವನ್ ರಾಜ್ ಕೊಲೆ ಮಾಡಿದ ಬಳಿಕ ಆರೋಪಿಗಳು ಹತ್ಯೆಗೆ ನಡೆಸಿದ ಲಾಂಗ್ ಮಚ್ಚುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು. ಕೊಲೆಯಾದ ಪವನ್ ರಾಜ್

ರೌಡಿಶೀಟರ್ ಪವನ್ ರಾಜ್ ಕೊಲೆ ಆರೋಪಿಗಳ ಬಂಧನ Read More »

ಕರ್ನಾಟಕ

ದಕ್ಷಿಣ ಕನ್ನಡಕ್ಕೆ ಒಲಿಯಲಿದೆಯೇ ರಾಜ್ಯ ಗೃಹ ಖಾತೆ ► ಗೃಹ ಸಚಿವರಾಗಿ ರಮಾನಾಥ ರೈ ಮುಂದುವರಿಕೆ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.26. ಪರಮೇಶ್ವರ್ ಅವರ ರಾಜೀನಾಮೆಯಿಂದ ತೆರವಾಗಿರುವ ರಾಜ್ಯ ಗೃಹ ಸಚಿವರ ಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಗೆ ದಕ್ಕಲಿದೆಯೇ…? ಹೀಗೊಂದು ಗುಮಾನಿ ಸರಕಾರದ ವಲಯದಲ್ಲಿ ಹಬ್ಬುತ್ತಿದ್ದು ಅರಣ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರಿಗೆ ಗೃಹ ಸಚಿವರಾಗಿ ಮುಂದುವರಿಯಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚಿಸಿದ್ದಾರೆ ಎನ್ನಲಾಗಿದೆ. ಗೃಹ ಖಾತೆ ಬೇಡ ಎಂದಿದ್ದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು, ಪಕ್ಷ ನೀಡುವ ಯಾವುದೇ ಅಧಿಕಾರವನ್ನು ನಿಭಾಯಿಸಬಲ್ಲೆ ಎಂದಿರುವುದರಿಂದ ಗೃಹ

ದಕ್ಷಿಣ ಕನ್ನಡಕ್ಕೆ ಒಲಿಯಲಿದೆಯೇ ರಾಜ್ಯ ಗೃಹ ಖಾತೆ ► ಗೃಹ ಸಚಿವರಾಗಿ ರಮಾನಾಥ ರೈ ಮುಂದುವರಿಕೆ…? Read More »

ಕರ್ನಾಟಕ

ವಿದ್ಯುತ್ ನಿಗಮದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 25. ಕೆಪಿಸಿಎಲ್ ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಇಂಜಿನಿಯರ್ ಹಾಗೂ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 183 ಅಸಿಸ್ಟೆಂಟ್ ಇಂಜಿನಿಯರ್ ಮತ್ತು 165 ಜೂನಿಯರ್ ಇಂಜಿನಿಯರ್ ಸೇರಿದಂತೆ ಒಟ್ಟು 348 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು 2017ನೇ ಆಗಸ್ಟ್ 18 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಸಿಸ್ಟೆಂಟ್ ಇಂಜಿನಿಯರ್ (183 ಹುದ್ದೆಗಳು) ವಿದ್ಯಾರ್ಹತೆ: ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್

ವಿದ್ಯುತ್ ನಿಗಮದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಕರ್ನಾಟಕ

ಸೆಪ್ಟೆಂಬರ್ 21 ರಿಂದ ಮೈಸೂರು ದಸರಾ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.24. 2017ನೇ ಸಾಲಿನ ಮೈಸೂರು ದಸರಾವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಸಾಂಪ್ರದಾಯಿಕ ಹಾಗೂ ಆಕರ್ಷಣೀಯವಾಗಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅವರು ಸೋಮವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೈಸೂರು ದಸರಾ ಆಚರಣೆ 2017 ಉನ್ನತ ಮಟ್ಟದ ಸಮಿತಿ ಸಭೆಯ ಬಳಿಕ  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸೆಪ್ಟೆಂಬರ್ 21ರಂದು ಬೆಳಗ್ಗೆ ದಸರಾ ಉದ್ಘಾಟನೆಯಾಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೂ ಅಂದೇ ಚಾಲನೆ ನೀಡಲಾಗುವುದು. ನವರಾತ್ರಿಯು ಸೆ.29ರಂದು ಅಂತ್ಯ ಗೊಳ್ಳುತ್ತದೆ ಎಂದರು. ವಿಜಯ ದಶಮಿ

ಸೆಪ್ಟೆಂಬರ್ 21 ರಿಂದ ಮೈಸೂರು ದಸರಾ Read More »

ಕರ್ನಾಟಕ

ಜಿಲ್ಲೆಯ ಪೊಲೀಸರ ವರ್ಗಾವಣೆ ಪಟ್ಟಿ ರೆಡಿ…. ► ಹೊರ ಜಿಲ್ಲೆಗಳ ಪೊಲೀಸರು ಬರಲಿದ್ದಾರಾ ಮಂಗಳೂರಿಗೆ…?

(ನ್ಯೂಸ್ ಕಡಬ) newskadaba.com ಮಂಗಳೂರು, ಜು.23. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ತಿಂಗಳಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಗೃಹ ಇಲಾಖೆ ಜಿಲ್ಲಾ ಎಸ್ಪಿ ಮತ್ತು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲು ಚಿಂತನೆ ನಡೆಸಿದೆ. ಹೀಗಾಗಿ ಸಾರ್ವತ್ರಿಕ ವರ್ಗಾವಣೆ ನಡೆಸಲು ಇಲಾಖೆಯಿಂದ ಪಟ್ಟಿ ತಯಾರಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರು ಮಂಗಳೂರಿನಲ್ಲಿ ನಡೆದ ಗಲಭೆ ಸಂಬಂಧ ಹಿರಿಯ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡಿದ್ದರು. ಆದರೂ ಗಲಭೆಯನ್ನು ನಿಲ್ಲಿಸಲು ಸಾಧ್ಯವಾಗಿರಲಿಲ್ಲ. ಡಿಜಿಪಿ

ಜಿಲ್ಲೆಯ ಪೊಲೀಸರ ವರ್ಗಾವಣೆ ಪಟ್ಟಿ ರೆಡಿ…. ► ಹೊರ ಜಿಲ್ಲೆಗಳ ಪೊಲೀಸರು ಬರಲಿದ್ದಾರಾ ಮಂಗಳೂರಿಗೆ…? Read More »

ಕರ್ನಾಟಕ

ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಲ್ಯಾಪ್‍ಟಾಪ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.20. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಓದುತ್ತಿರುವ 1.5 ಲಕ್ಷ ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡಲು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ನಿರ್ಧರಿಸಿದೆ.  ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ, ವಾರ್ಷಿಕ 2.5 ಲಕ್ಷ ರೂ. ಆದಾಯ ಮಿತಿಯಲ್ಲಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 300 ಕೋಟಿ ರು ವೆಚ್ಚ ತಗುಲಲಿದೆ ಎಂದಿದ್ದಾರೆ. ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಪ್ರಥಮ ದರ್ಜೆ

ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಲ್ಯಾಪ್‍ಟಾಪ್ Read More »

ಕರ್ನಾಟಕ

ಹಳಿ ತಪ್ಪಿದ ಗೂಡ್ಸ್ ರೈಲು ► ರೈಲ್ವೇ ನಿಲ್ದಾಣದ ವಾಕ್‍ಪಾತ್‍ಗೆ ಹಾನಿ

(ನ್ಯೂಸ್ ಕಡಬ) newskadaba.com ಕಾರವಾರ, ಜು.19. ಆಂಧ್ರ ಪ್ರದೇಶದಿಂದ ಕಾರವಾರಕ್ಕೆ ರೇಷನ್ ತರುತಿದ್ದ ಗೂಡ್ಸ್ ರೈಲೊಂದು ನಿಲ್ದಾಣದ ವಾಕ್ ಪಾತ್ ಗೆ ಡಿಕ್ಕಿ ಹೊಡೆದು ಹಳಿತಪ್ಪಿ ನೆಲಕ್ಕೆ ಕುಸಿದ ಘಟನೆ ಕಾರವಾರ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಮಂಗಳವಾರ ಮಧ್ಯರಾತ್ರಿ ವೇಳೆ ಆಂಧ್ರದಿಂದ ಕಾರವಾರ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದ ಗೂಡ್ಸ್ ರೈಲನ್ನು ನಿಲ್ದಾಣದಲ್ಲಿ ನಿಲ್ಲಿಸುವ ವೇಳೆ ಈ ಘಟನೆ ನಡೆದಿದೆ. ಅಪಘಾತದಿಂದ ನಿಲ್ದಾಣದ ವಾಕ್ ಪಾತ್ ಸಂಪೂರ್ಣ ಹಾಳಾಗಿದ್ದು ಢಿಕ್ಕಿ ಹೊಡೆದ ರಭಸಕ್ಕೆ ಬೋಗಿ ಹಳಿತಪ್ಪಿ ನೆಲಕ್ಕೆ ಕುಸಿದಿದೆ. ಸ್ಥಳಕ್ಕೆ ರೈಲ್ವೆ

ಹಳಿ ತಪ್ಪಿದ ಗೂಡ್ಸ್ ರೈಲು ► ರೈಲ್ವೇ ನಿಲ್ದಾಣದ ವಾಕ್‍ಪಾತ್‍ಗೆ ಹಾನಿ Read More »

ಕರ್ನಾಟಕ

ಪರಪ್ಪನ ಅಗ್ರಹಾರ ಜೈಲಿನ ಅವ್ಯವಹಾರ ಬಯಲಿಗೆಳೆದ ಪ್ರಕರಣ ► ಡಿಐಜಿ ರೂಪಾ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.17. ಇತ್ತೀಚಿಗೆ ರಾಜ್ಯದಲ್ಲಿ ಕೋಲಾಹಲವೆಬ್ಬಿಸಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಅವ್ಯವಹಾರವನ್ನು ಬಯಲಿಗೆಳೆದ ಡಿಐಜಿ ರೂಪಾ, ಅವ್ಯವಹಾರ ಆರೋಪ ಹೊತ್ತ ಕಾರಾಗೃಹ ಎಡಿಜಿಪಿ ಎನ್.ಎಚ್. ಸತ್ಯನಾರಾಯಣ ರಾವ್ ಸೇರಿದಂತೆ ಐವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಜೈಲಿನ ಅವ್ಯವಹಾರವನ್ನು ಬಯಲಿಗೆಳೆದ ಡಿಐಜಿ ರೂಪಾ ಡಿ. ಮೌದ್ಗಿಲ್ ರನ್ನು ಸಾರಿಗೆ ಸುರಕ್ಷತಾ ವಿಭಾಗದ ಡಿಐಜಿಯಾಗಿ ವರ್ಗಾಯಿಸಲಾಗಿದೆ. ಜುಲೈ 22 ರಂದು ನಿವೃತ್ತರಾಗಲಿರುವ ಅವ್ಯವಹಾರ ಆರೋಪ ಹೊತ್ತ ಕಾರಾಗೃಹ ಎಡಿಜಿಪಿ

ಪರಪ್ಪನ ಅಗ್ರಹಾರ ಜೈಲಿನ ಅವ್ಯವಹಾರ ಬಯಲಿಗೆಳೆದ ಪ್ರಕರಣ ► ಡಿಐಜಿ ರೂಪಾ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ Read More »

ಕರ್ನಾಟಕ

ಬಿಜೆಪಿಯವರು ರಾಜ್ಯಕ್ಕೆ ಬೆಂಕಿ ಹಚ್ಚಿದ್ರೆ ಕಾಂಗ್ರೆಸ್ ನಂದಿಸುತ್ತೆ ► ಬೆಂಕಿ ಹಚ್ಚಿದವರನ್ನು ಸುಮ್ಮನೆ ಬಿಡಲ್ಲ: ಸಿದ್ಧರಾಮಯ್ಯ ತಿರುಗೇಟು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.15. ಕಾನೂನನ್ನು ಯಾರೇ ಕೈಗೆತ್ತಿಕೊಂಡರೂ ನಾವು ಬಿಡುವುದಿಲ್ಲ. ಬಿಜೆಪಿಯವರು ಬೆಂಕಿ ಹಚ್ಚುವುದರಲ್ಲಿ ನಿಸ್ಸೀಮರು. ಬಿಜೆಪಿಯವರು ಹಚ್ಚುವ ಬೆಂಕಿಯನ್ನು ನಾವು ನಂದಿಸುವ ಕಾರ್ಯ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಳಿನ್ ಕುಮಾರ್ ಕಟೀಲ್ ರವರು ಜಿಲ್ಲೆಗೆ ಬೆಂಕಿ ಹಚ್ಚೋಕೆ ಹೊರಟಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರು ರಾಜ್ಯಕ್ಕೆ ಬೆಂಕಿ ಹಚ್ಚಲು ಹೊರಟಿದ್ದಾರೆ. ಬಿಜೆಪಿಯವರು ಬೆಂಕಿ ಹಚ್ಚೋದರಲ್ಲೇ ನಿಸ್ಸೀಮರು. ರಾಮಜನ್ಮಭೂಮಿ

ಬಿಜೆಪಿಯವರು ರಾಜ್ಯಕ್ಕೆ ಬೆಂಕಿ ಹಚ್ಚಿದ್ರೆ ಕಾಂಗ್ರೆಸ್ ನಂದಿಸುತ್ತೆ ► ಬೆಂಕಿ ಹಚ್ಚಿದವರನ್ನು ಸುಮ್ಮನೆ ಬಿಡಲ್ಲ: ಸಿದ್ಧರಾಮಯ್ಯ ತಿರುಗೇಟು Read More »

ಕರ್ನಾಟಕ
Scroll to Top