ಕರ್ನಾಟಕ

ನಕಲಿ ಟಿಕ್‍ಟಾಕ್ ಖಾತೆ ತೆರೆದು ಮಹಿಳೆಯ ಅಶ್ಲೀಲ ವೀಡಿಯೋ ವೈರಲ್ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಅ.14. ಟಿಕ್‍ಟಾಕ್ ನಕಲಿ ಖಾತೆ ತೆರೆದು ಮಹಿಳೆಯ ಅಶ್ಲೀಲ ವಿಡಿಯೋವನ್ನು ವೈರಲ್ ಮಾಡಿದ ಆರೋಪಿಯನ್ನು ಬಂಧಿಸಿರುವ ಶಿವಮೊಗ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಭದ್ರಾವತಿಯ ಗೋಣಿಬೀಡು ನಿವಾಸಿ ಸಂಜಯ್ ಕುಮಾರ್ (23) ಎಂದು ಗುರುತಿಸಲಾಗಿದೆ. ಬೆಂಗಳೂರಲ್ಲಿ ಕ್ಯಾಬ್ ಚಾಲಕನಾಗಿ ದುಡಿಯುತ್ತಿದ್ದ ಸಂಜಯ್ ಮಹಿಳೆಯೋರ್ವರ ಹೆಸರಿನಲ್ಲಿ ನಕಲಿ ಟಿಕ್‍ಟಾಕ್ ಖಾತೆ ತೆರೆದಿದ್ದಲ್ಲದೆ ಅದೇ ಮಹಿಳೆಯ ವಿಡಿಯೋಗೆ ಅಶ್ಲೀಲ ಧ್ವನಿ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಹಿಳೆಯು […]

ನಕಲಿ ಟಿಕ್‍ಟಾಕ್ ಖಾತೆ ತೆರೆದು ಮಹಿಳೆಯ ಅಶ್ಲೀಲ ವೀಡಿಯೋ ವೈರಲ್ ➤ ಆರೋಪಿಯ ಬಂಧನ Read More »

ಕರ್ನಾಟಕ

ಐದು ವರ್ಷಗಳಲ್ಲಿ 104 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದ ಬೈಕ್ ಸವಾರ ➤ ಪೊಲೀಸರು ಹಾಕಿದ ದಂಡ ಎಷ್ಟು ಗೊತ್ತೇ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.14. ಐದು ವರ್ಷಗಳಿಂದ 104 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ಸಂಚಾರಿ ಠಾಣೆಯ ಪೊಲೀಸರ ಬಲೆಗೆ ಬಿದ್ದಿದ್ದು, 10,400 ರೂ. ದಂಡ ಕಟ್ಟಿದ ಘಟನೆ ಬೆಂಗಳೂರಿನಿಂದ ವರದಿಯಾಗಿದೆ. ಜಾಲಹಳ್ಳಿಯ ಎಂ.ಎಸ್‌. ಪಾಳ್ಯ ನಿವಾಸಿ ಮಹಮ್ಮದ್‌ ಶಬ್ಬೀರ್‌ ಎಂಬಾತ ಕಳೆದ ಐದು ವರ್ಷಗಳಿಂದ ತನ್ನ ದ್ವಿಚಕ್ರ ವಾಹನದಲ್ಲಿ ಸಿಗ್ನಲ್ ಜಂಪ್, ಹೆಲ್ಮೆಟ್ ಧರಿಸದ ಚಾಲನೆ, ಟ್ರಿಪಲ್ ರೈಡ್ ಸೇರಿದಂತೆ 104 ಬಾರಿ ವಿವಿಧ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದು, ಕ್ಯಾಮೆರಾ

ಐದು ವರ್ಷಗಳಲ್ಲಿ 104 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದ ಬೈಕ್ ಸವಾರ ➤ ಪೊಲೀಸರು ಹಾಕಿದ ದಂಡ ಎಷ್ಟು ಗೊತ್ತೇ..? Read More »

ಕರ್ನಾಟಕ

ಕಡಬಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ➤ ಕಡಬದಲ್ಲಿ ಅದ್ಧೂರಿ ಸ್ವಾಗತ

(ನ್ಯೂಸ್ ಕಡಬ) newskadaba.com ಕಡಬ, ಅ.13. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಕಡಬಕ್ಕೆ ಆಗಮಿಸಿದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ರವರಿಗೆ ಕಡಬದಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಕಡಬದ ಮುಖ್ಯ ರಸ್ತೆಯ ಶ್ರೀರಾಮ್ ಟವರ್ ಬಳಿ ನೂತನ ರಾಜ್ಯಾಧ್ಯಕ್ಷರಿಗೆ ಹಾರ ಹಾಕಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೃಷ್ಣ ಶೆಟ್ಟಿ ಕಡಬ, ಸತೀಶ್ ನಾಯಕ್, ಸೀತಾರಾಮ ಗೌಡ ಪೊಸವಳಿಕೆ, ರಮೇಶ್ ಕಲ್ಪುರೆ, ಪ್ರಕಾಶ್ ಎನ್.ಕೆ‌., ಸತೀಶ್ ಪೂಜಾರಿ, ಆದಂ ಕುಂಡೋಳಿ ಮೊದಲಾದವರು

ಕಡಬಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ➤ ಕಡಬದಲ್ಲಿ ಅದ್ಧೂರಿ ಸ್ವಾಗತ Read More »

ಕರ್ನಾಟಕ

ಸುಳ್ಯ: ಬಸ್ – ಇನ್ನೋವಾ ಅಪಘಾತದ ಗಾಯಾಳು ಬಾಲಕಿ ಮೃತ್ಯು ➤ ಮೃತರ ಸಂಖ್ಯೆ ಮೂರಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಅ.12. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹಾಗೂ ಇನ್ನೋವಾ ಕಾರು ನಡುವೆ ಢಿಕ್ಕಿಯುಂಟಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಗಂಭೀರ ಗಾಯಗೊಂಡ ಬಾಲಕಿಯೋರ್ವಳು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಸುಳ್ಯದ ಅಡ್ಕಾರ್ ಸಮೀಪದ ಮಾವಿನಕಟ್ಟೆ ಎಂಬಲ್ಲಿ ಶುಕ್ರವಾರ ಸಾಯಂಕಾಲ ಸಂಭವಿಸಿದೆ. ಮೃತರನ್ನು ಪುತ್ತೂರು ಸಮೀಪದ ಕಬಕ ವಿದ್ಯಾಪುರ ನಿವಾಸಿ ಮಜೀದ್ ಎಂ., ಕಬಕ ನಿವಾಸಿ ಮಹಮ್ಮದ್ ಸಾದಿಕ್

ಸುಳ್ಯ: ಬಸ್ – ಇನ್ನೋವಾ ಅಪಘಾತದ ಗಾಯಾಳು ಬಾಲಕಿ ಮೃತ್ಯು ➤ ಮೃತರ ಸಂಖ್ಯೆ ಮೂರಕ್ಕೆ ಏರಿಕೆ Read More »

ಕರ್ನಾಟಕ

ಕರ್ನಾಟಕ ಮುಸ್ಲಿಂ ಜಮಾಅತ್ ಕಡಬ ತಾಲೂಕು ಸಮಿತಿಯ ಘೋಷಣಾ ಸಮಾವೇಶ

(ನ್ಯೂಸ್ ಕಡಬ) newskadaba.com ಕಡಬ, ಅ.05. ಕರ್ನಾಟಕ ಮುಸ್ಲಿಂ ಜಮಾಅತ್ ಕಡಬ ತಾಲೂಕು ಸಮಿತಿಯ ಘೋಷಣಾ ಸಮಾವೇಶವು ಶುಕ್ರವಾರ ರಾತ್ರಿ ಕಡಬದ ಅನುಗ್ರಹ ಸಭಾ ಭವನದಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್‌ನ ರಾಜ್ಯ ಉಪಾಧ್ಯಕ್ಷರಾದ ಹಝ್ರತ್‌ ಡಾ|ಸಯ್ಯದ್‌ ಫಾಝಿಲ್ ರಿಝ್ವಿ ಕಾವಳಕಟ್ಟೆಯವರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ ಕಡಬ ತಾಲೂಕಿನಾದ್ಯಂತ ಬಡ ಕುಟುಂಬಸ್ಥರು, ನಿರ್ಗತಿಕರು, ವಿಕಲಚೇತನರು, ಪ್ರಾಯ ಪೂರ್ತಿಯಾಗಿ ಆರ್ಥಿಕ ಸಂಕಷ್ಟದಿಂದ ವಿವಾಹವಾಗದೆ ಉಳಿದಿರುವ ಹೆಣ್ಣು ಮಕ್ಕಳು , ವಿಧವೆಯರು, ವೃದ್ಧರು, ಸೇರಿದಂತೆ ಸಮಾಜದ ಕಟ್ಟ

ಕರ್ನಾಟಕ ಮುಸ್ಲಿಂ ಜಮಾಅತ್ ಕಡಬ ತಾಲೂಕು ಸಮಿತಿಯ ಘೋಷಣಾ ಸಮಾವೇಶ Read More »

ಕರ್ನಾಟಕ

ಕಡಬ: ‘ಕನಸು ಕಣ್ಣು ತೆರೆದಾಗ’ ದಾರವಾಹಿಗೆ ಮುಹೂರ್ತ

(ನ್ಯೂಸ್ ಕಡಬ) newskadaba.com ಕಡಬ, ಅ.02. ಕಡಬ ಮಿತೃ ಕಲಾವೃಂದ ಮಹಾಲಕ್ಷ್ಮೀ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಕನಸು ಕಣ್ಣು ತೆರೆದಾಗ” ಎಂಬ ಧಾರವಾಹಿಯ ಮೂಹೂರ್ತವು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರದಂದು ನಡೆಯಿತು. ಕಡಬದ ಧಾರ್ಮಿಕ ಮುಂದಾಳು ಅರುಣ್ ಕುಮಾರ್ ಜಡೆಮನೆ ಮೂಹೂರ್ತ ನಡೆಸಿ ಮಾತನಾಡಿ, ಭರತನಾಟ್ಯ, ನಾಟಕ , ಕಿರುತೆರೆಯಲ್ಲಿ ಕಡಬ ಪರಿಸರದ ಹಲವು ಮಂದಿ ಕಲಾ ಸೇವೆ ನೀಡುತ್ತಿದ್ದಾರೆ. ಇದೀಗ ಕಡಬ ಪರಿಸರದ ಮಂದಿಗೆ ಮತ್ತೆ ಕಿರುತೆರೆಯಲ್ಲಿ ಅವಕಾಶ ಲಭಿಸಿರುವುದು ಸಂತಸದ

ಕಡಬ: ‘ಕನಸು ಕಣ್ಣು ತೆರೆದಾಗ’ ದಾರವಾಹಿಗೆ ಮುಹೂರ್ತ Read More »

ಕರ್ನಾಟಕ

ಕುಕ್ಕೇ ಕ್ಷೇತ್ರಕ್ಕೆ ತಲುಪಿದ ನೂತನ ಬ್ರಹ್ಮರಥ ➤ ಕ್ಷೇತ್ರದ ಆನೆ ‘ಯಶಸ್ವಿ’ಯಿಂದ ಅದ್ದೂರಿ ಸ್ವಾಗತ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ.02. ಸುಮಾರು ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥವು ಬುಧವಾರ ಸಂಜೆ 8 ಗಂಟೆಯ ವೇಳೆಗೆ ಯಶಸ್ವಿಯಾಗಿ ಕ್ಷೇತ್ರಕ್ಕೆ ತಲುಪಿತು. ಉಡುಪಿಯ ಕೋಟೇಶ್ವರದಿಂದ ಸೋಮವಾರದಂದು ಹೊರಟ ನೂತನ ಬ್ರಹ್ಮರಥವು ಮಂಗಳವಾರ ರಾತ್ರಿ ಕಡಬ ತಾಲೂಕಿನ ಬಲ್ಯಕ್ಕೆ ಆಗಮಿಸಿದ್ದು, ಬುಧವಾರದಂದು ಬೆಳಿಗ್ಗೆ ಕಡಬದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಬಲ್ಯದಿಂದ ಸುಬ್ರಹ್ಮಣ್ಯದ ವರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಕಳಾರ

ಕುಕ್ಕೇ ಕ್ಷೇತ್ರಕ್ಕೆ ತಲುಪಿದ ನೂತನ ಬ್ರಹ್ಮರಥ ➤ ಕ್ಷೇತ್ರದ ಆನೆ ‘ಯಶಸ್ವಿ’ಯಿಂದ ಅದ್ದೂರಿ ಸ್ವಾಗತ Read More »

ಕರ್ನಾಟಕ

➤➤ Big Breaking News ಸುಳ್ಯ: ಸ್ವಿಫ್ಟ್ ಕಾರು – ಲಾರಿ ನಡುವೆ ಮುಖಾಮುಖಿ ಢಿಕ್ಕಿ ➤ ನಾಲ್ವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಅ.01. ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಂಗಳವಾರದಂದು ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯದಲ್ಲಿ ನಡೆದಿದೆ. ಮಾರುತಿ ಸುಝುಕಿ ಸ್ವಿಫ್ಟ್ ಕಾರು ಹಾಗೂ ಈಚರ್ ಲಾರಿ ನಡುವೆ ಸುಳ್ಯ ಸಮೀಪದ ಅಡ್ಕಾರ್ ಎಂಬಲ್ಲಿ ಮುಖಾಮುಖಿ ಢಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಮಡಿಕೇರಿ ಮೂಲದವರೆಂದು ಹೇಳಲಾಗುತ್ತಿದ್ದು, ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ

➤➤ Big Breaking News ಸುಳ್ಯ: ಸ್ವಿಫ್ಟ್ ಕಾರು – ಲಾರಿ ನಡುವೆ ಮುಖಾಮುಖಿ ಢಿಕ್ಕಿ ➤ ನಾಲ್ವರು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಕೊಂಬಾರು: ಯುವಕನಿಗೆ ಹಲ್ಲೆ ನಡೆಸಿದ ಅರಣ್ಯಾಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆಗ್ರಹ ➤ ಇಂದು ಸುಬ್ರಹ್ಮಣ್ಯದಲ್ಲಿ ನಡೆಯುವ ಪ್ರತಿಭಟನೆಗೆ ಕಡಬ ಗೌಡ ಸಮುದಾಯದ ಬೆಂಬಲ

(ನ್ಯೂಸ್ ಕಡಬ) newskadaba.com ಕಡಬ, ಸೆ.30. ಕೊಂಬಾರು ಗ್ರಾಮದ ಕಾಪಾರು ರಾಮಣ್ಣ ಗೌಡರ ಪುತ್ರ ಕೂಲಿ ಕಾರ್ಮಿಕ ಲೋಕೇಶ್ ಕಾಪಾರು ಎಂಬವರ ಮೇಲೆ ಸುಬ್ರಹ್ಮಣ್ಯ ಅರಣ್ಯ ವಲಯದ ಬಿಳಿನೆಲೆ ಮೀಸಲು ಅರಣ್ಯ ರಕ್ಷಕ ಅಶೋಕ್ ಹಾಗೂ ಇತರ ಸಿಬಂದಿಗಳು ನಡೆಸಿದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥ ಅರಣ್ಯಾಧಿಕಾರಿಗಳ ಅಮಾನತಿಗೆ ಆಗ್ರಹಿಸಿ ಇಂದು ನಡೆಯುವ ಪ್ರತಿಭಟನೆಗೆ ಕಡಬ ಗೌಡ ಸಮುದಾಯದ ಬೆಂಬಲ ಇದೆ ಎಂದು ಗೌಡ ಸಮುದಾಯದ ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಡಬ ಒಕ್ಕಲಿಗ

ಕೊಂಬಾರು: ಯುವಕನಿಗೆ ಹಲ್ಲೆ ನಡೆಸಿದ ಅರಣ್ಯಾಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆಗ್ರಹ ➤ ಇಂದು ಸುಬ್ರಹ್ಮಣ್ಯದಲ್ಲಿ ನಡೆಯುವ ಪ್ರತಿಭಟನೆಗೆ ಕಡಬ ಗೌಡ ಸಮುದಾಯದ ಬೆಂಬಲ Read More »

ಕರ್ನಾಟಕ

ಇಬ್ಬರು ಮಕ್ಕಳೊಂದಿಗೆ ನೇತ್ರಾವತಿ ನದಿಗೆ ಹಾರಿದ ಮೈಸೂರಿನ ಮಹಿಳೆ ➤ ಮಹಿಳೆ ಮೃತ್ಯು, ಇಬ್ಬರು ಕಣ್ಮರೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.29. ಇಲ್ಲಿನ ಪಾಣೆಮಂಗಳೂರು ನೇತ್ರಾವತಿ ಸೇತುವೆಯ ಮೇಲಿನಿಂದ ಮೈಸೂರಿನ ಮೂವರು ನದಿಗೆ ಹಾರಿದ ಘಟನೆ ಶನಿವಾರ ರಾತ್ರಿ ನಡೆದಿದ್ದು, ಮಹಿಳೆಯೋರ್ವರನ್ನು ರಕ್ಷಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಮೈಸೂರು ಮೂಲದ ಕವಿತಾ ಮಂದಣ್ಣ (55) ಎಂದು ಗುರುತಿಸಲಾಗಿದೆ. ಈಕೋ ಕಾರಿನಲ್ಲಿ ಶನಿವಾರ ರಾತ್ರಿ ವೇಳೆ ಮೂವರು ತಮ್ಮ ಸಾಕು ನಾಯಿಯೊಂದಿಗೆ ಆಗಮಿಸಿದ್ದು, ಸೇತುವೆಯ ಮಧ್ಯಭಾಗಕ್ಕೆ ಆಗಮಿಸಿ ನದಿಗೆ ಹಾರಿದ್ದಾರೆ. ತಕ್ಷಣವೇ ಸ್ಥಳೀಯರು ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿ ನದಿಗೆ

ಇಬ್ಬರು ಮಕ್ಕಳೊಂದಿಗೆ ನೇತ್ರಾವತಿ ನದಿಗೆ ಹಾರಿದ ಮೈಸೂರಿನ ಮಹಿಳೆ ➤ ಮಹಿಳೆ ಮೃತ್ಯು, ಇಬ್ಬರು ಕಣ್ಮರೆ Read More »

ಕರ್ನಾಟಕ
Scroll to Top