ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕಡಬ: ‘ಕನಸು ಕಣ್ಣು ತೆರೆದಾಗ’ ದಾರವಾಹಿಗೆ ಮುಹೂರ್ತ – News Kadaba

ಕಡಬ: ‘ಕನಸು ಕಣ್ಣು ತೆರೆದಾಗ’ ದಾರವಾಹಿಗೆ ಮುಹೂರ್ತ

(ನ್ಯೂಸ್ ಕಡಬ) newskadaba.com ಕಡಬ, ಅ.02. ಕಡಬ ಮಿತೃ ಕಲಾವೃಂದ ಮಹಾಲಕ್ಷ್ಮೀ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಕನಸು ಕಣ್ಣು ತೆರೆದಾಗ” ಎಂಬ ಧಾರವಾಹಿಯ ಮೂಹೂರ್ತವು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರದಂದು ನಡೆಯಿತು.

ಕಡಬದ ಧಾರ್ಮಿಕ ಮುಂದಾಳು ಅರುಣ್ ಕುಮಾರ್ ಜಡೆಮನೆ ಮೂಹೂರ್ತ ನಡೆಸಿ ಮಾತನಾಡಿ, ಭರತನಾಟ್ಯ, ನಾಟಕ , ಕಿರುತೆರೆಯಲ್ಲಿ ಕಡಬ ಪರಿಸರದ ಹಲವು ಮಂದಿ ಕಲಾ ಸೇವೆ ನೀಡುತ್ತಿದ್ದಾರೆ. ಇದೀಗ ಕಡಬ ಪರಿಸರದ ಮಂದಿಗೆ ಮತ್ತೆ ಕಿರುತೆರೆಯಲ್ಲಿ ಅವಕಾಶ ಲಭಿಸಿರುವುದು ಸಂತಸದ ವಿಚಾರ ಎಂದರು. ನಿವೃತ್ತ ಶಿಕ್ಷಕ ಜನಾರ್ದನ ಗೌಡ ಪಣೆಮಜಲು, ಪತ್ರಕರ್ತ ನಾಗರಾಜ ಎನ್.ಕೆ., ಕೊಕ್ಕಡ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ವಿಶ್ವನಾಥ ರೈ ಪೆರ್ಲ, ಉದ್ಯಮಿ ದಯಾನಂದ ಪ್ರಭು, ಬಾಲಕೃಷ್ಣ ಕೋಲ್ಪೆ, ಕಡಬ ಸರಸ್ವತೀ ವಿದ್ಯಾ ಸಂಸ್ಥೆಯ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ, ನಾಯಕ ನಟಿ ಲತಾ ಎನ್. ಸಂಕಲಪುರ, ನಿರ್ದೇಶಕ ಮೇದಪ್ಪ ಗೌಡ ಶುಭಹಾರೈಸಿದರು. ನಾಯಕನಟ ಉಪಸ್ಥಿತರಿದ್ದರು. ಶಶಾಂಕ್ ಗೋಖಲೆ ಸ್ವಾಗತಿಸಿ, ಹರೀಶ್ ಬೆದ್ರಾಜೆ ನಿರೂಪಿಸಿ ವಂದಿಸಿದರು.

Scroll to Top