ಕರ್ನಾಟಕ

ಪಶ್ಚಿಮ ವಲಯದ 47 ಸಬ್ ಇನ್ಸ್‌ಪೆಕ್ಟರ್ ಗಳ ವರ್ಗಾವಣೆ ➤ ಉಪ್ಪಿನಂಗಡಿ ಎಸ್ಐ ನಂದಕುಮಾರ್, ಬೆಳ್ಳಾರೆ ಎಸ್ಐ ಈರಯ್ಯ ವರ್ಗಾವಣೆ

(ನ್ಯೂಸ್ ಕಡಬ) newskadaba.com ಕಡಬ, ಅ.23. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪಶ್ಚಿಮ ವಲಯದ ಹಲವು ಸಬ್ ಇನ್ಸ್‌ಪೆಕ್ಟರ್ ಗಳನ್ನು ವಿವಿಧೆಡೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ಉಪ್ಪಿನಂಗಡಿ ಠಾಣಾ ಎಸ್ಐ ನಂದಕುಮಾರ್ ರವನ್ನು ಬೆಳ್ತಂಗಡಿ ಠಾಣೆಗೆ ವರ್ಗಾಯಿಸಲಾಗಿದ್ದು, ಬೆಳ್ಳಾರೆ ಠಾಣಾ ಎಸ್ಐ ಈರಯ್ಯ ರವರನ್ನು ಉಪ್ಪಿನಂಗಡಿ ಠಾಣೆಗೆ ನೇಮಿಸಲಾಗಿದೆ. ಪುತ್ತೂರು ನಗರ ಠಾಣಾ ಎಸ್ಐ ಚೆಲುವಯ್ಯರವರನ್ನು ಪುತ್ತೂರು ಸಂಚಾರಿ ಠಾಣೆಗೆ ವರ್ಗಾಯಿಸಲಾಗಿದ್ದು, ಧರ್ಮಸ್ಥಳ ಠಾಣಾ ಎಸ್ಐ ಅವಿನಾಶ್ ರವರನ್ನು ಬಂಟ್ವಾಳ ನಗರ ಠಾಣೆಗೆ ಮತ್ತು ವಿಟ್ಲ ಠಾಣಾ […]

ಪಶ್ಚಿಮ ವಲಯದ 47 ಸಬ್ ಇನ್ಸ್‌ಪೆಕ್ಟರ್ ಗಳ ವರ್ಗಾವಣೆ ➤ ಉಪ್ಪಿನಂಗಡಿ ಎಸ್ಐ ನಂದಕುಮಾರ್, ಬೆಳ್ಳಾರೆ ಎಸ್ಐ ಈರಯ್ಯ ವರ್ಗಾವಣೆ Read More »

ಕರ್ನಾಟಕ

ಚಾಮುಂಡಿ ಬೆಟ್ಟದಲ್ಲಿ ಭೂಕುಸಿತ ಸ್ಥಳ ಪರಿಶೀಲಿಸಿದ ಅಧಿಕಾರಿಗಳು,

(ನ್ಯೂಸ್ ಕಡಬ) newskadaba.com ಮೈಸೂರು, ಅ.23. ಕಳೆದ ಮೂರು  ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಗೆ ಚಾಮುಂಡಿ ಬೆಟ್ಟದ ರಸ್ತೆ ಬಳಿ ಮಂಗಳವಾರ ಸಂಜೆ ಭೂ ಕುಸಿತವಾಗಿದ್ದು ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇಂದು ಆಗಮಿಸಿ  ಪರಿಶೀಲನೆ ನಡೆಸಿದರು. ಡಾಲ್ ಹೌಸಿ ವ್ಯೂವ್ ಪಾಯಿಂಟ್ ನಿಂದ ನಂದಿ ವಿಗ್ರಹದ ಬಳಿಗೆ ತೆರಳುವ ಮಾರ್ಗದಲ್ಲಿ ಸುಮಾರು 15 ಮೀಟರ್ ನಷ್ಟು ತಡೆಗೋಡೆ 7 ಮೀಟರ್ ನಷ್ಟು ಕುಸಿದಿದೆ. ಮುಂದಿನ I5 ದಿನಗಳಲ್ಲಿ ಉತ್ತಮ ಅಡಿಪಾಯದೊಂದಿಗೆ ಆರ್ ಸಿಸಿ ತಡೆಗೋಡೆ

ಚಾಮುಂಡಿ ಬೆಟ್ಟದಲ್ಲಿ ಭೂಕುಸಿತ ಸ್ಥಳ ಪರಿಶೀಲಿಸಿದ ಅಧಿಕಾರಿಗಳು, Read More »

ಕರ್ನಾಟಕ

ನೆಲ್ಯಾಡಿ: ಅಕ್ರಮ ಜಾನುವಾರು ಸಾಗಾಟ ಪತ್ತೆಹಚ್ಚಿದ ಪೊಲೀಸರು ➤ 22 ಜಾನುವಾರುಗಳ ಸಹಿತ ಲಾರಿ ವಶಕ್ಕೆ, ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಅ.19. ಹಾಸನದಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ಬೆನ್ನಟ್ಟಿದ ನೆಲ್ಯಾಡಿ ಪೊಲೀಸರು ನೆಲ್ಯಾಡಿಯ ಕೋಲ್ಪೆ ಎಂಬಲ್ಲಿ ಲಾರಿಯನ್ನು ತಡೆಹಿಡಿದು ಲಾರಿಯಲ್ಲಿದ್ದ 22 ಜಾನುವಾರುಗಳನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ ಘಟನೆ ಶನಿವಾರ ಮುಂಜಾನೆ ನಡೆದಿದೆ. ಬಂಧಿತ ಆರೋಪಿಯನ್ನು ತುಮಕೂರು ನಿವಾಸಿ ನವಾಝ್ ಎಂದು ಗುರುತಿಸಲಾಗಿದೆ. ನೆಲ್ಯಾಡಿಯ ಹೊಸಮಜಲು ಎಂಬಲ್ಲಿ ಪೋಲೀಸ್ ವಾಹನವನ್ನು ಕಂಡು ಪರಾರಿಯಾಗಲು ಯತ್ನಿಸಿದ ಲಾರಿಯನ್ನು ಬೆನ್ನಟಿದ ನೆಲ್ಯಾಡಿ ಪೊಲೀಸರು ಕೋಲ್ಪೆ ಎಂಬಲ್ಲಿ ವಾಹನವನ್ನು ಅಡ್ಡಗಟ್ಟಿ ತಪಾಸಣೆ

ನೆಲ್ಯಾಡಿ: ಅಕ್ರಮ ಜಾನುವಾರು ಸಾಗಾಟ ಪತ್ತೆಹಚ್ಚಿದ ಪೊಲೀಸರು ➤ 22 ಜಾನುವಾರುಗಳ ಸಹಿತ ಲಾರಿ ವಶಕ್ಕೆ, ಓರ್ವನ ಬಂಧನ Read More »

ಕರ್ನಾಟಕ

ರಾಜ್ಯ ರಾಜಕಾರಣವನ್ನೇ ಬೆಚ್ಚಿ ಬೀಳಿಸಿದ ಬ್ರಹ್ಮಾಂಡ ಗುರೂಜಿಯ ಭವಿಷ್ಯ ➤ ಏನೆಂದು ತಿಳಿದರೆ ನೀವೂ ಬೆಚ್ಚಿಬೀಳೋದಂತೂ ಗ್ಯಾರಂಟಿ

(ನ್ಯೂಸ್ ಕಡಬ) newskadaba.com ಹಾಸನ, ಅ.18. ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರಲಿದ್ದು, ಅದರಲ್ಲಿ ಹೊಸಬರೇ ಮುಖ್ಯಮಂತ್ರಿ ಆಗಲಿದ್ದಾರೆ. ಈ ಹಿಂದೆ ಇದ್ದವರು ಯಾರೂ ಮುಂದಿನ ಸರಕಾರದಲ್ಲಿ ಮುಖ್ಯಮಂತ್ರಿ ಆಗಲ್ಲ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ. ಶುಕ್ರವಾರವಾರದಂದು ಹಾಸನಾಂಬೆಯ ದರ್ಶನದ ಬಳಿಕ ಮಾತನಾಡಿದ ಬ್ರಹ್ಮಾಂಡ ಗುರೂಜಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ನವೆಂಬರ್ ತಿಂಗಳಿಂದ ಗಂಡಾಂತರವಿದ್ದು, ಈ ಅವಧಿಯಲ್ಲಿ ಅಪಮೃತ್ಯು ಗಂಡಾಂತರದಿಂದ ಪಾರಾದರೆ ಮುಂದಿನ ಎರಡು ಮುಕ್ಕಾಲು ವರ್ಷ ಮೋದಿಯವರು ಪ್ರಧಾನಿಯಾಗಿರುತ್ತಾರೆ. ಮುಂಬರುವ ಹತ್ತು ವರ್ಷಗಳ ಅವಧಿಯಲ್ಲಿ

ರಾಜ್ಯ ರಾಜಕಾರಣವನ್ನೇ ಬೆಚ್ಚಿ ಬೀಳಿಸಿದ ಬ್ರಹ್ಮಾಂಡ ಗುರೂಜಿಯ ಭವಿಷ್ಯ ➤ ಏನೆಂದು ತಿಳಿದರೆ ನೀವೂ ಬೆಚ್ಚಿಬೀಳೋದಂತೂ ಗ್ಯಾರಂಟಿ Read More »

ಕರ್ನಾಟಕ

ಅರಬ್ಬೀ ಸಮುದ್ರದಲ್ಲಿ ಪ್ರತಿಕೂಲ ಹವಾಮಾನ ➤ ಕರಾವಳಿಯಾದ್ಯಂತ ಇನ್ನೆರಡು ದಿನ ಭಾರೀ ಮಳೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.18. ಸಮುದ್ರದಲ್ಲಿ ಪ್ರತಿಕೂಲ ಹವಾಮಾನವಿರುವುದರಿಂದ ಕರಾವಳಿದಾದ್ಯಂತ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದ್ದು, ಅಕ್ಟೋಬರ್ 19ರವರೆಗೆ ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಲಾಗಿದೆ. ಅರಬ್ಬಿ ಸಮುದ್ರದ ಆಗ್ನೇಯ ದಿಕ್ಕಿನಿಂದ ಕೇರಳದ ಕರಾವಳಿ ಹಾಗೂ ಲಕ್ಷದ್ವೀಪದ ಕಡೆಗೆ ಗಂಟೆಗೆ 45ರಿಂದ 55 ಕಿ.ಮೀ. ವೇಗದಲ್ಲಿ ಬಿರುಗಾಳಿಯು ಬೀಸಲಿರುವುದೆ ಎಂದು ಹವಾಮಾನ ಇಲಾಖೆಯು ನೀಡಿದ ವರದಿಯಂತೆ ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾದ ಪ್ರತಿಕೂಲ ಹವಾಮಾನದಿಂದಾಗಿ ಕರಾವಳಿ ಪ್ರದೇಶದಲ್ಲಿ ಗುರುವಾರದಿಂದ ಮಳೆ ಸುರಿಯುತ್ತಿದೆ.

ಅರಬ್ಬೀ ಸಮುದ್ರದಲ್ಲಿ ಪ್ರತಿಕೂಲ ಹವಾಮಾನ ➤ ಕರಾವಳಿಯಾದ್ಯಂತ ಇನ್ನೆರಡು ದಿನ ಭಾರೀ ಮಳೆ Read More »

ಕರ್ನಾಟಕ

Breaking – ಸುಳ್ಯ: ಲಾರಿ ಮತ್ತು ಕಾರು ನಡುವೆ ಢಿಕ್ಕಿ – ನಜ್ಜುಗುಜ್ಜಾದ ಕಾರು ➤ ಏಳು ಜೀವಗಳನ್ನು ಬಲಿ ತೆಗೆದುಕೊಂಡ ನೆನಪು ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ

(ನ್ಯೂಸ್ ಕಡಬ) newskadaba.com ಸುಳ್ಯ, ಅ.18. ಪದೇ ಪದೇ ವಾಹನ ಅಪಘಾತದಲ್ಲಿ ಸುದ್ದಿಯಾಗುತ್ತಿರುವ ಸುಳ್ಯ ತಾಲೂಕಿನ ಅಡ್ಕಾರ್ ನಲ್ಲಿ ಗುರುವಾರ ರಾತ್ರಿ ಮತ್ತೆ ಅಪಘಾತವಾಗಿದ್ದು, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ‌. ಸುಳ್ಯದಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಶೆವರ್ಲೆ ಬೀಟ್ ಕಾರು ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿ ನಡುವೆ ರಾಷ್ಟ್ರೀಯ ಹೆದ್ದಾರಿ 275 ರ ಅಡ್ಕಾರ್ ಬಳಿ ಮುಖಾಮುಖಿ ಢಿಕ್ಮಿಯಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ‌. ಅಕ್ಟೋಬರ್ 01 ಮತ್ತು

Breaking – ಸುಳ್ಯ: ಲಾರಿ ಮತ್ತು ಕಾರು ನಡುವೆ ಢಿಕ್ಕಿ – ನಜ್ಜುಗುಜ್ಜಾದ ಕಾರು ➤ ಏಳು ಜೀವಗಳನ್ನು ಬಲಿ ತೆಗೆದುಕೊಂಡ ನೆನಪು ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ Read More »

ಕರ್ನಾಟಕ

ನಕಲಿ ನೋಟು ಜಾಲ ಭೇದಿಸಿದ ಸಕಲೇಶಪುರ ಪೊಲೀಸರು ➤ ಕಡಬ ನಿವಾಸಿ ಸೇರಿದಂತೆ ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಸಕಲೇಶಪುರ, ಅ.17. ಖೋಟಾ ನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದ ತಂಡವೊಂದನ್ನು ಬಂಧಿಸಿರುವ ಸಕಲೇಶಪುರ ಠಾಣಾ ಪೊಲೀಸರು, ನೋಟು‌ ಮುದ್ರಣಕ್ಕೆ ಬಳಸುತ್ತಿದ್ದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ನಿವಾಸಿ ಇಲ್ಯಾಸ್, ಸುಲೈಮಾನ್, ಕೆ.ಆರ್. ನಗರ ತಾಲೂಕು ಬೆಟ್ಟಗಾನಹಳ್ಳಿ ನಿವಾಸಿ ಕಿರಣ್ ಹಾಗೂ ಹನುಮನಹಳ್ಳಿ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ. ಆರೋಪಿಗಳು ಮಾರುತಿ ಓಮ್ನಿ ಕಾರಿನಲ್ಲಿ ಸಕಲೇಶಪುರದಿಂದ ಮಂಗಳೂರಿಗೆ ತೆರಳುವ ವೇಳೆ ಮಾರನಹಳ್ಳಿ ಬಳಿ ಪೊಲೀಸರು ವಾಹನಗಳ

ನಕಲಿ ನೋಟು ಜಾಲ ಭೇದಿಸಿದ ಸಕಲೇಶಪುರ ಪೊಲೀಸರು ➤ ಕಡಬ ನಿವಾಸಿ ಸೇರಿದಂತೆ ನಾಲ್ವರ ಬಂಧನ Read More »

ಕರ್ನಾಟಕ

ಬಹು ನಿರೀಕ್ಷಿತ ‘ಸವರ್ಣ ದೀರ್ಘ ಸಂಧಿ’ ಅಕ್ಟೋಬರ್ 18 ರಂದು ತೆರೆಗೆ ➤ ಚಿತ್ರದ ನಿರ್ಮಾಪಕರಾಗಿ ಕಡಬದ ಲೂಷಿಂಗ್ಟನ್

(ನ್ಯೂಸ್ ಕಡಬ) newskadaba.com ಕಡಬ, ಅ.16. ತುಳು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ್ದ ‘ಚಾಲಿಪೋಲಿಲು’ ಚಿತ್ರದ ಯಶಸ್ಸಿಗೆ ಕಾರಣಕರ್ತರಾಗಿದ್ದ ವೀರೇಂದ್ರ ಶೆಟ್ಟಿಯವರು ಇದೀಗ ‘ಸವರ್ಣದೀರ್ಘ ಸಂಧಿ’ ಕನ್ನಡ ಚಿತ್ರದ ಮೂಲಕ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರೆ. ಅಕ್ಟೋಬರ್ 18 ರಂದು ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ‘ಸವರ್ಣ ದೀರ್ಘ ಸಂಧಿ’ ಕನ್ನಡ ಚಲನಚಿತ್ರವು ಟ್ರೈಲರ್ ಹಾಗೂ ಹಾಡುಗಳಿಂದಲೇ ಸದ್ದು ಮಾಡುತ್ತಿದೆ‌. ಚಿತ್ರದ ನಾಯಕ ನಟನಾಗಿ ವಿರೇಂದ್ರ ಶೆಟ್ಟಿ ಕಾಣಿಸಿಕೊಂಡಿದ್ದು, ಪತ್ರಕರ್ತ ಅಜಿತ್ ಹನುಮಕ್ಕನವರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ

ಬಹು ನಿರೀಕ್ಷಿತ ‘ಸವರ್ಣ ದೀರ್ಘ ಸಂಧಿ’ ಅಕ್ಟೋಬರ್ 18 ರಂದು ತೆರೆಗೆ ➤ ಚಿತ್ರದ ನಿರ್ಮಾಪಕರಾಗಿ ಕಡಬದ ಲೂಷಿಂಗ್ಟನ್ Read More »

ಕರ್ನಾಟಕ

ಕುಮಾರ ಪರ್ವತ ಚಾರಣಕ್ಕೆಂದು ತೆರಳಿದ್ದ ಯುವತಿಯ ಕಾಲು ಮುರಿತ ➤ ಯುವತಿಯನ್ನು ಏಳು ಕಿ.ಮೀ. ಹೊತ್ತು ತಂದ ಸುಬ್ರಹ್ಮಣ್ಯದ ಯುವಕರು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ.15. ಕುಮಾರ ಪರ್ವತ ಚಾರಣಕ್ಕೆಂದು ತೆರಳಿದ್ದ ತಂಡದ ಯುವತಿಯೋರ್ವಳು ಜಾರಿ ಬಿದ್ದು ಕಾಲು ಮುರಿತಕ್ಕೊಳಗಾಗಿದ್ದರಿಂದ ಸುಬ್ರಹ್ಮಣ್ಯದ ಯುವಕರು ಸುಮಾರು ಏಳು ಕಿಲೊಮೀಟರ್ ದೂರದವರೆಗೆ ಆಕೆಯನ್ನು ಹೊತ್ತುಕೊಂಡು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಿದ ಘಟನೆ ಮಂಗಳವಾರದಂದು ನಡೆದಿದೆ.   ಸೋಮವಾರದಂದು ಬೆಂಗಳೂರಿನಿಂದ ಆಗಮಿಸಿದ್ದ ಸುಮಾರು ಇಪ್ಪತ್ತ ಮೂರು ಜನರ ತಂಡವೊಂದು ಕುಮಾರಪರ್ವತ ಚಾರಣಕ್ಕೆಂದು ತೆರಳಿದ್ದು, ಮಂಗಳವಾರದಂದು ಹಿಂತಿರುಗುತ್ತಿದ್ದ ವೇಳೆ ತಂಡದಲ್ಲಿದ್ದ ಯುವತಿಯೋರ್ವಳು ಜಾರಿ ಬಿದ್ದು ಕಾಲು ಮುರಿತಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪರ್ವತದ ಅರಣ್ಯಾಧಿಕಾರಿಗಳು

ಕುಮಾರ ಪರ್ವತ ಚಾರಣಕ್ಕೆಂದು ತೆರಳಿದ್ದ ಯುವತಿಯ ಕಾಲು ಮುರಿತ ➤ ಯುವತಿಯನ್ನು ಏಳು ಕಿ.ಮೀ. ಹೊತ್ತು ತಂದ ಸುಬ್ರಹ್ಮಣ್ಯದ ಯುವಕರು Read More »

ಕರ್ನಾಟಕ

ಪಂಕ್ಚರ್ ಆಗಿ ತಡರಾತ್ರಿಯಿಂದ ಶಿರಾಡಿ ಘಾಟ್ ನಲ್ಲಿ ಬಾಕಿಯಾದ ಖಾಸಗಿ ಬಸ್ ➤ ಪ್ರಯಾಣಿಕರ ಪರದಾಟ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಅ.15. ಸೋಮವಾರ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆಂದು ತೆರಳಿದ ಖಾಸಗಿ ಬಸ್ಸೊಂದು ಟಯರ್ ಪಂಕ್ಚರ್ ಆಗಿ ಶಿರಾಡಿ ಘಾಟಿಯಲ್ಲಿ ಬಾಕಿಯಾಗಿದ್ದರಿಂದ ಮಂಗಳವಾರ ಮಧ್ಯಾಹ್ನದವರೆಗೂ ಪ್ರಯಾಣಿಕರು ಬದಲಿ ವ್ಯವಸ್ಥೆ ಇಲ್ಲದೆ ಕಂಗಾಲಾದ ಘಟನೆ ಶಿರಾಡಿಯಲ್ಲಿ ನಡೆದಿದೆ. ಭಾರತಿ ಸಂಸ್ಥೆಗೆ ಸೇರಿದ ಖಾಸಗಿ ಬಸ್ಸು ಸೋಮವಾರ ರಾತ್ರಿ ಮಂಗಳೂರಿನಿಂದ ಪ್ರಯಾಣಿಕರನ್ನು ಹೊತ್ತುಕೊಂಡು ಬೆಂಗಳೂರಿಗೆ ಹೊರಟಿದ್ದು, ಮಧ್ಯರಾತ್ರಿ ವೇಳೆಗೆ ಶಿರಾಡಿ ಘಾಟಿಯ ಅಂತ್ಯಕ್ಕೆ ತಲುಪುತ್ತಿದ್ದಂತೆ ಬಸ್ಸಿನ ಎರಡು ಚಕ್ರಗಳು ಪಂಕ್ಚರ್ ಆಗಿ ನಿಂತಿದೆ. ಹೆಚ್ಚುವರಿ 2 ಟಯರ್

ಪಂಕ್ಚರ್ ಆಗಿ ತಡರಾತ್ರಿಯಿಂದ ಶಿರಾಡಿ ಘಾಟ್ ನಲ್ಲಿ ಬಾಕಿಯಾದ ಖಾಸಗಿ ಬಸ್ ➤ ಪ್ರಯಾಣಿಕರ ಪರದಾಟ Read More »

ಕರ್ನಾಟಕ
Scroll to Top