ಕರ್ನಾಟಕ

ಮುಸ್ಲಿಮರ ಕೇರಿಗಳನ್ನು ಅಭಿವೃದ್ಧಿ ಮಾಡಲ್ಲ: ಶಾಸಕ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ

ದಾವಣಗೆರೆ, ಜ.21:  ಮುಸ್ಲಿಮರನ್ನು ಎಲ್ಲಿಡಬೇಕೋ ಅಲ್ಲಿ ಇಡುತ್ತೇನೆ, ಮುಸ್ಲಿಮರ ಕೇರಿಗಳಿಗೆ ಬಂದಿರುವ ಹಣವನ್ನು ಹಿಂದೂಗಳ ಕೇರಿಗಳ ಅಭಿವೃದ್ಧಿಗೆ ಬಳಸುತ್ತೇನೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೊನ್ನಾಳಿಯಲ್ಲಿ ಸಿಎಎ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ರೇಣುಕಾಚಾರ್ಯ, ಮುಸ್ಲಿಮರನ್ನು ಎಲ್ಲಿಡಬೇಕೋ ಅಲ್ಲಿ ಇಡುತ್ತೇನೆ, ಅವರ ಬೆಂಬಲ ನನಗೆ ಬೇಡ ಹೊನ್ನಾಳಿ, ನ್ಯಾಮತಿ ತಾಲೂಕನ್ನು ಕೇಸರಿಮಯ ಮಾಡುತ್ತೇನೆ ಎಂದು ಹೇಳಿದ್ದಾರೆ. ಭಾರತ ಏನು ಭಯೋತ್ಪಾದಕರ ಮಾವನ ಮನೆನಾ, ನಿಮಗೆ ಪಾಕಿಸ್ತಾನದಿಂದ ಹಣ ಬಂದಿದ್ದರೆ ಮೃತರ ಕುಟುಂಬಕ್ಕೆ ನೀಡಿ, ಮಂಗಳೂರು ಗೋಲಿಬಾರ್ […]

ಮುಸ್ಲಿಮರ ಕೇರಿಗಳನ್ನು ಅಭಿವೃದ್ಧಿ ಮಾಡಲ್ಲ: ಶಾಸಕ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ Read More »

ಕರ್ನಾಟಕ

ಚಲಿಸುತ್ತಿದ್ದ ವೋಲ್ವೋ ಬಸ್‌ನಲ್ಲಿ ಬೆಂಕಿ: ಅಪಾಯದಿಂದ ಪಾರಾದ ಪ್ರಯಾಣಿಕರು

ಚಿತ್ರದುರ್ಗ, ಜ.21: ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಚಲಿಸುತ್ತಿದ್ದ ವೋಲ್ವೋ ಬಸ್ಸೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಗುಯಿಲಾಳು ಟೋಲ್ ಬಳಿಯ ಗಿಡ್ಡೋಬನಹಳ್ಳಿ ಬಳಿ ನಡೆದಿದೆ. ಮಂಗಳವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಹಿರಿಯೂರು ತಾಲೂಕಿನ ಗಿಡ್ಡೋಬನಹಳ್ಳಿ ಬಳಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದಾರೆ. ಬಸ್ಸು ಬೆಳಗಾವಿಯಿಂದ ಬೆಂಗಳೂರಿಗೆ ಹೋಗುತ್ತಿತ್ತು. ಕೆ ಎಸ್ ಅರ್ ಟಿಸಿ ಹವಾ ನಿಯಂತ್ರಿತ ಬಸ್ ಇದಾಗಿದ್ದು, ಬಸ್ ನಲ್ಲಿ ಸುಮಾರು 30 ಜನ ಪ್ರಯಾಣಿಸುತ್ತಿದ್ದರು. ಕೂಡಲೇ ಎಚ್ಚೆತ್ತು

ಚಲಿಸುತ್ತಿದ್ದ ವೋಲ್ವೋ ಬಸ್‌ನಲ್ಲಿ ಬೆಂಕಿ: ಅಪಾಯದಿಂದ ಪಾರಾದ ಪ್ರಯಾಣಿಕರು Read More »

ಕರ್ನಾಟಕ

ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಕೊಂಚ ಇಳಿಕೆ

ಬೆಂಗಳೂರು, ಜ.16: ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳ ನಿರಂತರ ಏರಿಕೆಯಿಂದ ಕಂಗೆಟ್ಟ ವಾಹನ ಸವಾರರಿಗೆ ಕೊಂಚ ತಾತ್ಕಾಲಿಕ ನಿಟ್ಟುಸಿರು ಎಂಬಂತೆ ಇಳಿಕೆ ಕಂಡು ಬಂದಿದೆ. ಇನ್ನೇನು ಬೆಂಗಳೂರಲ್ಲಿ 80 ರ ಸಮೀಪಕ್ಕೆ ಬರುತ್ತದೆ ಎಂಬಂತಹ ಸಂದರ್ಭದಲ್ಲಿ ಮೂರು ದಿನಗಳಿಂದ ಬೆಲೆ ಇಳಿಕೆಯಾಗಿರುವುದು ಜನರಿಗೆ ಕೊಂಚ ನೆಮ್ಮದಿ ನೀಡಿದೆ. ಬೆಂಗಳೂರಲ್ಲಿ ಪೆಟ್ರೋಲ್‌ ಬೆಲೆ 15 ಪೈಸೆ ಕಡಿಮೆಯಾಗಿದ್ದು, 78.08 ದರ ಇದೆ. ರಾಷ್ಟ್ರದ ಇತರ ಮಹಾ ನಗರಗಳಲ್ಲೂ ಪೆಟ್ರೋಲ್‌ ದರದಲ್ಲಿ 15-16 ಪೈಸೆ ಇಳಿಕೆ ಕಂಡು ಬಂದಿದೆ. ರಾಷ್ಟ್ರ

ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಕೊಂಚ ಇಳಿಕೆ Read More »

ಕರ್ನಾಟಕ

ಸಾಗರ ಮಾಲಾ ಯೋಜನೆ ವಿರೋಧಿಸಿ ಇಂದು ಕಾರವಾರ ಬಂದ್

ಕಾರವಾರ, ಜ.16: ಕಾರವಾರ ವಾಣಿಜ್ಯ ಬಂದರು ವಿಸ್ತರಣೆಯ ಸಾಗರ ಮಾಲಾ ಯೋಜನೆ ವಿರೋಧಿಸಿ ಗುರುವಾರ ವಿವಿಧ ಸಂಘಟನೆಗಳಿಂದ ಕಾರವಾರ ಬಂದ್ ಗೆ ಕರೆ ನೀಡಲಾಗಿದೆ. ಇದರಿಂದ ನಗರದಲ್ಲಿ ಇಂದು ಸಾಮಾನ್ಯ ಜನಜೀವನ ವ್ಯತ್ಯಯವಾಗಲಿದೆ. ಜಿಲ್ಲೆಯ ವಾಣಿಜ್ಯ ಬಂದರು ವಿಸ್ತರಣೆಗೆ ಸ್ಥಳೀಯ ಮೀನುಗಾರರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನಲೆಯಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ಮೀನುಗಾರರ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಬಂದ್​ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಖಾಸಗಿ ವಾಹನ, ಆಟೋ ಸಂಚಾರ. ಅಂಗಡಿ ಮುಂಗಟ್ಟು ವ್ಯಾಪಾರ

ಸಾಗರ ಮಾಲಾ ಯೋಜನೆ ವಿರೋಧಿಸಿ ಇಂದು ಕಾರವಾರ ಬಂದ್ Read More »

ಕರ್ನಾಟಕ

ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ

ವಿರಾಜಪೇಟೆ, ಜ.16: ಖ್ಯಾತ ಚಿತ್ರ ನಟಿ ರಶ್ಮಿಕಾ ಮಂದಣ್ಣ ಅವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಜ.16ರ ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ಮಂದಣ್ಣ ಅವರ ಮನೆ ‘ಸೆರೆನಿಟಿ’ ಮೇಲೆ ದಾಳಿ ನಡೆಸಿದ್ದು, ಬೆಳಗ್ಗೆ 7.30ರಿಂದ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಟ್ಯಾಕ್ಸಿ ಮೂಲಕ ಆಗಮಿಸಿದ 10ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಮನೆಯಲ್ಲಿ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದೆ. ಸ್ಯಾಂಡಲ್‍ವುಡ್ ಮತ್ತು ಟಾಲಿವುಡ್’ನಲ್ಲಿ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ ಹಲವು ಹಿಟ್

ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ Read More »

ಕರ್ನಾಟಕ

ಬಳ್ಳಾರಿ: ಧರಣಿಗೆ ಆಗಮಿಸಿದ ಝಮೀರ್ ಅಹ್ಮದ್ ಬಂಧನ

ಬಳ್ಳಾರಿ, ಜ.13: ಶಾಸಕ ಸೋಮಶೇಖರ ರೆಡ್ಡಿ ಮನೆ ಎದುರು ಧರಣಿ ನಡೆಸಲು ಬಂದಿದ್ದ ಬೆಂಗಳೂರಿನ ಶಾಸಕ ಝಮೀರ್ ಅಹ್ಮದ್ ರನ್ನು ಬಳ್ಳಾರಿ ಹೊರವಲಯದ ಬೈಪಾಸ್ ರಸ್ತೆ ಬಳಿ ಪೊಲೀಸರು ಬಂಧಿಸಿದರು. ಶಾಸಕ ಸೋಮಶೇಖರ ರೆಡ್ಡಿ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಝಮೀರ್ ಅಹ್ಮದ್ ಅವರು ಶಾಸಕ ಸೊಮಶೇಖರ ರೆಡ್ಡಿಯವರು ಕ್ಷಮೆ ಯಾಚಿಸಬೇಕು. ಅವರನ್ನು ಪೊಲೀಸರು ಬಂಧಿಸಬೇಕು ಎಂದು ಕಳೆದ ವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿ ಒಂದು ವಾರಗಳ ಕಾಲ ಗಡುವು ನೀಡಿದ್ದರು. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಝಮೀರ್

ಬಳ್ಳಾರಿ: ಧರಣಿಗೆ ಆಗಮಿಸಿದ ಝಮೀರ್ ಅಹ್ಮದ್ ಬಂಧನ Read More »

ಕರ್ನಾಟಕ

ಗ್ರಾಪಂ ಚುನಾವಣೆ ದಿನಾಂಕ ಪ್ರಕಟ

ಬೆಂಗಳೂರು, ಜ.11: ರಾಜ್ಯದ ಕೆಲವು ಗ್ರಾಮ ಪಂಚಾಯತ್ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ಎರಡು ಹಂತದಲ್ಲಿ ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆಯಲಿದೆ. ಎಪ್ರಿಲ್ 5ರಂದು ಮೊದಲ ಹಂತದ ಮತದಾನ ಮತ್ತು ಎಪ್ರಿಲ್ 9ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮೈಸೂರು, ಮಂಡ್ಯ, ಮಡಿಕೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಗ್ರಾಮ ಪಂಚಾಯತ್ ಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಕರ್ನಾಟಕ ಮತ್ತು

ಗ್ರಾಪಂ ಚುನಾವಣೆ ದಿನಾಂಕ ಪ್ರಕಟ Read More »

ಕರ್ನಾಟಕ

ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿ ನಿಧನ

ಬೆಂಗಳೂರು, ಜ.11: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ, ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ಇಂದು ಮುಂಜಾನೆ ಬೆಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಸಾಹಿತ್ಯ, ಸಂಶೋಧನೆ ಮತ್ತು ಇತಿಹಾಸ ಕ್ಷೇತ್ರದಲ್ಲಿ  ಸೇವೆ ಸಲ್ಲಿಸಿರುವ ಚಿದಾನಂದ ಮೂರ್ತಿಯವರಿಗೆ ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳು ಲಭಿಸಿವೆ.  ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು ಹೋರಾಟ ಮಾಡಿದವರಲ್ಲಿ ಚಿ.ಮೂ ಪ್ರಮುಖರು. ಹಂಪಿ ಸ್ಮಾರಕಗಳ ರಕ್ಷಣೆಗಾಗಿ ಚಿದಾನಂದಮೂರ್ತಿ ನಿರಂತರ ಹೋರಾಟ ಮಾಡಿದ್ದರು. ಸಂಶೋಧಕರಾಗಿ

ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿ ನಿಧನ Read More »

ಕರ್ನಾಟಕ

ಗೌರಿ ಲಂಕೇಶ್ ಹತ್ಯೆಯ ಮತ್ತೊಬ್ಬ ಆರೋಪಿ ಬಂಧನ

ಬೆಂಗಳೂರು, ಜ.10: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಜಾರ್ಖಂಡ್ ನಲ್ಲಿ ಕರ್ನಾಟಕದ ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಹಾರಾಷ್ಟ್ರದ ರಿಷಿಕೇಶ್ ದೇವ್ಡೇಕರ್ ಅಲಿಯಾಸ್ ಮುರಳಿ (44) ಎಂದು ಗುರುತಿಸಲಾಗಿದೆ. ಗೌರಿ ಲಂಕೇಶ್​​ ಹತ್ಯೆಯಲ್ಲಿ ಬಳಸಲಾಗಿದ್ದ ಪಿಸ್ತೂಲ್‌ ಅನ್ನು ಈತ ನಾಶಪಡಿಸಿದ್ದಾನೆ ಎನ್ನಲಾಗಿದ್ದು, ಗೌರಿ ಲಂಕೇಶ್ ಹತ್ಯೆ ಪ್ರಕರಣದ 18ನೇ ಆರೋಪಿಯಾಗಿದ್ದಾನೆ. ಗೌರಿ ಲಂಕೇಶ್ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ಈತ ತಲೆಮರೆಸಿಕೊಂಡಿದ್ದು, ಎರಡೂ ವರ್ಷಗಳ ಬಳಿಕ ಕೊನೆಗೂ

ಗೌರಿ ಲಂಕೇಶ್ ಹತ್ಯೆಯ ಮತ್ತೊಬ್ಬ ಆರೋಪಿ ಬಂಧನ Read More »

ಕರ್ನಾಟಕ

ರಾಜ್ಯದಲ್ಲಿ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ➤ ಜೋಡಿಗಳನ್ನು ಕೂಡಿಟ್ಟು ಹಣ ಮಾಡುವ ದಂಧೆ ಭೇದಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.09. ದೇಶದ ವಿವಿಧೆಡೆ ಕೇಳಿ ಬರುತ್ತಿದ್ದ ಹನಿ ಟ್ರ್ಯಾಪ್ ಘಟನೆಯು ಉಪ್ಪಿನಂಗಡಿಯಲ್ಲಿ ನಡೆದಿದ್ದು, ಶಂಕಿತ ಆರೋಪಿಗಳು ಪೊಲೀಸರ ಬಲೆಗೆ ಬಿದ್ದ ಘಟನೆ ಗುರುವಾರದಂದು ನಡೆದಿದೆ. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿ ದಿಲೀಪ್ ಟಿ ಎಂಬವರು ತನ್ನ ಸ್ನೇಹಿತರಾದ ಜನಾರ್ಧನನ್, ಪ್ರಶಾಂತ್, ಪ್ರವೀಣ್ ಎಂಬವರೊಂದಿಗೆ ಇನ್ನೋವಾ ಕಾರಿನಲ್ಲಿ ಕಣ್ಣೂರಿನಿಂದ ಪುತ್ತೂರಿಗೆ ಆಗಮಿಸಿದ್ದು, ಪುತ್ತೂರಿನಲ್ಲಿ ಪರಿಚಯದ ಹುಡುಗಿಯೊಂದಿಗೆ ಒಂದು ಮನೆಗೆ ತೆರಳಿದ್ದರೆನ್ನಲಾಗಿದೆ. ಆ ಮನೆಯಲ್ಲಿ ಮತ್ತೊಬ್ಬಳು ಹುಡುಗಿಯಿದ್ದು ಅದೇ ಸಮಯದಲ್ಲಿ ಇಬ್ಬರು

ರಾಜ್ಯದಲ್ಲಿ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ➤ ಜೋಡಿಗಳನ್ನು ಕೂಡಿಟ್ಟು ಹಣ ಮಾಡುವ ದಂಧೆ ಭೇದಿಸಿದ ಪೊಲೀಸರು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top