ಕರ್ನಾಟಕ

Breaking news: ಬೆಂಗಳೂರು: ಭೀಕರ ರಸ್ತೆ ಅಪಘಾತ; ಹೊಸಂಗಡಿಯ ಮೂವರು ಮೃತ್ಯು, ಆರು ಮಂದಿ ಗಂಭೀರ

ರಾಮನಗರ, ಜ.9: ಇಲ್ಲಿನ ಗುಡೇಮಾರನಹಳ್ಳಿ ಬಳಿ ಭೀಕರ ಅಪಘಾತ ಉಂಟಾಗಿದ್ದು, ಪರಿಣಾಮ ಮೂವರು ಮೃತಪಟ್ಟು, ಆರು ಗಂಭೀರ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಮೃತಪಟ್ಟವರು ಕಾಸರಗೋಡು ಜಿಲ್ಲೆಯ ಹೊಸಂಗಡಿಯವರೆಂದು ತಿಳಿದು ಬಂದಿದೆ. ಇವರು ತಿರುಪತಿ ದೇವಸ್ಥಾನದಿಂದ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

Breaking news: ಬೆಂಗಳೂರು: ಭೀಕರ ರಸ್ತೆ ಅಪಘಾತ; ಹೊಸಂಗಡಿಯ ಮೂವರು ಮೃತ್ಯು, ಆರು ಮಂದಿ ಗಂಭೀರ Read More »

ಕರಾವಳಿ, ಕರ್ನಾಟಕ

ನಾಳೆ ಭಾರತ ಬಂದ್: ತುರ್ತು ಸೇವೆಗಳು ಲಭ್ಯ

ಬೆಂಗಳೂರು, ಜ.7. ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಲವು ಕಾರ್ಮಿಕ ಸಂಘಟನೆಗಳು ಮತ್ತು ಎಡಪಕ್ಷಗಳು ಜ.8 ರಂದು ಭಾರತ ಬಂದ್​ಗೆ ಕರೆ ನೀಡಿವೆ. ಭಾರತ ಬಂದ್​ ಗೆ ಹಲವು ಸಂಘ-ಸಂಸ್ಥೆಗಳು, ಸರ್ಕಾರಿ ಹಾಗೂ ಖಾಸಗಿ ನೌಕರರು ಬೆಂಬಲ ನೀಡಿದ್ದಾರೆ. ಆ ದಿನದ ಪರಿಸ್ಥಿತಿ ಅವಲೋಕಿಸಿ, ಶಾಲಾ-ಕಾಲೇಜಿಗೆ ರಜೆ ನೀಡಲು ಆಯಾ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗೆಳಿಗೆ ಸೂಚನೆ ನೀಡಲಾಗಿದೆ. ಕರ್ನಾಟಕ ಸರ್ಕಾರ ಕೂಡ ಆ ದಿನ ಶಾಲಾ-ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ

ನಾಳೆ ಭಾರತ ಬಂದ್: ತುರ್ತು ಸೇವೆಗಳು ಲಭ್ಯ Read More »

ಕರಾವಳಿ, ಕರ್ನಾಟಕ

ಬ್ರೇಕ್ ಫೈಲ್ಯೂರಾಗಿ ಕಾರು, ಆಟೊ, ಬೈಕ್‌ಗೆ ಢಿಕ್ಕಿ ಹೊಡೆದ ಬಸ್: ಓರ್ವ ಮೃತ್ಯು, ಐವರಿಗೆ ಗಾಯ

ಬೆಂಗಳೂರು, ಜ.6: ಬಿಎಂಟಿಸಿ ಬಸ್-ಕಾರು, ಆಟೋ, ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ, ಐವರು ಗಾಯಗೊಂಡ ಘಟನೆ ನಗರದ ಕೊಟ್ಟಿಗೆಪಾಳ್ಯ ಸಿಗ್ನಲ್ ಬಳಿ ನಡೆದಿದೆ. ಬ್ರೇಕ್ ಫೈಲ್ಯೂರ್ ನಿಂದ ಈ ಅಪಘಾತ ನಡೆದಿದೆನ್ನಲಾಗಿದೆ. ಅಪಘಾತದಲ್ಲಿ ಭೈರಪ್ಪ ಎಂಬವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ವಾಹನಗಳು ನುಜ್ಜುಗುಜ್ಜಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಬ್ರೇಕ್ ಫೈಲ್ಯೂರಾಗಿ ಕಾರು, ಆಟೊ, ಬೈಕ್‌ಗೆ ಢಿಕ್ಕಿ ಹೊಡೆದ ಬಸ್: ಓರ್ವ ಮೃತ್ಯು, ಐವರಿಗೆ ಗಾಯ Read More »

ಕರ್ನಾಟಕ

ಪತಿಗಾಗಿ ಇಬ್ಬರ ಪತ್ನಿಯರ ಜಗಳ: ಒಬ್ಬಾಕೆಯ ಕೊಲೆಯಲ್ಲಿ ಅಂತ್ಯ

ವಿರಾಜಪೇಟೆ, ಜ.5: ಒಬ್ಬ ಗಂಡನಿಗಾಗಿ ಇಬ್ಬರು ಪತ್ನಿಯರ ಜಗಳ ಒಬ್ಬಾಕೆಯ ಕೊಲೆಯಲ್ಲಿ ಅಂತ್ಯವಾದ ಘಟನೆ ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲೂಕಿನ ಬಳಂಜಬೆರೆಯ ಕಾಫಿ ಎಸ್ಟೇಟ್ ನ ಲೈನ್ ಮನೆಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ವಶಿಕಾ ದೇವಿ (27) ಎಂದು ಗುರುತಿಸಲಾಗಿದೆ. ಆಕೆಯ ಸಹೋದರಿ ಅಶಿಕಾ ಕೊಲೆ ಗೈದ ಆರೋಪಿಯಾಗಿದ್ದು, ಆಕೆ ಪರಾರಿಯಾಗಿದ್ದಾಳೆ. ಕಾಫಿ ತೋಟದಲ್ಲಿ ಕೆಲಸ ಮಾಡುವ ಜಾರ್ಖಂಡ್ ಮೂಲದ ದಯಾನಂದ್ ಎಂಬಾತ ಕಳೆದ ಏಳು ವರ್ಷಗಳ ಹಿಂದೆ ಅಶಿಕಾಳನ್ನು ಮದುವೆಯಾಗಿದ್ದ. ಇದಾದ ಕೆಲವೇ ವರ್ಷಗಳ ನಂತರ

ಪತಿಗಾಗಿ ಇಬ್ಬರ ಪತ್ನಿಯರ ಜಗಳ: ಒಬ್ಬಾಕೆಯ ಕೊಲೆಯಲ್ಲಿ ಅಂತ್ಯ Read More »

ಕರ್ನಾಟಕ

ಗುಬ್ಬಿಯಲ್ಲಿ ಭೀಕರ ಅಪಘಾತ: ಹೊತ್ತಿ ಉರಿದ ಕಾರು; ಮೂವರು ಸಜೀವ ದಹನ

ತುಮಕೂರು, ಜ.4: ಬಸ್‌ ಮತ್ತು ಕಾರು ಢಿಕ್ಕಿ ಸಂಭವಿಸಿದ್ದು ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅದರಲ್ಲಿದ್ದ ಮೂವರು ಸಜೀವದಹನಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಬಳಿ ಶನಿವಾರ ಬೆಳಗ್ಗಿನ ಜಾವ ನಡೆದಿದೆ. ಮೃತರು ಗುಬ್ಬಿ ತಾಲೂಕಿನ ಎನ್. ಹೊಸಹಳ್ಳಿ ಗ್ರಾಮದವರು ಎನ್ನಲಾಗಿದ್ದು, ಮೃತರನ್ನು ವಸಂತ್​ಕುಮಾರ್​​​​(45), ನರಸಮ್ಮ(60), ರಾಮಯ್ಯ(55) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇತರ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ತುಮಕೂರು ಜಿಲ್ಲಾ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಬಸ್ ಬೆಂಗಳೂರಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು ಎಂದು

ಗುಬ್ಬಿಯಲ್ಲಿ ಭೀಕರ ಅಪಘಾತ: ಹೊತ್ತಿ ಉರಿದ ಕಾರು; ಮೂವರು ಸಜೀವ ದಹನ Read More »

ಕರ್ನಾಟಕ

ಕಲಬುರಗಿ: ಮಕ್ಕಳಿಗೆ ವಿಷ ಕುಡಿಸಿ ಹತ್ಯೆಗೈದ ತಂದೆ

ಕಲಬುರಗಿ, ಡಿ.3: ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ತಂದೆಯೋರ್ವ ವಿಷ ಕುಡಿಸಿ ಹತ್ಯೆ ಮಾಡಿರುವ ದಾರುಣ ಘಟನೆ ಗುರುವಾರ ರಾತ್ರಿ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ನಡೆದಿದೆ. ವಿಷ ಸೇವಿಸಿ ಮೃತಪಟ್ಟ ಮಕ್ಕಳನ್ನು ರೋಹಿತಾ (4), ಪರ್ವಿತಾ  (2) ಎಂದು ಗುರುತಿಸಲಾಗಿದೆ. ಸಂಜು ಆಲಿಯಾಸ್ ಕುಮ್ಶೆಟ್ಟಿ ಮಕ್ಕಳನ್ನು ಕೊಲೆಗೈದ ತಂದೆ. ಹೈದರಾಬಾದ್ ನಲ್ಲಿ ಸಂಜು ಕೆಲಸ ಮಾಡುತ್ತಿದ್ದ ಇತ್ತೀಚಿಗೆ ತಾಂಡಾಕ್ಕೆ ಬಂದಿದ್ದ. ಮದ್ಯ ವ್ಯಸನಿಯಾಗಿರುವ ಇವನು ಇಬ್ಬರು ಮಕ್ಕಳನ್ನು ಹೊಲಕ್ಕೆ ಕರೆದೊಯ್ದು ವಿಷಕುಡಿಸಿ ಸಾಯಿಸಿದ್ದಾನೆ ಎನ್ನಲಾಗಿದೆ. ತಾಂಡಾದ

ಕಲಬುರಗಿ: ಮಕ್ಕಳಿಗೆ ವಿಷ ಕುಡಿಸಿ ಹತ್ಯೆಗೈದ ತಂದೆ Read More »

ಕರ್ನಾಟಕ

ಕೆಎಸ್ಸಾರ್ಟಿಸಿ ಬಸ್-ಕಾರು ಢಿಕ್ಕಿ: ನಾಲ್ವರು ಸ್ಥಳದಲ್ಲೇ ಮೃತ್ಯು

ಮುಧೋಳ, ಜ.3: ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ನಡುವೆ ಢಿಕ್ಕಿ ಸಂಭವಿಸಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ  ಶಿರೋಳ ಕ್ರಾಸ್ ಬಳಿ ನಡೆದಿದೆ. ಮೃತರನ್ನು ಸಿದ್ದರಾಯ ತೇಲಿ (36), ಬಾಲಪ್ಪ ಸಂಡಗಿ (34), ಹನಮಂತ ಗನಗಾರ (21), ರಿಯಾಜ ಜಾಲಗೇರ (25) ಎಂದು ತಿಳಿದುಬಂದಿದೆ. ಇವರೆಲ್ಲರೂ ಜಮಖಂಡಿ ತಾಲೂಕಿನ ಗೋಠೆ ಗ್ರಾಮದವರೆಂದು ಹೇಳಲಾಗಿದೆ. ಮೃತರು ನ್ಯಾಯಲಯದ ವ್ಯಾಜ್ಯದ ನಿಮಿತ್ತ ಗೋಠಯಿಂದ ಧಾರವಾಡದ ಹೈಕೋರ್ಟ್ ಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಬೆಳಗಾವಿಯಿಂದ ಕಲಬುರಗಿ ಮಾರ್ಗವಾಗಿ ತೆರಳುತಿದ್ದ

ಕೆಎಸ್ಸಾರ್ಟಿಸಿ ಬಸ್-ಕಾರು ಢಿಕ್ಕಿ: ನಾಲ್ವರು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಕಲಬುರಗಿ: ಶಾಲಾ ಮಕ್ಕಳ ಪ್ರವಾಸದ ಬಸ್ ಮರಕ್ಕೆ ಢಿಕ್ಕಿ; ಹತ್ತು ವಿದ್ಯಾರ್ಥಿಗಳಿಗೆ ಗಾಯ

ಕಲಬುರಗಿ, ಜ.2: ಶಾಲಾ ಮಕ್ಕಳು ಪ್ರವಾಸಕ್ಕೆಂದು ಹೊರಟಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಹತ್ತಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ ಘಟನೆ ಕಲಬುರಗಿ ನಗರದ ವೆಂಕಟಗಿರಿ ಹೊಟೇಲ್ ಬಳಿ ಇಂದು ಬೆಳಗ್ಗೆ ನಡೆದಿದೆ. ಚನ್ನವೀರ ನಗರದಲ್ಲಿರುವ ಅಯ್ಯಪ್ಪ ಶಾಲೆಗೆ ಸೇರಿದ ಬಸ್ ಇದಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಹಿಡಿದಿದೆ ಎನ್ನಲಾಗುತ್ತಿದ್ದು, ಬಸ್ ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಬಸ್ ನಲ್ಲಿ ಹತ್ತಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಘಟನೆಯಿಂದ

ಕಲಬುರಗಿ: ಶಾಲಾ ಮಕ್ಕಳ ಪ್ರವಾಸದ ಬಸ್ ಮರಕ್ಕೆ ಢಿಕ್ಕಿ; ಹತ್ತು ವಿದ್ಯಾರ್ಥಿಗಳಿಗೆ ಗಾಯ Read More »

ಕರ್ನಾಟಕ

ಕಲಬುರಗಿ: ನಿಂತಿದ್ದ ರೈಲು ಬೋಗಿಯಲ್ಲಿ ಅಗ್ನಿ ಅವಘಡ

ಕಲಬುರಗಿ, ಡಿ.2: ಇಲ್ಲಿನ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲೊಂದರ ಬೋಗಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ತಡರಾತ್ರಿ ನಡೆದಿದೆ.‌ ಸರಕು ಸಾಗಾಣಿಕೆ ರೈಲ್ವೆಯ ಸಿಬ್ಬಂದಿಯ ವಿಶೇಷ ಬೋಗಿನಲ್ಲಿ  ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ರೈಲ್ವೆ ನಿಲ್ದಾಣ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.‌ ಗುರುವಾರ ತಡರಾತ್ರಿ 2 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದ್ದು, ಯಾವ ಕಾರಣಕ್ಕಾಗಿ ನಡೆಯಿತು ಎಂಬುದರ ಬಗ್ಗೆ ತನಿಖೆಯ ನಂತರ ತಿಳಿದು ಬರಲಿದೆ ಎಂದಿದ್ದಾರೆ.  

ಕಲಬುರಗಿ: ನಿಂತಿದ್ದ ರೈಲು ಬೋಗಿಯಲ್ಲಿ ಅಗ್ನಿ ಅವಘಡ Read More »

ಕರ್ನಾಟಕ

ಚಿತ್ರದುರ್ಗ: ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ಮೃತ್ಯು

ಚಿತ್ರದುರ್ಗ, ಜ. 2: ಇಲ್ಲಿನ ಗಾರೆಹಟ್ಟಿ ಬಡಾವಣೆಯ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯಲಿದ್ದ ಮೂವರು ಮೃತಪಟ್ಟ ದಾರುಣ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತರನ್ನು ಅರುಣ್ (40), ಪತ್ನಿ ಲತಾ (35), ಹಾಗೂ 7ನೇ ತರಗತಿ ವಿದ್ಯಾರ್ಥಿನಿ ಪುತ್ರಿ ಅಮೃತಾ(13) ಎಂದು ಗುರುತಿಸಲಾಗಿದೆ. ಸ್ಪೋಟದ ರಭಸಕ್ಕೆ ಮನೆಯಲ್ಲಿನ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿವೆ. ಮೂರು ಜನರ ಮೃತ ದೇಹಗಳು‌ ಅರೆಬರೆ ಸುಟ್ಟಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿ ಬೆಂಕಿ‌ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಚಿತ್ರದುರ್ಗ ಕೋಟೆ ಪೊಲೀಸ್

ಚಿತ್ರದುರ್ಗ: ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ಮೃತ್ಯು Read More »

ಕರ್ನಾಟಕ
Scroll to Top