ಕರ್ನಾಟಕ

ಕೊರೋನ ಭೀತಿ: ಕಲಬುರಗಿ ಜಿಲ್ಲೆಯಲ್ಲಿ 1 ತಿಂಗಳು ಅಘೋಷಿತ ಬಂದ್

ಕಲಬುರಗಿ, ಮಾ.16: ಮಾರಣಾಂತಿಕ ಕೊರೋನ ಸೋಂಕು ನಿಯಂತ್ರಣಕ್ಕೆ ಕಲಬುರಗಿ ಜಿಲ್ಲೆಯಲ್ಲಿ ಒಂದು ತಿಂಗಳು ಕಾಲ ಅಘೋಷಿತ ಬಂದ್ ಮಾಡುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಹೇಳಿದ್ದಾರೆ. ಕೊರೋನ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ನೇರ ಸಂಪರ್ಕದಲ್ಲಿದ್ದ ನಾಲ್ವರಲ್ಲಿ ಸೋಂಕು ಲಕ್ಷಣಗಳು ಕಾಣಿಸಿಕೊಂಡಿದ್ದು, ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ನಾಳೆ ವರದಿ ಬರುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾತ್ರ ಹೊರಗಡೆ ಬರುವಂತೆ ಮಾಡಿರುವ ಮನವಿಗೆ ಸಾರ್ವಜನಿಕರು ಸ್ಪಂದಿಸಿದ್ದಾರೆ. ಇದೇ ರೀತಿ […]

ಕೊರೋನ ಭೀತಿ: ಕಲಬುರಗಿ ಜಿಲ್ಲೆಯಲ್ಲಿ 1 ತಿಂಗಳು ಅಘೋಷಿತ ಬಂದ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೊರೋನಾ: ಭಯಬೇಡ, ಎಚ್ಚರವಿರಲಿ ➤ ಪ್ರಯಾಣದ ವೇಳೆ ಮಾಡಬಾಹುದಾದ ಮುಂಜಾಗ್ರತಾ ಕ್ರಮಗಳು

ಕೊರೋನಾ: ಭಯಬೇಡ, ಎಚ್ಚರವಿರಲಿ ➤ ಪ್ರಯಾಣದ ವೇಳೆ ಮಾಡಬಾಹುದಾದ ಮುಂಜಾಗ್ರತಾ ಕ್ರಮಗಳು ➤ ಮಾಸ್ಕನ್ನು ಹೇಗೆ, ಯಾವಾಗ ಉಪಯೋಗಿಸಬೇಕು..?

ಕೊರೋನಾ: ಭಯಬೇಡ, ಎಚ್ಚರವಿರಲಿ ➤ ಪ್ರಯಾಣದ ವೇಳೆ ಮಾಡಬಾಹುದಾದ ಮುಂಜಾಗ್ರತಾ ಕ್ರಮಗಳು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಲಬುರಗಿ: ಮೃತಪಟ್ಟ ವೃದ್ದನ ಕುಟುಂಬದವರಿಗೆ ಕೊರೋನ ಪಾಸಿಟಿವ್

ಕಲಬುರಗಿ, ಮಾ.16: ಕೊರೋನ ವೈರಸ್‌ನಿಂದ ಮೃತಪಟ್ಟಿದ್ದ ಕಲಬುರಗಿಯ ಮುಹಮ್ಮದ್ ಹುಸೈನ್ ಸಿದ್ದೀಕಿ (76) ಅವರ ಕುಟುಂಬದ ಮತ್ತೋರ್ವ ಸದಸ್ಯನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7ಕ್ಕೆ ಏರಿದೆ. ಈ ಪೈಕಿ ಕಲಬುರಗಿಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಉಳಿದವರಿಗೆ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನ ಸೋಂಕಿನಿಂದ ಕಲಬುರಗಿಯಲ್ಲಿ ಮೃತಪಟ್ಟ ವೃದ್ಧನ ಕುಟುಂಬ ಸದಸ್ಯರಲ್ಲಿ ವೈರಸ್ ಇರುವುದು ಈಗಷ್ಟೇ ನಮಗೂ ತಿಳಿದು ಬಂದಿದೆ ಎಂದು ಆರೋಗ್ಯ ಕುಟುಂಬ ಇಲಾಖೆಯ ನಿರ್ದೇಶಕ ಡಾ. ಓಂ

ಕಲಬುರಗಿ: ಮೃತಪಟ್ಟ ವೃದ್ದನ ಕುಟುಂಬದವರಿಗೆ ಕೊರೋನ ಪಾಸಿಟಿವ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತಮ್ಮ ಆದೇಶವನ್ನು ಉಲ್ಲಂಘಿಸಿದ ಬಿಎಸ್‌ವೈ: 4-5ಸಾವಿರ ಜನರ ಸೇರಿದ ಮದುವೆಯಲ್ಲಿ ಭಾಗವಹಿಸಿದ ಸಿಎಂ

ಬೆಳಗಾವಿ, ಮಾ.15: ಮಾರಣಾಂತಿಕ ಕೊರೋನ ವೈರಸ್ ಕುರಿತು ಸರಕಾರದ ನಿರ್ದೇಶನ ಉಲ್ಲಂಘಿಸಿ ಮೇಲ್ಮನೆಯ ಸರಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿ ವಿವಾಹ ನೆರವೇರಿದ್ದು, ಮದುವೆಯಲ್ಲಿ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಾಲ್ಗೊಂಡು ವದು ವರರನ್ನು ಆಶಿರ್ವದಿಸಿದ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ. ಬೆಳಗಾವಿಯ ಶಗುನ ಗಾರ್ಡನ್‌ನಲ್ಲಿ ಕವಟಗಿಮಠ ಪುತ್ರಿಯ ವಿವಾಹ ನೆರವೇರಿತು. ಯಡಿಯೂರಪ್ಪ ಮದುವೆಯಲ್ಲಿ ಪಾಲ್ಗೊಂಡರು. ಮುಖ್ಯಮಂತ್ರಿ ಹಿಂದೆ ಅವರ ಭದ್ರತೆ, ಶಿಷ್ಟಾಚಾರ ಸಿಬ್ಬಂದಿ ಸಹ ಪಾಲ್ಗೊಂಡಿತ್ತು. ಮದುವೆಯಲ್ಲಿ ಜನ ಜಂಗುಳಿಯೇ ನೆರೆದಿತ್ತು. ಸುಮಾರು

ತಮ್ಮ ಆದೇಶವನ್ನು ಉಲ್ಲಂಘಿಸಿದ ಬಿಎಸ್‌ವೈ: 4-5ಸಾವಿರ ಜನರ ಸೇರಿದ ಮದುವೆಯಲ್ಲಿ ಭಾಗವಹಿಸಿದ ಸಿಎಂ Read More »

ಕರ್ನಾಟಕ

ಕೊರೋನ ಮುನ್ನೆಚ್ಚರಿಕೆ: 7, 8, 9 ತರಗತಿಗಳ ಪರೀಕ್ಷೆ ಮುಂದೂಡಿಕೆ: ಸಚಿವ ಸುರೇಶ್ ಕುಮಾರ್

ಬೆಂಗಳೂರು, ಮಾ.15: ಕೊರೋನ ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವುದಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೀಗ 7ರಿಂದ 9ನೇ ತರಗತಿಯವರೆಗಿನ ಪರೀಕ್ಷೆಯನ್ನು ಮುಂದೂಡಿದೆ. ಒಂದು ವಾರ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳು, ಸಭೆ, ಸಮಾರಂಭಗಳು, ಮಾಲ್, ಥಿಯೇಟರ್‌ಗಳಿಗೆ ಬಂದ್ ಮಾಡಿ ಆದೇಶ ಹೊರಡಿಸಿದ್ದ ರಾಜ್ಯ ಸರಕಾರ ಮುನ್ನೆಚ್ಚರಿಕೆ ಕ್ರಮವಾಗಿ 1ರಿಂದ 6ನೇ ತರಗತಿಯವರೆಗಿನ ವಾರ್ಷಿಕ ಪರೀಕ್ಷೆಯನ್ನು ರದ್ದುಗೊಳಿಸಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿತ್ತು. ಇದೀಗ 7ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯನ್ನು ಮಾರ್ಚ್ 31ರವರೆಗೆ

ಕೊರೋನ ಮುನ್ನೆಚ್ಚರಿಕೆ: 7, 8, 9 ತರಗತಿಗಳ ಪರೀಕ್ಷೆ ಮುಂದೂಡಿಕೆ: ಸಚಿವ ಸುರೇಶ್ ಕುಮಾರ್ Read More »

ಕರ್ನಾಟಕ

ಕೊರೋನ: ಕೇಂದ್ರದಿಂದ ಪ್ರತ್ಯೇಕ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು, ಮಾ.14: ಮಾರಣಾಂತಿಕ ಕೊರೋನ ವೈರಸ್ ದೇಶದಲ್ಲಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಪ್ರತ್ಯೇಕ ಬಜೆಟ್ ಮಂಡನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ಧಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಪ್ರತ್ಯೇಕ ಬಜೆಟ್‌ಮಂಡಿಸಬೇಕು. ಎಲ್ಲಾ ರಾಜ್ಯಗಳಿಗೆ ಅದನ್ನು ಅನುಷ್ಠಾನ ಮಾಡಬೇಕು. ಅಮೆರಿಕ ಅಧ್ಯಕ್ಷ ಪ್ರತ್ಯೇಕ ಬಜೆಟ್ ಮಂಡಿಸಿದ್ದಾರೆ. ಇಲ್ಲೂ ಅದೇ ರೀತಿಯಾಗಿ ಮಂಡಿಸಬೇಕು. ಕೊರೊನಾ ವಿಚಾರದಲ್ಲಿ ಕೇಂದ್ರ ಸರಕಾರ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಕೊರೊನಾ ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿಲ್ಲ ಎಂದರು. ಕೊರೋನ ವೈರಸ್ ರಾಜ್ಯದಲ್ಲಿ

ಕೊರೋನ: ಕೇಂದ್ರದಿಂದ ಪ್ರತ್ಯೇಕ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಆಗ್ರಹ Read More »

ಕರ್ನಾಟಕ

ಉಪ್ಪಿನಂಗಡಿ: ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ ➤ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.13. ಉಪ್ಪಿನಂಗಡಿ ಹಾಗೂ ಪುತ್ತೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 13 ಕ್ಕೂ ಹೆಚ್ಚಿನ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರ ನೇತೃತ್ವದ ಅಪರಾಧ ಪತ್ತೆ ದಳವು ಓರ್ವ ಆರೋಪಿಯನ್ನು ಬಂಧಿಸಿ, 18 ಲಕ್ಷ ರೂ‌. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಮೂಲತಃ ಚಿಕ್ಕಮಗಳೂರು ಜಿಲ್ಲೆಯವನಾದ ಪ್ರಸ್ತುತ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಅಳಿರಾ ನಿವಾಸಿ ಶೌಕತ್ ಅಲಿ ಯಾನರ ಶೌಕತ್(56) ಎಂದು ಗುರುತಿಸಲಾಗಿದೆ. ಆರೋಪಿಯು ಉಪ್ಪಿನಂಗಡಿ ಪೊಲೀಸ್

ಉಪ್ಪಿನಂಗಡಿ: ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ ➤ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

Breaking news ರಾಜ್ಯಾದ್ಯಂತ ಶಾಲೆಗಳಿಗೆ ನಾಳೆಯಿಂದ ರಜೆ ಘೋಷಣೆ

ಬೆಂಗಳೂರು, ಮಾ.13: ಕೊರೋನ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ರಾಜ್ಯಾದ್ಯಂತ ಸಿಬಿಎಸ್‌ಇ, ಐಸಿಎಸ್‌ಇ ಸಹಿತವಾಗಿ ಎಲ್ಲಾ ಶಾಲೆಗಳ 1ರಿಂದ 6ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾ.14ರಿಂದ ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ. ಈಗಾಗಲೇ ಪ್ರಾರಂಭವಾಗಿದ್ದ ಪರೀಕ್ಷೆಯನ್ನು ಸಹ ಸ್ಥಗಿತಗೊಳಿಸಿ ಬೇಸಿಗೆ ರಜೆ ಘೋಷಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ. 1ರಿಂದ 6ನೇ ತರಗತಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ (2019-20) ನೇ ಶೈಕ್ಷಣಿಕ ಸಾಲಿನಲ್ಲಿ ಎಫ್‌ಎ-1, ಎಫ್‌ಎ-2, ಎಫ್‌ಎ-3, ಎಫ್‌ಎ-4 ಮತ್ತು ಎಸ್ ಎ -2 ರಲ್ಲಿ ಗಳಿಸಿದ ಅಂಕಗಳ ಆಧಾರದ

Breaking news ರಾಜ್ಯಾದ್ಯಂತ ಶಾಲೆಗಳಿಗೆ ನಾಳೆಯಿಂದ ರಜೆ ಘೋಷಣೆ Read More »

ಕರ್ನಾಟಕ

ಒಂದು ವಾರಗಳ ಕಾಲ ಮಾಲ್, ಶಾಲಾ ಕಾಲೇಜುಗಳನ್ನು ಬಂದ್ ಮಾಡುವಂತೆ ಸಿಎಂ ಆದೇಶ ➤ ಮದುವೆಗೂ ಇಲ್ಲ ಪರ್ಮಿಶನ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.13. ಕೊರೊನಾ ವೈರಸ್ ಕರ್ನಾಟಕಕ್ಕೆ ಕಾಲಿಟ್ಟು ಒಂದು ಬಲಿ ತೆಗೆದುಕೊಂಡ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಹತ್ತರ ನಿರ್ಧಾರವನ್ನು ತೆಗೆದುಕೊಂಡಿದ್ದು, ನಾಳೆಯಿಂದ ಥಿಯೇಟರ್, ಶಾಪಿಂಗ್ ಮಾಲ್, ಸಭೆ-ಸಮಾರಂಭಗಳನ್ನು ಒಂದು ವಾರಗಳ ಮಟ್ಟಿಗೆ ರದ್ದುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ ಪಬ್, ಕ್ಲಬ್ ಮೇಳ, ಕ್ರೀಡಾ ಸಮಾರಂಭವನ್ನೂ ಮಾಡದಂತೆ ಆದೇಶ ಹೊರಡಿಸಿದ್ದಾರೆ. ಈಗಾಗ್ಲೇ ಕರ್ನಾಟಕದಲ್ಲಿ ಕೊರೊನಾಗೆ ಒಂದು ಬಲಿಯಾಗಿದ್ದು, ಇದಕ್ಕೆ ಮುಖ್ಯಮಂತ್ರಿ ವಿಷಾಧ ವ್ಯಕ್ತಪಡಿಸಿದ್ದಾರೆ. ಇನ್ನು ಮದುವೆ ನಿಗದಿಯಾಗಿದ್ದರೂ ಅದನ್ನು ಮುಂದೂಡುವಂತೆ

ಒಂದು ವಾರಗಳ ಕಾಲ ಮಾಲ್, ಶಾಲಾ ಕಾಲೇಜುಗಳನ್ನು ಬಂದ್ ಮಾಡುವಂತೆ ಸಿಎಂ ಆದೇಶ ➤ ಮದುವೆಗೂ ಇಲ್ಲ ಪರ್ಮಿಶನ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಕಡವೆಗೆ ಢಿಕ್ಕಿ ಹೊಡೆದ ಅಪರಿಚಿತ ವಾಹನ ➤ ಗಾಯಗೊಂಡ ಕಡವೆ ಪಿಲಿಕುಳಕ್ಕೆ ವರ್ಗಾವಣೆ

(ನ್ಯೂಸ್ ಕಡಬ) newskadaba.com ಕಡಬ, ಮಾ.13. ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕಡವೆಯೊಂದು ಗಾಯಗೊಂಡು ರಸ್ತೆ ಬದಿ ಬಿದ್ದ ಘಟನೆ ಉಪ್ಪಿನಂಗಡಿ – ಕಡಬ ರಾಜ್ಯ ಹೆದ್ದಾರಿಯ ಕುಂತೂರು ಪದವು – ಬಲ್ಯ ನಡುವಿನ ಕುಂಟಿಕಾನ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ರಸ್ತೆ ಬದಿ ಬಿದ್ದಿದ್ದ ಕಡವೆಯನ್ನು ಗಮನಿಸಿ ಸ್ಥಳೀಯರು ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ‌ ತೆರಳಿದ ಕಡಬ ಪೊಲೀಸರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ಗಿರೀಶ್. ಆರ್.,

ಕಡಬ: ಕಡವೆಗೆ ಢಿಕ್ಕಿ ಹೊಡೆದ ಅಪರಿಚಿತ ವಾಹನ ➤ ಗಾಯಗೊಂಡ ಕಡವೆ ಪಿಲಿಕುಳಕ್ಕೆ ವರ್ಗಾವಣೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top