ಕರ್ನಾಟಕ

ಕಡಬ ತಾಲೂಕು ಉದ್ಘಾಟನೆ ಮಾ.8 ಶುಕ್ರವಾರ ಸಂಜೆಗೆ ಮುಂದೂಡಿಕೆ ► ಪುತ್ತೂರು ಸಹಾಯಕ ಕಮಿಷನರ್ ನೇತೃತ್ವದಲ್ಲಿ ಇಂದು ಕಡಬದಲ್ಲಿ ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಮಾ.06. ಬಹು ನಿರಿಕ್ಷಿತ ಕಡಬ ತಾಲೂಕು ಉದ್ಘಾಟನೆಯು ಮಾ.8ರಂದು ಸಂಜೆ ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆಯು ಇಂದು ಬೆಳಿಗ್ಗೆ 11 ಗಂಟೆಗೆ ಕಡಬ ಅಂಬೇಡ್ಕರ್ ಭವನದಲ್ಲಿ ಪುತ್ತೂರು ಸಹಾಯಕ ಕಮೀಷನ್ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕಡಬ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಡಬದಲ್ಲಿ ನಡೆಯುವ ಪೂರ್ವಭಾವಿ ಸಭೆಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಭಾಗವಹಿಸಬೇಕೆಂದು ಅವರು ಕೋರಿದ್ದಾರೆ.

ಕಡಬ ತಾಲೂಕು ಉದ್ಘಾಟನೆ ಮಾ.8 ಶುಕ್ರವಾರ ಸಂಜೆಗೆ ಮುಂದೂಡಿಕೆ ► ಪುತ್ತೂರು ಸಹಾಯಕ ಕಮಿಷನರ್ ನೇತೃತ್ವದಲ್ಲಿ ಇಂದು ಕಡಬದಲ್ಲಿ ಪೂರ್ವಭಾವಿ ಸಭೆ Read More »

ಕರ್ನಾಟಕ

ಪಂಜ ಸೇರಿದಂತೆ ಹತ್ತಿರದ 7 ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರಿಸಲು ಆಗ್ರಹ ► ಕಡಬ ತಾಲೂಕು ಉದ್ಘಾಟನೆಗೆ ಕ್ರಮ ಕೈಗೊಳ್ಳುವಂತೆ ದೇವೇಗೌಡರಿಗೆ ಮನವಿ.

(ನ್ಯೂಸ್ ಕಡಬ) newskadaba.com ಕಡಬ, ಮಾ.05. ಮಾಜಿ ಪ್ರಧಾನಿ ರಾಷ್ಟ್ರೀಯ ಜೆಡಿಎಸ್ ಅಧ್ಯಕ್ಷ ಹೆಚ್.ಡಿ ದೇವೆಗೌಡರಲ್ಲಿ ಕಡಬ ತಾಲೂಕು ಉದ್ಘಾಟನೆಯೊಂದಿಗೆ ಅಭಿವೃದ್ದಿಗೆ ಅನುದಾನ ಒದಗಿಸುವಂತೆ ರಾಜ್ಯ ಸರಕಾರ ಹಾಗೂ ಮಂತ್ರಿಗಳಿಗೆ ಸಲಹೆ ನೀಡುವಂತೆ ರಾಜ್ಯ ಜೆಡಿಎಸ್ ಕಾರ್ಯದರ್ಶಿ, ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ಮನವಿ ಮಾಡಿಕೊಂಡಿದ್ದಾರೆ. ಭಾನುವಾರದಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಆಗಮಿಸಿದ ಮಾಜಿ ಪ್ರಧಾನಿ ದೇವೆಗೌಡರನ್ನು ಭೇಟಿ ಮಾಡಿದ ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್‍ರ ನೇತೃತ್ವದ ನಿಯೋಗವು

ಪಂಜ ಸೇರಿದಂತೆ ಹತ್ತಿರದ 7 ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರಿಸಲು ಆಗ್ರಹ ► ಕಡಬ ತಾಲೂಕು ಉದ್ಘಾಟನೆಗೆ ಕ್ರಮ ಕೈಗೊಳ್ಳುವಂತೆ ದೇವೇಗೌಡರಿಗೆ ಮನವಿ. Read More »

ಕರ್ನಾಟಕ

►► Breaking News ನೆಲ್ಯಾಡಿ: ಗ್ಯಾಸ್ ಟ್ಯಾಂಕರ್ ಪಲ್ಟಿ ► ಗ್ಯಾಸ್ ಸೋರಿಕೆಯ ಭೀತಿ…!!

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.03. ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರೊಂದು ಪಲ್ಟಿಯಾದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಲಾವತ್ತಡ್ಕ ಎಂಬಲ್ಲಿ ಭಾನುವಾರ ಅಪರಾಹ್ನ ಸಂಭವಿಸಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ನೆಲ್ಯಾಡಿ – ಗುಂಡ್ಯ ನಡುವಿನ ಲಾವತ್ತಡ್ಕ ಎಂಬಲ್ಲಿಗೆ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಿಂದಾಗಿ ಗ್ಯಾಸ್ ಸೋರಿಕೆಯಾಗುತ್ತಿದ್ದು, ಹೆದ್ದಾರಿ ಸಂಚಾರದಲ್ಲಿ ತಡೆ ಉಂಟಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಧಾವಿಸುತ್ತಿದ್ದಾರೆ.

►► Breaking News ನೆಲ್ಯಾಡಿ: ಗ್ಯಾಸ್ ಟ್ಯಾಂಕರ್ ಪಲ್ಟಿ ► ಗ್ಯಾಸ್ ಸೋರಿಕೆಯ ಭೀತಿ…!! Read More »

ಕರ್ನಾಟಕ

ಮತ್ತೆ ಮುಂದೂಡಲ್ಪಟ್ಟ ಕಡಬ ತಾಲೂಕು ಉದ್ಘಾಟನಾ ಸಮಾರಂಭ ➤ ಮಾರ್ಚ್ 02 ರಂದು ನೂತನ ಕಡಬ ತಾಲೂಕಿಗೆ ಅಧಿಕೃತ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.27. ಕಳೆದ ನಾಲ್ಕು ದಶಕಗಳಿಂದ ಕಡಬ ಪರಿಸರದ ಜನತೆ ಕಾತರದಿಂದ ಕಾಯುತ್ತಿದ್ದ ನೂತನ ಕಡಬ ತಾಲೂಕು ಉದ್ಘಾಟನೆ ಸಮಾರಂಭವು ಮತ್ತೆ ಮುಂದೂಡಿಕೆಯಾಗಿದ್ದು, ಮಾರ್ಚ್ 01 ಶುಕ್ರವಾರದ ಬದಲಾಗಿ ಮಾರ್ಚ್ 02 ಶನಿವಾರದಂದು ನಡೆಯಲಿದೆ. ಈ ಬಗ್ಗೆ ಪುತ್ತೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿಯವರು, ಮಾರ್ಚ್ 02 ಶನಿವಾರದಂದು ಅಪರಾಹ್ನ 03 ಗಂಟೆಗೆ ತಾಲೂಕು ಉದ್ಘಾಟನೆ ನಡೆಯಲಿದೆ ಎಂದು ಅಧಿಕೃತ ಆದೇಶ ಹೊರಡಿಸಿದ್ದಾರೆ‌. ಕಳೆದ ಮೂರು ಬಾರಿ ಉದ್ಘಾಟನೆಗೆ ದಿನ ನಿಗದಿಗೊಂಡರೂ,

ಮತ್ತೆ ಮುಂದೂಡಲ್ಪಟ್ಟ ಕಡಬ ತಾಲೂಕು ಉದ್ಘಾಟನಾ ಸಮಾರಂಭ ➤ ಮಾರ್ಚ್ 02 ರಂದು ನೂತನ ಕಡಬ ತಾಲೂಕಿಗೆ ಅಧಿಕೃತ ಚಾಲನೆ Read More »

ಕರ್ನಾಟಕ

ಚಿಕ್ಕಮಗಳೂರು: 80 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಕಾರು ➤ ಬೆಳ್ತಂಗಡಿಯ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ.19. ಕಾರೊಂದು ಕದಂಕಕ್ಕೆ ಉರುಳಿ ಬಿದ್ದ ಪರಿಣಾಮ ಬೆಳ್ತಂಗಡಿಯ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪ ಸೋಮವಾರದಂದು ಸಂಭವಿಸಿದೆ. ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಿಲಿಗೂಡು ನಿವಾಸಿಗಳಾದ ವಿಶ್ವನಾಥ್(55) ಪುಷ್ಪಾವತಿ (48) ದಂಪತಿ ಹಾಗೂ ರಾಹುಲ್ ರೈ(58) ಮಮತಾ(51) ದಂಪತಿ ಎಂದು ಗುರುತಿಸಲಾಗಿದೆ. ಸಂಜೀವ್ ಶೆಟ್ಟಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಳಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ

ಚಿಕ್ಕಮಗಳೂರು: 80 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಕಾರು ➤ ಬೆಳ್ತಂಗಡಿಯ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಆಪರೇಷನ್ ಆಡಿಯೋದ ಬಗ್ಗೆ ಚಾಟಿ ಬೀಸಿದ ಸ್ಪೀಕರ್ ➤ಸದನದಲ್ಲಿ ಭಾವುಕರಾದ ರಮೇಶ್ ಕುಮಾರ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.11. ಆಪರೇಷನ್ ಆಡಿಯೋ ಕುರಿತು ವಿಧಾನಸಭಾ ಕಲಾಪದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.ಆಪರೇಷನ್ ಆಡಿಯೋವನ್ನು ನನ್ನ ಗಮನಕ್ಕೆ ತಂದ ಸಿಎಂ ಕುಮಾರಸ್ವಾಮಿ ಅವರಿಗೆ ಧನ್ಯವಾದಗಳು. ಸದನದ ಎಲ್ಲ ಸದಸ್ಯರಿಂದ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಗೌರವ ಪೂರಕವಾಗಿ ನಡೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಅಪಚಾರವಾಗುವಂತೆ ನೀವು ನಡೆದುಕೊಳ್ಳಬಾರದು. ದೌರ್ಭಾಗ್ಯಕ್ಕೆ ಆಪರೇಷನ್ ಡೀಲ್‍ನಲ್ಲಿ ಮಾತನಾಡಿರುವವರು ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ಶಾಸಕರು ರಾಜೀನಾಮೆ ನೀಡಿದರೆ ತಕ್ಷಣವೇ ಒಪ್ಪಿಕೊಳ್ಳಲು ಸ್ಪೀಕರ್ ಗೆ 50 ಕೋಟಿ ನೀಡಿ ಸರಿಮಾಡಿಕೊಂಡಿದ್ದೇವೆ ಎಂದು ಆಡಿಯೋದಲ್ಲಿ

ಆಪರೇಷನ್ ಆಡಿಯೋದ ಬಗ್ಗೆ ಚಾಟಿ ಬೀಸಿದ ಸ್ಪೀಕರ್ ➤ಸದನದಲ್ಲಿ ಭಾವುಕರಾದ ರಮೇಶ್ ಕುಮಾರ್ Read More »

ಕರ್ನಾಟಕ

ಇನ್ಮುಂದೆ ‘ಕೆಜಿಎಫ್’ ಸಿನಿಮಾವನ್ನು ಮೊಬೈಲಿನಲ್ಲೇ ವೀಕ್ಷಿಸಬಹುದು ► ಹೇಗೆಂದು ಗೊತ್ತೇ?

(ನ್ಯೂಸ್ ಕಡಬ) newskadaba.comಬೆಂಗಳೂರು,ಫೆ.05.ವಿಶ್ವಾದ್ಯಂತ ಸದ್ದು ಮಾಡಿದ ರಾಕಿಂಗ್ ಸ್ಟಾರ್ ಯಶ್ ನಟಿಸಿದ ‘ಕೆಜಿಎಫ್’ ಚಿತ್ರ ಈಗ ಮೊಬೈಲಿ`ನಲ್ಲೇ ವೀಕ್ಷಿಸಬಹುದು. ಅಮೆಜಾನ್ ಪ್ರೈಂ ವಿಡಿಯೋ ಭಾನುವಾರ ತನ್ನ ಟ್ವಿಟ್ಟರ್ ಖಾತೆಯಲ್ಲಿ ಫೆಬ್ರವರಿ 5ರಂದು ಕೆಜಿಎಫ್ ಸಿನಿಮಾ ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿತ್ತು. ಅಲ್ಲದೇ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿತ್ತು. ಕೆಜಿಎಫ್ ಚಿತ್ರ ಅಮೆಜಾನ್ ಪ್ರೈಂನಲ್ಲಿ ಹಿಂದಿ ಹೊರತುಪಡಿಸಿ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯಲ್ಲಿರುವ ಚಿತ್ರವನ್ನು ವೀಕ್ಷಿಸಬಹುದು.ಹಿಂದಿಯ ಖಾಸಗಿ

ಇನ್ಮುಂದೆ ‘ಕೆಜಿಎಫ್’ ಸಿನಿಮಾವನ್ನು ಮೊಬೈಲಿನಲ್ಲೇ ವೀಕ್ಷಿಸಬಹುದು ► ಹೇಗೆಂದು ಗೊತ್ತೇ? Read More »

ಕರ್ನಾಟಕ

ಸಿಎಂ ಕುಮಾರಸ್ವಾಮಿ ಬಜೆಟ್ ನಲ್ಲಿ ಅನ್ನದಾತನಿಗೆ ಬಂಪರ್ ಕೊಡುಗೆ

(ನ್ಯೂಸ್ ಕಡಬ) newskadaba.comಬೆಂಗಳೂರು ,ಫೆ.05.ಬೆಂಗಳೂರು :  ಮುಖ್ಯಮಂತ್ರಿ  ಎಚ್.ಡಿ ಕುಮಾರಸ್ವಾಮಿ ಬಜೆಟ್‍ ಮಂಡನೆಗೆ ಭರದ ಸಿದ್ಧತೆ ಕೈಗೊಂಡಿದ್ದಾರೆ. ಇದೇ ವೇಳೆ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ರೈತರಿಗೆ  ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ.  ಈ ಬಾರಿ ರೈತಪರ ಬಜೆಟ್‌ ಮಂಡಿಸಲು ಮುಖ್ಯಮಂತ್ರಿ ಭರದ ಸಿದ್ಧತೆ ಕೈಗೊಂಡಿದ್ದು, ರೈತರ ಬೆಳೆಸಾಲ ಯೋಜನೆಗೆ ಬಾಕಿ ಉಳಿದಿರುವ ಎಲ್ಲ ಹಣವನ್ನೂ ಹಂಚಿಕೆ ಮಾಡುವ ಪ್ರಯತ್ನದಲ್ಲಿದ್ದಾರೆ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಬಾರಿಗೆ ಮಂಡಿಸಿದ್ದ ಬಜೆಟ್‌ ಗಾತ್ರ 2.18 ಲಕ್ಷ

ಸಿಎಂ ಕುಮಾರಸ್ವಾಮಿ ಬಜೆಟ್ ನಲ್ಲಿ ಅನ್ನದಾತನಿಗೆ ಬಂಪರ್ ಕೊಡುಗೆ Read More »

ಕರ್ನಾಟಕ

ಕಡಬ ಠಾಣಾ ವ್ಯಾಪ್ತಿಗೂ ಬಂತು ಸುಸಜ್ಜಿತ ‘ಹೈವೇ ಪಟ್ರೋಲ್’ ► ಇನ್ಮುಂದೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಕಾದಿದೆ ಬಿಗ್ ಶಾಕ್..!!

(ನ್ಯೂಸ್ ಕಡಬ) newskadaba.com ಕಡಬ, ಫೆ.01. ಇನ್ಮುಂದೆ ಕಡಬ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರಿಗೆ ಸಿಂಹಸ್ವಪ್ನವಾಗಿ ಕಾಡಲಿದೆ ಹೈವೇ ಪಟ್ರೋಲ್. ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಾಚರಿಸುತ್ತಿದ್ದ ಹೈವೇ ಪಟ್ರೋಲ್ ವಾಹನಗಳು ಇದೀಗ ತಾಲೂಕು ಕೇಂದ್ರಕ್ಕೂ ಕಾಲಿಟ್ಟಿದ್ದು, ಸರಕಾರವು ಸುಸಜ್ಜಿತ ಸೌಲಭ್ಯಗಳನ್ನು ಹೊಂದಿರುವ ನೂತನ ಇನ್ನೋವಾ ಕ್ರಿಸ್ಟಾ ಹೈವೇ ಪಟ್ರೋಲ್ ವಾಹನವನ್ನು ಕಡಬ ಠಾಣೆಗೆ ನೀಡಲಾಗಿದೆ. ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಸವಾರಿ, ಟ್ರಿಪಲ್ ರೈಟ್, ಸೀಟ್ ಬೆಲ್ಟ್ ಧರಿಸದೆ ಕಾರು ಚಾಲನೆ, ಚಾಲನೆಯಲ್ಲಿ ಮದ್ಯ ಸೇವನೆ

ಕಡಬ ಠಾಣಾ ವ್ಯಾಪ್ತಿಗೂ ಬಂತು ಸುಸಜ್ಜಿತ ‘ಹೈವೇ ಪಟ್ರೋಲ್’ ► ಇನ್ಮುಂದೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಕಾದಿದೆ ಬಿಗ್ ಶಾಕ್..!! Read More »

ಕರ್ನಾಟಕ

ಎಲ್ಲಾ ಶಾಲೆಗಳ ಮುಂದೆ ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕದ ಮಾಹಿತಿ ಫಲಕ ಕಡ್ಡಾಯ ► ಹೈಕೋರ್ಟ್ ಆದೇಶ

(ನ್ಯೂಸ್ ಕಡಬ) newskadaba.com.ಬೆಂಗಳೂರು, ಜ.24. ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕದ ಮಾಹಿತಿಯಿರುವ ಫಲಕಗಳನ್ನು ಎಲ್ಲಾ ಶಾಲೆಗಳ ಮುಂದೆ ಅಳವಡಿಸುವ ಸಲುವಾಗ ಸುತ್ತೋಲೆ ಹೊರಡಿಸಲು ಎರಡು ವಾರಗಳ ಗಡುವು ನೀಡಲಾಗಿದೆ. 2015ರಲ್ಲಿಯೇ ಶುಲ್ಕ ಮಾಹಿತಿ ಫಲಕ ಕಡ್ಡಾಯಗೊಳಿಸಿ ಹೊರಡಿಸಿರುವ ಸುತ್ತೋಲೆಯನ್ನು ಎರಡು ವಾರಗಳಲ್ಲಿ ಅನುಷ್ಠಾನಗೊಳಿಸಿ ಆ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ವಕೀಲ ಎನ್‌ಪಿ ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌. ನಾರಾಯಣ ಸ್ವಾಮಿ ಮತ್ತು

ಎಲ್ಲಾ ಶಾಲೆಗಳ ಮುಂದೆ ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕದ ಮಾಹಿತಿ ಫಲಕ ಕಡ್ಡಾಯ ► ಹೈಕೋರ್ಟ್ ಆದೇಶ Read More »

ಕರ್ನಾಟಕ
Scroll to Top