ಕರ್ನಾಟಕ

Breaking news ದ.ಕ.ದ ಓರ್ವ ಸೇರಿ ರಾಜ್ಯದಲ್ಲಿ 7 ಮಂದಿಗೆ ಕೊರೋನ ಸೋಂಕು ದೃಢ

ದ.ಕ.ದ ಓರ್ವ ಸೇರಿ ರಾಜ್ಯದಲ್ಲಿ 7 ಮಂದಿಗೆ ಕೊರೋನ ಸೋಂಕು ದೃಢ ಬೆಂಗಳೂರು, ಎ. 21: ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 7 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 415ಕ್ಕೆ ಏರಿಕೆಯಾಗಿದೆ. ವಿಜಯಪುರ 3, ಕಲಬುರಗಿ 3, ದ.ಕ.ದ ಓರ್ವರಿಗೆ ಸೋಂಕು ದೃಢಪಟ್ಟಿದೆ. ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ 67 ವರ್ಷದ ವೃದ್ಧೆಗೆ ಸೋಂಕು ದೃಢಪಟ್ಟಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Breaking news ದ.ಕ.ದ ಓರ್ವ ಸೇರಿ ರಾಜ್ಯದಲ್ಲಿ 7 ಮಂದಿಗೆ ಕೊರೋನ ಸೋಂಕು ದೃಢ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

Breaking news ಕಲಬುರಗಿಯಲ್ಲಿ ಕೊರೋನ ಸೋಂಕಿಗೆ 4 ನೇ ಬಲಿ: 80 ವರ್ಷದ ವೃದ್ಧ ಮೃತ್ಯು

ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿಕೆ ಕಲಬುರಗಿ, ಎ.21: ಕೊರೋನ ಸೋಂಕಿಗೆ ಜಿಲ್ಲೆಯ 80 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇದರಿಂದ ಮೃತಪಟ್ಟವರ ಸಂಖ್ಯೆ ‌ನಾಲ್ಕಕ್ಕೇರಿದಂತಾಗಿದೆ. ಒಟ್ಟು ರಾಜ್ಯದಲ್ಲಿ ಕೊರೋನದಿಂದ 17 ಮಂದಿ ಸಾವನ್ನಪ್ಪಿದ್ದಾರೆ. ಮೂರು ವರ್ಷಗಳಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧನಿಗೆ ಜ್ವರ ‌ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ ಅವರ ವರದಿ ಬಂದಿದ್ದು, ಕೋವಿಡ್ 19 ಪಾಸಿಟಿವ್ ಇರುವುದು ಗೊತ್ತಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

Breaking news ಕಲಬುರಗಿಯಲ್ಲಿ ಕೊರೋನ ಸೋಂಕಿಗೆ 4 ನೇ ಬಲಿ: 80 ವರ್ಷದ ವೃದ್ಧ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೂ ಬಂತು ಥರ್ಮಲ್ ಸ್ಕ್ಯಾನರ್ ➤ ಇನ್ಮುಂದೆ ಆರೋಗ್ಯ ತಪಾಸಣೆ ಬಲು ಸುಲಭ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಕಡಬ, ಎ.21. ಕೊರೋನಾ ವೈರಸ್‌ ನ್ನು ಪತ್ತೆಹಚ್ಚುವ ಸಲುವಾಗಿ ಈ ಹಿಂದೆ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಲಭ್ಯವಿದ್ದ ಥರ್ಮಲ್ ಸ್ಕ್ಯಾನರ್‌ನ್ನು ಕಡಬ ಸಮಯ ದಾಯ ಆರೋಗ್ಯ ಕೇಂದ್ರಕ್ಕೆ ಒದಗಿಸಲಾಗಿದೆ. ಪುತ್ತೂರು ತಾಲೂಕು ಆಸ್ಪತ್ರೆ, ಕಡಬ ಮತ್ತು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ, ಮತ್ತು ಹತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ ಒಂದರಂತೆ ಒಟ್ಟು 13 ಸ್ಯಾನರ್ ಗಳನ್ನು ನೀಡಲಾಗಿದೆ. ಇದುವರೆಗೆ ಥರ್ಮಲ್ ಸ್ಯ್ಯಾನರ್ ಇಲ್ಲದೆ ಜನರ ತಪಾಸಣೆಗೆ ಅಡ್ಡಿಯಾಗುತ್ತಿದ್ದು, ಇದೀಗ

ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೂ ಬಂತು ಥರ್ಮಲ್ ಸ್ಕ್ಯಾನರ್ ➤ ಇನ್ಮುಂದೆ ಆರೋಗ್ಯ ತಪಾಸಣೆ ಬಲು ಸುಲಭ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರು ಘಟನೆ ಮಾಸುವ ಮುನ್ನವೇ ಬಿ.ಸಿ ರೋಡ್ ನಲ್ಲಿ ಅಂತಹದೇ ಘಟನೆ ➤ ಲಾಕ್‌ಡೌನ್ ಉಲ್ಲಂಘನೆ ಪ್ರಶ್ನಿಸಿದ್ದಕ್ಕೆ ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.20. ಲಾಕ್‌ಡೌನ್ ಇದ್ದರೂ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದುದನ್ನು ಪ್ರಶ್ನಿಸಿದ ಸರಕಾರಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಸೋಮವಾರದಂದು ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ಪುರಸಭೆಯ ಪರಿಸರ ಅಭಿಯಂತರರಾದ ವೀರಪ್ಪ ಕೆ. ಎಂಬವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳೊಂದಿಗೆ ಕರ್ತವ್ಯದ ನಿಮಿತ್ತ ಕಾರಿನಲ್ಲಿ ಬಂಟ್ವಾಳ ಕಸಬ ಗ್ರಾಮದ ಬಾರೆಕಾಡು ಎಂಬಲ್ಲಿಗೆ ತಲುಪಿದಾಗ ಮಧ್ಯಾಹ್ನ 1.00 ಗಂಟೆಗೆ ರಫೀಕ್ ಎಂಬವರ ಅಂಗಡಿ ತೆರೆದಿದ್ದು, ಅಂಗಡಿಯ ಎದುರು ಸುಮಾರು 5 ರಿಂದ 10 ಜನರು

ಬೆಂಗಳೂರು ಘಟನೆ ಮಾಸುವ ಮುನ್ನವೇ ಬಿ.ಸಿ ರೋಡ್ ನಲ್ಲಿ ಅಂತಹದೇ ಘಟನೆ ➤ ಲಾಕ್‌ಡೌನ್ ಉಲ್ಲಂಘನೆ ಪ್ರಶ್ನಿಸಿದ್ದಕ್ಕೆ ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಮತ್ತೆ 18 ಮಂದಿಗೆ ಕೊರೋನ ಸೋಂಕು ದೃಢ: 400ರ ಗಟಿ ದಾಟಿದ ಸೋಂಕಿತರ ಸಂಖ್ಯೆ

ಬೆಂಗಳೂರು, ಎ.20: ರಾಜ್ಯದಲ್ಲಿ ಕೊರೋನ ಆರ್ಭಟ ಹೆಚ್ಚಾಗಿದ್ದು, ರವಿವಾರ ಬೆಳಗ್ಗೆ 5ರಿಂದ ಸೋಮವಾರ ಸಂಜೆ 5ರವರೆಗೆ 18 ಮಂದಿಗೆ ಕೊರೋನ ಸೋಂಕು ದೃಢಪಟ್ಟಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 408ಕ್ಕೆ ಏರಿಕೆಯಾಗಿದೆ. ವಿಜಯಪುರ 11, ಕಲಬುರಗಿ 5, ಬೀದರ್ ಹಾಗೂ ಗದಗ ತಲಾ ಒಂದರಂತೆ ಒಟ್ಟು 18 ಮಂದಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೊರೋನ ವೈರಸ್‌ಗೆ 16 ಮಂದಿ ಬಲಿಯಾಗಿದ್ದು, 112 ಮಂದಿ ಸೋಂಕಿನಿಂದ ಸಂಪೂರ್ಣ

ರಾಜ್ಯದಲ್ಲಿ ಮತ್ತೆ 18 ಮಂದಿಗೆ ಕೊರೋನ ಸೋಂಕು ದೃಢ: 400ರ ಗಟಿ ದಾಟಿದ ಸೋಂಕಿತರ ಸಂಖ್ಯೆ Read More »

ಕರ್ನಾಟಕ

ಬೆಂಗಳೂರು: ಕೊರೋನಾ ವಾರಿಯರ್ ತಂಡದ ಮೇಲೆ ಕಿಡಿಗೇಡಿಗಳ ದಾಳಿ ➤ 54 ಪುಂಡರ ಬಂಧನ, ಮತ್ತಷ್ಟು ಆರೋಪಿಗಳಿಗಾಗಿ ಶೋಧ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.20. ಬೆಂಗಳೂರಿನ ಪಾದರಾಯನಪುರ ಎಂಬಲ್ಲಿ ಕೊರೋನಾ ವಾರಿಯರ್ ತಂಡದ ಮೇಲೆ ದಾಳಿ ನಡೆಸಿದ 54 ಕಿಡಿಗೇಡಿಗಳನ್ನು ಬಂಧಿಸಲಾಗಿದ್ದು, ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಇಂದು ಭೇಟಿ ನೀಡಿದ ಗೃಹಸಚಿವರು, ಪಾದರಾಯನಪುರದಲ್ಲಿ ವೈದ್ಯಕೀಯ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಲಾಗಿದ್ದು, ಘಟನೆ ನಡೆದು ಕೆಲವೇ ಗಂಟೆಗಳಲ್ಲಿ 54 ಮಂದಿಯನ್ನು ಬಂಧಿಸಲಾಗಿದೆ. ಇನ್ನುಳಿದವರನ್ನು

ಬೆಂಗಳೂರು: ಕೊರೋನಾ ವಾರಿಯರ್ ತಂಡದ ಮೇಲೆ ಕಿಡಿಗೇಡಿಗಳ ದಾಳಿ ➤ 54 ಪುಂಡರ ಬಂಧನ, ಮತ್ತಷ್ಟು ಆರೋಪಿಗಳಿಗಾಗಿ ಶೋಧ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಪ್ರಿಲ್ 21ರ ಮಧ್ಯರಾತ್ರಿಯವರೆಗೆ ಲಾಕ್ ಡೌನ್ ನಿರ್ಬಂಧಗಳಲ್ಲಿ ಸಡಿಲಿಕೆ ಇಲ್ಲ

ಬೆಂಗಳೂರು, ಎ.20: ಎಪ್ರಿಲ್ 21 ರ ಮಧ್ಯರಾತ್ರಿಯವರೆಗೆ ಕೊರೊನಾ ಲಾಕ್ ಡೌನ್ ನಿರ್ಬಂಧಗಳಲ್ಲಿ ಸಡಿಲಿಕೆ ಇರುವುದಿಲ್ಲ ಎಂದು ರಾಜ್ಯ ಸರಕಾರ ತಿಳಿಸಿದೆ. ಈ ಕುರಿತಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರು, ಡಿಸಿಗಳಿಗೆ ಸೂಚನೆ ನೀಡಲಾಗಿದ್ದು, ಎಪ್ರಿಲ್ 14ರಂದು ಕೇಂದ್ರ ಗೃಹ ಇಲಾಖೆ ಸೂಚಿಸಿರುವ ಲಾಕ್ ಡೌನ್ ನಿಯಮಾವಳಿಗಳನ್ನು ಎಪ್ರಿಲ್ 21ರ ಮಧ್ಯರಾತ್ರಿಯವರೆಗೆ ವಿಸ್ತರಿಸುವಂತೆ ಸೂಚಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಾಕ್ ಡೌನ್ 2.0, ವಿಸ್ತರಣೆ ಸಂದರ್ಭ ಎಪ್ರಿಲ್ 20ರ ನಂತರ ಪರಿಸ್ಥಿತಿಗೆ ಅನುಗುಣವಾಗಿ ಲಾಕ್ ಡೌನ್ ವಿಸ್ತರಿಸುವ, ಸಡಿಲಗೊಳಿಸುವ

ಎಪ್ರಿಲ್ 21ರ ಮಧ್ಯರಾತ್ರಿಯವರೆಗೆ ಲಾಕ್ ಡೌನ್ ನಿರ್ಬಂಧಗಳಲ್ಲಿ ಸಡಿಲಿಕೆ ಇಲ್ಲ Read More »

ಕರ್ನಾಟಕ

ರಾಜ್ಯದಲ್ಲಿ ಮತ್ತೆ ಐವರಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 395ಕ್ಕೆ ಏರಿಕೆ

ಬೆಂಗಳೂರು, ಎ.20: ರಾಜ್ಯದಲ್ಲಿ ಮಾರಕ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಜನತೆ ತಲ್ಲಣಗೊಂಡಿದ್ದಾರೆ. ದಿನೇ ದಿನೇ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದು ಮತ್ತಷ್ಟು ಆತಂಕ ತಂದೊಡ್ಡಿದೆ. ಏತನ್ಮಧ್ಯೆ, ರಾಜ್ಯದಲ್ಲಿ ಮತ್ತೆ ಐವರಲ್ಲಿ ಕೊರೋನ ಸೋಂಕು ಪಾಸಿಟಿವ್ ಬಂದಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 395ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಬೆಳಗ್ಗೆಯವರೆಗೆ ಮತ್ತೆ ಐವರಲ್ಲಿ ಮಾರಕ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 395ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಮತ್ತೆ ಐವರಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 395ಕ್ಕೆ ಏರಿಕೆ Read More »

ಕರ್ನಾಟಕ

ಪೊಲೀಸರನ್ನು ಕಂಡು ಸ್ಕೂಟಿಯಲ್ಲಿ ಪರಾರಿಯಾದ ಬಾಲಕ ➤ ಬೆನ್ನಟ್ಟಿ ಹಿಡಿದ ಕಡಬ ಪೊಲೀಸರು ಮಾಡಿದ್ದೇನು..?

(ನ್ಯೂಸ್ ಕಡಬ) newskadaba.com ಕಡಬ, ಎ.20. ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಸ್ಕೂಟರ್ ನಿಲ್ಲಿಸದೆ ಪರಾರಿಯಾದ ಬಾಲಕನನ್ನು ಜೀಪ್ ನಲ್ಲಿ ಬೆನ್ನಟ್ಟಿ ಹಿಡಿದ ಪೊಲೀಸರು ದಂಡ ವಿಧಿಸಿದ್ದಾರೆ.   ಸುಂಕದಕಟ್ಟೆಯ ಬಾಲಕ‌ನೋರ್ವ ಸ್ಕೂಟರ್ ನಲ್ಲಿ ಕಡಬಕ್ಕೆ ಆಗಮಿಸಿದ್ದು, ಪೊಲೀಸರನ್ನು ಕಂಡೊಡನೆ ಮಹಾಗಣಪತಿ ದೇವಸ್ಥಾನ ರಸ್ತೆಯ ಮೂಲಕ ಪರಾರಿಯಾಗಿದ್ದಾನೆ. ತಕ್ಷಣವೇ ಕಡಬ ಪೊಲೀಸರು ಬಾಲಕನನ್ನು ಬೆನ್ನಟ್ಟಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪೊಲೀಸ್ ಜೀಪ್ ಚರಂಡಿಗಿಳಿದಿದೆ. ಇದನ್ನು ಕಂಡ ಬಾಲಕ ಸ್ಕೂಟರನ್ನು ಅಲ್ಲೇ ಬಿಟ್ಟು ಕೀ ತೆಗೆದುಕೊಂಡು ಪರಾರಿಯಾಗಿದ್ದಾನೆ.

ಪೊಲೀಸರನ್ನು ಕಂಡು ಸ್ಕೂಟಿಯಲ್ಲಿ ಪರಾರಿಯಾದ ಬಾಲಕ ➤ ಬೆನ್ನಟ್ಟಿ ಹಿಡಿದ ಕಡಬ ಪೊಲೀಸರು ಮಾಡಿದ್ದೇನು..? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೊರೋನಾ ಸೋಂಕಿತರ ಫೊಟೋ ಶೇರ್ ಮಾಡಿದರೆ ಕಠಿಣ ಕ್ರಮ ➤ ಪೊಲೀಸ್ ಇಲಾಖೆಯಿಂದ ಎಚ್ಚರಿಕೆ..!!

(ನ್ಯೂಸ್ ಕಡಬ) newskadaba.com ಮಂಗಳೂರು, ಎ.19. ಈಗಾಗಲೇ ಮಹಾಮಾರಿ ಕೊರೊನ ಖಾಯಿಲೆಗೆ ಬಂಟ್ವಾಳ ಮೂಲದ ಮಹಿಳೆಯೋರ್ವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕೆಲವರು ಮಹಿಳೆಯ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಈ ರೀತಿ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದು ಕಾನೂನಿನ ಅಡಿಯಲ್ಲಿ ಅಪರಾಧವಾಗಿದ್ದು, ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿದು ಬಂದಿರುತ್ತದೆ. ಈಗಾಗಲೇ ಇಲಾಖೆಯು ಮಹಿಳೆಯ ಭಾವಚಿತ್ರ ಹರಡುತ್ತಿರುವವರ ಮಾಹಿತಿ ಕಲೆ ಹಾಕುತ್ತಿದ್ದು, ಸದ್ಯ ಅಂಥವರನ್ನು ಕಾನೂನಿನ ಅಡಿಯಲ್ಲಿ ಒಳಪಡಿಸುವ ಪ್ರಕ್ರಿಯೆ

ಕೊರೋನಾ ಸೋಂಕಿತರ ಫೊಟೋ ಶೇರ್ ಮಾಡಿದರೆ ಕಠಿಣ ಕ್ರಮ ➤ ಪೊಲೀಸ್ ಇಲಾಖೆಯಿಂದ ಎಚ್ಚರಿಕೆ..!! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top