ಕರ್ನಾಟಕ

ಮಂಗಳೂರು: ಹಲವು ಕಡೆ ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪಿಯ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ.11. ಹಲವಾರು ಕಳ್ಳತನಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಓರ್ವ ಕಳ್ಳನನ್ನು ಬಂಧಿಸುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ರಾಜೇಶ್ ನಾಯ್ಕ(42) ಎಂದು ಗುರುತಿಸಲಾಗಿದೆ. ಮೂಲತಃ ಧಾರವಾಡ ನಿವಾಸಿಯಾಗಿರುವ ಈತ ಪ್ರಸ್ತುತ ಉಡುಪಿ ಇಂದ್ರಾಳಿ ದುರ್ಗಾನಗರದಲ್ಲಿ ವಾಸಿಸುತ್ತಿದ್ದನು ಎನ್ನಲಾಗಿದೆ. ಈತ ಹಲವು ಕಡೆ ಕಳ್ಳತನ ನಡೆಸಿದ್ದು, ಕುಳಾಯಿ ಗ್ರಾಮದ ರವಿಶೆಟ್ಟಿ, ಈಡ್ಯಾ ಗ್ರಾಮದ ಗುಡ್ಡೆ ಕೊಪ್ಪಳ ರಾಮಂಜನೇಯ ಭಜನಾ ಮಂದಿರ ಹಾಗೂ ಸತೀಶ್ ಸುವರ್ಣ ಅವರ ಕುಟುಂಬಕ್ಕೆ ಸೇರಿದ ದೈವಸ್ಥಾನದಿಂದ ರಾಜೇಶ್ […]

ಮಂಗಳೂರು: ಹಲವು ಕಡೆ ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪಿಯ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗುತ್ತಿಗಾರು: ಗ್ರಾಮಭಾರತ ತಂಡದ ಸದಸ್ಯರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ

(ನ್ಯೂಸ್ ಕಡಬ) newskadaba.com ಗುತ್ತಿಗಾರು, ಜ. 11. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಒಂದನೇ ವಾರ್ಡ್ ನಿಂದ ಗೆಲುವು ಸಾಧಿಸಿದ ಗ್ರಾಮಭಾರತ ತಂಡದ ಸದಸ್ಯರು ರವಿವಾರದಂದು ಬಳ್ಳಕ ಪ್ರದೇಶದ ಜನರಿಂದ ಅಹವಾಲುಗಳನ್ನು ಸ್ವೀಕರಿಸಿದರು. ನೂತನವಾದ ಆಯ್ಕೆಯಾದ ಗ್ರಾ.ಪಂ. ಸದಸ್ಯರು ಈ ಜನರ ಸಮಸ್ಯೆ ಹಾಗೂ ಅಭಿವೃದ್ದಿ ಕಾರ್ಯಗಳನ್ನು ಹಂತ ಹಂತವಾಗಿ ಅನಿಷ್ಠಾನಗೊಳಿಸಲು ಎಲ್ಲರ ಸಹಕಾರದೊಂದಿಗೆ ಪ್ರಯತ್ನಿಸುವುದಾಗಿ ತಿಳಿಸಿದರು. ಈ ಪ್ರದೇಶದ ಜನರಿಗೆ ಕುಡಿಯುವ ನೀರಿನ ಸಮಸ್ಯೆ, ಬಸ್ ಸಮಸ್ಯೆ ನೆಟ್ವರ್ಕ್ ಸಮಸ್ಯೆ ಮೊದಲಾದವುಗಳನ್ನು ಈಡೇರಿಸುವಂತೆ ಒತ್ತಾಯಿಸಿದರು‌. ಈ ಸಂದರ್ಭ

ಗುತ್ತಿಗಾರು: ಗ್ರಾಮಭಾರತ ತಂಡದ ಸದಸ್ಯರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ Read More »

ಕರಾವಳಿ, ಕರ್ನಾಟಕ

ಮೀನಾಡಿ: ಯುವ ಬ್ರಿಗೇಡ್ ವತಿಯಿಂದ ಸ್ವಚ್ಚತಾ ಕಾರ್ಯ

 (ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜ.11. ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಶಾಲೆಯಲ್ಲಿ ಯುವ ಬ್ರೀಗೇಡ್ ಕಡಬ ವತಿಯಿಂದ ಸ್ವಚ್ಚತೆ ಹಾಗೂ ಶ್ರಮದಾನ ರವಿವಾರ ನಡೆಯಿತು. ಶಾಲಾ ವಠಾರ ಸ್ವಚ್ಚತೆ, ಹುಲ್ಲು ಕತ್ತರಿಸುವುದು ಹಾಗೂ ಶೌಚಾಲಯದ ಗೋಡೆಗೆ ಬಣ್ಣ ಬಳಿಯಲಾಯಿತು. ವಿಶೇಷ ಎಂದರೆ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವ ಬ್ರೀಗೇಡ್ ಸದಸ್ಯ ನೂಜಿಬಾಳ್ತಿಲ ಗ್ರಾಮದ ನೀರಾರಿ ಕಿಶೋರ್ ಹಾಗೂ ಭವ್ಯಾ ದಂಪತಿ ಮದುವೆಯಾದ ಮರುದಿನವೇ ಈರ್ವರು ಕೂಡಾ ವಾರದ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡು  ಗಮನ

ಮೀನಾಡಿ: ಯುವ ಬ್ರಿಗೇಡ್ ವತಿಯಿಂದ ಸ್ವಚ್ಚತಾ ಕಾರ್ಯ Read More »

ಕರಾವಳಿ, ಕರ್ನಾಟಕ

ನೂಜಿಬಾಳ್ತಿಲ: ಒರುಂಬಾಲು ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

 (ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜ.11. ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಒರುಂಬಾಲು ಉಮಾಮಹೇಶ್ವರ ದೇವಸ್ಥಾನದಲ್ಲಿ ರವಿವಾರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ಗಣಹೋಮ ಕಾರ್ಯಗಳು ಕ್ಷೇತ್ರದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೆಶ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು. ಶನಿವಾರ ಊರ ಭಕ್ತಾಧಿಗಳಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು. ರವಿವಾರ ಬೆಳಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ಮಹಾಗಣಪತಿ ಹೋಮ, ಪಂಚವಿಂಶತಿ ಕಲಶಪೂಜೆ ನಡೆದು ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ದೇವರಿಗೆ

ನೂಜಿಬಾಳ್ತಿಲ: ಒರುಂಬಾಲು ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ Read More »

ಕರಾವಳಿ, ಕರ್ನಾಟಕ

ಮಂಗಳೂರು: ಸತ್ತು ಬಿದ್ದಿರುವ ಮೂರು ಕಾಗೆಗಳ ಮೃತದೇಹ ಪತ್ತೆ ➤ ಹಕ್ಕಿ ಜ್ವರದ ಭೀತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 11. ದೇಶದಾದ್ಯಂತ ಕೊರೊನಾ ಆತಂಕದ ನಡುವೆಯೇ ಹಕ್ಕಿ ಜ್ವರದ ಆತಂಕವು ಮೂಡಿದ್ದು, ಇದೇ ಸಂದರ್ಭದಲ್ಲಿ ಮಂಗಳೂರು ವಾಮಂಜೂರಿನ ಪಚ್ಚನಾಡಿ ಎಂಬಲ್ಲಿ ಕಾಗೆಗಳು ಸತ್ತು ಬಿದ್ದಿರುವುದು ಪತ್ತೆಯಾಗಿದ್ದು, ಜನರಲ್ಲಿ ಆತಂಕವನ್ನುಂಟು ಮಾಡಿದೆ. ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಸಮೀಪ ರುದ್ರಭೂಮಿಗೆ ಹೋಗುವ ದಾರಿಯಲ್ಲಿ ಮೂರು ಕಾಗೆಗಳು ಸತ್ತು ಬಿದ್ದ ದೃಶ್ಯ ಇಂದು ಬೆಳಗ್ಗೆ ಸ್ಥಳೀಯರಿಗೆ ಕಂಡು ಬಂದಿದೆ. ಇದೀಗ ಮಂಗಳೂರಿನಲ್ಲೂ ಕಾಗೆ ಸತ್ತು ಬಿದ್ದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಮಂಗಳೂರು: ಸತ್ತು ಬಿದ್ದಿರುವ ಮೂರು ಕಾಗೆಗಳ ಮೃತದೇಹ ಪತ್ತೆ ➤ ಹಕ್ಕಿ ಜ್ವರದ ಭೀತಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜ. 13ರಂದು ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್…! ➤ ಶಾಸಕರಿಗೆ ಒಲಿಯಲಿದೆ ಮಂತ್ರಿಭಾಗ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 11. ಹಲವು ತಿಂಗಳುಗಳಿಂದ ಕುತೂಹಲ ಮೂಡಿಸಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು, ಅದರಂತೆ ಜ. 13ರಂದು ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಬಿಜೆಪಿ ವರಿಷ್ಠರ ಸೂಚನೆಯಂತೆ ಭಾನುವಾರ ಮುಖ್ಯಮಂತ್ರಿಯವರು ದೆಹಲಿಗೆ ಹೋಗಿ ಬಂದಿದ್ದು, ಏಳು ಸಚಿವ ಸ್ಥಾನಗಳ ಭರ್ತಿಗೆ ಗ್ರೀನ ಸಿಗ್ನಲ್ ದೊರೆತಿದೆ. ಆದರೆ ಯಾರಿಗೆ ಶಾಸಕರಾಗುವ ಅದೃಷ್ಟ ದೊರೆಯಲಿದೆ ಎನ್ನುವುದು ಇಂದು ತಿಳಿಯಲಿದೆ. ಏಳು ಶಾಸಕರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಸೂಚಿಸಿದ್ದು,

ಜ. 13ರಂದು ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್…! ➤ ಶಾಸಕರಿಗೆ ಒಲಿಯಲಿದೆ ಮಂತ್ರಿಭಾಗ್ಯ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಬ್ರಹ್ಮಣ್ಯ ದೇಗುಲದ ಆಸ್ತಿಯ ರಕ್ಷಣೆ ಮಾಡುವಂತೆ ವ್ಯವಸ್ಥಾಪನಾ ಸಮಿತಿ ಸದಸ್ಯ ಕಿಶೋರ್ ಶಿರಾಡಿ ಮನವಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ. 11. ರಾಜ್ಯದ ಪ್ರಮುಖ ಶ್ರದ್ದಾಕೇಂದ್ರವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒಳಪಟ್ಟ  ಜಾಗವನ್ನು ಯಾವುದೇ ಇಲಾಖೆ ಅಥವಾ ಸಂಸ್ಥೆಗಳಿಗೆ ಪರಭಾರೆ ಮಾಡುವುದು ಸರಿಯಲ್ಲ. ದೇವಸ್ಥಾನದ ಜಾಗವನ್ನು ಉಳಿಸಿಕೊಂಡು ದೇವಸ್ಥಾನದ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಒತ್ತಾಯಿಸಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕಿಶೋರ್ ಶಿರಾಡಿಯವರು ಮನವಿ ಮಾಡಿದ್ದಾರೆ.     ಯಾವುದೇ ಇಲಾಖೆಗೆ ಪರಭಾರೆ ಮಾಡಿದರೂ ಅದು ದೇವಸ್ಥಾನದ ಆಸ್ತಿಯಾಗಿ ಇರುವುದಿಲ್ಲ, ಆದ್ದರಿಂದ ದೇವಾಲಯದ ಅಭಿವೃದ್ದಿಗೆ ಮುಂದಿನ

ಸುಬ್ರಹ್ಮಣ್ಯ ದೇಗುಲದ ಆಸ್ತಿಯ ರಕ್ಷಣೆ ಮಾಡುವಂತೆ ವ್ಯವಸ್ಥಾಪನಾ ಸಮಿತಿ ಸದಸ್ಯ ಕಿಶೋರ್ ಶಿರಾಡಿ ಮನವಿ Read More »

ಕರಾವಳಿ, ಕರ್ನಾಟಕ

ವಿಟ್ಲ: ಕಾಲು ಜಾರಿಗೆ ಕೆರೆಗೆ ಬಿದ್ದು ಮಗು ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ, ಜ. 11. ತೋಟದಲ್ಲಿ ಇತರ ಮಕ್ಕಳ ಜೊತೆ ಆಟ ಆಡುತ್ತಿದ್ದ ವೇಳೆ ತೋಟದ ಮಧ್ಯದಲ್ಲಿರುವ ಕೆರೆಗೆ ಬಿದ್ದು ಬಾಲಕಿಯೋರ್ವಳು ಮೃತಪಟ್ಟ ಘಟನೆ ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಸೆರ್ಕಳ ಎಂಬಲ್ಲಿ ನಡೆದಿದೆ.   ಮೃತ ಬಾಲಕಿಯನ್ನು ಕೊಳ್ನಾಡು ಗ್ರಾಮದ ಸೆರ್ಕಳ ನಿವಾಸಿ ಹಂಝ ಎ ಅವರ ಪುತ್ರಿ ಸರಪುನ್ನಿಸಾ (೪) ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳ ಜೊತೆ ಈಕೆ ಅಬ್ಬಾಸ್‌ ಬಾಕಿಮಾರು ಎಂಬವರ ತೋಟಕ್ಕೆ ಆಟ ಆಡಲು ತೆರಳಿದ್ದು, ಈ ವೇಳೆ

ವಿಟ್ಲ: ಕಾಲು ಜಾರಿಗೆ ಕೆರೆಗೆ ಬಿದ್ದು ಮಗು ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಟ್ಟಂಪಾಡಿ: ಭಾರೀ ಮಳೆಗೆ ಮನೆ ಮೇಲೆ ಬಿದ್ದ ಮರ

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 10. ಕಳೆದ ಎರಡು ಮೂರು ದಿನಗಳಿಂದ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು ಪರಿಣಾಮ ಬೆಟ್ಟಂಪಾಡಿಯ ಮಿತ್ತಡ್ಕ ಎಂಬಲ್ಲಿ ಕುಸುಮಾ ಎಂಬವರ ಮನೆ ಮೇಲೆ ಮರವೊಂದು ಬಿದ್ದ ಘಟನೆ ನಡೆದಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಬೆಟ್ಟಂಪಾಡಿ: ಭಾರೀ ಮಳೆಗೆ ಮನೆ ಮೇಲೆ ಬಿದ್ದ ಮರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ➤ ಮೂವರ ದುರ್ಮರಣ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜ. 10. ಹುಂಡೈ ಕಾರು ಮತ್ತು ಇಕೋ ಸ್ಪೋರ್ಟ್ಸ್ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟ ಘಟನೆ ತರೀಕೆರೆ ತಾಲೂಕಿನ ರಂಗೇನಹಳ್ಳಿಯಲ್ಲಿ ನಡೆದಿದೆ. ಮೃತಪಟ್ಟವರನ್ನು ಅನಿಲ್ (35), ಸುಜಿತಾ (30) ಹಾಗೂ ನಾಗೇಂದ್ರ (26) ಎಂದು ಗುರುತಿಸಲಾಗಿದೆ. ಕುಂದಾಪುರದಿಂದ ಬೆಂಗಳೂರಿನ ಕಡೆ ಬರುತ್ತಿದ್ದ ಹುಂಡೈ ಕಾರು ಹಾಗೂ ಬೆಂಗಳೂರಿನಿಂದ ತೀರ್ಥಹಳ್ಳಿಗೆ ತೆರಳುತ್ತಿದ್ದ ಇಕೋ ಸ್ಪೋರ್ಟ್ಸ್ ಕಾರು ರಂಗೇನಹಳ್ಳಿ ಬಳಿ ಮುಖಾಮುಖಿ ಡಿಕ್ಕಿಯಾಗಿವೆ. ಈ ಕುರಿತು ಲಕ್ಕವಳ್ಳಿ ಪೊಲೀಸ್

ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ➤ ಮೂವರ ದುರ್ಮರಣ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top