ಕರ್ನಾಟಕ

ಬಂಟ್ವಾಳ: ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 13. ತಾಲೂಕಿನ ಮಾರ್ನಬೈಲು ಸಮೀಪ ಪೆಲತ್ತಕಟ್ಟೆ ಎಂಬಲ್ಲಿ ಸೋಮವಾರದಂದು ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರನ್ನು ಬೊಳ್ಳಾಯಿ ನಿವಾಸಿ ಇಮ್ರಾನ್(22) ಹಾಗೂ ಮುಬಶ್ಶಿರ್ (12) ಎಂದು ಗುರುತಿಸಲಾಗಿದೆ. ಮೂಲತಃ ಕಾಸರಗೋಡು ನಿವಾಸಿಯಾಗಿರುವ ಇಮ್ರಾನ್ ತನ್ನ ಸಂಬಂಧಿ ಹುಡುಗ ಮುಬಶ್ಶಿರ್ ಜೊತೆ ಡಿಯೋ ವಾಹನದಲ್ಲಿ ತೆರಳುತ್ತಿದ್ದ ವೇಳೆ ಪೆಲತ್ತಕಟ್ಟೆ ಎಂಬಲ್ಲಿ ಎರಡು ಆಕ್ಟಿವಾ ವಾಹನಗಳ ನಡುವೆ ಸರಣ ಅಪಘಾತ ಸಂಭವಿಸಿದ್ದು, […]

ಬಂಟ್ವಾಳ: ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕುಣಿಗಲ್ ಸಮೀಪ ರಸ್ತೆ ಅಪಘಾತ ➤ ಪುತ್ತೂರಿನ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಜ.13. ರಸ್ತೆ ಅಪಘಾತದಲ್ಲಿ ಪುತ್ತೂರಿನ ಯುವಕನೋರ್ವ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಣಿಗಲ್ ಸಮೀಪ ಬುಧವಾರ ಬೆಳಗಿನ ಜಾವ ನಡೆದಿದೆ. ಮೃತ ಯುವಕನನ್ನು ಪುತ್ತೂರಿನ ಗಟ್ಟ ನಿವಾಸಿ ಬಿಲಾಲ್(20) ಎಂದು ಗುರುತಿಸಲಾಗಿದೆ. ಕುಣಿಗಲ್ ಸಮೀಪ ಈತ ಸಂಚರಿಸುತ್ತಿದ್ದ ಬೈಕ್ ಅಪಘಾತವಾಗಿದ್ದು, ಗಂಭೀರ ಗಾಯಗೊಂಡ ಯುವಕ ಮೃತಪಟ್ಟಿದ್ದಾರೆ. ಮೃತದೇಹವನ್ನು ನೆಲಮಂಗಲ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಕುಣಿಗಲ್ ಸಮೀಪ ರಸ್ತೆ ಅಪಘಾತ ➤ ಪುತ್ತೂರಿನ ಯುವಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೊನೆಗೂ ಎಸ್.ಅಂಗಾರರಿಗೆ ಸಚಿವ ಸ್ಥಾನ ಪಕ್ಕಾ..⁉️ ➤ ಶಾಸಕರ ಆಪ್ತರು ಹೇಳಿದ್ದೇನು..⁉️

(ನ್ಯೂಸ್ ಕಡಬ) newskadaba.com ಸುಳ್ಯ, ಜ.12. ಸೋಲಿಲ್ಲದ ಸರದಾರ, ಸುಳ್ಯದ ಬಂಗಾರ ಎಸ್.ಅಂಗಾರರಿಗೆ ಸಚಿವ ಸ್ಥಾನ ಪಕ್ಕಾ ಆಗಿದೆ ಎಂಬ ಮಾಹಿತಿ ಇದೀಗ ಕೇಳಿಬಂದಿದೆ. ಆರು ಬಾರಿ ಗೆದ್ದು ಸುಳ್ಯದ ಶಾಸಕರಾಗಿರುವ ಎಸ್. ಅಂಗಾರರು ನಾಳೆ ಬಿಎಸ್ ಯಡಿಯೂರಪ್ಪ ಸಂಪುಟಕ್ಕೆ ಸೇರುವುದು ಪಕ್ಕಾ ಎಂದು ಶಾಸಕರ ಆಪ್ತ ಮೂಲಗಳು ತಿಳಿಸಿದೆ. ಇದಕ್ಕೆ ಪುಷ್ಟಿ ನೀಡುವಂತೆ ಖುದ್ದು ಮುಖ್ಯಮಂತ್ರಿಯೇ ಶಾಸಕರಿಗೆ ಕರೆ ಮಾಡಿ ಬೆಂಗಳೂರಿಗೆ ಕರೆಸಿದ್ದಾರೆ.

ಕೊನೆಗೂ ಎಸ್.ಅಂಗಾರರಿಗೆ ಸಚಿವ ಸ್ಥಾನ ಪಕ್ಕಾ..⁉️ ➤ ಶಾಸಕರ ಆಪ್ತರು ಹೇಳಿದ್ದೇನು..⁉️ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಲಕ್ಷಾಂತರ ನಗದು ದೋಚಿದ ದುಷ್ಕರ್ಮಿಗಳು ➤ ರಾಜ್ಯ ರಾಜಧಾನಿಯಲ್ಲಿ ನಡೆಯಿತು ಬೆಚ್ಚಿಬೀಳಿಸುವ ಸುದ್ದಿ

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ.28. ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಲಕ್ಷಾಂತರ ನಗದು ದೋಚಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ವ್ಯವಹಾರ ನಿಮಿತ್ತ ಬಳ್ಳಾರಿಯ ಮುನೀರ್ ಎಂಬವರು ಬೆಂಗಳೂರಿಗೆ ಆಗಮಿಸಿದ್ದು, ಸೋಮವಾರ ರಾತ್ರಿ ಊರಿಗೆ ತೆರಳಲು ಬಸ್ ನಿಲ್ದಾಣಕ್ಕೆ  ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಮುನೀರ್ ಬಳಿಯಿದ್ದ 16 ಲಕ್ಷದ 60 ಸಾವಿರ ರೂ.ವನ್ನು ಕಿತ್ತು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಪೆಪ್ಪರ್ ಸ್ಪ್ರೇ ಮಾಡಿದ್ದರಿಂದ ರಸ್ತೆಯಲ್ಲೇ

ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಲಕ್ಷಾಂತರ ನಗದು ದೋಚಿದ ದುಷ್ಕರ್ಮಿಗಳು ➤ ರಾಜ್ಯ ರಾಜಧಾನಿಯಲ್ಲಿ ನಡೆಯಿತು ಬೆಚ್ಚಿಬೀಳಿಸುವ ಸುದ್ದಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕೆಲಸದವನ ಲವ್ವಿಡವ್ವಿಗೆ ಮನಸೋತ ಮಾಯಾವಿ ➤ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಪಾಪಿ ಪತ್ನಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.11. ಮನೆಯ ಕೆಲಸದವನ ಜೊತೆ ಸೇರಿ ಮುದ್ದಿನ ಮಡದಿಯೇ ಗಂಡನನ್ನು ಕೊಲೆ ಮಾಡಿರುವ ವಿಚಿತ್ರ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ಪ್ರಕರಣವನ್ನು ತಡವಾಗಿ ಭೇದಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬೆಂಗಳೂರು ಉತ್ತರದ ತೋಟದ ಗುಡ್ಡದಹಳ್ಳಿ ನಿವಾಸಿ ಶಿವಲಿಂಗಯ್ಯ ಎಂಬವರ ಪತ್ನಿ ಶೋಭಾ ಹಾಗೂ ಕೆಲಸದಾಳು ರಾಮ‌ ಎಂದು ಗುರುತಿಸಲಾಗಿದೆ. ಆರೋಪಿಗಳು ಅಕ್ರಮ ಸಂಬಂಧ ಹೊಂದಿದ್ದು, ಜೂನ್​ 1 ರಂದು ಶಿವಲಿಂಗಯ್ಯನನ್ನು ಕೊಲೆ ಮಾಡಿ ಮೃತದೇಹವನ್ನು ಕಸದ ರಾಶಿಯಲ್ಲಿ

ಕೆಲಸದವನ ಲವ್ವಿಡವ್ವಿಗೆ ಮನಸೋತ ಮಾಯಾವಿ ➤ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಪಾಪಿ ಪತ್ನಿ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಎಲ್ಲರ ಚಿತ್ತ ಸಂಪುಟ ವಿಸ್ತರಣೆಯತ್ತ..‼️ ➤ ಸುಳ್ಯದ ಬಂಗಾರ ಎಸ್. ಅಂಗಾರರಿಗೆ ಸಚಿವ ಸ್ಥಾನ..⁉️

(ನ್ಯೂಸ್ ಕಡಬ) newskadaba.com ಸುಳ್ಯ, ಜ.11. ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಸುದ್ದಿ ಮುನ್ನೆಲೆಗೆ ಬಂದಿದ್ದು, ಜನವರಿ 13 ರಂದು ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿರುವುದರ ನಡುವೆಯೇ ಕರಾವಳಿ ಕರ್ನಾಟಕದ ಹಿರಿಯ ಶಾಸಕ ಎಸ್. ಅಂಗಾರರಿಗೆ ಸಚಿವ ಸ್ಥಾನ ಸಿಗುತ್ತಾ ಎಂಬ ಕುತೂಹಲ ಮನೆಮಾಡಿದೆ. ಬಿಜೆಪಿಯ ಭದ್ರಕೋಟೆ ಕರಾವಳಿಯಲ್ಲಿ ಹಿರಿಯ ಶಾಸಕರಿಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಸಮಾಧಾನ ಎದುರಾಗಿದ್ದು, ಸತತ 6 ಬಾರಿ ಗೆದ್ದಿರುವ ಸುಳ್ಯ ಕ್ಷೇತ್ರದ ಶಾಸಕ ಎಸ್. ಅಂಗಾರರವರಿಗೆ ಈ

ಎಲ್ಲರ ಚಿತ್ತ ಸಂಪುಟ ವಿಸ್ತರಣೆಯತ್ತ..‼️ ➤ ಸುಳ್ಯದ ಬಂಗಾರ ಎಸ್. ಅಂಗಾರರಿಗೆ ಸಚಿವ ಸ್ಥಾನ..⁉️ Read More »

ಕರಾವಳಿ, ಕರ್ನಾಟಕ

ಕೊಲ್ಲೂರು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕೊಲ್ಲೂರು, ಜ. 11. ನೇಣು ಬಿಗಿದು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಲ್ಲೂರಿನ ಜಡ್ಕಲ್ ಗ್ರಾಮದ ಹಾಲ್ಕಲ್ ಚಿಕ್ಕಪೇಟೆ ಎಂಬಲ್ಲಿ ನಡೆದಿದೆ. ಮೃತರನ್ನು ವೆಂಕಟೇಶ್ ಕಿಣಿ(62) ಎಂದು ಗುರುತಿಸಲಾಗಿದೆ. ಇವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ವಿಪರೀತ ಕುಡಿತದ ಅಭ್ಯಾಸ ಹೊಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲ್ಲೂರು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪರಿಸರದ ಸ್ವಚ್ಚತೆ ಕಾಪಾಡಿ ➤ ಡಾ| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು,ಜ. 11. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಪಡೆಯ ವತಿಯಿಂದ ಅಮೃತೇಶ್ವರ ದೇವಸ್ಥಾನ, ವಾಮಂಜೂರು, ತಿರುವೈಲು ಇಲ್ಲಿ ಆದಿತ್ಯವಾರದಂದು ಬೆಳಿಗ್ಗೆ 7.00 ಗಂಟೆಯಿಂದ 9.00 ಗಂಟೆಯವರೆಗೆ ಸ್ವಚ್ಚತಾ ಕಾರ್ಯಕ್ರಮ ಹಾಗೂ ಶ್ರಮದಾನ  ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ| ಮುರಲೀ ಮೋಹನ್ ಚೂಂತಾರು ಇವರು ಮಾತನಾಡಿ, ಪರಿಸರದ ಸ್ವಚ್ಚತೆ ಕಾಪಾಡುವುದು ಪ್ರತಿಯೊಬ್ಬ ಪ್ರಜೆಯ ಸಾಮಾಜಿಕ ಹೊಣೆಗಾರಿಕೆ ಎಂದರು. ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರು

ಪರಿಸರದ ಸ್ವಚ್ಚತೆ ಕಾಪಾಡಿ ➤ ಡಾ| ಚೂಂತಾರು Read More »

ಕರಾವಳಿ, ಕರ್ನಾಟಕ

ಕಡಬ: ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಂಬಾರಿನಲ್ಲಿ ನಡೆಯಲಿರುವ ಗ್ರಾಮ ವಾಸ್ತವ್ಯದ ಕುರಿತು ಪೂರ್ವಭಾವಿ ಸಭೆ

 (ನ್ಯೂಸ್ ಕಡಬ) newskadaba.com ಕಡಬ, ಜ.11. ರಾಜ್ಯ  ಕಾರ್ಯನಿರತ  ಪತ್ರಕರ್ತರ ಸಂಘದ ವತಿಯಿಂದ ಕಡಬ ತಾಲೂಕು ಪತ್ರಕರ್ತ ಸಂಘದ ಸಹಯೋಗದಲ್ಲಿ ಕೊಂಬಾರು ಗ್ರಾಮದಲ್ಲಿ ನಡೆಯುವ ಪತ್ರಕರ್ತ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆಯು ಕೊಂಬಾರು ಸರ್ಕಾರಿ ಶಾಲೆಯಲ್ಲಿ ನಡೆಯಿತು. ಜಿಲ್ಲಾ ಸಂಘದ ಗ್ರಾಮೀಣ ಕಾರ್ಯದರ್ಶಿ ಸಿದ್ದಿಕ್ ನೀರಾಜೆ, ಸದಸ್ಯ  ಲೋಕೇಶ್ ಪೆರ್ಲಂಪಾಡಿ ಮಾತನಾಡಿದರು. ಕಡಬ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಕೊಯಿಲ,  ಕಾರ್ಯದರ್ಶಿ ವಿಜಯ ಕುಮಾರ್ ಕಡಬ,

ಕಡಬ: ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಂಬಾರಿನಲ್ಲಿ ನಡೆಯಲಿರುವ ಗ್ರಾಮ ವಾಸ್ತವ್ಯದ ಕುರಿತು ಪೂರ್ವಭಾವಿ ಸಭೆ Read More »

ಕರಾವಳಿ, ಕರ್ನಾಟಕ

ಮಂಗಳೂರು: ಮೀನುಗಾರಿಕೆಯಲ್ಲಿ ತೊಡಗಿದ್ದ ಬೋಟ್ ನಲ್ಲಿ ಸಿಲಿಂಡರ್ ಸ್ಪೋಟ ➤ ಮೀನುಗಾರರ ರಕ್ಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.11. ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತಮಿಳುನಾಡು ಮೂಲದ ಬೋಟ್‌ ಒಂದರಲ್ಲಿ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಓರ್ವ ಗಂಭೀರ ಗಾಯಗೊಂಡು ಬೋಟ್‌ನಲ್ಲಿದ್ದ 11 ಮಂದಿ ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆಯವರು ರಕ್ಷಿಸಿದ ಘಟನೆ ನಡೆದಿದೆ. ಮಂಗಳೂರಿನಿಂದ ಸುಮಾರು 140 ನಾಟಿಕಲ್ ಮೈಲ್ ದೂರದಲ್ಲಿ ಈ ಬೋಟ್ ಮೀನುಗಾರಿಯಲ್ಲಿ ತೊಡಗಿದ್ದ ವೇಳೆ ಬೋಟ್‌ನಲ್ಲಿದ್ದ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡಿದ್ದು, ವಿಷಯ ತಿಳಿದ ಕರಾವಳಿ ರಕ್ಷಣಾ ಪಡೆಯವರು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡು ಬೋಟ್‌ನಲ್ಲಿದ್ದ 11 ಮಂದಿಯನ್ನು ರಕ್ಷಿಸಿದ್ದಾರೆ. ಗಂಭೀರ

ಮಂಗಳೂರು: ಮೀನುಗಾರಿಕೆಯಲ್ಲಿ ತೊಡಗಿದ್ದ ಬೋಟ್ ನಲ್ಲಿ ಸಿಲಿಂಡರ್ ಸ್ಪೋಟ ➤ ಮೀನುಗಾರರ ರಕ್ಷಣೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top