ಕರ್ನಾಟಕ

?? ➤➤ Big Breaking News ಮರ್ಧಾಳ: ಟಿಪ್ಪರ್ ಹಾಗೂ ಮಹೀಂದ್ರಾ ಜೀತೋ ನಡುವೆ ಭೀಕರ ಅಪಘಾತ ➤ ಅರ್ಧತಾಸು ವಾಹನದೊಳಗೆ ಸಿಲುಕಿದ್ದ ಚಾಲಕ ಗಂಭೀರ

(ನ್ಯೂಸ್ ಕಡಬ) newskadaba.com ಮರ್ಧಾಳ, ಫೆ. 12. ಟಿಪ್ಪರ್ ಹಾಗೂ ಕೋಳಿ ಸಾಗಾಟದ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾ.ಹೆದ್ದಾರಿಯ ಮರ್ಧಾಳದಲ್ಲಿ ಶುಕ್ರವಾರದಂದು ನಡೆದಿದೆ. ಕೋಳಿ ಸಾಗಾಟದ ವಾಹನದ ಚಾಲಕ ಗಂಭೀರ ಗಾಯಗೊಂಡಿದ್ದು, ಕಡಬ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘತಾದ ತೀವ್ರತೆಗೆ ಕೋಳಿ ಸಾಗಾಟದ ವಾಹನವು ಜಖಂ ಗೊಂಡಿದ್ದು, ಅರ್ಧತಾಸಿಗಿಂತಲೂ ಹೆಚ್ಚು ಸಮಯ ವಾಹನದೊಳಗೆ ಸಿಲುಕಿದ್ದ ಚಾಲಕನನ್ನು ಹೊರತೆಗೆಯಲು ಊರವರು ಹರಸಾಹಸಪಟ್ಟರು. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ […]

?? ➤➤ Big Breaking News ಮರ್ಧಾಳ: ಟಿಪ್ಪರ್ ಹಾಗೂ ಮಹೀಂದ್ರಾ ಜೀತೋ ನಡುವೆ ಭೀಕರ ಅಪಘಾತ ➤ ಅರ್ಧತಾಸು ವಾಹನದೊಳಗೆ ಸಿಲುಕಿದ್ದ ಚಾಲಕ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಾಪು: ಬೈಕ್ ಹಾಗೂ ಟೆಂಪೋ ಟ್ರಾವೆಲರ್ ನಡುವೆ ಢಿಕ್ಕಿ ➤ ಬೈಕ್ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಉಡುಪಿ, ಫೆ. 12. ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲರ್ ಬೈಕ್‍ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಉಡುಪಿ ಕಾಪುವಿನಲ್ಲಿ ನಡೆದಿದೆ. ಕಾಪು ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಬೈಕ್‍ ಗೆ, ಕೇರಳದಿಂದ ಕೊಲ್ಲೂರು ಕಡೆಗೆ ಸಾಗುತ್ತಿದ್ದ ಟೂರಿಸ್ಟ್ ಟೆಂಪೋವೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಢಿಕ್ಕಿಯ ರಭಸಕ್ಕೆ ನಿಯಂತ್ರಣ ತಪ್ಪಿದ ಟೆಂಪೋ ಕಂದಕಕ್ಕೆ ವಾಲಿ ನಿಂತಿದ್ದು, ಘಟನಾ ಸ್ಥಳಕ್ಕೆ ಕಾಪು ಸಂಚಾರಿ

ಕಾಪು: ಬೈಕ್ ಹಾಗೂ ಟೆಂಪೋ ಟ್ರಾವೆಲರ್ ನಡುವೆ ಢಿಕ್ಕಿ ➤ ಬೈಕ್ ಸವಾರ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ದೈವಾರಾಧನಾ ಕ್ಷೇತ್ರಕ್ಕೆ ಅಗೇಲು ಸೇವೆಗೆಂದು ಕೋಳಿಯನ್ನು ಬಸ್ಸಿನಲ್ಲಿ ಒಯ್ಯುತ್ತಿದ್ದ ವೇಳೆ 50ರೂ. ಟಿಕೆಟ್ ಪಡೆದ ಕಂಡಕ್ಟರ್…‼️

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 12. ದೈವ ಆರಾಧನಾ ಕ್ಷೇತ್ರಕ್ಕೆ ಅಗೇಲು ಸೇವೆ ಸಲ್ಲಿಸಲೆಂದು ಒಂದು ಚೀಲದಲ್ಲಿ ಕೋಳಿಯನ್ನು ಹಿಡಿದುಕೊಂಡು ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇದನ್ನು ಗಮನಿಸಿದ ಕಂಡಕ್ಟರ್‌ 50 ರೂಪಾಯಿ ಪಡೆದುಕೊಂಡು ಇಬ್ಬರಿಗೂ ಟಿಕೆಟ್‌ ನೀಡಿದ ಘಟನೆ ನಡೆದಿದೆ. ಈ ಘಟನೆಯನ್ನು ಬುಧವಾರ ಪುತ್ತೂರಿನಲ್ಲಿ ನಡೆದ ಸಾರಿಗೆ ಅದಾಲತ್‌ ನಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಈ ವಿಷಯವನ್ನು ಬಹಿರಂಗಪಡಿಸಿದರು. ಇದಕ್ಕೆ ಪ್ರತ್ಯುತ್ತರಿಸಿದ ವಿಭಾಗೀಯ ಸಂಚಲನಾ ಅಧಿಕಾರಿ ಮುರಳೀಧರ್‌, ಸರಕಾರದ ಸುತ್ತೋಲೆ

ದೈವಾರಾಧನಾ ಕ್ಷೇತ್ರಕ್ಕೆ ಅಗೇಲು ಸೇವೆಗೆಂದು ಕೋಳಿಯನ್ನು ಬಸ್ಸಿನಲ್ಲಿ ಒಯ್ಯುತ್ತಿದ್ದ ವೇಳೆ 50ರೂ. ಟಿಕೆಟ್ ಪಡೆದ ಕಂಡಕ್ಟರ್…‼️ Read More »

ಕರ್ನಾಟಕ

ಕುಟ್ರುಪಾಡಿ: ಗ್ರಾಮ ವಾಸ್ತವ್ಯದಲ್ಲಿ ಸಚಿವ ಎಸ್.ಅಂಗಾರ ಭಾಗಿ

(ನ್ಯೂಸ್ ಕಡಬ) newskadaba.com ಕಡಬ, ಫೆ. 12. ಇಂದು ಕುಟ್ರುಪ್ಪಾಡಿಯಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಚಿವ ಎಸ್.ಅಂಗಾರ ಅವರು ಭಾಗಿಯಾದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಅವರು ಉಪಸ್ಥಿತರಿದ್ದರು.  

ಕುಟ್ರುಪಾಡಿ: ಗ್ರಾಮ ವಾಸ್ತವ್ಯದಲ್ಲಿ ಸಚಿವ ಎಸ್.ಅಂಗಾರ ಭಾಗಿ Read More »

ಕರಾವಳಿ, ಕರ್ನಾಟಕ

ಕಡಬ: ಕಾರು ಹಾಗೂ ಬೈಕ್ ನಡುವೆ ಢಿಕ್ಕಿ ➤ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ. 12. ಕಾರು ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಕಲ್ಲಾಜೆಯಲ್ಲಿ ನಡೆದಿದೆ. ಗಾಯಗೊಂಡವರನ್ನು ಪೆರಾಜೆ ಗ್ರಾಮದ ಕುಂಬಳಚೇರಿಯ ಸಂಜಯ್ ಎಂದು ಗುರುತಿಸಲಾಗಿದೆ. ಇವರು ಪೆರಾಜೆಯಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬರುತಿದ್ದ ಕಾರು ಕಲ್ಲಾಜೆ ಸೇತುವೆಯ ಬಳಿ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಬೈಕ್ ಸವಾರ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು

ಕಡಬ: ಕಾರು ಹಾಗೂ ಬೈಕ್ ನಡುವೆ ಢಿಕ್ಕಿ ➤ ಸವಾರನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಅರಂತೋಡು: ಸಯ್ಯದ್ ಪಾಣಕ್ಕಾಡ್ ತಂಙಳ್ ತೆಕ್ಕಿಲ್ ಪ್ರತಿಷ್ಠಾನಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 12. ಅರಂತೋಡು ತೆಕ್ಕಿಲ್ ಪ್ರತಿಷಾನದ ಅಧ್ಯಕ್ಷರೂ ಕೆಪಿಸಿಸಿ ಮಾಜಿ ಕಾರ್ಯದರ್ಶಿಯೂ ಆದ ಟಿ.ಎಮ್.ಶಹೀದ್ ತೆಕ್ಕಿಲ್ ಅವರ ನಿವಾಸಕ್ಕೆ ಕೇರಳ ರಾಜ್ಯ ಮುಸ್ಲಿಂ ಲೀಗ್ ಉಸ್ತುವಾರಿ ಸಮಿತಿ ಸದಸ್ಯರಾದ ಬಹು।ಪಾಣಕ್ಕಾಡ್ ಸಯ್ಯದ್ ಸಾದಿಕಾಲಿ ಶಿಹಾಬ್ ತಂಙಳ್ ಭೇಟಿ ನೀಡಿ ತೆಕ್ಕಿಲ್ ಪ್ರತಿಷ್ಠಾನದ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರನ್ನು ಟಿ.ಎಮ್ .ಶಹೀದ್ ರವರು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಬಹು।ಅಲ್ಹಾಜ್ ಇಸ್ಹಾಖ್ ಬಾಖವಿ,

ಅರಂತೋಡು: ಸಯ್ಯದ್ ಪಾಣಕ್ಕಾಡ್ ತಂಙಳ್ ತೆಕ್ಕಿಲ್ ಪ್ರತಿಷ್ಠಾನಕ್ಕೆ ಭೇಟಿ Read More »

ಕರಾವಳಿ, ಕರ್ನಾಟಕ

ಕಡಬ: ಯಶಸ್ವಿ ಕಾರ್ಯಾಚರಣೆಯಲ್ಲಿ ಚಿರತೆಯನ್ನು ಬಂಧಿಸಿದ ಅರಣ್ಯಾಧಿಕಾರಿಗಳು ? ದಂಪತಿಗೆ ದಾಳಿ ನಡೆಸಿದ್ದ ಚಿರತೆ

(ನ್ಯೂಸ್ ಕಡಬ) newskadaba.com ಕಡಬ, ಫೆ.12. ದಂಪತಿಗೆ ದಾಳಿ ಮಾಡಿ ಮರದ ಮೇಲೆ ಏರಿ ಕುಳಿತಿದ್ದ, ಚಿರತೆಯನ್ನು ಯಶಸ್ವಿ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ರೆಂಜಿಲಾಡಿಯ ಹೇರ ನಿವಾಸಿಗಳಾದ ಶೇಖರ್ ಕಾಮತ್ ಹಾಗೂ ಸೌಮ್ಯ ಕಾಮತ್ ಎಂಬವರು ಶುಕ್ರವಾರ ಬೆಳಗಿನ ಜಾವ ತೋಟಕ್ಕೆ ಪೈಪ್ ಜೆಟ್ ಬದಲಾಯಿಸಲೆಂದು ತೆರಳಿದ್ದ ವೇಳೆ ಚಿರತೆ ದಾಳಿ ನಡೆಸಿತ್ತು. ತಕ್ಷಣವೇ ಇಬ್ಬರನ್ನೂ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ‌. ಪಿಳಿಕುಲದ ನುರಿತ

ಕಡಬ: ಯಶಸ್ವಿ ಕಾರ್ಯಾಚರಣೆಯಲ್ಲಿ ಚಿರತೆಯನ್ನು ಬಂಧಿಸಿದ ಅರಣ್ಯಾಧಿಕಾರಿಗಳು ? ದಂಪತಿಗೆ ದಾಳಿ ನಡೆಸಿದ್ದ ಚಿರತೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಂಬಳದಲ್ಲಿ ಶ್ರೀನಿವಾಸ ಗೌಡರ ದಾಖಲೆ ಮುರಿದ ಬೈಂದೂರಿನ ವಿಶ್ವನಾಥ್..! ➤ 9.15 ಸೆಕೆಂಡ್ ಗಳಲ್ಲಿ 100 ಮೀಟರ್ ಓಡಿ ದಾಖಲೆ ನಿರ್ಮಾಣ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 12. ಕರಾವಳಿಯ ಜನಪದ ಕ್ರೀಡೆಯಾದ ಕಂಬಳದಲ್ಲಿ ಬೈಂದೂರಿನ ವಿಶ್ವನಾಥ್ ಎಂಬವರು ಓಡಿಸಿದ ಕೋಣಗಳು 9.15 ಸೆಕೆಂಡ್ ಗಳಲ್ಲಿ 100 ಮೀಟಲ್ ಓಡಿ ಹೊಸ ದಾಖಲೆ ಸೃಷ್ಟಿಸುವ ಮೂಲಕ ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿಯನ್ನು ಹೊಂದಿದ್ದ ಶ್ರೀನಿವಾಸ್ ಗೌಡ ಅವರ ದಾಖಲೆಯನ್ನು ಮುರಿದಿದ್ದಾರೆ. ಮಂಗಳೂರಿನ ಕಿನ್ನಿಗೋಳಿ ಸಮೀಪದ ಐಕಳ ಎಂಬಲ್ಲಿ ಏರ್ಪಡಿಸಲಾಗಿದ್ದ ಕಂಬಳದಲ್ಲಿ ಬೈಂದೂರಿನ‌ ವಿಶ್ವನಾಥ್ ದೇವಾಡಿಗ (23) ಓಡಿಸಿದ ಕೋಣಗಳು 9.15 ಸೆಕೆಂಡ್​ಗಳಲ್ಲಿ 100 ಮೀಟರ್​ ಓಡಿವೆ. ಈ

ಕಂಬಳದಲ್ಲಿ ಶ್ರೀನಿವಾಸ ಗೌಡರ ದಾಖಲೆ ಮುರಿದ ಬೈಂದೂರಿನ ವಿಶ್ವನಾಥ್..! ➤ 9.15 ಸೆಕೆಂಡ್ ಗಳಲ್ಲಿ 100 ಮೀಟರ್ ಓಡಿ ದಾಖಲೆ ನಿರ್ಮಾಣ Read More »

ಕರಾವಳಿ, ಕರ್ನಾಟಕ

ಸುಬ್ರಹ್ಮಣ್ಯ: ಸಮರ್ಪಣಾ ದಿನಾಚರಣೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ. 12. ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಪುಣ್ಯಸ್ಮರಣೆಯ ಅಂಗವಾಗಿ ಸಮಾರ್ಪಣಾ ದಿನವನ್ನು ಆಚರಿಸಲಾಯಿತು. ಇದರ ಉದ್ಘಾಟನೆಯನ್ನು ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ನೆರವೇರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಲಳಂಬೆ, ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್, ಮಂಡಲ ಸಮಿತಿ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಶಿವಪ್ರಸಾದ್, ಮಾಧವ ಚಾಂತಾಳ ಮೊದಲಾದವರು ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ: ಸಮರ್ಪಣಾ ದಿನಾಚರಣೆ Read More »

ಕರಾವಳಿ, ಕರ್ನಾಟಕ

? ಪ.ಜಾತಿಗೆ ಮೀಸಲಿಡಲಾದ ಜಾಗದಲ್ಲಿ ಮತಾಂತರಗೊಂಡ ವೃದ್ದೆಯ ಅಂತ್ಯಕ್ರಿಯೆ ನಡೆಸಲು ಗ್ರಾಮಸ್ಥರ ವಿರೋಧ…!

(ನ್ಯೂಸ್ ಕಡಬ) newskadaba.com ಹಾಸನ, ಫೆ. 12. ಪರಿಶಿಷ್ಟ ಜಾತಿಗೆ ಮೀಸಲಿಡಲಾದ ಸ್ಮಶಾನದಲ್ಲಿ ಮತಾಂತರಗೊಂಡ ವೃದ್ಧೆಯೋರ್ವರ ಅಂತ್ಯಕ್ರಿಯೆಯನ್ನು ನಡೆಸಲು ಗ್ರಾಮಸ್ತರು ವಿರೋಧ ವ್ಯಕ್ತಪಡಿಸಿದ ಘಟನೆ ಹೋಬಳಿಯ ವಳ್ಳಲಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹಿರಿಯೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಗ್ರಾಮದ ಪುಟ್ಟಮ್ಮ ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದಿದ್ದ ಇವರು ಸೋಮವಾರದಂದು ಮೃತಪಟ್ಟಿದ್ದರು. ಇವರ ಅಂತ್ಯಕ್ರಿಯೆಗೆಂದು ಸ್ಮಶಾನದಲ್ಲಿ ಸಿದ್ಧತೆ ನಡೆಸಲಾಗಿತ್ತಾದರೂ ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ‘ಹಿಂದೂ ಪದ್ಧತಿಯಂತೆ ಅಂತ್ಯಕ್ರಿಯೆ ಮಾಡುವುದಾದರೆ ಮಾತ್ರ ಇಲ್ಲಿ ಮಾಡಿ, ಇಲ್ಲದಿದ್ದಲ್ಲಿ ಬೇಡ’ ಎಂದು ಹೇಳಿದ್ದಾರೆ.

? ಪ.ಜಾತಿಗೆ ಮೀಸಲಿಡಲಾದ ಜಾಗದಲ್ಲಿ ಮತಾಂತರಗೊಂಡ ವೃದ್ದೆಯ ಅಂತ್ಯಕ್ರಿಯೆ ನಡೆಸಲು ಗ್ರಾಮಸ್ಥರ ವಿರೋಧ…! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top