ಕರ್ನಾಟಕ

ಮಂಗಳೂರು: ಕ್ರೆಟಾ ಕಾರಿನ ಆಸೆಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಮಹಿಳೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 13. ಕಾರಿನ ಆಸೆಗೆ ಬಿದ್ದ ವಿದ್ಯಾವಂತ ಮಹಿಳೆಯೋರ್ವರು ಸಾವಿರಾರು ರೂಪಾಯಿಗಳನ್ನು ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ವಮಚನೆಗೊಳಗಾದವರನ್ನು ಮಂಗಳೂರಿನ ಮೀನಾ ಎಂದು ಗುರುತಿಸಲಾಗಿದೆ. ಇವರಿಗೆ ಕಳೆದ ಕೆಲ ದಿನಗಳ ಹಿಂದೆ ನ್ಯಾಪ್ಟೋಲ್​ ಆನ್​-ಲೈನ್​ ಶಾಪಿಂಗ್​ ನಿಂದ ಒಂದು ಪೋಸ್ಟ್​ ಬಂದಿದ್ದು, ಅದರಲ್ಲಿ ನಿಮಗೆ ಕ್ರೇಟಾ ಕಾರೊಂದು ಲಕ್ಕಿ ಡ್ರಾ ಮೂಲಕ ಬಹುಮಾನವಾಗಿ ಬಂದಿದೆ ಎಂದಿತ್ತು. ಈ ಪೋಸ್ಟ್ ನೋಡಿದ ಮಹಿಳೆಯು ಅದರಲ್ಲಿದ್ದ 9144391473 ನಂಬರ್​ಗೆ ಕರೆ ಮಾಡಿದ್ದಾರೆ. ಆ ಕಡೆಯಿಂದ […]

ಮಂಗಳೂರು: ಕ್ರೆಟಾ ಕಾರಿನ ಆಸೆಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಮಹಿಳೆ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

? ದೇರಳಕಟ್ಟೆ ಕಣಚೂರು ಕಾಲೇಜಿನಲ್ಲಿ ರ್ಯಾಗಿಂಗ್ ಪ್ರಕರಣ ➤ ಬಂಧಿಸಲಾಗಿದ್ದ ವಿದ್ಯಾರ್ಥಿಗಳಿಗೆ ಷರತ್ತು ಬದ್ದ ಜಾಮೀನು…‼️

(ನ್ಯೂಸ್ ಕಡಬ) newskadaba.com ಮಂಗಳೂರು ಫೆ. 13. ರ್ಯಾಗಿಂಗ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಮಂಗಳೂರಿನ ದೇರಳಕಟ್ಟೆ ಕಣಚೂರು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ನೀಡಿದೆ‌. ದೇರಳಕಟ್ಟೆ ಕಣಚೂರು ಮೆಡಿಕಲ್ ಕಾಲೇಜಿನ ಎರಡನೇ ವರ್ಷದ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ 18 ವಿದ್ಯಾರ್ಥಿಗಳನ್ನು ಕೂದಲು- ಗಡ್ಡ ಬೋಳಿಸುವಂತೆ, ತರಗತಿಗಳನ್ನು ಬೆಂಕಿ ಪೊಟ್ಟಣದಲ್ಲಿ ಅಳತೆ ಮಾಡುವಂತೆ ರ್ಯಾಗಿಂಗ್ ಮಾಡಿದ್ದಾರೆ ಎಂದು ಆರೋಪಿಸಿ ಕಾಲೇಜಿನ ಕ್ಯಾಂಪಸ್ ಆಫೀಸರ್ ಮಾರ್ಟಿನ್ ಜೋರ್ಜ್ ಉಳ್ಳಾಲ ಠಾಣೆಯಲ್ಲಿ ದೂರಿನಂತೆ ತನಿಖೆ ನಡೆಸಿದ ಪೊಲೀಸರು

? ದೇರಳಕಟ್ಟೆ ಕಣಚೂರು ಕಾಲೇಜಿನಲ್ಲಿ ರ್ಯಾಗಿಂಗ್ ಪ್ರಕರಣ ➤ ಬಂಧಿಸಲಾಗಿದ್ದ ವಿದ್ಯಾರ್ಥಿಗಳಿಗೆ ಷರತ್ತು ಬದ್ದ ಜಾಮೀನು…‼️ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಸ್ನಾನ ಮಾಡುತ್ತಿದ್ದ ವೇಳೆ ಮಹಿಳೆಯ ವಿಡಿಯೋ ಚಿತ್ರೀಕರಣ ➤ ಆರೋಪಿ ಅಂದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 13. ಇಲ್ಲಿನ ಖಾಸಗಿ ಆಸ್ಪತ್ರೆಯ ಕೊಠಡಿಯೊಂದರಲ್ಲಿ ಮಹಿಳೆಯು ಸ್ನಾನ ಮಾಡುತ್ತಿದ್ದ ವೇಳೆ ವೀಡಿಯೋವನ್ನು ಮೊಬೈಲ್ ಮೂಲಕ ಚಿತ್ರೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ ಬಂಧಿತನನ್ನು ಮದನಿನಗರ ನಿವಾಸಿ ಅಬ್ದುಲ್‌ ಮುನೀರ್‌ (40) ಎಂದು ಗುರುತಿಸಲಾಗಿದೆ. ಮಹಿಳೆಯು ಅಸೌಖ್ಯದ ಕಾರಣದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸ್ನಾನ ಮಾಡಲೆಂದು ತೆರಳಿದ್ದ ವೇಳೆ ಆರೋಪಿ ಮುನೀರ್‌ ತನ್ನ ಮೊಬೈಲ್‌ ಮೂಲಕ ಸ್ನಾನದ ದೃಶ್ಯವನ್ನು ಸೆರೆಹಿಡಿದಿದ್ದನು. ಇದನ್ನು ಗಮನಿಸಿದ ಮಹಿಳೆಯು ಹೊರಬರುವಷ್ಟರಲ್ಲಿ

ಮಂಗಳೂರು: ಸ್ನಾನ ಮಾಡುತ್ತಿದ್ದ ವೇಳೆ ಮಹಿಳೆಯ ವಿಡಿಯೋ ಚಿತ್ರೀಕರಣ ➤ ಆರೋಪಿ ಅಂದರ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಳ್ಳಾಲ: ಆಳಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ದೋಣಿಗೆ ಬೃಹತ್ ಗಾತ್ರದ ಮಡಲ್ ಮೀನು ಢಿಕ್ಕಿ ➤ ಬೋಟ್ ಗೆ ಹಾನಿ

(ನ್ಯೂಸ್ ಕಡಬ) newskadaba.com ಉಳ್ಳಾಲ, ಫೆ. 13. ಆಳಸಮುದ್ರದ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಗೆ ಮಡಲ್ ಮೀನೊಂದು ಡಿಕ್ಕಿ ಹೊಡೆದ ಪರಿಣಾಮ ಬೋಟ್ ಹಾನಿಗೀಡಾಗಿರುವ ಘಟನೆ ನಡೆದಿದೆ. ಚೂಪು ಬಾಯಿ ಹೊಂದಿರುವ ಹಾಗೂ ದೊಡ್ಡ ಗಾತ್ರದ ತುಳುವಿನಲ್ಲಿ ‘ಮಡಲ್ ಮೀನ್’ ಎಂದು ಕರೆಯಲಾಗುವ ಮೀನೊಂದು ಆಳಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ಬೋಟ್‌ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಮೀನಿನ ಬಾಯಿ ಮುರಿದು ಮೀನಿನಲ್ಲಿ ರಕ್ತಸ್ರಾವ ಉಂಟಾಗಿದಲ್ಲದೇ ಮೀನು ಗುದ್ದಿದ ರಭಸಕ್ಕೆ ಮೀನುಗಾರಿಕಾ ಬೋಟ್ ಗೆ ಹಾನಿಯಾಗಿದೆ.

ಉಳ್ಳಾಲ: ಆಳಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ದೋಣಿಗೆ ಬೃಹತ್ ಗಾತ್ರದ ಮಡಲ್ ಮೀನು ಢಿಕ್ಕಿ ➤ ಬೋಟ್ ಗೆ ಹಾನಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ರಾಜ್ಯಮಟ್ಟದ “ಸಾಹಿತ್ಯ ರತ್ನ” ಪ್ರಶಸ್ತಿಗೆ ಸಮ್ಯಕ್ತ್ ಜೈನ್ ಆಯ್ಕೆ ➤ ಫೆ. 14ರಂದು ಸುಳ್ಯದಲ್ಲಿ ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ನೂಜಿಬಾಳ್ತಿಲ, ಫೆ. 13. ಫೆ. 14‌ರಂದು ಸುಳ್ಯದಲ್ಲಿ ನಡೆಯಲಿರುವ ‘ಕವಿ ಸಂಗಮ – ಕವಿ ಸಂಭ್ರಮ’ ಕಾರ್ಯಕ್ರಮದಲ್ಲಿ ನೀಡಲಿರುವ 2021 ನೇ ಸಾಲಿನ “ಸಾಹಿತ್ಯ ರತ್ನ” ರಾಜ್ಯ ಪ್ರಶಸ್ತಿಗೆ ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರು ಆಯ್ಕೆಗೊಂಡಿದ್ದಾರೆ. ಇದುವರೆಗೆ ಮೂರು ಕವನ ಸಂಕಲನವನ್ನು ಬರೆದು ಬಿಡುಗಡೆಗೊಳಿಸಿ ಸಾಹಿತ್ಯ ಲೋಕದಲ್ಲಿ ಮುಂದುವರೆಯುತ್ತಿರುವ ಇವರು ಈಗಾಗಲೇ ರಾಜ್ಯ, ಅಂತರ್ ರಾಜ್ಯಮಟ್ಟದ ಹಲವಾರು ಬಹುಮಾನಗಳಿಗೆ ಹಾಗು ಸನ್ಮಾನಗಳಿಗೆ ಭಾಜನರಾಗಿದ್ದು, ಪ್ರಸ್ತುತ ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸವನ್ನು ನೆಲ್ಯಾಡಿ ಸಾಫಿಯೆನ್ಶಿಯಾ

ರಾಜ್ಯಮಟ್ಟದ “ಸಾಹಿತ್ಯ ರತ್ನ” ಪ್ರಶಸ್ತಿಗೆ ಸಮ್ಯಕ್ತ್ ಜೈನ್ ಆಯ್ಕೆ ➤ ಫೆ. 14ರಂದು ಸುಳ್ಯದಲ್ಲಿ ಪ್ರಶಸ್ತಿ ಪ್ರದಾನ Read More »

ಕರಾವಳಿ, ಕರ್ನಾಟಕ

ಕಡಬ: ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ ಹನೀಫ್ ಅವರ ಮೆಸೇಂಜರ್ ಹ್ಯಾಕ್ ➤ ಹಣ ಕಳುಹಿಸುವಂತೆ ಸಂದೇಶ ರವಾನೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 13. ಕಡಬ ಗ್ರಾ.ಪಂ ಮಾಜಿ ಅಧ್ಯಕ್ಷರಾಗಿರುವ ಹಾಜಿ ಕೆ.ಎಂ ಹನೀಫ್ ಅವರ ಮೆಸೇಂಜರ್ ಅನ್ನು ಹ್ಯಾಕ್ ಮಾಡಿ ಹಲವರಿಗೆ ಹಣ ಕಳುಹಿಸಿಕೊಡುವಂತೆ ಮೆಸೇಜ್ ರವಾನಿಸಲಾಗಿದ್ದು, ಇದರಿಂದ ಸಂಶಯಗೊಂಡ ಕೆಲವು ಗೆಳೆಯರು ಇದರ ನಿಜಾಂಶವನ್ನು ಅರಿಯಲು ಕೆ.ಎಂ ಹನೀಫ್ ಅವರನ್ನು ನೇರವಾಗಿ ಸಂಪರ್ಕಿಸಿದ್ದರು. ಇದರಿಂದ ಮೋಸದ ಕುತಂತ್ರವನ್ನು ತಿಳಿದ ಹನೀಫ್ ಅವರು ತಕ್ಷಣವೇ ಕಡಬ ಪೋಲೀಸರ ಗಮನಕ್ಕೆ ತಂದಿದ್ದು, ಜನರಲ್ಲಿ ಇಂತಹಾ ಮೋಸಜಾಲದ ಕುರಿತಾಗಿ ಎಚ್ಚರಿಕೆ ವಹಿಸುವಂತೆ ಕರೆ ನೀಡಿದ್ದಾರೆ.

ಕಡಬ: ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ ಹನೀಫ್ ಅವರ ಮೆಸೇಂಜರ್ ಹ್ಯಾಕ್ ➤ ಹಣ ಕಳುಹಿಸುವಂತೆ ಸಂದೇಶ ರವಾನೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 13. 2020-21ನೇ ಸಾಲಿನ ಮೇ. 24 ರಿಂದ ಜೂ. 16ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ಈ ಹಿಂದೆ ಶಿಕ್ಷಣ ಇಲಾಖೆಯು ವೇಳಾಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳಿಗೆ ಒಂದು ವಾರ ಸಮಯ ನಿಗದಿಪಡಿಸಿತ್ತು. ರಾಜ್ಯದ ವಿವಿಧೆಡೆಯ ಹಲವಾರು ಪೋಷಕರು ತಮ್ಮನ್ನು ಖುದ್ದಾಗಿ ಭೇಟಿ ಮಾಡಿ ಸಲ್ಲಿಸಿದ ಮನವಿಗಳು ಮತ್ತು

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ Read More »

ಕರ್ನಾಟಕ

ಕಲ್ಲುಗುಡ್ಡೆ: ಫೆ. 14 ಮತ್ತು 15 ರಂದು ಹುಲಿಚಾಮುಂಡಿ ಹಾಗು ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಫೆ. 13.‌ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲಿನ ಹುಲಿಚಾಮುಂಡಿ ಹಾಗು ಪರಿವಾರ ದೈವ ದೈವಸ್ಥಾನದ ಭಕ್ತಾದಿಗಳ ಸಹಕಾರದಿಂದ ನವೀಕೃತಗೊಳ್ಳುತ್ತಿದ್ದು, ಇದೇ ಫೆ. 14 ಮತ್ತು 15 ರಂದು ದೈವಿಕ ವಿಧಿವಿಧಾನಗಳಿಂದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಪದ್ಮವಿಭೂಷಣ ರಾಜರ್ಷೀ ಡಾ। ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದದೊಂದಿಗೆ ಹಾಗು ಬ್ರಹ್ಮಶೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನೆರವೇರಲಿದೆ. ಫೆ. 14 ರಂದು ಹಸಿರು ಹೊರೆ ಕಾಣಿಕೆ ಸಂಗ್ರಹಣೆಗಾಗಿ ವಾಹನದ ಸೌಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ಕಲ್ಲುಗುಡ್ಡೆ: ಫೆ. 14 ಮತ್ತು 15 ರಂದು ಹುಲಿಚಾಮುಂಡಿ ಹಾಗು ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ Read More »

ಕರಾವಳಿ, ಕರ್ನಾಟಕ

ವಿಟ್ಲ: ರಕ್ಷಿತಾರಣ್ಯದಲ್ಲಿ ಬೆಂಕಿ ಅನಾಹುತ‌ ➤ ಅಪಾರ ಪ್ರಮಾಣದ ಮರಗಳು ನಾಶ

(ನ್ಯೂಸ್ ಕಡಬ) newskadaba.com ವಿಟ್ಲ, ಫೆ. 12. ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಅಪಾರ ಪ್ರಮಾಣದ ಮರಗಳು ಹೊತ್ತಿ ಉರಿದ ಘಟನೆ ವಿಟ್ಲ ಕನ್ಯಾನ ರಸ್ತೆಯ ಕಾನತ್ತಡ್ಕ ಎಂಬಲ್ಲಿ ನಡೆದಿದೆ. ಕನ್ಯಾನ ಎಂಬಲ್ಲಿನ ರಕ್ಷಿತಾರಣ್ಯದಲ್ಲಿ ಬೆಂಕಿ ಅನಾಹುತ ಉಂಟಾಗಿದ್ದು, ತಕ್ಷಣವೇ ಸ್ಥಳೀಯರು ಅಗ್ನಿಶಾಮಕದಳ ಹಾಗೂಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.‌ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಸಹಕಾರದಿಂದ ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಟ್ಲ: ರಕ್ಷಿತಾರಣ್ಯದಲ್ಲಿ ಬೆಂಕಿ ಅನಾಹುತ‌ ➤ ಅಪಾರ ಪ್ರಮಾಣದ ಮರಗಳು ನಾಶ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

? ನೆಲ್ಯಾಡಿ: ಕಾರು ಹಾಗೂ ಪಿಕಪ್ ನಡುವೆ ಢಿಕ್ಕಿ ➤ ಕಾರು ಚಾಲಕ ಗಂಭೀರ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.12. ಮಹೀಂದ್ರಾ ಪಿಕಪ್ ಹಾಗೂ ಆಲ್ಟೋ‌ ಕಾರಿನ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಶುಕ್ರವಾರದಂದು ನೆಲ್ಯಾಡಿಯಲ್ಲಿ ನಡೆದಿದೆ. ನೆಲ್ಯಾಡಿಯ ಸಣ್ಣಂಪಾಡಿ ಎಂಬಲ್ಲಿ ನಡೆದ ಅಪಘಾತದಲ್ಲಿ ಕಾರು ಚಾಲಕ ಗಡಿಯಾರ ಜುಮ್ಮಾ ಮಸೀದಿ ಖತೀಬರಾದ ಉಮರ್ ಫೈಝಿ ಎಂಬವರು ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

? ನೆಲ್ಯಾಡಿ: ಕಾರು ಹಾಗೂ ಪಿಕಪ್ ನಡುವೆ ಢಿಕ್ಕಿ ➤ ಕಾರು ಚಾಲಕ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top