ಕರ್ನಾಟಕ

ನಾಳೆ (ಜು.20) ಸಂಜೆ 4:30ರ ವೇಳೆಗೆ ಪಿಯುಸಿ ಫಲಿತಾಂಶ ಪ್ರಕಟ ➤ ಸಚಿವ ಸುರೇಶ್ ಕುಮಾರ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 19. ನಾಳೆ (ಮಂಗಳವಾರ) ಸಂಜೆ 4.30ರ ವೇಳೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಸಂಜೆ 4.30 ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟವಾಗಲಿದೆ. ಅಲ್ಲದೇ ಗ್ರೇಡ್ ಬದಲಿಗೆ ಅಂಕಗಳನ್ನೇ ನೀಡಲು ಪಿಯುಸಿ ಬೋರ್ಡ್ ನಿರ್ಧಾರ ಮಾಡಿದೆ. ಹೀಗಾಗಿ ಅಂಕಗಳ ಮಾದರಿಯಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ. […]

ನಾಳೆ (ಜು.20) ಸಂಜೆ 4:30ರ ವೇಳೆಗೆ ಪಿಯುಸಿ ಫಲಿತಾಂಶ ಪ್ರಕಟ ➤ ಸಚಿವ ಸುರೇಶ್ ಕುಮಾರ್ Read More »

ಕರ್ನಾಟಕ

ಎಸ್ಕೆಎಸ್ಸೆಸ್ಸೆಫ್ ಆತೂರು ಕಸ್ಟರ್ ವಿಖಾಯ ತಂಡದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಹಾಗೂ ಫಾಗಿಂಗ್ ಸಿಂಪಡಿಕೆ

(ನ್ಯೂಸ್ ಕಡಬ) newskadaba.com ರಾಮಕುಂಜ, ಜು. 19. ಎಸ್ಕೆಎಸ್ಸೆಸ್ಸೆಫ್ ಆತೂರು ಕಸ್ಟರ್ ವಿಖಾಯ ತಂಡ ಇದರ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಹಾಗು ಕೊಯಿಲ, ಆತೂರು, ರಾಮಕುಂಜ ಮತ್ತು ಗೋಳಿತ್ತಡಿ ಮುಂತಾದ ಸ್ಥಳದಲ್ಲಿ ಫಾಗಿಂಗ್ ಸಿಂಪಡಿಕೆ ಕಾರ್ಯವು ಶುಕ್ರವಾರದಂದು ನಡೆಯಿತು. ಎಸ್ ಕೆ ಎಸ್ ಎಸ್ ಎಫ್ ಆತೂರು ಕಸ್ಟರ್ ವಿಖಾಯ ತಂಡ ಬೆಳಿಗ್ಗೆ ಮೆಸ್ಕಾಂ ಇಲಾಖೆಯವರ ಅಪೇಕ್ಷೆಯಂತೆ ಮರದ ಕೊಂಬೆಗಳು ವಿದ್ಯುತ್ ತಂತಿಗಳಿಗೆ ಬಿಳುವುದನ್ನು ಕಡಿದು ಲೈನ್ ಮ್ಯಾನ್ ಜೊತೆ ಕೈಜೋಡಿಸಿದರು. ಕೊಯಿಲ ಹಾಗು ರಾಮಕುಂಜ ಗ್ರಾಮ

ಎಸ್ಕೆಎಸ್ಸೆಸ್ಸೆಫ್ ಆತೂರು ಕಸ್ಟರ್ ವಿಖಾಯ ತಂಡದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಹಾಗೂ ಫಾಗಿಂಗ್ ಸಿಂಪಡಿಕೆ Read More »

ಕರಾವಳಿ, ಕರ್ನಾಟಕ

ಉಳ್ಳಾಲ: ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದ ವೇಳೆ ಕೊಠಡಿಗೆ ತಗುಲಿದ ಬೆಂಕಿ..! ➤ ವಿದ್ಯಾರ್ಥಿಗಳ ಸ್ಥಳಾಂತರ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜು. 19. ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಿದ್ದು, ಮೊದಲ ದಿನವಾದ ಇಂದು ಪರೀಕ್ಷೆ ನಡೆಯುತ್ತಿದ್ದ ಕೊಠಡಿಗೆ ಬೆಂಕಿ ತಗುಲಿದ ಘಟನೆ ಉಳ್ಳಾಲದ ಬಬ್ಬುಕಟ್ಟೆ ಎಂಬಲ್ಲಿ ನಡೆದಿದೆ. ಬಬ್ಬುಕಟ್ಟೆ ಖಾಸಗಿ ಶಾಲೆಯ ಲ್ಯಾಬ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪಕ್ಕದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದ ಕೊಠಡಿಗೂ ಬೆಂಕಿ ತಗುಲಿದೆ. ಈ ಸಂದರ್ಭ ತಕ್ಷಣವೇ ಕಾರ್ಯ ಪ್ರವೃತ್ತರಾದ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಬೇರೊಂದು ಕಟ್ಟಡಕ್ಕೆ ಸ್ಥಳಾಂತರ ಮಾಡಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ

ಉಳ್ಳಾಲ: ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದ ವೇಳೆ ಕೊಠಡಿಗೆ ತಗುಲಿದ ಬೆಂಕಿ..! ➤ ವಿದ್ಯಾರ್ಥಿಗಳ ಸ್ಥಳಾಂತರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಐರಾವತ ಬಸ್ ➤ ಚಾಲಕ‌ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) Newskadaba.com ಮಡಿಕೇರಿ, ಜು. 19. ಚಾಲಕನ ನಿಯಂತ್ರಣ ತಪ್ಪಿದ ಐರಾವತ ಬಸ್ಸೊಂದು ರಸ್ತೆ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಡಗಿನ ಗಡಿ ಪೆರುಂಬಾಡಿಯಲ್ಲಿ ಇಂದು ಮುಂಜಾನೆ ನಡೆದಿದೆ. ಮೃತ ಚಾಲಕನನ್ನು ಬೆಂಗಳೂರಿನ ಸ್ವಾಮಿ ಎಂದು ಗುರುತಿಸಲಾಗಿದೆ. ವಿರಾಜಪೇಟೆ ಪೊಲೀಸರು ಹಾಗೂ ಕೇರಳ ಕಾರ್ಯ ಪಡೆಯ ಸಿಬ್ಬಂದಿಗಳ ಮೂರು ಗಂಟೆಯ ಕಾರ್ಯಾಚರಣೆಯ ಬಳಿಕ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ. ಬಸ್ಸಿನಲ್ಲಿದ್ದ ಉಳಿದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಐರಾವತ ಬಸ್ ➤ ಚಾಲಕ‌ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು – ಬೆಂಗಳೂರು ವಿಸ್ಟಾಡೋಂ ರೈಲಿನ ಮೇಲೆ ಧರೆ ಕುಸಿತ ➤ ಹಳಿಯಲ್ಲೇ ಬಾಕಿಯಾದ ರೈಲು

(ನ್ಯೂಸ್ ಕಡಬ) newskadaba.com ಸವಣೂರು, ಜು.18. ರೈಲು ಹಳಿಯ ಮೇಲೆ ಧರೆ ಕುಸಿದ ಪರಿಣಾಮ ಮಂಗಳೂರು – ಬೆಂಗಳೂರು ರೈಲಿನ ಗಾರ್ಡ್ ಗೆ ಹಾನಿಯಾದ ಘಟನೆ ಭಾನುವಾರದಂದು ಸವಣೂರಿನಲ್ಲಿ ನಡೆದಿದೆ. ಕಬಕ ಪುತ್ತೂರು – ಸುಬ್ರಹ್ಮಣ್ಯ ರೋಡ್ ರೈಲ್ವೇ ಹಳಿಯ ನಡುವಿನ ವೀರಮಂಗಲ, ಗಡಿಪಿಲ ಸಮೀಪದಲ್ಲಿ ರೈಲು ಚಲಿಸುತ್ತಿದ್ದಾಗ ಏಕಾಏಕಿ ಧರೆ ಕುಸಿದು ರೈಲಿನ ಗಾರ್ಡ್‌ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ರೈಲು ಇದೀಗ ಹಳಿಯಲ್ಲೇ ಬಾಕಿಯಾಗಿದ್ದು, ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಮಣ್ಣು ತೆರವು ಕಾರ್ಯ

ಮಂಗಳೂರು – ಬೆಂಗಳೂರು ವಿಸ್ಟಾಡೋಂ ರೈಲಿನ ಮೇಲೆ ಧರೆ ಕುಸಿತ ➤ ಹಳಿಯಲ್ಲೇ ಬಾಕಿಯಾದ ರೈಲು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನೀರಿನ ಬಕೆಟ್‌ನಲ್ಲಿ ಮುಳುಗಿ ಒಂದೂವರೆ ವರ್ಷದ ಮಗು ಮೃತ್ಯು ➤ ಮಂಗಳೂರಿನಲ್ಲಿ ನಡೆಯಿತು ಹೃದಯವಿದ್ರಾವಕ ಘಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.17. ನೀರು ತುಂಬಿದ ಬಕೆಟ್ ಒಳಗಡೆ ಬಿದ್ದು ಒಂದೂವರೆ ವರ್ಷದ ಮಗುವೊಂದು ಮೃತಪಟ್ಟಿರುವ ದಾರುಣ ಘಟನೆ ನಗರದ ಹೊರವಲಯದ ಕಾಟಿಪಳ್ಳದಲ್ಲಿ ಶನಿವಾರದಂದು ನಡೆದಿದೆ. ಕಾಟಿಪಳ್ಳ ನಿವಾಸಿ ನಝೀರ್ ಎಂಬವರ ಒಂದೂವರೆ ವರ್ಷ ಪ್ರಾಯದ ಮಗು ಮೃತಪಟ್ಟಿದ್ದು, ತಾಯಿ ಮನೆ ಕೆಲಸದಲ್ಲಿ ನಿರತರಾಗಿದ್ದ ವೇಳೆ ಮಲಗಿದ್ದ ಮಗು ಎಚ್ಚರಗೊಂಡು ಶೌಚಾಲಯದಲ್ಲಿದ್ದ ನೀರು ತುಂಬಿದ್ದ ಬಕೆಟ್‌ಗೆ ತಲೆ ಹಾಕಿದ್ದು, ಈ ವೇಳೆ ತಲೆಕೆಳಗಾಗಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಮೃತ ಮಗುವಿನ ಪೋಷಕರ

ನೀರಿನ ಬಕೆಟ್‌ನಲ್ಲಿ ಮುಳುಗಿ ಒಂದೂವರೆ ವರ್ಷದ ಮಗು ಮೃತ್ಯು ➤ ಮಂಗಳೂರಿನಲ್ಲಿ ನಡೆಯಿತು ಹೃದಯವಿದ್ರಾವಕ ಘಟನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕುಡಿದ ಮತ್ತಿನಲ್ಲಿ ಆಂಬ್ಯುಲೆನ್ಸ್ ಚಾಲನೆ- ಕಾರಿಗೆ ಢಿಕ್ಕಿ ➤ ಕಾರು ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಗದಗ, ಜು. 17. ಕುಡಿದ ಅಮಲಿನಲ್ಲಿ ಆಂಬ್ಯುಲೆನ್ಸ್ ಚಾಲನೆ ಮಾಡಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಾಯಗೊಂಡ ಘಟನೆ ಇಲ್ಲಿನ ಹೊರವಲಯದಲ್ಲಿ ನಡೆದಿದೆ. ಗಾಯಗೊಂಡ ಕಾರು ಚಾಲಕನನ್ನು ಗೋವಿಂದಪ್ಪ ಲಮಾಣಿಗ ಎಂದು ಗುರುತಿಸಲಾಗಿದೆ. ಶಿರಹಟ್ಟಿ ಕಡೆಗೆ ಹೊರಟಿದ್ದ ಆಂಬ್ಯುಲೆನ್ಸ್ ನ ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬಂದ ಕಾರಿಗೆ ಢಿಕ್ಕಿ ಹೊಡೆದಿದೆ. ಘಟನೆಗೆ ಆಂಬ್ಯುಲೆನ್ಸ್ ಚಾಲಕ ವಿಶ್ವನಾಥ್ ಬೋರಶೆಟ್ಟಿಯ ನಿರ್ಲಕ್ಷ್ಯವೇ ಕಾರಣ ಎಂದು ತಿಳಿದುಬಂದಿದೆ.

ಕುಡಿದ ಮತ್ತಿನಲ್ಲಿ ಆಂಬ್ಯುಲೆನ್ಸ್ ಚಾಲನೆ- ಕಾರಿಗೆ ಢಿಕ್ಕಿ ➤ ಕಾರು ಚಾಲಕನಿಗೆ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆಟವಾಡುತ್ತಿದ್ದ ವೇಳೆ‌ ಮೊಬೈಲ್ ಬ್ಯಾಟರಿ‌ ಸ್ಫೋಟ ➤ ಬಾಲಕ ಗಂಭೀರ

(ನ್ಯೂಸ್ ಕಡಬ) Newskadaba.com ಹಾವೇರಿ, ಜು. 17. ಬಾಲಕನೋರ್ವ ಆಟವಾಡುತ್ತಿದ್ದ ವೇಳೆ ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಬಾಲಕ ಗಾಯಗೊಂಡಿರುವ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಹುರಳಿಕುಪ್ಪಿ ಎಂಬಲ್ಲಿ ನಡೆದಿದೆ. ಗಾಯಗೊಂಡ ಬಾಲಕನನ್ನು ಕಾರ್ತಿಕ್ (10) ಎಂದು ಗುರುತಿಸಲಾಗಿದೆ. ಈತ ಆಟವಾಡುತ್ತಿದ್ದ ವೇಳೆ ಮನೆಯ ಪಕ್ಕದಲ್ಲಿ ಮೊಬೈಲ್ ನ ಹಳೆಯ ಬ್ಯಾಟರಿಯೊಂದು ಸಿಕ್ಕಿದ್ದು, ಇದನ್ನು ಕೈಯಲ್ಲಿ ಹಿಡಿದುಕೊಂಡು ಬಾಲಕ ಆಟವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಬ್ಯಾಟರಿ ಸ್ಫೋಟಗೊಂಡಿದ್ದು, ಬಾಲಕನ ಮುಖ ಹಾಗೂ ಕೈಗೆ ಗಾಯಗಳಾಗಿವೆ.

ಆಟವಾಡುತ್ತಿದ್ದ ವೇಳೆ‌ ಮೊಬೈಲ್ ಬ್ಯಾಟರಿ‌ ಸ್ಫೋಟ ➤ ಬಾಲಕ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಈ ವರ್ಷವೂ ಲಾಲ್ ಭಾಗ್ ಫಲಪುಷ್ಪ ಪ್ರದರ್ಶನಕ್ಕೆ ಕೊರೋನಾ ಕರಿಛಾಯೆ ➤ ಫಲಪುಷ್ಪ ಪ್ರದರ್ಶನ ರದ್ದು…!

(ನ್ಯೂಸ್ ಕಡಬ) Newskadaba.com ಬೆಂಗಳೂರು, ಜು. 17. ಕೊರೋನಾ ಎರಡನೇ ಅಲೆ ಮುಗಿಯುವ ಹೊತ್ತಲ್ಲೇ ಮೂರನೇ ಅಲೆಯ ಮುನ್ನೆಚ್ಚರಿಕೆ ಹೊರಬಿದ್ದಿದ್ದು, ಕಳೆದ ಭಾರಿಯ ಹಾಗಯೇ ಈ ಭಾರಿಯೂ ಬೆಂಗಳೂರಿನ ಪ್ರತಿಷ್ಠಿತ ಲಾಲ್ ಭಾಗ್ ಫಲಪುಷ್ಪ ಪ್ರದರ್ಶನ ರದ್ದಾಗಲಿದ್ದು, ಪ್ರವಾಸಿಗರಿಗೆ ನಿರಾಸೆ ಎದುರಾಗಿದೆ. ಪ್ರತೀವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಲಾಲ್ ಭಾಗ್ ನಲ್ಲಿ ಆಕರ್ಷಕ ರೀತಿಯಲ್ಲಿ ಫಲಪುಷ್ಪ ಪ್ರದರ್ಶನ ನಡೆಸುವುದು ವಾಡಿಕೆ. ಆದರೆ ಕಳೆದ ವರ್ಷವೂ ಕೊರೋನಾ ಕಾರಣದಿಂದಾಗಿ ಫಲಪುಷ್ಪ ಪ್ರದರ್ಶನ ರದ್ದುಗೊಳಿಸಲಾಗಿತ್ತು. ಈ ವರ್ಷ

ಈ ವರ್ಷವೂ ಲಾಲ್ ಭಾಗ್ ಫಲಪುಷ್ಪ ಪ್ರದರ್ಶನಕ್ಕೆ ಕೊರೋನಾ ಕರಿಛಾಯೆ ➤ ಫಲಪುಷ್ಪ ಪ್ರದರ್ಶನ ರದ್ದು…! Read More »

ಕರ್ನಾಟಕ

ಉ.ಕ ಜಿಲ್ಲೆಯ ಪ್ರಥಮ ಮಹಿಳಾ ಪೊಲೀಸ್ ಅಧಿಕಾರಿ ಮಂಗಳೂರು ಡಿವೈಎಸ್ಪಿಯಾಗಿ ಆಯ್ಕೆ ➤ ಜು. 19ರಂದು ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) Newskadaba.com ಮಂಗಳೂರು, ಜು. 17. ಉತ್ತರಕನ್ನಡ ಜಿಲ್ಲೆಯ ಪ್ರಪ್ರಥಮ ಮಹಿಳಾ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಅಂಕೋಲಾ ತಾಲೂಕಿನ ವಾಸರ ಕುದ್ರಿಗೆಯ ಧನ್ಯಾ ನೀಲಕಂಠ ನಾಯಕ ಅವರು ಡಿವೈಎಸ್ಪಿ ಹುದ್ದೆಗೆ ನೇಮಕಗೊಂಡಿದ್ದು, ಜು. 19ರಂದು ದ.ಕ ಜಿಲ್ಲೆಯ ಡಿವೈಎಸ್ಪಿ ಯಾಗಿ ಅಧಿಕಾರ ಸ್ವೀಕರಿಸಿಲಿದ್ದಾರೆ. ಧನ್ಯಾ ನಾಯಕ್ ಅವರು 2019-20ರಲ್ಲಿ ನಡೆದ ಕೆಪಿಎಸ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಈ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಉ.ಕ ಜಿಲ್ಲೆಯ ಪ್ರಥಮ ಮಹಿಳಾ ಪೊಲೀಸ್ ಅಧಿಕಾರಿ ಮಂಗಳೂರು ಡಿವೈಎಸ್ಪಿಯಾಗಿ ಆಯ್ಕೆ ➤ ಜು. 19ರಂದು ಅಧಿಕಾರ ಸ್ವೀಕಾರ Read More »

ಕರಾವಳಿ, ಕರ್ನಾಟಕ
Scroll to Top