ಮಂಗಳೂರು – ಬೆಂಗಳೂರು ವಿಸ್ಟಾಡೋಂ ರೈಲಿನ ಮೇಲೆ ಧರೆ ಕುಸಿತ ➤ ಹಳಿಯಲ್ಲೇ ಬಾಕಿಯಾದ ರೈಲು

(ನ್ಯೂಸ್ ಕಡಬ) newskadaba.com ಸವಣೂರು, ಜು.18. ರೈಲು ಹಳಿಯ ಮೇಲೆ ಧರೆ ಕುಸಿದ ಪರಿಣಾಮ ಮಂಗಳೂರು – ಬೆಂಗಳೂರು ರೈಲಿನ ಗಾರ್ಡ್ ಗೆ ಹಾನಿಯಾದ ಘಟನೆ ಭಾನುವಾರದಂದು ಸವಣೂರಿನಲ್ಲಿ ನಡೆದಿದೆ.

ಕಬಕ ಪುತ್ತೂರು – ಸುಬ್ರಹ್ಮಣ್ಯ ರೋಡ್ ರೈಲ್ವೇ ಹಳಿಯ ನಡುವಿನ ವೀರಮಂಗಲ, ಗಡಿಪಿಲ ಸಮೀಪದಲ್ಲಿ ರೈಲು ಚಲಿಸುತ್ತಿದ್ದಾಗ ಏಕಾಏಕಿ ಧರೆ ಕುಸಿದು ರೈಲಿನ ಗಾರ್ಡ್‌ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ರೈಲು ಇದೀಗ ಹಳಿಯಲ್ಲೇ ಬಾಕಿಯಾಗಿದ್ದು, ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಮಣ್ಣು ತೆರವು ಕಾರ್ಯ ಆರಂಭಗೊಂಡಿದೆ.

 

 

 

Scroll to Top