ಕ್ರೀಡಾ ನ್ಯೂಸ್

ಮುಂಬೈ ತಂಡ ನಾಯಕತ್ವಕ್ಕೆ ಅಜಿಂಕ್ಯ ರಹಾನೆ ಗುಡ್‌ ಬೈ..!

(ನ್ಯೂಸ್‌ ಕಡಬ) newskadaba.com, ಆ.21: ಭಾರತ ತಂಡದ ಅನುಭವಿ ಬ್ಯಾಟ್ಸ್‌ಮನ್‌ ಅಂಜಿಕ್ಯ ರಹಾನೆ ಮುಂಬರುವ ದೇಶೀಯ ಟೂರ್ನಿಗೂ ಮುನ್ನ ಮುಂಬೈ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಹೊಸ ನಾಯಕನನ್ನು ರೂಪಿಸುವ ಸಲುವಾಗಿ ಅವರು ಈ ತೀರ್ಮಾನ ಕೈಗೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಅವರು, ಮುಂಬೈ ತಂಡದೊಂದಿಗೆ ನಾಯಕತ್ವ ವಹಿಸಿಕೊಂಡು ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲುವುದು ನನಗೆ ಸಂಪೂರ್ಣ ಗೌರವವಾಗಿದೆ. ಮುಂಬರುವ ಹೊಸ ದೇಶೀಯ ಸೀಸನ್‌ಗೆ ಹೊಸ ನಾಯಕನನ್ನು ನೇಮಿಸಿಕೊಳ್ಳಲು ಇದು ಸರಿಯಾದ ಸಮಯ ಎಂದು ನಾನು ನಂಬುತ್ತೇನೆ. […]

ಮುಂಬೈ ತಂಡ ನಾಯಕತ್ವಕ್ಕೆ ಅಜಿಂಕ್ಯ ರಹಾನೆ ಗುಡ್‌ ಬೈ..! Read More »

ಕ್ರೀಡಾ ನ್ಯೂಸ್

ಏಷ್ಯಾಕಪ್‌ ತಂಡದಲ್ಲಿ ಸ್ಥಾನ ಪಡೆದ ಆಟಗಾರರಿವರು…

(ನ್ಯೂಸ್‌ ಕಡಬ) newskadaba.com, ಆ.21: ಏಷ್ಯಾಕಪ್‌ ಟೂರ್ನಿಗೆ 15 ಸದಸ್ಯರುಗಳ ಟೀಂ ಇಂಡಿಯಾವನ್ನು ಹೆಸರಿಸಲಾಗಿದೆ. 15 ಸದಸ್ಯರುಗಳ ಪೈಕಿ ಟಿ20 ವಿಶ್ವಕಪ್‌ ಆಡಿದ 8 ಆಟಗಾರರು ಕಾಣಿಸಿಕೊಂಡಿರುವುದು ವಿಶೇಷ.  ಏಷ್ಯಾಕಪ್‌ 2025ರ ತಂಡಗಳಲ್ಲಿ ಸ್ಥಾನ ಪಡೆದಿರುವ ಆಟಗಾರರ ಪಟ್ಟಿ ಹೀಗಿವೆ. ಏಷ್ಯಾ ಕಪ್‌ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್‌ಮನ್‌ ಗಿಲ್‌ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್‌ ಶರ್ಮಾ, ಅರ್ಷದೀಪ್‌ ಸಿಂಗ್‌, ವರುಣ್ ಚಕ್ರವರ್ತಿ,

ಏಷ್ಯಾಕಪ್‌ ತಂಡದಲ್ಲಿ ಸ್ಥಾನ ಪಡೆದ ಆಟಗಾರರಿವರು… Read More »

ಕ್ರೀಡಾ ನ್ಯೂಸ್

ಏಶ್ಯನ್ ಶೂಟಿಂಗ್ ಚಾಂಪಿಯನ್‌ ಶಿಪ್ಸ್-2025; ಚಿನ್ನ ಗೆದ್ದ ರಶ್ಮಿಕಾ, ಮನು ಭಾಕರ್‌ ಗೆ ಕಂಚು

(ನ್ಯೂಸ್ ಕಡಬ) newskadaba.com ಆ. 20. ಕಝಕಿಸ್ತಾನದ ಶಿಮ್ಕೆಂಟ್‌ ನಲ್ಲಿ ಮಂಗಳವಾರದಂದು ನಡೆದ ಏಶ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್ಸ್ ನ ಜೂನಿಯರ್ ಮಹಿಳೆಯರ ಸ್ಪರ್ಧೆಯಲ್ಲಿ ರಶ್ಮಿಕಾ ಸಹಗಲ್ ಚಿನ್ನದ ಪದಕ ಜಯಿಸಿದರೆ, 10 ಮೀ. ಏರ್ ಪಿಸ್ತೂಲ್ ಮಹಿಳೆಯರ ಸ್ಪರ್ಧೆಯಲ್ಲಿ ಭಾರತೀಯ ಶೂಟರ್ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದಾರೆ.   8 ಆಟಗಾರ್ತಿಯರಿದ್ದ ಫೈನಲ್‌ನಲ್ಲಿ ಮನು ಬಾಕರ್ 219.7 ಅಂಕ ಗಳಿಸಿ 3ನೇ ಸ್ಥಾನ ಪಡೆದರೆ, ದಕ್ಷಿಣ ಕೊರಿಯಾದ ಜಿನ್ ಯಾಂಗ್(241.6)ಹಾಗೂ ಚೀನಾದ ಕ್ವಿಯಾಂಕ್ ಮಾ(243.2)ಮೊದಲೆರಡು ಸ್ಥಾನ

ಏಶ್ಯನ್ ಶೂಟಿಂಗ್ ಚಾಂಪಿಯನ್‌ ಶಿಪ್ಸ್-2025; ಚಿನ್ನ ಗೆದ್ದ ರಶ್ಮಿಕಾ, ಮನು ಭಾಕರ್‌ ಗೆ ಕಂಚು Read More »

ಕ್ರೀಡಾ ನ್ಯೂಸ್

ಏಷ್ಯಾಕಪ್ ಗೆ ಭಾರತ ತಂಡ ಪ್ರಕಟ

(ನ್ಯೂಸ್ ಕಡಬ) newskadaba.com ಆ. 20. ಏಷ್ಯಾಕಪ್ ಟೂರ್ನಿಗೆ ಕೊನೆಗೂ 15 ಸದಸ್ಯರುಗಳ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಮುನ್ನಡೆಸಿದರೆ ಉಪನಾಯಕನಾಗಿ ಶುಭ್​ಮನ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ.   ಮೊಹಮ್ಮದ್ ಸಿರಾಜ್ ​ಗೆ ವಿಶ್ರಾಂತಿ ನೀಡಲಾಗಿದ್ದು, ಗಾಯಾಳು ರಿಷಭ್ ಪಂತ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಇನ್ನು ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರೆಂದರೆ, ಆರಂಭಿಕರಾಗಿ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಕಾಣಿಸಿಕೊಂಡಿದ್ದಾರೆ. ಮೂರನೇ ಕ್ರಮಾಂಕಕ್ಕೆ ಎಡಗೈ ದಾಂಡಿಗ ತಿಲಕ್ ವರ್ಮಾ, ನಾಲ್ಕನೇ ಕ್ರಮಾಂಕಕ್ಕೆ ನಾಯಕ ಸೂರ್ಯಕುಮಾರ್

ಏಷ್ಯಾಕಪ್ ಗೆ ಭಾರತ ತಂಡ ಪ್ರಕಟ Read More »

ಕ್ರೀಡಾ ನ್ಯೂಸ್

ಏಷ್ಯನ್ ಶೂಟಿಂಗ್: ಕಂಚು ಗೆದ್ದ ಮನು ಭಾಕರ್

(ನ್ಯೂಸ್‌ ಕಡಬ) newskadaba.com ಆ. 19:  ಕಜಕಿಸ್ತಾನ: ಇಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಭಾರತದ ರಶ್ಮಿಕಾ ಸಹಗಲ್ ಚಿನ್ನ ಗೆದ್ದರೆ, ಡಬಲ್ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಇದು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮನು ಭಾಕರ್ ಗೆದ್ದ 9 ನೇ ಪದಕ. ಮಂಗಳವಾರ ನಡೆದ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಎಂಟು ಆಟಗಾರರ ಫೈನಲ್‌ನಲ್ಲಿ ಮನು 219.7 ಅಂಕಗಳನ್ನು ಗಳಿಸಿ

ಏಷ್ಯನ್ ಶೂಟಿಂಗ್: ಕಂಚು ಗೆದ್ದ ಮನು ಭಾಕರ್ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

Asia Cup 2025: ಇಂದು ಭಾರತ ತಂಡ ಪ್ರಕಟ

(ನ್ಯೂಸ್‌ ಕಡಬ) newskadaba.com, ಆ.19: 2025ರ ಏಷ್ಯಾಕಪ್‌ ಸೆ.9ರಿಂದ ಆರಂಭವಾಗಲಿದೆ. ಈ ಟೂರ್ನಮೆಂಟ್‌ಗಾಗಿ ಭಾರತೀಯ ತಂಡವನ್ನು ಇಂದು ಬಿಸಿಸಿಐ ಸಭೆ ಕರೆದು ಘೋಷಣೆ ಮಾಡಲಿದೆ. ಮೊದಲು ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಆಯ್ಕೆ ಸಮಿತಿಯ ಸಭೆ ನಡೆಯಲಿದ್ದು, ಬಳಿಕ ಮುಖ್ಯ ಆಯ್ಕೆಗಾರ ಅಜಿತ್‌ ಅಗರ್ಕರ್‌ ಹಾಗೂ ತಂಡದ ನಾಯಕ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿ ತಂಡವನ್ನು ಘೋಷಣೆ ಮಾಡಲಿದ್ದಾರೆ. ಇದರೊಂದಿಗೆ ಐಸಿಸಿ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ಗೆ ಕೂಡ ಟೀಂ ಇಂಡಿಯಾವನ್ನು ಹೆಸರಿಸಲಿದ್ದಾರೆ. ಮುಂಬೈನಲ್ಲಿರುವ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಇಂದು ಮಹತ್ವದ ಸಭೆ

Asia Cup 2025: ಇಂದು ಭಾರತ ತಂಡ ಪ್ರಕಟ Read More »

ಕ್ರೀಡಾ ನ್ಯೂಸ್

ದುಲೀಪ್‌ ಟ್ರೋಫಿಯಿಂದ ಹೊರಬಿದ್ದ ಇಶಾನ್‌ ಕಿಶನ್‌

(ನ್ಯೂಸ್‌ ಕಡಬ) newskadaba.com, ಆ.18: ದುಲೀಪ್‌ ಟ್ರೋಫಿಯಿಂದ ಇಶಾನ್‌ ಕಿಶನ್‌ ಹೊರಬಿದ್ದಿದ್ದಾರೆ. ಪೂರ್ವ ವಲಯ ತಂಡದ ನಾಯಕರಾಗಿ ಆಯ್ಕೆಯಾಗಿದ್ದ ಇಶಾನ್ ಗಾಯದ ಕಾರಣ ಹೊರಗುಳಿದಿದ್ದಾರೆ. ಅವರ ಬದಲಿಗೆ ಅಭಿಮನ್ಯು ಈಶ್ವರನ್‌ ಅವರಿಗೆ ಕ್ಯಾಪ್ಟನ್‌ ಸ್ಥಾನ ನೀಡಲಾಗಿದೆ. ಇಶಾನ್‌ ಕಿಶನ್‌ ಸ್ಥಾನಕ್ಕೆ ವಿಕೆಟ್‌ ಬ್ಯಾಟರ್‌ ಆಶೀರ್ವಾದ್‌ ಸ್ವೈನ್‌ ಆಯ್ಕೆಯಾಗಿದ್ದಾರೆ. ಆಶೀರ್ವಾದ್‌ ಅವರು ಈವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 11 ಪಂದ್ಯಗಳನ್ನು ಆಡಿದ್ದಾರೆ.21 ಇನ್ನಿಂಗ್ಸ್‌ನಲ್ಲಿ ಆಡಿರುವ ಅವರು 30.75 ಸರಾಸರಿಯಲ್ಲಿ ಒಟ್ಟು 615 ರನ್‌ ಗಳಿಸಿದ್ದಾರೆ. ಇದರೊಂದಿಗೆ ವಿಕೆಟ್‌ ಕೀಪಿಂಗ್‌ನಲ್ಲಿ

ದುಲೀಪ್‌ ಟ್ರೋಫಿಯಿಂದ ಹೊರಬಿದ್ದ ಇಶಾನ್‌ ಕಿಶನ್‌ Read More »

ಕ್ರೀಡಾ ನ್ಯೂಸ್

ಕಡಬ: ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಪ್ರಶಸ್ತಿ ಬಾಚಿಕೊಂಡ ಕ್ನಾನಾಯ ಜ್ಯೋತಿ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಕಡಬ, ಆ. 18. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನೆಟ್ಟಣದ ಮೌಂಟ್ ಸಿಯೋನ್ ಶಾಲೆಯ ಆಶ್ರಯದಲ್ಲಿ ಶಟಲ್ ಬಾಡ್ಮಿಂಟನ್ ಕ್ರೀಡಾಕೂಟವು ಕುಲ್ಕುಂದದಲ್ಲಿ ನಡೆಯಿತು. ನಾಲ್ಕು ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಬಾರಿ ಕಡಬ ವಲಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನಾಲ್ಕು ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಫೈನಲ್ ಹಂತ ಪ್ರವೇಶಿಸಿದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ

ಕಡಬ: ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಪ್ರಶಸ್ತಿ ಬಾಚಿಕೊಂಡ ಕ್ನಾನಾಯ ಜ್ಯೋತಿ ವಿದ್ಯಾರ್ಥಿಗಳು Read More »

ಕ್ರೀಡಾ ನ್ಯೂಸ್

ಉಡುಪಿ – ಸಿಯಾಚಿನ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಲು 1,300 ಕಿ.ಮೀ ದೂರ ಬೈಕ್‌ ಸವಾರಿ ಮಾಡಿದ 57 ನೇ ವಯಸ್ಸಿನ ಮಹಿಳೆಯ ಸಾಹಸ !

(ನ್ಯೂಸ್ ಕಡಬ) newskadaba.com ಆ. 18 ಉಡುಪಿ : ಸಾಹಸಕ್ಕೆ ವಯಸ್ಸು ಅಡ್ಡಿಯಾಗಲ್ಲ ಎಂದು ಕುಂದಾಪುರದ 57 ವರ್ಷದ ವಿಲ್ಮಾ ಕ್ರಾಸ್ತಾ ಕಾರ್ವಾಲ್ಹೋ ಮತ್ತೊಮ್ಮೆ ಅದನ್ನು ಸಾಬೀತುಪಡಿಸಿದ್ದಾರೆ. 2023 ರಲ್ಲಿ ವಿಶ್ವದ ಅತಿ ಎತ್ತರದ ಪ್ರದೇಶವಾದ ಪಾಸ್ ಉಮ್ಲಿಂಗ್ ಗೆ ತನ್ನ ಮಗಳು ಚೆರಿಶ್ ಕರ್ವಾಲೋ ಜೊತೆ ಧೈರ್ಯಶಾಲಿಯಾಗಿ ಬೈಕ್‌ ಸವಾರಿ ಮೂಲಕ ಗಮನ ಸೆಳೆದ ನಂತರ, ವಿಲ್ಮಾ ಈಗ ಮತ್ತೊಂದು ಗಮನಾರ್ಹ ಸಾಧನೆ ಮಾಡಿದ್ದಾರೆ. ಆಗಸ್ಟ್‌ 15 ಸ್ವಾತಂತ್ರ್ಯ ದಿನದಂದು, ವಿಶ್ವದ ಅತ್ಯಂತ ಸವಾಲಿನ ಭೂಪ್ರದೇಶಗಳಲ್ಲಿ ಒಂದಾದ ಸಿಯಾಚಿನ್

ಉಡುಪಿ – ಸಿಯಾಚಿನ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಲು 1,300 ಕಿ.ಮೀ ದೂರ ಬೈಕ್‌ ಸವಾರಿ ಮಾಡಿದ 57 ನೇ ವಯಸ್ಸಿನ ಮಹಿಳೆಯ ಸಾಹಸ ! Read More »

ಕರಾವಳಿ, ಕರ್ನಾಟಕ, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

Asia Cup: ಕೈಫ್‌ ಪ್ರಕಾರ ಭಾರತ ತಂಡ ಹೀಗಿರಲಿದೆ

(ನ್ಯೂಸ್‌ ಕಡಬ) newskadaba.com, ಆ.17:‌ ಏಷ್ಯಾಕಪ್‌ ಟಿ20 ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಸೆ.9ರಿಂದ ಆರಂಭವಾಗಲಿರುವ ಈ ಟೂರ್ನಿಗಾಗಿ ಆಗಸ್ಟ್‌ 3ನೇ ವಾರದಲ್ಲಿ ಭಾರತ ತಂಡವನ್ನು ಪ್ರಕಟಿಸಲು ಬಿಸಿಸಿಐ ತೀರ್ಮಾನಿಸಿದೆ. ಈ ನಡುವೆ ಟೀಂ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್‌ ಕೈಫ್‌ ಅವರು 15 ಸದಸ್ಯರ ತಂಡವೊಂದನ್ನು ಪ್ರಕಟಿಸಿದ್ದಾರೆ. ಈ 15 ಸದಸ್ಯರ ಬಳಗದಿಂದ ಕೆಎಲ್‌ ರಾಹುಲ್‌, ಯಶಸ್ವಿ ಜೈಸ್ವಾಲ್‌, ಶ್ರೇಯಸ್‌ ಅಯ್ಯರ್‌ ಅವರನ್ನು ಕೈಬಿಟ್ಟಿದ್ದಾರೆ. ಕೈಫ್‌ ಪ್ರಕಾರ, ಏಷ್ಯಾಕಪ್‌ಗಾಗಿ ಭಾರತ ತಂಡದಲ್ಲಿ ಆರಂಭಿಕರಾಗಿ ಅಭಿಷೇಕ್‌ ಶರ್ಮಾ ಮತ್ತು

Asia Cup: ಕೈಫ್‌ ಪ್ರಕಾರ ಭಾರತ ತಂಡ ಹೀಗಿರಲಿದೆ Read More »

ಕ್ರೀಡಾ ನ್ಯೂಸ್
Scroll to Top