ಮುಂಬೈ ತಂಡ ನಾಯಕತ್ವಕ್ಕೆ ಅಜಿಂಕ್ಯ ರಹಾನೆ ಗುಡ್‌ ಬೈ..!

(ನ್ಯೂಸ್ಕಡಬ) newskadaba.com, ಆ.21: ಭಾರತ ತಂಡದ ಅನುಭವಿ ಬ್ಯಾಟ್ಸ್ಮನ್ಅಂಜಿಕ್ಯ ರಹಾನೆ ಮುಂಬರುವ ದೇಶೀಯ ಟೂರ್ನಿಗೂ ಮುನ್ನ ಮುಂಬೈ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಹೊಸ ನಾಯಕನನ್ನು ರೂಪಿಸುವ ಸಲುವಾಗಿ ಅವರು ತೀರ್ಮಾನ ಕೈಗೊಂಡಿದ್ದಾರೆ.

ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಮಾಡಿರುವ ಅವರು, ಮುಂಬೈ ತಂಡದೊಂದಿಗೆ ನಾಯಕತ್ವ ವಹಿಸಿಕೊಂಡು ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲುವುದು ನನಗೆ ಸಂಪೂರ್ಣ ಗೌರವವಾಗಿದೆ. ಮುಂಬರುವ ಹೊಸ ದೇಶೀಯ ಸೀಸನ್ಗೆ ಹೊಸ ನಾಯಕನನ್ನು ನೇಮಿಸಿಕೊಳ್ಳಲು ಇದು ಸರಿಯಾದ ಸಮಯ ಎಂದು ನಾನು ನಂಬುತ್ತೇನೆ. ಆದ್ದರಿಂದ, ನಾನು ನಾಯಕತ್ವದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದೇನೆ. ಒಬ್ಬ ಆಟಗಾರನಾಗಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ನಾನು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಮುಂಬೈ ಕ್ರಿಕೆಟ್ಅಸೋಸಿಯೇಷನ್ನೊಂದಿಗೆ ನನ್ನ ಪ್ರಯಾಣವನ್ನು ಮುಂದುವರಿಸುತ್ತೇನೆ. ಮುಂದಿನ ಸೀಸನ್ಗಾಗಿ ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ರಹಾನೆ ನಾಯಕತ್ವದಲ್ಲಿ ಮುಂಬೈ ತಂಡ 2023-24ನೇ ಸೀಸನ್ನಲ್ಲಿ ರಣಜಿ ಟ್ರೋಫಿಯನ್ನು ಗೆಲ್ಲುವ ಮುಖೇನ 7 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತ್ತು. ಹಾಗೆಯೇ ರಹಾನೆ ಮುಂದಾಳತ್ವದ ಮುಂಬೈ ತಂಡವು 2024-25 ಸೀಸನ್ನಲ್ಲಿ ಇರಾನಿ ಟ್ರೋಫಿಯನ್ನು ಗೆದ್ದಿತು. ಇದೀಗ ಮುಂಬರುವ ಸೀಸನ್ನಲ್ಲಿ ಕೇವಲ ಬ್ಯಾಟರ್ಆಗಿ ಕಣಕ್ಕಿಳಿಯಲು ರಹಾನೆ ತೀರ್ಮಾನಿಸಿದ್ದಾರೆ.

Scroll to Top