ರಾಷ್ಟ್ರೀಯ ನ್ಯೂಸ್

ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ

(ನ್ಯೂಸ್ ಕಡಬ)newskadaba.com, ಅ. 31 ಗುಜಾರಾತ್: ಪ್ರತಿ ವರ್ಷದಂತೆ ಯೋಧರೊಂದಿಗೆ ದೀಪಾವಳಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಗುಜರಾತ್‌ನ ಕಛ್‌ಗೆ ಆಗಮಿಸಿದ್ದಾರೆ. ಬಿಎಸ್ಎಫ್ ಯೋಧರಿಗೆ ಸಿಹಿ ತಿನ್ನಿಸುವ ಮೂಲಕ ಪ್ರಧಾನಿ ಮೋದಿ ಈ ಬಾರಿಯ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಬಾರಿ ಅವರು ಭಾರತ-ಪಾಕಿಸ್ತಾನ ಗಡಿಗೆ ಸಮೀಪವಿರುವ ಕಛ್‌ನ ಲಕ್ಕಿ ನಾಲಾ ಪ್ರದೇಶದಲ್ಲಿದ್ದಾರೆ. ಬಿಎಸ್‌ಎಫ್‌ನ ಗಡಿ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಯೋಧರಿಗೆ ಅವರು ಸಿಹಿ ತಿನ್ನಿಸುತ್ತಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.

ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ Read More »

ರಾಷ್ಟ್ರೀಯ ನ್ಯೂಸ್

’ಒನ್ ನೇಷನ್, ಒನ್ ಎಲೆಕ್ಷನ್’ ಶೀಘ್ರದಲ್ಲೇ ಜಾರಿ- ಪ್ರಧಾನಿ ಮೋದಿ ಘೋಷಣೆ

(ನ್ಯೂಸ್ ಕಡಬ)newskadaba.com ಅಹಮದಾಬಾದ್, ಅ. 31.  ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 149ನೇ ಜನ್ಮದಿನದ ಅಂಗವಾಗಿ ಗುಜರಾತ್‌ನ ಏಕತಾ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಶೀಘ್ರದಲ್ಲೇ ಒಂದು ದೇಶ, ಒಂದು ಎಲೆಕ್ಷನ್‌ ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಘೋಷಿಸಿದ್ದಾರೆ. ಒನ್ ನೇಷನ್, ಒನ್ ಎಲೆಕ್ಷನ್’ ಕನಸು ಶೀಘ್ರದಲ್ಲೇ ನನಸಾಗಲಿದೆ ಎಂದಿರುವ ಪ್ರಧಾನಿ ಮೋದಿ, ದೇಶದ ಎಲ್ಲಾ ಚುನಾವಣೆಗಳನ್ನು ಒಂದೇ ದಿನದಲ್ಲಿ ಅಥವಾ

’ಒನ್ ನೇಷನ್, ಒನ್ ಎಲೆಕ್ಷನ್’ ಶೀಘ್ರದಲ್ಲೇ ಜಾರಿ- ಪ್ರಧಾನಿ ಮೋದಿ ಘೋಷಣೆ Read More »

ರಾಷ್ಟ್ರೀಯ ನ್ಯೂಸ್

ಒಂದೇ ವರ್ಷದಲ್ಲಿ 2 ಲಕ್ಷ ಕಿರಾಣಿ ಅಂಗಡಿಗಳು ಬಂದ್..!

(ನ್ಯೂಸ್ ಕಡಬ) newskadaba.com ಅ. 31. ಈ ಬೆಳೆಯುತ್ತಿರುವ ಯುಗದಲ್ಲಿ ದೇಶಾದ್ಯಂತ ಇ-ಕಾಮರ್ಸ್‌ ಸಂಸ್ಕೃತಿ ವೃದ್ಧಿಯಾಗಿ ಸಾರ್ವಜನಿಕರು ಆನ್‌ ಲೈನ್‌ ಶಾಪಿಂಗ್‌ ಕಡೆ ಹೆಚ್ಚಿನ ಒಲವು ತೋರುತ್ತಿದ್ದು, ಇದರಿಂದ ಕಿರಾಣಿ ಅಂಗಡಿಗಳ ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಕಳೆದೊಂದು ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಕಿರಾಣಿ ಅಂಗಡಿಗಳಿಗೆ ಬೀಗ ಬಿದ್ದಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. 4 ಲಕ್ಷಕ್ಕೂ ಅಧಿಕ ವಿತರಕರ ಸಂಘಟನೆಯಾಗಿರುವ ಅಖಿಲ ಭಾರತ ಗ್ರಾಹಕ ವಸ್ತುಗಳ ಪೂರೈಕೆದಾರರ ಸಂಘಟನೆ ನಡೆಸಿದ ಅಧ್ಯಯನ, ದೇಶದಲ್ಲಿ ಇ-ಕಾಮರ್ಸ್‌

ಒಂದೇ ವರ್ಷದಲ್ಲಿ 2 ಲಕ್ಷ ಕಿರಾಣಿ ಅಂಗಡಿಗಳು ಬಂದ್..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದೇಶದೆಲ್ಲೆಡೆ ಏಕತಾ ದಿವಸ ಆಚರಣೆ- ಉಕ್ಕಿನ ಮನುಷ್ಯನಿಗೆ ಪ್ರಧಾನಿ ಮೋದಿಯಿಂದ ಗೌರವಾರ್ಪಣೆ

(ನ್ಯೂಸ್ ಕಡಬ)newskadaba.com ಅಹಮದಾಬಾದ್, ಅ. 31. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 149ನೇ ಜನ್ಮದಿನದ ಅಂಗವಾಗಿ ಗುಜರಾತ್‌ನ ಏಕತಾ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಪುಷ್ಪ ನಮನ ಸಲ್ಲಿಸಿದರು. ಅಕ್ಟೋಬರ್‌ 31 ರಂದು ಸರ್ದಾರ್‌ ವಲ್ಲಭಭಾಯಿ ಪಟೇಲರ ಜನ್ಮ ದಿನವನ್ನು ಏಕತಾ ದಿವಸ್‌ ಎಂದು ಆಚರಿಸಲಾಗುತ್ತದೆ.  ಗುಜರಾತ್‌ನ ಏಕತಾ ಪ್ರತಿಮೆಯ ಬಳಿ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರಧಾನಿ ಭಾಗವಹಿಸಿದ್ದಾರೆ. ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದ ಮೋದಿ “ಪಟೇಲ್‌ ಒಬ್ಬ ಧೀಮಂತ ನಾಯಕರಾಗಿದ್ದರು. ಅವರ ಕಾರ್ಯಗಳು ಮುಂದಿನ

ದೇಶದೆಲ್ಲೆಡೆ ಏಕತಾ ದಿವಸ ಆಚರಣೆ- ಉಕ್ಕಿನ ಮನುಷ್ಯನಿಗೆ ಪ್ರಧಾನಿ ಮೋದಿಯಿಂದ ಗೌರವಾರ್ಪಣೆ Read More »

ರಾಷ್ಟ್ರೀಯ ನ್ಯೂಸ್

ವಿಶ್ವದಾಖಲೆ ಬರೆದ ಅಯೋಧ್ಯೆ ದೀಪೋತ್ಸವ; 25 ಲಕ್ಷಕ್ಕೂ ಅಧಿಕ ಬೆಳಗಿದ ದೀಪಗಳು..!

(ನ್ಯೂಸ್ ಕಡಬ) newskadaba.com ಅ. 31. ಅಯೋಧ್ಯೆಯ ರಾಮಮಂದಿರದಲ್ಲಿ ಮಹಾಮಸ್ತಕಾಭಿಷೇಕದ ನಂತರ ಪ್ರಥಮ ಬಾರಿಗೆ ರಾಮನಗರಿಯಲ್ಲಿ ದೀಪೋತ್ಸವವನ್ನು ಆಯೋಜಿಸಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಮತ್ತು ಕೇಶವ್ ಪ್ರಸಾದ್ ಮೌರ್ಯ ಅವರು ಶ್ರೀರಾಮನನ್ನು ಸೀತಾ, ಲಕ್ಷ್ಮಣ, ಹನುಮಾನ್ ಮತ್ತು ಇತರರೊಂದಿಗೆ ‘ಪುಷ್ಪಕ ವಿಮಾನ’ (ಹೆಲಿಕಾಪ್ಟರ್) ದಲ್ಲಿ ಅಯೋಧ್ಯೆಗೆ ಆಗಮಿಸಿದಾಗ ಸ್ವಾಗತಿಸಿದರು. ಮುಖ್ಯಮಂತ್ರಿ ಮತ್ತು ಇತರರು ರಾಮ ದರ್ಬಾರ್ ಸ್ಥಳಕ್ಕೆ ಶ್ರೀರಾಮನ ರಥವನ್ನು ಎಳೆದರು. ಆದಿತ್ಯನಾಥ್ ಅವರು ಆರತಿ ನೆರವೇರಿಸಿದರು. ಛೋಟಿ ದೀಪಾವಳಿಯ

ವಿಶ್ವದಾಖಲೆ ಬರೆದ ಅಯೋಧ್ಯೆ ದೀಪೋತ್ಸವ; 25 ಲಕ್ಷಕ್ಕೂ ಅಧಿಕ ಬೆಳಗಿದ ದೀಪಗಳು..! Read More »

ರಾಷ್ಟ್ರೀಯ ನ್ಯೂಸ್

ಮೀನುಗಾರರ ನಡುವೆ ಗಲಾಟೆ ಮೀನುಗಾರರನ್ನು ಕೊಂದು ಬೋಟ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು..!

(ನ್ಯೂಸ್ ಕಡಬ) newskadaba.com ಅ. 31. ಎರಡು ತಂಡದ ಮೀನುಗಾರರ ನಡುವೆ ವಾಗ್ವಾದ ನಡೆದು ಸಿಟ್ಟಿಗೆದ್ದ ಒಂದು ಬೋಟಿನ ಮೀನುಗಾರರು ಇನ್ನೊಂದು ಬೋಟಿನ ಮೀನುಗಾರರನ್ನು ಕೊಂದು ಆ ಬೋಟಿಗೆ ಬೆಂಕಿ ಹಚ್ಚಿರುವಂತಹ ಅಘಾತಕಾರಿ ಘಟನೆ ಮಹಾರಾಷ್ಟ್ರದ ಸಿಂಧುದುರ್ಗದ ದೇವಗಢದ ಕುಂಕೇಶ್ವರ ಬಳಿಯ ಸಮುದ್ರದಲ್ಲಿ ನಡೆದಿದೆ. ಮೀನುಗಾರರ ನಡುವೆ ವಾಗ್ವಾದ ನಡೆದ ಬಳಿಕ ಕೊಲೆ ನಡೆದಿದೆ ಎನ್ನಲಾಗಿದೆ. ಮೃತರನ್ನು ತಾಂಡೇಲ್ ರವೀಂದ್ರ ನಾಟೇಕರ್ ಎಂದು ಗುರುತಿಸಲಾಗಿದೆ. ಹತ್ತಿರದ ದೋಣಿಗಳು ಮೀನುಗಾರನನ್ನು ಉಳಿಸಲು ಪ್ರಯತ್ನಿಸಿದವು. ಆದರೂ ಏನು ಪ್ರಯೋಜನ ಆಗಲಿಲ್ಲ.

ಮೀನುಗಾರರ ನಡುವೆ ಗಲಾಟೆ ಮೀನುಗಾರರನ್ನು ಕೊಂದು ಬೋಟ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಡ್ರೆಸ್ ಕೋಡ್ ಉಲ್ಲಂಘನೆ- ಸ್ಟಾಲಿನ್ ಗೆ ಕೋರ್ಟ್ ನೋಟೀಸ್..!

(ನ್ಯೂಸ್ ಕಡಬ) newskadaba.com ಅ.31. ಡ್ರೆಸ್‌ಕೋಡ್‌ ಉಲ್ಲಂಘಿಸಿದ ಆರೋಪದಡಿ ಮದ್ರಾಸ್‌ ಹೈಕೋರ್ಟ್‌ ರಿಟ್‌ ಅರ್ಜಿ ವಿಚಾರವಾಗಿ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್‌ಗೆ ನೋಟಿಸ್‌ ಜಾರಿ ಮಾಡಿದೆ. ಉದಯಿಸುತ್ತಿರುವ ಸೂರ್ಯ – ಇದು ಡಿಎಂಕೆ ಚಿಹ್ನೆಯಾಗಿದ್ದು, ಇದನ್ನು ತಮ್ಮ ಟಿ-ಶರ್ಟ್‌ ಧರಿಸಿ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಹೀಗಾಗಿ ರಾಜ್ಯ ಸರಕಾರಿ ನೌಕರರ ವಸ್ತ್ರ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ವಕೀಲ ಟಿ.ಸತ್ಯಕುಮಾರ್‌ ಎಂಬುವವರು ಪಿಐಎಲ್‌ ಸಲ್ಲಿಕೆ ಮಾಡಿದ್ದರು. ಇದರ ವಿಚಾರಣೆ ಮಾಡಿದ ಕೋರ್ಟ್‌ ಇದೀಗ ನೋಟಿಸ್‌ ಜಾರಿ ಮಾಡಿದೆ.

ಡ್ರೆಸ್ ಕೋಡ್ ಉಲ್ಲಂಘನೆ- ಸ್ಟಾಲಿನ್ ಗೆ ಕೋರ್ಟ್ ನೋಟೀಸ್..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಾಲಿವುಡ್ ನಟ ಸಲ್ಮಾನ್ ಖಾನ್‌ ಗೆ ಮತ್ತೆ ಜೀವ ಬೆದರಿಕೆ ಸಂದೇಶ

(ನ್ಯೂಸ್ ಕಡಬ)newskadaba.com ಮುಂಬೈ, ಅ. 30. ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಅಪರಿಚಿತ ವ್ಯಕ್ತಿಯಿಂದ ಮತ್ತೆ ಜೀವ ಬೆದರಿಕೆ ಬಂದಿದೆ. ಜೊತೆಗೆ ಆ ವ್ಯಕ್ತಿಯು 2 ಕೋಟಿ ರೂ.ಗೆ ಬೇಡಿಕೆಯಿಟ್ಟಿರುವುದಾಗಿ ಮುಂಬೈ ಟ್ರಾಫಿಕ್ ಪೊಲೀಸರಿಗೆ ಸಂದೇಶ ಕಳುಹಿಸಿದ್ದಾರೆ. ಮೇಲಿಂದ ಮೇಲೆ ನಟ ಸಲ್ಮಾನ್ ಖಾನ್ ಜೀವ ಬೆದರಿಕೆಗಳು ಬರುತ್ತಲೇ ಇವೆ. ಇದೀಗ ಜೀವ ಬೆದರಿಕೆ ಸಂದೇಶದ ಜೊತೆಗೆ 2 ಕೋಟಿ ರೂ. ಬೇಡಿಕೆಯಿಟ್ಟಿದ್ದಾರೆ. ಜೊತೆಗೆ ತಾವು ಕೇಳಿದಷ್ಟು ಹಣ ನೀಡದೆ ಇದ್ದರೆ ಹತ್ಯೆ ಮಾಡುವುದಾಗಿ ಸಂದೇಶ ರವಾನಿಸಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್‌ ಗೆ ಮತ್ತೆ ಜೀವ ಬೆದರಿಕೆ ಸಂದೇಶ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನೋಯ್ಡಾ ಬ್ಯಾಂಕ್ವೆಟ್ ಹಾಲ್ ನವೀಕರಣದ ವೇಳೆ ಬೆಂಕಿ – ಎಲೆಕ್ಟ್ರಿಷಿಯನ್ ಮೃತ್ಯು

(ನ್ಯೂಸ್ ಕಡಬ)newskadaba.com ನವದೆಹಲಿ, ಅ. 30. ನೋಯ್ಡಾ ಸೆಕ್ಟರ್-74ರ ಲೋಟಸ್ ಗ್ರ್ಯಾಂಡ್ಯೂರ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಂಭವಿಸಿದ ಭಾರೀ ಬೆಂಕಿಯಲ್ಲಿ ಎಲೆಕ್ಟ್ರಿಷಿಯನ್ ಮೃತಪಟ್ಟ ಘಟನೆ ವರದಿಯಾಗಿದೆ. ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ. ಮುಂಜಾನೆ 3:30 ರ ಸುಮಾರಿಗೆ, ನೋಯ್ಡಾ ಸೆಕ್ಟರ್ 74 ರ ಲೋಟಸ್ ಗ್ರಾಂಡ್ಯೂರ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.  

ನೋಯ್ಡಾ ಬ್ಯಾಂಕ್ವೆಟ್ ಹಾಲ್ ನವೀಕರಣದ ವೇಳೆ ಬೆಂಕಿ – ಎಲೆಕ್ಟ್ರಿಷಿಯನ್ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
crime, arrest, suspected

ವಿಮಾನಯಾನ, ಹೊಟೇಲ್‌ಗಳಿಗೆ ಹುಸಿ ಬಾಂಬ್‌ ಬೆದರಿಕೆ: ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ಮಹಾರಾಷ್ಟ್ರ, ಅ. 29. ವಿಮಾನಯಾನ, ಹೋಟೇಲ್‌ಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆಯೊಡ್ಡಿ ವಿಮಾನ ಸಂಚಾರಕ್ಕೆ ತಡೆಯೊಡ್ಡಿದ್ದ ಆರೋಪಿಯನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಜಗದೀಶ್ ಉಯ್ಕೆ ಎಂದು ಗುರುತಿಸಲಾಗಿದೆ. ಆತ 2021 ರ ಪ್ರಕರಣದಲ್ಲಿ ಬಂಧನ ದಾಖಲೆಯನ್ನು ಹೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಡಿಸಿಪಿ) ಶ್ವೇತಾ ಖೇಡ್ಕರ್ ನೇತೃತ್ವದ ತನಿಖಾ ತಂಡ ಬಂಧಿಸಿದೆ.      

ವಿಮಾನಯಾನ, ಹೊಟೇಲ್‌ಗಳಿಗೆ ಹುಸಿ ಬಾಂಬ್‌ ಬೆದರಿಕೆ: ಆರೋಪಿ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top