ರಾಷ್ಟ್ರೀಯ ನ್ಯೂಸ್

ಮೋದಿ ಮತಗಳ್ಳತನ ಮಾಡಿ ಪ್ರಧಾನಿಯಾಗಿದ್ದಾರೆ: ರಾಹುಲ್‌ ಗಾಂಧಿ ವಾಗ್ದಾಳಿ

(ನ್ಯೂಸ್‌ ಕಡಬ) newskadaba.com, ಆ.08: ನರೇಂದ್ರ ಮೋದಿಯವರು ಮತಗಳ್ಳತನ ಮಾಡಿ ಪ್ರಧಾನ ಮಂತ್ರಿಯಾಗಿದ್ದಾರೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.ಚುನಾವಣಾ ಆಯೋಗ ಮತ್ತು ಬಿಜೆಪಿ ಮತ ಕಳ್ಳತನ ಮಾಡಿದೆ ಎಂದು ನಾವು 100% ಸಾಬೀತುಪಡಿಸಿದ್ದೇವೆ ಎಂದು ರಾಹುಲ್ ತಿಳಿಸಿದ್ದಾರೆ. ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನಾವು ಸಂವಿಧಾನ ಉಳಿಸುವ ಕೆಲಸ ಮಾಡಿದೆವು. ಸಂವಿಧಾನ ಪುಸ್ತಕದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ. ಗಾಂಧೀಜಿ, ಅಂಬೇಡ್ಕರ್, ನೆಹರೂ, ಪಟೇಲ್‌ರ ಧ್ವನಿ […]

ಮೋದಿ ಮತಗಳ್ಳತನ ಮಾಡಿ ಪ್ರಧಾನಿಯಾಗಿದ್ದಾರೆ: ರಾಹುಲ್‌ ಗಾಂಧಿ ವಾಗ್ದಾಳಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಹುಲ್‌ ಆರೋಪದಲ್ಲಿ ಹುರುಳಿಲ್ಲ: ಜಗದೀಶ್‌ ಶೆಟ್ಟರ್

(ನ್ಯೂಸ್‌ ಕಡಬ) newskadaba.com, ಆ.08: ಲೋಕಸಭಾ ಚುನಾವಣೆಯ ವೇಳೆ ಮತಗಳ್ಳತನ ನಡೆದಿದೆ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಬಿಜೆಪಿ ಸಂಸದ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.‌ ದೆಹಲಿಯಲ್ಲಿ ಮಾತನಾಡಿದ ಅವರು, ಮತಗಳ್ಳತನದ ಬಗ್ಗೆ ಈಗ ಆರೋಪ ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದೆ ಏಕೆ ಮಾಡಿಲ್ಲ. ಈ ವಿಚಾರವಾಗಿ ನಿಮ್ಮ ಬೆಂಗಳೂರು ಸೆಂಟ್ರಲ್‌ನ ಕಾಂಗ್ರೆಸ್‌ ಅಭ್ಯರ್ಥಿ ಏಕೆ ಪ್ರಶ್ನೆ ಮಾಡಿಲ್ಲ. ಈ ಬಗ್ಗೆ ಇಲ್ಲಿವರೆಗೆ ಏಕೆ ದೂರು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಹುಲ್‌ ಆರೋಪದಲ್ಲಿ ಹುರುಳಿಲ್ಲ: ಜಗದೀಶ್‌ ಶೆಟ್ಟರ್ Read More »

ರಾಷ್ಟ್ರೀಯ ನ್ಯೂಸ್

ಅಮೆರಿಕದ ಸರಕುಗಳ ಮೇಲೂ ಶೇ.50 ರಷ್ಟು ಸುಂಕ ವಿಧಿಸಿ: ಮೋದಿಗೆ ಶಶಿ ತರೂರ್ ಆಗ್ರಹ

(ನ್ಯೂಸ್‌ ಕಡಬ) newskadaba.com, ಆ.08: ನವದೆಹಲಿ: ಭಾರತದ ರಫ್ತಿನ ಮೇಲೆ ಅಮೆರಿಕ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ವಿಧಿಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಭಾರತವೂ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಶೇ. 50 ಕ್ಕೆ ಹೆಚ್ಚಿಸಬೇಕು ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಗುರುವಾರ ಆಗ್ರಹಿಸಿದ್ದಾರೆ. ಭಾರತವು ಅಮೆರಿಕದ ಸರಕುಗಳ ಮೇಲೆ ಪ್ರಸ್ತುತ ಶೇ. 17 ರಷ್ಟು ಸುಂಕದ ಬದಲು ಶೇ. 50 ರಷ್ಟು ಸುಂಕ ವಿಧಿಸಬೇಕು ಎಂದು ತರೂರ್ ಕೇಂದ್ರ ಸರ್ಕಾವನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಅಮೆರಿಕದ ಇಂತಹ

ಅಮೆರಿಕದ ಸರಕುಗಳ ಮೇಲೂ ಶೇ.50 ರಷ್ಟು ಸುಂಕ ವಿಧಿಸಿ: ಮೋದಿಗೆ ಶಶಿ ತರೂರ್ ಆಗ್ರಹ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಿಆರ್‌ಪಿಎಫ್‌ ವಾಹನ ಅಪಘಾತ: 3 ಸೈನಿಕರು ಸಾವು

(ನ್ಯೂಸ್‌ ಕಡಬ) newskadaba.com, ಆ.07: ಕೇಂದ್ರ ಮೀಸಲು ಪಡೆ ಸಿಬ್ಬಂದಿಗಳಿದ್ದ ವಾಹನ ಕಂದಕಕ್ಕೆ ಉರುಳಿ ಬಿದ್ದು, ಮೂವರು ಸೈನಿಕರು ಸಾವನ್ನಪ್ಪಿ, 15 ಮಂದಿ ಗಾಯಗೊಂಡಿರುವ ಘಟನೆ ಜಮ್ಮು–ಕಾಶ್ಮೀರದ ಉಧಂಪುರ್ ಜಿಲ್ಲೆಯ ‌ ನಲ್ಹಾದಲ್ಲಿ ನಡೆದಿದೆ. 23 ಮಂದಿ ಸಿಆರ್‌ಪಿಎಫ್‌ ಯೋಧರು ಬಸಂತ್‌ಘರ್‌ನಿಂದ ಮರಳುತ್ತಿದ್ದರು. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪಿದರೆ, ಗಂಭೀರ ಗಾಯಗೊಂಡ ಮತ್ತೋರ್ವ ಯೋಧ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್‌ ಅವರು ಉಧಂಪುರ್‌ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದು, ಗಾಯಗೊಂಡ ಯೋಧರಿಗೆ

ಸಿಆರ್‌ಪಿಎಫ್‌ ವಾಹನ ಅಪಘಾತ: 3 ಸೈನಿಕರು ಸಾವು Read More »

ರಾಷ್ಟ್ರೀಯ ನ್ಯೂಸ್

ರೈತರ ಹಿತಾಸಕ್ತಿ ಬಗ್ಗೆ ಭಾರತ ಎಂದಿಗೂ ರಾಜಿ ಮಾಡಿಕೊಳ್ಳಲ್ಲ: ಪ್ರಧಾನಿ ಮೋದಿ

(ನ್ಯೂಸ್‌ ಕಡಬ) newskadaba.com, ಆ.07: ರೈತರ ಹಿತಾಸಕ್ತಿ ನಮ್ಮ ಪ್ರಮುಖ ಆದ್ಯತೆಯಾಗಿದೆ. ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳ ಬಗ್ಗೆ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಸವಾಲೆಸೆದಿದ್ದಾರೆ. ದೆಹಲಿಯಲ್ಲಿ ನಡೆದ ಎಂಎಸ್ ಸ್ವಾಮಿನಾಥನ್ ಶತಮಾನೋತ್ಸವ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ರೈತರು ಮತ್ತು ಮೀನುಗಾರರ ಹಿತಾಸಕ್ತಿಗಳ ಬಗ್ಗೆ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಹಾಗೂ ಇದಕ್ಕಾಗಿ ನಾನು ವೈಯುಕ್ತಿವಾಗಿ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ನನಗೆ

ರೈತರ ಹಿತಾಸಕ್ತಿ ಬಗ್ಗೆ ಭಾರತ ಎಂದಿಗೂ ರಾಜಿ ಮಾಡಿಕೊಳ್ಳಲ್ಲ: ಪ್ರಧಾನಿ ಮೋದಿ Read More »

ರಾಷ್ಟ್ರೀಯ ನ್ಯೂಸ್

ಭಾರತದೊಂದಿಗಿನ ಸಂಬಂಧ ಹಾಳು ಮಾಡಿಕೊಳ್ಳದಂತೆ ಟ್ರಂಪ್‌ಗೆ ನಿಕ್ಕಿ ಹ್ಯಾಲಿ ಸಲಹೆ

(ನ್ಯೂಸ್‌ ಕಡಬ) newskadaba.com, ಆ.07: ಭಾರತ, ಅಮೆರಿಕ ನಡುವೆ ಸುಂಕ ಸಮರ ತಾರಕಕ್ಕೇರಿರುವ ಬೆನ್ನಲ್ಲೇ, ಇಂಥ ನಿರ್ಣಾಯಕ ಸಮಯದಲ್ಲಿ ಭಾರತದಂತಹ ಬಲಿಷ್ಠ ಮಿತ್ರ ರಾಷ್ಟ್ರದೊಂದಿಗಿನ ಸಂಬಂಧ ಹಾಳು ಮಾಡಿಕೊಳ್ಳಬೇಡಿ ಎಂದು ರಿಪಬ್ಲಿಕನ್‌ ನಾಯಕಿ ನಿಕ್ಕಿ ಹ್ಯಾಲಿ ಅವರು ಡೊನಾಲ್ಡ್ ಟ್ರಂಪ್‌ಗೆ ಸಲಹೆ ನೀಡಿದ್ದಾರೆ. ರಷ್ಯಾದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಮುಂದಿನ 24 ಗಂಟೆಯಲ್ಲಿ ಸುಂಕ ಗಣನೀಯ ಏರಿಕೆ ಮಾಡುವುದಾಗಿ ಟ್ರಂಪ್‌ ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಗೆ ನಿಕ್ಕಿ ಹ್ಯಾಲಿ ಪ್ರತಿಕ್ರಿಯಿಸಿದ್ದು, ಟ್ರಂಪ್‌ ಅವರ ಪ್ರಸ್ತಾಪಗಳು ನಿರ್ಣಾಯಕ

ಭಾರತದೊಂದಿಗಿನ ಸಂಬಂಧ ಹಾಳು ಮಾಡಿಕೊಳ್ಳದಂತೆ ಟ್ರಂಪ್‌ಗೆ ನಿಕ್ಕಿ ಹ್ಯಾಲಿ ಸಲಹೆ Read More »

ರಾಷ್ಟ್ರೀಯ ನ್ಯೂಸ್

ಕರ್ತವ್ಯ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ

(ನ್ಯೂಸ್‌ ಕಡಬ) newskadaba.com, ಆ.07: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ದೆಹಲಿಯ ಕರ್ತವ್ಯ ಪಥದಲ್ಲಿ ನಿರ್ಮಿಸಲಾದ ‘ಕರ್ತವ್ಯ ಭವನ-3’ ವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಇದು ಸೆಂಟ್ರಲ್ ವಿಸ್ಟಾ ಪುನಾರ್ವಿಕಾಸ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಹತ್ತು ನವೀನ ಭವನಗಳ ಪೈಕಿ ಮೊದಲನೆಯದು. ಈ ಭವನ ಉದ್ಘಾಟನೆಯೊಂದಿಗೆ, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಒಂದೆಡೆ ಏಕತ್ರಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ನಿರ್ಣಾಯಕ ಮುಂದಿನ ಹಂತ ಶುರುವಾಗಿದೆ. ಈಗಲೂ ದೆಹಲಿಯ ವಿಭಿನ್ನ ಭಾಗಗಳಲ್ಲಿ ಹರಡಿರುವ ಸಚಿವಾಲಯಗಳು ಶೀಘ್ರದಲ್ಲೇ ಈ ನವೀನ ಕಟ್ಟಡಗಳಿಗೆ

ಕರ್ತವ್ಯ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಮಿತ್‌ ಶಾ ವಿರುದ್ದ ಅವಹೇಳನಕಾರಿ ಹೇಳಿಕೆ: ರಾಹುಲ್‌ಗೆ ಜಾಮೀನು

(ನ್ಯೂಸ್‌ ಕಡಬ) newskadaba.com, ಆ.06:‌ ಜಾರ್ಖಂಡ್‌ನಲ್ಲಿ ನಡೆಸಿದ್ದ ಚುನಾವಣೆ ರ್ಯಾಲಿಯೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದೆ. ಹೈಕೋರ್ಟ್‌ ನಿರ್ದೇಶನದಂತೆ ರಾಹುಲ್‌ ಗಾಂಧಿ ಇಂದು ಇಲ್ಲಿನ ನ್ಯಾಯಾಲಯಕ್ಕೆ ಹಾಜರಾದರು. ರಾಹುಲ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮುಂದಿನ ಹಂತದ ಪ್ರಕ್ರಿಯೆಗಳು ನಡೆಯಲಿವೆ ಎಂದು ರಾಹುಲ್‌ ಗಾಂಧಿ ಪರ ವಕೀಲರು ತಿಳಿಸಿದ್ದಾರೆ. 2018ರ ಸಾರ್ವಜನಿಕ ಸಭೆಯೊಂದರಲ್ಲಿ ಅಮಿತ್‌ ಶಾ

ಅಮಿತ್‌ ಶಾ ವಿರುದ್ದ ಅವಹೇಳನಕಾರಿ ಹೇಳಿಕೆ: ರಾಹುಲ್‌ಗೆ ಜಾಮೀನು Read More »

ರಾಷ್ಟ್ರೀಯ ನ್ಯೂಸ್

ಆಡ್ವಾಣಿ ದಾಖಲೆ ಮುರಿದ ಅಮಿತ್‌ ಶಾ; ಗೃಹ ಸಚಿವರಾಗಿ ಸುದೀರ್ಘ ಸೇವೆ

(ನ್ಯೂಸ್‌ ಕಡಬ) newskadaba.com, ಆ.07: ನವದೆಹಲಿ: ಇತ್ತೀಚೆಗಷ್ಟೇ ನರೇಂದ್ರ ಮೋದಿ ಅತೀ ಸುದೀರ್ಘವಾಗಿ ಪ್ರಧಾನಿಯಾಗಿ ಮುಂದುವರಿಯುವ ಮೂಲಕ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ರೆಕಾರ್ಡ್‌ಯನ್ನು ಮುರಿದಿದ್ದರು. ಇದೀಗ ಇದರ ಬೆನ್ನಲ್ಲೇ ಗೃಹಸಚಿವ ಅಮಿತ್‌ ಶಾ ಕೂಡ ಅತೀ ಹೆಚ್ಚು ವರ್ಷಗಳ ಕಾಲ ಗೃಹಸಚಿವರಾಗಿ ಮುಂದುವರಿಯುವ ಮೂಲಕ ದಾಖಲೆ ಬರೆದಿದ್ದಾರೆ. ಕೇಂದ್ರ ಗೃಹ ಸಚಿವರಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅಮಿತ್ ಶಾ ಅವರು 2,258 ದಿನಗಳನ್ನು ಪೂರೈಸಿದ್ದಾರೆ. ಆ ಮೂಲಕ ಅವರು ಗೃಹ ಸಚಿವ ಹುದ್ದೆಯಲ್ಲಿ 2,256 ದಿನಗಳನ್ನು

ಆಡ್ವಾಣಿ ದಾಖಲೆ ಮುರಿದ ಅಮಿತ್‌ ಶಾ; ಗೃಹ ಸಚಿವರಾಗಿ ಸುದೀರ್ಘ ಸೇವೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮೊಹಾಲಿ ಆಕ್ಸಿಜನ್‌ ಪ್ಲಾಂಟ್‌ನಲ್ಲಿ ಸ್ಪೋಟ: ಇಬ್ಬರು ಸಾವು

(ನ್ಯೂಸ್‌ ಕಡಬ) newskadaba.com, ಆ.06:‌ ಪಂಜಾಬ್‌ ಮೊಹಾಲಿಯ ಆಮ್ಲಜನಕ ಸ್ಥಾವರದಲ್ಲಿ ಭಾರೀ ಸ್ಪೋಟ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರದ 9ನೇಹಂತದಲ್ಲಿರುವ ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ವೈದ್ಯಕೀಯ ತಂಡಗಳು, ಪೊಲೀಸರು ಹಾಗೂ ಜಿಲ್ಲಾಡಳಿತ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ. ಗಾಯಾಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೊಹಾಲಿ ಆಕ್ಸಿಜನ್‌ ಪ್ಲಾಂಟ್‌ನಲ್ಲಿ ಸ್ಪೋಟ: ಇಬ್ಬರು ಸಾವು Read More »

ರಾಷ್ಟ್ರೀಯ ನ್ಯೂಸ್
Scroll to Top