ರಾಹುಲ್‌ ಆರೋಪದಲ್ಲಿ ಹುರುಳಿಲ್ಲ: ಜಗದೀಶ್‌ ಶೆಟ್ಟರ್

(ನ್ಯೂಸ್‌ ಕಡಬ) newskadaba.com, ಆ.08: ಲೋಕಸಭಾ ಚುನಾವಣೆಯ ವೇಳೆ ಮತಗಳ್ಳತನ ನಡೆದಿದೆ ಎಂಬ ಕಾಂಗ್ರೆಸ್ನಾಯಕ ರಾಹುಲ್ಗಾಂಧಿ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಬಿಜೆಪಿ ಸಂಸದ ಜಗದೀಶ್ಶೆಟ್ಟರ್ಹೇಳಿದ್ದಾರೆ.‌

ದೆಹಲಿಯಲ್ಲಿ ಮಾತನಾಡಿದ ಅವರು, ಮತಗಳ್ಳತನದ ಬಗ್ಗೆ ಈಗ ಆರೋಪ ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದೆ ಏಕೆ ಮಾಡಿಲ್ಲ. ವಿಚಾರವಾಗಿ ನಿಮ್ಮ ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ಅಭ್ಯರ್ಥಿ ಏಕೆ ಪ್ರಶ್ನೆ ಮಾಡಿಲ್ಲ. ಬಗ್ಗೆ ಇಲ್ಲಿವರೆಗೆ ಏಕೆ ದೂರು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಹುಲ್ಅವರೇ ನಿಮ್ಮ ಬಳಿ ದಾಖಲೆಗಳಿದ್ದರೆ ಕೋರ್ಟ್ಗೆ ಹೋಗಿ, ಚುನಾವಣೆ ಆಯೋಗಕ್ಕೆ ದಾಖಲೆ ಸಲ್ಲಿಸಿ ದೂರು ನೀಡಿ. ಅದನ್ನು ಹೊರತುಪಡಿಸಿ ಚುನಾವಣೆ ಆಯೋಗದ ಮೇಲೆ ಆರೋಪ ಮಾಡುವುದು ಸೂಕ್ತವಲ್ಲ ಎಂದಿದ್ದಾರೆ.

Scroll to Top