ರಾಷ್ಟ್ರೀಯ ನ್ಯೂಸ್

ರೈಲಿನಲ್ಲೂ ಲಗೇಜ್‌ ನಿಯಮ ಜಾರಿಗೆ ಮುಂದಾದ ರೈಲ್ವೇ ಇಲಾಖೆ..?

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 20. ಸಾಮಾನ್ಯವಾಗಿ ಬೇರೊಂದು ಊರಿಗೆ ಪ್ರಯಾಣ ಮಾಡಬೇಕು ಅಂದು ಕೊಂಡಿರುವವರು ಹೆಚ್ಚಾಗಿ ಅಗ್ಗದ ಮತ್ತು ಆರಾಮದಾಯಕವಾದ ರೈಲು ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುವುದು ಅಲ್ಲದೇ ರೈಲಿನಲ್ಲಿ ಪ್ರಯಾಣ ಮಾಡುವಾಗ ಹಲವಾರು ವಸ್ತುಗಳನ್ನು, ಲಗೇಜ್‌ಗಳನ್ನು ಹೊತ್ತೊಯ್ಯುವುದು ಕೂಡಾ ಸಹಜ. ಆದರೆ ಇದೀಗ ಭಾರತೀಯ ರೈಲ್ವೆ ಇಲಾಖೆಯು ಹೆಚ್ಚುವರಿ ಲಗೇಜ್‌ಗೆ ಬ್ರೇಕ್‌ ಹಾಕಲು ಮುಂದಾಗಿದೆ. ಆದಾಯ ಹೆಚ್ಚಳಕ್ಕೆ ಮುಂದಾಗಿರುವ ಭಾರತೀಯ ರೈಲ್ವೆ ಇಲಾಖೆಯು ಶೀಘ್ರದಲ್ಲೇ ಹೊಸ ನಿಯಮ ಜಾರಿಗೊಳಿಸಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಅದರಂತೆ ಇನ್ಮುಂದೆ […]

ರೈಲಿನಲ್ಲೂ ಲಗೇಜ್‌ ನಿಯಮ ಜಾರಿಗೆ ಮುಂದಾದ ರೈಲ್ವೇ ಇಲಾಖೆ..? Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕ್ರಿಮಿನಲ್ ಕೇಸ್‌ನಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳನ್ನು ಪದಚ್ಯುತಗೊಳಿಸುವ ಮಸೂದೆ ಇಂದು ಮಂಡನೆ

(ನ್ಯೂಸ್‌ ಕಡಬ) newskadaba.com ಆ. 20 ನವದೆಹಲಿ : ಕ್ರಿಮಿನಲ್ ಪ್ರಕರಣಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರನ್ನು ತನಿಖಾ ಸಂಸ್ಥೆಗಳು ವಶಕ್ಕೆ ಪಡೆದರೆ ಅಥವಾ ಬಂಧಿಸಿದರೆ, ಅವರನ್ನು ಆ ಹುದ್ದೆಯಿಂದ ವಜಾಗೊಳಿಸಲು ಮಸೂದೆಯನ್ನು ಬುಧವಾರ(ಆ.20) ಲೋಕಸಭೆಯಲ್ಲಿ ಮಂಡನೆ ಮಾಡಲು ಕೇಂದ್ರ ಸರ್ಕಾರವು ಸಿದ್ಧತೆ ಮಾಡಿಕೊಂಡಿದೆ.ಇದೇ ವೇಳೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳು ಒಳ ಮೀಸಲಾತಿ ವಿಚಾರದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಎಸ್‍ಸಿ ಸಮುದಾಯದಲ್ಲಿ 101 ಜಾತಿಗಳಿದ್ದು, ಯಾವುದೇ ಜಾತಿಗೆ ಅನ್ಯಾಯ ಆಗದಂತೆ ನಿರ್ಣಯ ತೆಗೆದುಕೊಳ್ಳಬೇಕು. ನೀವು

ಕ್ರಿಮಿನಲ್ ಕೇಸ್‌ನಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳನ್ನು ಪದಚ್ಯುತಗೊಳಿಸುವ ಮಸೂದೆ ಇಂದು ಮಂಡನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಏಷ್ಯನ್ ಶೂಟಿಂಗ್: ಕಂಚು ಗೆದ್ದ ಮನು ಭಾಕರ್

(ನ್ಯೂಸ್‌ ಕಡಬ) newskadaba.com ಆ. 19:  ಕಜಕಿಸ್ತಾನ: ಇಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಭಾರತದ ರಶ್ಮಿಕಾ ಸಹಗಲ್ ಚಿನ್ನ ಗೆದ್ದರೆ, ಡಬಲ್ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಇದು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮನು ಭಾಕರ್ ಗೆದ್ದ 9 ನೇ ಪದಕ. ಮಂಗಳವಾರ ನಡೆದ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಎಂಟು ಆಟಗಾರರ ಫೈನಲ್‌ನಲ್ಲಿ ಮನು 219.7 ಅಂಕಗಳನ್ನು ಗಳಿಸಿ

ಏಷ್ಯನ್ ಶೂಟಿಂಗ್: ಕಂಚು ಗೆದ್ದ ಮನು ಭಾಕರ್ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮುಂಬೈಯಲ್ಲಿ ವರುಣನ ಆರ್ಭಟ: ವಿಮಾನ ಹಾರಾಟದಲ್ಲಿ ವ್ಯತ್ಯಯ

(ನ್ಯೂಸ್‌ ಕಡಬ) newskadaba.com, ಆ.19: ಮುಂಬೈಯಲ್ಲಿ ವರ್ಷಾಧಾರೆಯಾಗುತ್ತಿದ್ದು, ತಗ್ಗುಪ್ರದೇಶಗಳು ಹಾಗೂ ರಸ್ತೆಗಳು ಜಲಾವೃತಗೊಂಡಿವೆ. ಕಳೆದ 24 ಗಂಟೆಗಳಲ್ಲಿ ಮುಂಬೈನ ಹಲವಾರು ಪ್ರದೇಶಗಳಲ್ಲಿ 200 ಮೀ.ಮೀ.ಗಿಂತಲೂ ಅಧಿಕ ಮಳೆಯಾಗಿದೆ. ಪೂರ್ವ ಉಪನಗರದ ಮಿಕ್ರೋಲಿಯಲ್ಲಿ ಅತೀ ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂಬೈಯಲ್ಲಿ ಭಾರೀ ಮಳೆಯ ಪರಿಣಾಮ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಈ ಬಗ್ಗೆ ಇಂಡಿಗೊ ಪ್ರಯಾಣಿಕರಿಗೆ ಸೂಚನೆ ನೀಡಿದೆ. ಮುಂಬೈಯಲ್ಲಿ ಭಾರೀ ಮಳೆಯಾಗುತ್ತಿದ್ದು, ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗಗಳಲ್ಲಿ ನೀರು ತುಂಬಿಕೊಂಡಿರುವುದರಿಂದ

ಮುಂಬೈಯಲ್ಲಿ ವರುಣನ ಆರ್ಭಟ: ವಿಮಾನ ಹಾರಾಟದಲ್ಲಿ ವ್ಯತ್ಯಯ Read More »

ರಾಷ್ಟ್ರೀಯ ನ್ಯೂಸ್

ಭಾರತದಲ್ಲಿ ಉಕ್ಕು ತಯಾರಿಕೆಗೆ ದಕ್ಷಿಣ ಕೊರಿಯಾ ಜೊತೆ ಕೈಜೋಡಿಸಿದ JSW

(ನ್ಯೂಸ್ ಕಡಬ) newskadaba.com ಆ. 18. ದೇಶದಲ್ಲಿ ವಾರ್ಷಿಕ 6 ಮಿಲಿಯನ್‌ ಟನ್‌ (ಎಂಟಿಪಿಎ) ಉಕ್ಕಿನ ಸ್ಥಾವರವನ್ನು ಸ್ಥಾಪಿಸುವ ಬಗ್ಗೆ ಅನ್ವೇಷಿಸಲು ದಕ್ಷಿಣ ಕೊರಿಯಾದ ಪೋಸ್ಕೋ ಗ್ರೂಪ್‌ ಜೊತೆ ಸ್ವದೇಶಿ ಸಂಸ್ಥೆ ಜೆಎಸ್‌‍ಡಬ್ಲ್ಯೂ ಕೈಜೋಡಿಸಿರುವ ಕುರಿತು ವರದಿಯಾಗಿವೆ. ಮುಂದಿನ ಹಂತಗಳ ಭಾಗವಾಗಿ, ಸ್ಥಾವರದ ಸ್ಥಳ, ಹೂಡಿಕೆ ನಿಯಮಗಳು, ಸಂಪನ್ಮೂಲ ಲಭ್ಯತೆ ಮತ್ತು ಇತರ ನಿರ್ಣಾಯಕ ಅಂಶಗಳನ್ನು ಅಂತಿಮಗೊಳಿಸಲು ಜೆಎಸ್‌‍ಡಬ್ಲ್ಯೂ ಮತ್ತು ಪೋಸ್ಕೋ ವಿವರವಾದ ಕಾರ್ಯಸಾಧ್ಯತಾ ಅಧ್ಯಯನವನ್ನು ಕೈಗೊಳ್ಳಲಿವೆ.

ಭಾರತದಲ್ಲಿ ಉಕ್ಕು ತಯಾರಿಕೆಗೆ ದಕ್ಷಿಣ ಕೊರಿಯಾ ಜೊತೆ ಕೈಜೋಡಿಸಿದ JSW Read More »

ರಾಷ್ಟ್ರೀಯ ನ್ಯೂಸ್

ಛತ್ತೀಸ್‌ಗಡದಲ್ಲಿ ನಕ್ಸಲರ ಅಟ್ಟಹಾಸ: ಓರ್ವ ಯೋಧ ಹುತಾತ್ಮ

(ನ್ಯೂಸ್‌ ಕಡಬ) newskadaba.com, ಆ.18: ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರ ಅಟ್ಟಹಾಸಕ್ಕೆ ಓರ್ವ ಯೋಧ ಹುತಾತ್ಮರಾಗಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ. ಹುತಾತ್ಮ ಯೋಧರನ್ನು ದಿನೇಶ್‌ ನಾಗ್‌ ಎಂದು ಗುರುತಿಸಲಾಗಿದೆ. ಗಾಯಗೊಂಡ ಮೂವರು ಯೋಧರಿಗೆ ಸ್ಥಳಕ್ಕೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಇಂದ್ರಾವತಿ ರಾಷ್ಟ್ರೀಯ ಉದ್ಯಾನವನದಲ್ಲಿ ಡಿಜಿಆರ್‌ ತಂಡವು ನಕ್ಸಲ್‌ ವಿರೋಧಿ ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ನಕ್ಸಲರು ಸುಧಾರಿತ ಸ್ಪೋಟಕ(ಐಇಡಿ) ಸ್ಪೋಟಿಸಿದ ಪರಿಣಾಮ ಜಿಲ್ಲಾ ಮೀಸಲು ಪಡೆ(ಡಿಜಿಆರ್)ಯ ಯೋಧರೊಬ್ಬರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಭಾನುವಾರದಿಂದ ಕಾರ್ಯಾಚರಣೆ ಶುರುವಾಗಿತ್ತು, ಇಂದು

ಛತ್ತೀಸ್‌ಗಡದಲ್ಲಿ ನಕ್ಸಲರ ಅಟ್ಟಹಾಸ: ಓರ್ವ ಯೋಧ ಹುತಾತ್ಮ Read More »

ರಾಷ್ಟ್ರೀಯ ನ್ಯೂಸ್

ಇಂದು ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ ಶುಭಾಂಶು ಶುಕ್ಲಾ

(ನ್ಯೂಸ್‌ ಕಡಬ) newskadaba.com, ಆ.18: ಆಕ್ಸಿಯಂ-4 ಮಿಷನ್‌ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ಕೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶುಭಾಂಶು ಶುಕ್ಲಾ ಅವರು, ಭೂಮಿಗೆ ಮರಳಿದ ನಂತರ ಮೊದಲ ಬಾರಿಗೆ ತಾಯ್ನಾಡು ಭಾರತಕ್ಕೆ ಮರಳಿದ್ದಾರೆ. ಶುಭಾಂಶು ಶುಕ್ಲಾ ಅವರು ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಪ್ರಧಾನಿ ಮೋದಿ

ಇಂದು ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ ಶುಭಾಂಶು ಶುಕ್ಲಾ Read More »

ರಾಷ್ಟ್ರೀಯ ನ್ಯೂಸ್

ದಿಲ್ಲಿಯ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ: ಪೊಲೀಸರಿಂದ ತೀವ್ರ ಶೋಧ

(ನ್ಯೂಸ್ ಕಡಬ) newskadaba.com ಆ. 18. ಸೋಮವಾರ ಮುಂಜಾನೆ ರಾಷ್ಟ್ರ ರಾಜಧಾನಿ ದಿಲ್ಲಿಯ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಿಲ್ಲಿ ಪೊಲೀಸರ ಪ್ರಕಾರ, ದ್ವಾರಕಾದ ಸೆಕ್ಟರ್ 10ರಲ್ಲಿರುವ ದಿಲ್ಲಿ ಪಬ್ಲಿಕ್ ಸ್ಕೂಲ್ (ಡಿಪಿಎಸ್), ಮಾಡ್ರನ್ ಕಾನ್ವೆಂಟ್ ಸ್ಕೂಲ್ ಮತ್ತು ಶ್ರೀರಾಮ್ ವರ್ಲ್ಡ್ ಸ್ಕೂಲ್‌ಗೆ ಇಮೇಲ್ ಮೂಲಕ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ತಂಡಗಳು ಸ್ಥಳಕ್ಕೆ ತೆರಳಿ ಶೋಧ ಕಾರ್ಯಚರಣೆ ಆರಂಭಿಸಿದೆ. ಜುಲೈನಲ್ಲಿ ದಿಲ್ಲಿಯ 45

ದಿಲ್ಲಿಯ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ: ಪೊಲೀಸರಿಂದ ತೀವ್ರ ಶೋಧ Read More »

ರಾಷ್ಟ್ರೀಯ ನ್ಯೂಸ್

ದೆಹಲಿಯಲ್ಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ: ತೀವ್ರ ಶೋಧ

(ನ್ಯೂಸ್‌ ಕಡಬ) newskadaba.com, ಆ.18:‌‌ ದ್ವಾರಕಾದ ದೆಹಲಿ ಪಬ್ಲಿಕ್‌ ಶಾಲೆ ಸೇರಿದಂತೆ ಅನೇಕ ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಮೂಲಗಳ ಪ್ರಕಾರ, ದೆಹಲಿ ಪೊಲೀಸ್‌ ತಂಡಗಳು ಹಾಗೂ ಬಾಂಬ್‌ ನಿಷ್ಕ್ರಿಯ ದಳಗಳು ಸ್ಥಳಗೆ ಧಾವಿಸಿದ್ದು, ಶೋಧ ನಡೆಸುತ್ತಿವೆ. ದ್ವಾರಕಾದ ಸೆಕ್ಟರ್-19‌ ಬಳಿಯ ಸೇಂಟ್‌ ಥಾಮಸ್‌ ಶಾಲೆ, ಸೆಕ್ಟರ್‌-18ರ ದೆಹಲಿ ಇಂಟರ್‌ನ್ಯಾಷನಲ್‌ ಸ್ಕೂಲ್‌ ಎಡ್ಜ್‌, ಸೆಂಟ್ರಲ್‌ ಅಕಾಡೆಮಿ ಸ್ಕೂಲ್‌, ಸೆಕ್ಟರ್-10ರ ದ್ವಾರಕಾದ ಜಿಡಿ ಗೋನೆಕಾ ಸ್ಕೂಲ್‌, ಸೆಕ್ಟರ್-19ರ ದ್ವಾರಕಾ ಹಾಗೂ

ದೆಹಲಿಯಲ್ಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ: ತೀವ್ರ ಶೋಧ Read More »

ರಾಷ್ಟ್ರೀಯ ನ್ಯೂಸ್

ಕಥುವಾದಲ್ಲಿ ಮೇಘಸ್ಪೋಟ: ನಾಲ್ವರು ಸಾವು

(ನ್ಯೂಸ್‌ ಕಡಬ) newskadaba.com, ಆ.17:‌ ಜಮ್ಮು ಹಾಗೂ ಕಾಶ್ಮೀರದ ಕಥುವಾ ಜಿಲ್ಲೆಯ ಜಂಗ್ಲೋಟ್‌ ಹಳ್ಳಿಯಲ್ಲಿ ಮೇಘಸ್ಪೋಟವಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಹಠಾತ್‌ ಪ್ರವಾಹದಲ್ಲಿ ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬೆನ್ನಲ್ಲೇ ಜಮ್ಮು–ಕಾಶ್ಮೀರದ ಸಂಸದ ಹಾಗೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಮೇಘಸ್ಪೋಟದಿಂದ ರೈಲ್ವೆ ಹಳಿ, ರಾಷ್ಟ್ರೀಯ ಹೆದ್ದಾರಿ-44 ಹಾಗೂ ಪೊಲೀಸ್‌ ಠಾಣೆಗೆ ಹಾನಿಯಾಗಿದೆ. ನಾಗರಿಕ ಆಡಳಿತ, ಮಿಲಿಟರಿ ಹಾಗೂ ಅರೆಸೇನಾ ಪಡೆಗಳು

ಕಥುವಾದಲ್ಲಿ ಮೇಘಸ್ಪೋಟ: ನಾಲ್ವರು ಸಾವು Read More »

ರಾಷ್ಟ್ರೀಯ ನ್ಯೂಸ್
Scroll to Top