ರಾಷ್ಟ್ರೀಯ ನ್ಯೂಸ್

ಜಾರ್ಖಂಡ್ ವಿಧಾನಸಭೆಗೆ 2ನೇ ಹಂತದ ಮತದಾನ ಆರಂಭ

ರಾಂಚಿ, ಡಿ.6: ಜಾರ್ಖಂಡ್ ರಾಜ್ಯದ ವಿಧಾನ ಸಭಾ 20 ಕ್ಷೇತ್ರಗಳಿಗೆ 2ನೇ ಹಂತದ ಮತದಾನ ಶನಿವಾರ ನಡೆಯುತ್ತಿದೆ. ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಇಂದು ಚುನಾವಣೆ ನಡೆಯುವ ಎಲ್ಲ ಕ್ಷೇತ್ರಗಳು ನಕ್ಸಲ್ ಚಟುವಟಿಕೆಗಳಿಗೆ ಹೆಸರಾಗಿರುವ ಕಾರಣ ಭಾರಿ ಭದ್ರತೆ ಮಾಡಲಾಗಿದೆ. ಸುಮಾರು 40 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದ್ದು, ಶಾಂತಿಯುತ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. 29 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 260 ಅಭ್ಯರ್ಥಿಗಳು […]

ಜಾರ್ಖಂಡ್ ವಿಧಾನಸಭೆಗೆ 2ನೇ ಹಂತದ ಮತದಾನ ಆರಂಭ Read More »

ರಾಷ್ಟ್ರೀಯ ನ್ಯೂಸ್

ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಸಾವು

ಹೊಸದಿಲ್ಲಿ, ಡಿ.6: ಉತ್ತರಪ್ರದೇಶದ  ಉನ್ನಾವೋದಲ್ಲಿ ನಡೆದ ಅತ್ಯಾಚಾರ ಸಂತ್ರಸ್ತೆ  ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಈಕೆಯನ್ನು ವಿಚಾರಣೆ ವೇಳೆ ಕೋರ್ಟ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಐವರು ತಂಡ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದರು.  ಶೇ.90 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಸಂತ್ರಸ್ತೆಯನ್ನು ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆ ದಾಖಲಿಸಲಾಗಿತ್ತು.   ಉನ್ನಾವೋದಲ್ಲಿ ಐದು ಮಂದಿ ಕಾಮುಕರು ನಡೆಸಿದ ಅತ್ಯಾಚಾರದಲ್ಲಿ 20 ವರ್ಷದ ಯುವತಿ ಬದುಕುಳಿದಿದ್ದಳು. ಈ ಪ್ರಕರಣದ ವಿಚಾರಣೆಗೆಂದು ನ್ಯಾಯಾಲಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಆಕೆ ಮೇಲೆ ಹಲ್ಲೇ

ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಸಾವು Read More »

ರಾಷ್ಟ್ರೀಯ ನ್ಯೂಸ್

ಅತ್ಯಾಚಾರಿಗಳನ್ನು ಭರ್ಜರಿಯಾಗಿ ಬೇಟೆಯಾಡಿದ ‘ವೀರ ಕನ್ನಡಿಗ’ ➤ ಎನ್‌ಕೌಂಟರ್ ತಂಡದ ಮುಖ್ಯಸ್ಥ ಕರ್ನಾಟಕದ ವಿಶ್ವನಾಥ್

(ನ್ಯೂಸ್ ಕಡಬ) newskadaba.com ಹೈದರಾಬಾದ್, ಡಿ.06. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪಶುವೈದ್ಯೆಯ ಅತ್ಯಾಚಾರಗೈದು ಜೀವಂತ ಸುಟ್ಟಿದ್ದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಲಾದ ತಂಡದ ಪೊಲೀಸ್ ಅಧಿಕಾರಿ ‘ವೀರ ಕನ್ನಡಿಗ’ ಇದೀಗ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ ಮತ್ತು ಚಿಂತಕುಂಟಾ ಕೇಶವುಲು ಎಂಬವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು, ಶುಕ್ರವಾರ ಬೆಳಗ್ಗಿನ ಜಾವ ಮಹಜರು ನಡೆಸುವ ವೇಳೆ ಎನ್‌ಕೌಂಟರ್‌ ನಡೆಸಿದ್ದಾರೆ. ಹೈದರಾಬಾದ್ ಹೊರವಲಯದ ಷಾದ್ ನಗರದಲ್ಲಿ ಎನ್‌ಕೌಂಟರ್ ನಡೆದಿದ್ದು, ಎನ್‌ಕೌಂಟರ್‌ ಕಾರ್ಯಾಚರಣೆಯನ್ನು

ಅತ್ಯಾಚಾರಿಗಳನ್ನು ಭರ್ಜರಿಯಾಗಿ ಬೇಟೆಯಾಡಿದ ‘ವೀರ ಕನ್ನಡಿಗ’ ➤ ಎನ್‌ಕೌಂಟರ್ ತಂಡದ ಮುಖ್ಯಸ್ಥ ಕರ್ನಾಟಕದ ವಿಶ್ವನಾಥ್ Read More »

ರಾಷ್ಟ್ರೀಯ ನ್ಯೂಸ್

ದೇಶವನ್ನು ಬೆಚ್ಚಿಬೀಳಿಸಿದ್ದ ಪಶುವೈದ್ಯೆಯ ಅತ್ಯಾಚಾರಗೈದು ಜೀವಂತ ಸುಟ್ಟ ಪ್ರಕರಣ ➤ ನಾಲ್ವರು ಆರೋಪಿಗಳ ಎನ್‌ಕೌಂಟರ್‌

(ನ್ಯೂಸ್ ಕಡಬ) newskadaba.com ಹೈದರಾಬಾದ್, ಡಿ.06. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪಶುವೈದ್ಯೆಯನ್ನು ಅತ್ಯಾಚಾರಗೈದು ಜೀವಂತ ಸುಟ್ಟಿದ್ದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಲಾಗಿದೆ. ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ ಮತ್ತು ಚಿಂತಕುಂಟಾ ಕೇಶವುಲು ಎಂಬವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು, ಶುಕ್ರವಾರ ಬೆಳಗ್ಗಿನ ಜಾವ ಎನ್‌ಕೌಂಟರ್‌ ನಡೆಸಿದ್ದಾರೆ. ಹೈದರಾಬಾದ್ ಹೊರವಲಯದ ಷಾದ್ ನಗರದಲ್ಲಿ ಎನ್‌ಕೌಂಟರ್ ನಡೆದಿದೆ ಎನ್ನಲಾಗಿದ್ದು, ಎನ್‌ಕೌಂಟರ್‌ ಕಾರ್ಯಾಚರಣೆಯನ್ನು ಕರ್ನಾಟಕದ ಗದಗ್ ಜಿಲ್ಲೆಯ ಅಧಿಕಾರಿಯೋರ್ವರು ನಡೆಸಿದ್ದಾರೆ. ಕನ್ನಡಿಗರಾದ ಸೈಬರಾಬಾದ್‌ ಪೊಲೀಸ್‌ ಆಯುಕ್ತ ವಿಶ್ವನಾಥ್ ಸಜ್ಜನ್

ದೇಶವನ್ನು ಬೆಚ್ಚಿಬೀಳಿಸಿದ್ದ ಪಶುವೈದ್ಯೆಯ ಅತ್ಯಾಚಾರಗೈದು ಜೀವಂತ ಸುಟ್ಟ ಪ್ರಕರಣ ➤ ನಾಲ್ವರು ಆರೋಪಿಗಳ ಎನ್‌ಕೌಂಟರ್‌ Read More »

ರಾಷ್ಟ್ರೀಯ ನ್ಯೂಸ್

ನಾಳೆ(ಡಿ.01) ಪಂಜದಲ್ಲಿ MRF ನ್ಯಾಷನಲ್ ಬೈಕ್ ರೇಸ್ ➤ ರಾಷ್ಟ್ರಮಟ್ಟದ ಕ್ರೀಡಾಪಟುಗಳಿಂದ ಸಾಹಸಮಯ ರ್ಯಾಲಿ

(ನ್ಯೂಸ್ ಕಡಬ) newskadaba.com ಕಡಬ, ನ.30. MRF ಮೊಗ್ರಿಪ್ ನ್ಯಾಷನಲ್ ಬೈಕ್ ರ್ಯಾಲಿ ಚಾಂಪಿಯನ್ ಶಿಪ್ ಬೈಕ್ ರೇಸ್ ‘ಶಿವಾಜಿ ಯುವಕ ಮಂಡಲ ಕೂತ್ಕುಂಜ’ ಇದರ ಸಹಯೋಗದೊಂದಿಗೆ ಡಿಸೆಂಬರ್ 01 ಭಾನುವಾರದಂದು ಪಂಜದಲ್ಲಿ ನಡೆಯಲಿದೆ. ಬೆಳಿಗ್ಗೆ 7.00 ಘಂಟೆಗೆ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಆರಂಭಗೊಳ್ಳಲಿರುವ ಬೈಕ್ ರ‌್ಯಾಲಿಯು ಮಂಚಿಕಟ್ಟೆ, ಪಂಜದ ಬೈಲು, ಮಹೇಶ್ ಕರಿಕ್ಕಳರವರ ರಬ್ಬರ್ ತೋಟದ ಮೂಲಕ ಸಾಗಿ ಕರಿಕ್ಕಳ ಜಂಕ್ಷನ್, ಪಂಬೆತ್ತಾಡಿ, ಜಾಕೆ ಮಾರ್ಗವಾಗಿ ಚೀಮುಳ್ಳು, ಜಳಕದಹೊಳೆ, ಪಳಂಗಾಯ, ವಾಟೆಕಜೆ,

ನಾಳೆ(ಡಿ.01) ಪಂಜದಲ್ಲಿ MRF ನ್ಯಾಷನಲ್ ಬೈಕ್ ರೇಸ್ ➤ ರಾಷ್ಟ್ರಮಟ್ಟದ ಕ್ರೀಡಾಪಟುಗಳಿಂದ ಸಾಹಸಮಯ ರ್ಯಾಲಿ Read More »

ರಾಷ್ಟ್ರೀಯ ನ್ಯೂಸ್

ಇಸ್ರೋದಿಂದ ಉಪಗ್ರಹಗಳ ಉಡಾವಣೆ

(ನ್ಯೂಸ್ ಕಡಬ) newskadaba.com, ಶ್ರೀಹರಿಕೋಟ. ನ.27. ಆಂಧ್ರ ಪ್ರದೇಶದಲ್ಲಿರುವ ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ 9.28 ಕ್ಕೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಕಾರ್ಟೋಸ್ಯಾಟ್ -3 ಮತ್ತು ಅಮೇರಿಕಾದ 13 ಉಪಗ್ರಹಗಳ ಉಡಾವಣೆ ಮಾಡಿದೆ.   ಪಿಎಸ್ಎಲ್ ವಿ – ಸಿ47 ರಾಕೆಟ್ ನಲ್ಲಿ ಒಟ್ಟು 14 ಉಪಗ್ರಹಗಳನ್ನು ಆಕಾಶಕ್ಕೆ ಉಡಾವಣೆ ಮಾಡಲಾಗಿದ್ದು, ಆಧುನಿಕ ತಂತ್ರಜ್ಞಾನದ ಭೂವೀಕ್ಷಣೆಯ ಕಾರ್ಟೋಸ್ಯಾಟ್ -3 ಮತ್ತು ವಾಣಿಜ್ಯದ ಉದ್ದೇಶದಿಂದ ಅಮೇರಿಕಾದ ಒಟ್ಟು 13 ನ್ಯಾನೋ ಉಪಗ್ರಹಗಳನ್ನು ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ

ಇಸ್ರೋದಿಂದ ಉಪಗ್ರಹಗಳ ಉಡಾವಣೆ Read More »

ರಾಷ್ಟ್ರೀಯ ನ್ಯೂಸ್

ಕಣ್ಣೀರು ತರಿಸುತ್ತಿರುವ ಈರುಳ್ಳಿ

 (ನ್ಯೂಸ್ ಕಡಬ) newskadaba.com, ಮುಂಬೈ: ನ.26. ದೇಶದಲ್ಲಿ ಈರುಳ್ಳಿಯ ಉತ್ಪಾದನಾ ಪ್ರಮಾಣದ ಕುಸಿತದಿಂದಾಗಿ ಈರುಳ್ಳಿ ಬೆಲೆ ತೀವ್ರ ಹೆಚ್ಚಳವಾಗಿದ್ದು, ಪೂರೈಕೆ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಇದರಿಂದಾಗಿ ಈರುಳ್ಳಿ ಬೆಲೆಯನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ದೇಶದ ಜನತೆಗೆ ಅಗತ್ಯ ಪ್ರಮಾಣದ ಈರುಳ್ಳಿ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಇದರ ರಫ್ತಿನ ಮೇಲೆ ನಿಷೇಧ ವಿಧಿಸಿದ್ದು, ಇದು ಈ ವರ್ಷದ ಡಿಸೆಂಬರ್ ವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಈರುಳ್ಳಿ ಉತ್ಪಾದನೆಯಲ್ಲಿ ಚೇತರಿಕೆ ಕಂಡುಬರದೆ ಹೋದರೆ, ರಫ್ತು ನಿಷೇಧ ಮುಂದುವರಿಯಬಹುದು. ಸಸ್ಯಹಾರ ಮತ್ತು

ಕಣ್ಣೀರು ತರಿಸುತ್ತಿರುವ ಈರುಳ್ಳಿ Read More »

ರಾಷ್ಟ್ರೀಯ ನ್ಯೂಸ್

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ದೇವೇಂದ್ರ ಫಡ್ನವೀಸ್

(ನ್ಯೂಸ್ ಕಡಬ) newskadaba.com, ಮುಂಬೈ: ನ.26. ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ  ದೇವೇಂದ್ರ ಫಡ್ನವೀಸ್ ಅವರು ಬದಲಾದ ರಾಜಕೀಯ ಜಂಜಾಟಗಳಿಂದ  ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಸುಪ್ರೀಂಕೋರ್ಟ್ ಬುಧವಾರ ಬಹುಮತ ಸಾಬೀತು ಪಡಿಸುವಂತೆ ಆದೇಶ ನೀಡಿದ್ದು, ಆ ನಂತರ ಅಚ್ಚರಿಯ ಬೆಳವಣಿಗೆಯಲ್ಲಿ ಸುದ್ದಿಗೋಷ್ಠಿ ಕರೆದ ಅವರು, ನಮಗೆ  ಬಹುಮತದ ಕೊರತೆ ಇರುವುದರಿಂದ ನಾನು ರಾಜೀನಾಮೆಯನ್ನು ರಾಜ್ಯಪಾಲರಿಗೆ ನೀಡುತ್ತಿದ್ದೇನೆ ಎಂದು ತಿಳಿಸಿದರು. ಎನ್ ಸಿಪಿ –ಕಾಂಗ್ರೆಸ್ ಹಾಗೂ ಶಿವಸೇನೆ ಮೈತ್ರಿ ಸರ್ಕಾರ ರಚನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವುದರ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ದೇವೇಂದ್ರ ಫಡ್ನವೀಸ್ Read More »

ರಾಷ್ಟ್ರೀಯ ನ್ಯೂಸ್

ಅಯೋಧ್ಯೆ ಅರ್ಜಿ ಮರುಪರಿಶೀಲನೆ ಬೇಡ: ಸುನ್ನೀ ವಕ್ಫ್ ಬೋರ್ಡ್

(ನ್ಯೂಸ್ ಕಡಬ) newskadaba.com, ಹೊಸದಿಲ್ಲಿ, ನ.26. ಇತ್ತೀಚೆಗೆ ಪ್ರಕಟವಾದ ಅಯೋಧ್ಯೆ ತೀರ್ಪನ್ನು ಸುನ್ನೀ ವಕ್ಫ್ ಬೋರ್ಡ್ ನ ಸದಸ್ಯರ ತಂಡವು ಸಭೆ ಸೇರಿ ಮರುಪರಿಶೀಲನೆಗೆ ಅರ್ಜಿ ಸಲ್ಲಿಸದೇ ಇರಲು ನಿರ್ಧಾರವನ್ನು ಕೈಗೊಂಡಿದ್ದಾರೆ.   ಅಯೋಧ್ಯೆ ಭೂಮಿಯ ಐತಿಹಾಸಿಕ ತೀರ್ಪು ನೀಡಿದ ಪಂಚ ಪೀಠ ಸದಸ್ಯರಲ್ಲಿ ಒಬ್ಬರಾದ ರಂಜನ್ ಗೊಗೊಯ್  ನೇತೃತ್ವದ ಸುಪ್ರೀಂ ಪೀಠ  ವಿವಾದಿತ ಅಯೋಧ್ಯೆ ಭೂಮಿಯ 2.77 ಎಕರೆ ಜಾಗವು ರಾಮಲಲ್ಲಾಗೆ ಸೇರಬೇಕು ಎಂದು ತೀರ್ಪು ನೀಡಿತ್ತು. ಇಂದು ಸಭೇ ಸೇರಿದ್ದ ಸುನ್ನೀ ವಕ್ಫ್ ಬೋರ್ಡ್

ಅಯೋಧ್ಯೆ ಅರ್ಜಿ ಮರುಪರಿಶೀಲನೆ ಬೇಡ: ಸುನ್ನೀ ವಕ್ಫ್ ಬೋರ್ಡ್ Read More »

ರಾಷ್ಟ್ರೀಯ ನ್ಯೂಸ್

ರಾತ್ರಿ ಬೆಳಗಾಗುವುದರೊಳಗೆ ‘ಮಹಾ’ ರಾಜಕೀಯದಲ್ಲಿ ಮಿಂಚಿನ ಬೆಳವಣಿಗೆ ➤ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಮಹಾರಾಷ್ಟ್ರ, ನ.23. ಸರಕಾರ ರಚಿಸುವ ದೃಷ್ಟಿಯಿಂದ ಶಿವಸೇನೆಗೆ ಬೆಂಬಲ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನ ಮಿತ್ರಪಕ್ಷ ಎನ್ ಸಿಪಿಯು ರಾತ್ರಿ ಬೆಳಗಾಗುವುದರೊಳಗೆ ಬಿಜೆಪಿ ಜೊತೆ ಕೈಜೋಡಿಸಿ ಅಚ್ಚರಿಯ ಬೆಳವಣಿಗೆಗೆ ಕಾರಣವಾಗಿದೆ. ಇದರೊಂದಿಗೆ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮತ್ತು ಎನ್ ಸಿಪಿಯ ಅಜಿತ್ ಪವರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶುಕ್ರವಾರ ರಾತ್ರಿಯ ವರೆಗೆ ಶಿವಸೇನೆಯ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಹಾಗೂ ಎನ್ ಸಿಪಿಯಿಂದ ಉಪಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ಗೆ

ರಾತ್ರಿ ಬೆಳಗಾಗುವುದರೊಳಗೆ ‘ಮಹಾ’ ರಾಜಕೀಯದಲ್ಲಿ ಮಿಂಚಿನ ಬೆಳವಣಿಗೆ ➤ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅಧಿಕಾರ ಸ್ವೀಕಾರ Read More »

ರಾಷ್ಟ್ರೀಯ ನ್ಯೂಸ್
Scroll to Top