ರಾಷ್ಟ್ರೀಯ ನ್ಯೂಸ್

ಮಹಾರಾಷ್ಟ್ರ: ಸಂಪುಟ ವಿಸ್ತರಣೆ ಬೆನ್ನಲ್ಲೆ ರಾಜೀನಾಮೆ ನೀಡಲು ಮುಂದಾದ ಎನ್ ಸಿಪಿ ಶಾಸಕ

ಔರಂಗಬಾದ್, ಡಿ. 31: ಮಹಾರಾಷ್ಟ್ರ ಸರ್ಕಾರದ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಬೀಡ್ ಜಿಲ್ಲೆಯ ಎನ್ ಸಿಪಿ ಶಾಸಕ ಪ್ರಕಾಶ್ ಸೊಲಾಂಕೆ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದು ರಾಜಕೀಯ ಮಾಡಲು ನಮ್ಮಂತವರು ಅರ್ಹರಲ್ಲ ಎಂದು ಹೇಳಿದ್ದಾರೆ. ಮಜಲ್ಗಾಂವ್ ಕ್ಷೇತ್ರದಿಂದ ನಾಲ್ಕು ಬಾರಿ ಚುನಾಯಿತರಾಗಿರುವ ಸೋಲಾಂಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಲು ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸ್ಥಾನ ಇಲ್ಲದಿರುವುದು ಕಾರಣ ಎಂಬ ಮಾತುಗಳು ಕೇಳಿ ಬರುತ್ತಿದ್ದು ಆದರೆ ಸೊಲಾಂಕೆ ಇದನ್ನು ನಿರಾಕರಿಸಿದ್ದಾರೆ. “ನನಗೆ ಯಾವುದೇ ನಾಯಕರ ಮೇಲೆ […]

ಮಹಾರಾಷ್ಟ್ರ: ಸಂಪುಟ ವಿಸ್ತರಣೆ ಬೆನ್ನಲ್ಲೆ ರಾಜೀನಾಮೆ ನೀಡಲು ಮುಂದಾದ ಎನ್ ಸಿಪಿ ಶಾಸಕ Read More »

ರಾಷ್ಟ್ರೀಯ ನ್ಯೂಸ್

ಪೌರತ್ವ ಕಾಯ್ದೆಗೆ ಬೆಂಬಲ ನೀಡುವಂತೆ ಪ್ರಧಾನಿ ಅಭಿಯಾನ

ಹೊಸದಿಲ್ಲಿ, ಡಿ.30: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದಾದ್ಯಂತ ತೀವ್ರ ವಿರೋಧ ಹಾಗೂ ಆಕ್ರೋಶಗಳು ವ್ಯಕ್ತವಾಗುತ್ತಿರುವ ನಡುವಲ್ಲೆ ಕಾಯ್ದೆಗೆ ಬೆಂಬಲ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಭಿಯಾನ ಆರಂಭಿಸಿರುವ ಪ್ರಧಾನಿ ಮೋದಿಯವರು, ಹ್ಯಾಷ್ ಟ್ಯಾಗ್ ಮೂಲಕ ಇಂಡಿಯಾ ಸಪೋರ್ಟ್ಸ್ ಸಿಟಿಝೆನ್’ಶಿಫ್ ಅಮೆಂಡ್ಮೆಂಟ್ ಆ್ಯಕ್ಟ್ ಎಂದು ಅಭಿಯಾನ ಆರಂಭಿಸಿದ್ದಾರೆ.

ಪೌರತ್ವ ಕಾಯ್ದೆಗೆ ಬೆಂಬಲ ನೀಡುವಂತೆ ಪ್ರಧಾನಿ ಅಭಿಯಾನ Read More »

ರಾಷ್ಟ್ರೀಯ ನ್ಯೂಸ್

ದಿಲ್ಲಿ: ಮಂಜು ಆವರಿಸಿ ರಸ್ತೆ ಕಾಣದೆ ಕಣಿವೆಗೆ ಬಿದ್ದ ಕಾರು; ಆರು ಮಂದಿ ಮೃತ್ಯು

ಹೊಸದಿಲ್ಲಿ, ಡಿ.30: ರಸ್ತೆಯಲ್ಲಿ ಸಂಪೂರ್ಣ ಮಂಜು ಆವರಿಸಿದ ಪರಿಣಾಮ ರಸ್ತೆ ಕಾಣದೆ ಕಾರೊಂದು ಕಣಿವೆಗೆ ಉರುಳಿ ಆರು ಮಂದಿ ಮೃತಪಟ್ಟ ಘಟನೆ ದಿಲ್ಲಿಯ ಹೊರವಲಯದಲ್ಲಿರುವ ಗ್ರೀಟರ್‌ ನೋಯ್ಡಾದಲ್ಲಿ ನಡೆದಿದೆ.   ಮೃತರನ್ನು ಮಹೇಶ್ ( 35), ಕಿಶನ್ ಲಾಲ್ (50), ನೀರೆಶ್ (17), ರಾಮ್ ಖಿಲಾಡಿ (75), ಮಲ್ಲು (12) ಮತ್ತು ನೇತ್ರಪಾಲ್ (40) ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಒಟ್ಟು ಹನ್ನೊಂದು ಮಂದಿ ಪ್ರಯಾಣ ಮಾಡಿದ್ದು,  ಮಕ್ಕಳು ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ. ಐವರಿಗೆ ಗಾಯವಾಗಿದ್ದು ಅವರನ್ನು

ದಿಲ್ಲಿ: ಮಂಜು ಆವರಿಸಿ ರಸ್ತೆ ಕಾಣದೆ ಕಣಿವೆಗೆ ಬಿದ್ದ ಕಾರು; ಆರು ಮಂದಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಪೇಜಾವರ ಶ್ರೀ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ, ಡಿ.29: ಇಂದು ನಿಧನರಾದ ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯ ಅಗಲುವಿಕೆಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಕಾರ್ಯಾಲಯದಲ್ಲಿ ತಾವು ಶ್ರೀಗಳನ್ನು ಭೇಟಿ ಮಾಡಿದ ಸಂದರ್ಭದ ಎರಡು ಫೊಟೊಗಳನ್ನು ಹಾಕಿಕೊಂಡು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಪೇಜಾವರ ಶ್ರೀ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ Read More »

ಕರಾವಳಿ, ರಾಷ್ಟ್ರೀಯ ನ್ಯೂಸ್

ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ, ಡಿ.26: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಇಬ್ಬರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.   ಅವರು  ಕೋಲ್ಕತಾದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆದ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು. ಇನ್ನು ಈ ಹಿಂದೆ ಮೃತರಿಗೆ ಪರಿಹಾರ ಘೋಷಿಸಿ ಬಳಿಕ ಸಿಎಂ ಯಡಿಯೂರಪ್ಪ, ಮೃತರು ಗಲಭೆಯಲ್ಲಿ ಭಾಗಿಯಾಗಿರುವುದು ದೃಢಪಟ್ಟರೆ ಒಂದು ರೂಪಾಯಿ

ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಮಮತಾ ಬ್ಯಾನರ್ಜಿ Read More »

ಕರಾವಳಿ, ರಾಷ್ಟ್ರೀಯ ನ್ಯೂಸ್

ಸಿಎಎ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆ ಹಿನ್ನೆಲೆ: ಎನ್ಆರ್ ಸಿ ಜಾರಿಗೆ ಕೇಂದ್ರ ಹಿಂದೇಟು!

ಹೊಸದಿಲ್ಲಿ, ಡಿ.24: ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಎನ್ಆರ್ ಸಿ ಜಾರಿಗೆ ಹಿಂದೇಟು ಹಾಕಿದೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ  ಅಕ್ರಮ ನುಸುಳುಕೋರರನ್ನು ಪತ್ತೆ ಹಚ್ಚಿ ಹೊರದಬ್ಬಲು 2024ರೊಳಗೆ ಕೇಂದ್ರ ಸರಕಾರ ದೇಶಾದ್ಯಂತ ಹಂತಹಂತವಾಗಿ ಎನ್‌ಆರ್‌ಸಿ ಜಾರಿಗೆ ತಂದೇ ತೀರುತ್ತದೆ ಎಂದು ಗುಡುಗಿದ್ದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಜೆ.ಪಿ. ನಡ್ಡಾ ಸಹಿತ ಬಿಜೆಪಿಯ ಘಟಾನುಘಟಿ ನಾಯಕರು ಇದೇ ರೀತಿ

ಸಿಎಎ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆ ಹಿನ್ನೆಲೆ: ಎನ್ಆರ್ ಸಿ ಜಾರಿಗೆ ಕೇಂದ್ರ ಹಿಂದೇಟು! Read More »

ರಾಷ್ಟ್ರೀಯ ನ್ಯೂಸ್

ಜಾರ್ಖಂಡ್ ಚುನಾವಣಾ ಫಲಿತಾಂಶ: ಜಿದ್ದಾಜಿದ್ದಿನ ಕಾದಾಟದಲ್ಲಿ ಜೆಎಂಎಂ-ಕಾಂಗ್ರೆಸ್, ಬಿಜೆಪಿ

ರಾಂಚಿ, ಡಿ.23: ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟ ಇನ್ನೇನು ಕೆಲವೇ ಹೊತ್ತಿನಲ್ಲಿ ಹೊರಬೀಳುವ ಸಾಧ್ಯತೆ ಇದ್ದು, ಈ ವರೆಗಿನ ವರದಿಗಳ ಅನ್ವಯ ಬಿಜೆಪಿ ಮತ್ತು ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಎದುರಾಗಿದೆ. ಈಗ ಬಂದ ವರದಿಗಳ ಪ್ರಕಾರ ಜಾರ್ಖಂಡ್ ನ ಒಟ್ಟು 81 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 33 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಕಾಂಗ್ರೆಸ್ ಮೈತ್ರಿ ಕೂಟ 33 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಉಳಿದಂತೆ ಅನಿರೀಕ್ಷಿತ

ಜಾರ್ಖಂಡ್ ಚುನಾವಣಾ ಫಲಿತಾಂಶ: ಜಿದ್ದಾಜಿದ್ದಿನ ಕಾದಾಟದಲ್ಲಿ ಜೆಎಂಎಂ-ಕಾಂಗ್ರೆಸ್, ಬಿಜೆಪಿ Read More »

ರಾಷ್ಟ್ರೀಯ ನ್ಯೂಸ್

ದಿಲ್ಲಿಯಲ್ಲಿ ಮತ್ತೊಂದು ಅಗ್ನಿ ಅವಘಡ: 9ಮಂದಿ ಸಜೀವ ದಹನ

ಹೊಸದಿಲ್ಲಿ, ಡಿ.23 : ದಿಲ್ಲಿಯಲ್ಲಿ ಮತ್ತೊಂದು ಅಗ್ನಿಅವಘಡ ಸಂಭವಿಸಿದ್ದು,  ಬಟ್ಟೆಯ ಗೋದಾಮಿಗೆ ಬೆಂಕಿ ಹತ್ತಿ 9 ಮಂದಿ ಮೃತಪಟ್ಟ ಘಟನೆ ಕಿರಾರಿ ಎಂಬಲ್ಲಿ ನಡೆದಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಂಕಿ ಹತ್ತಿಕೊಳ್ಳಲು ಕಾರಣವೇನೆಂದು ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಡಿಸೆಂಬರ್ ಆರಂಭದಲ್ಲಿ ದಿಲ್ಲಿಯ ಅನಜ್ ಮಾಂಡಿ ಕಾರ್ಖಾನೆಯಲ್ಲಿ ನಸುಕಿನ ಜಾವ ಬೆಂಕಿ ಹತ್ತಿಕೊಂಡು ಅಲ್ಲಿ ಮಲಗಿದ್ದ 43 ಮಂದಿ ಮೃತಪಟ್ಟಿದ್ದರು.

ದಿಲ್ಲಿಯಲ್ಲಿ ಮತ್ತೊಂದು ಅಗ್ನಿ ಅವಘಡ: 9ಮಂದಿ ಸಜೀವ ದಹನ Read More »

ರಾಷ್ಟ್ರೀಯ ನ್ಯೂಸ್

ಮಹಿಳೆಯರ ಅವಮಾನ ಆರೋಪ: ಸಂಸದ ಶಶಿ ತರೂರು ವಿರುದ್ಧ ಬಂಧನ ವಾರಂಟ್

ತಿರುವನಂತಪುರಂ, ಡಿ.22: ತನ್ನ ಪುಸ್ತಕವೊಂದರಲ್ಲಿ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವನಂತಪುರಂನ ಸ್ಥಳೀಯ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ. ಶನಿವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ  ವಕೀಲರೊಂದಿಗೆ ಹಾಜರಾಗಲೂ ಸ್ಥಳೀಯ ಕೋರ್ಟ್ ಸೂಚಿಸಿತ್ತು. ಆದರೇ ಹಾಜರಾಗಲು ವಿಫಲವಾದ ಕಾರಣ ಕಾಂಗ್ರೆಸ್ ನಾಯಕನ ವಿರುದ್ಧ ಬಂಧನ ವಾರಂಟ್ ಅನ್ನು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಹೊರಡಿಸಿದ್ದಾರೆ.

ಮಹಿಳೆಯರ ಅವಮಾನ ಆರೋಪ: ಸಂಸದ ಶಶಿ ತರೂರು ವಿರುದ್ಧ ಬಂಧನ ವಾರಂಟ್ Read More »

ರಾಷ್ಟ್ರೀಯ ನ್ಯೂಸ್

ಕಲ್ಲೆಸೆತದಿಂದ ನೆಟ್ಟಿಗರಿಗೆ ಆಹಾರವಾದ ಮಂಗಳೂರಿನ ಪಂಪ್ ವೆಲ್ ಸರ್ಕಲ್ ➤ ಟ್ರೋಲ್ ಆಗುತ್ತಿದೆ ಸಂಸದರ ಟ್ವೀಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.21. ಪೌರತ್ವ ವಿರೋಧಿಸಿ ತುಳುನಾಡಿನಲ್ಲಿ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ಎರಡು ಜೀವಗಳು ಬಲಿಯಾಗಿದ್ದು ಆಯಿತು. ಕರ್ಫ್ಯೂ ಹಾಕಿ ಜನಜೀವನ ಅಸ್ತವ್ಯಸ್ತ ಆಗಿದ್ದೂ ಆಯಿತು. ಇದೀಗ ಕಲ್ಲೆಸೆತವನ್ನು ಟ್ರೋಲ್ ಮಾಡುತ್ತಾ ಸಂಸದ ನಳಿನ್ ಕುಮಾರ್ ಕಟೀಲ್ ರ ನಕಲಿ ಟ್ವೀಟೊಂದು ನೆಟ್ಟಿಗರಿಗೆ ಆಹಾರವಾಗುತ್ತಿದೆ. ಮಂಗಳೂರಿನ ಮುಖ್ಯದ್ವಾರವಾದ ಪಂಪ್ ವೆಲ್ ನಲ್ಲಿ ಕಳೆದ 9 ವರ್ಷಗಳಿಂದ ನಿರ್ಮಿಸುತ್ತಿರುವ ಫ್ಲೈಓವರ್ ಕಾಮಗಾರಿಯ ಉದ್ಘಾಟನೆಗೆ ಹಲವು ಸಲ ದಿನಾಂಕ ನಿಗದಿಯಾಗಿ ಕೊನೆಯ ಹಂತದಲ್ಲಿ ಕಾಮಗಾರಿ ಪೂರ್ತಿಯಾಗದೆ

ಕಲ್ಲೆಸೆತದಿಂದ ನೆಟ್ಟಿಗರಿಗೆ ಆಹಾರವಾದ ಮಂಗಳೂರಿನ ಪಂಪ್ ವೆಲ್ ಸರ್ಕಲ್ ➤ ಟ್ರೋಲ್ ಆಗುತ್ತಿದೆ ಸಂಸದರ ಟ್ವೀಟ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top