ರಾಷ್ಟ್ರೀಯ ನ್ಯೂಸ್

ದಿಲ್ಲಿ: ಸಿಎಎ ಪರ-ವಿರೋಧಿಗಳ ನಡುವೆ ಘರ್ಷಣೆ; ಕಲ್ಲು ತೂರಾಟ

ಹೊಸದಿಲ್ಲಿ, ಫೆ.24: ಪೌರತ್ವ ತಿದ್ದುಪಡಿ ಕಾಯ್ದೆ ಪರ ದಿಲ್ಲಿಯ ಮೌಜ್‌ಪುರ್ ಪ್ರದೇಶದಲ್ಲಿ ನಡೆಯುತ್ತಿದ್ದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಇದರಿಂದಾಗಿ ಸ್ಥಳದಲ್ಲಿ ಘರ್ಷಣೆ ಉಂಟಾಗಿದೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಜನರನ್ನು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ದಿಲ್ಲಿಯ ಝಫರಾಬಾದ್ ಬಳಿ ಸಿಎಎ ವಿರೋಧಿಸಿ ಧರಣಿ ನಡೆಸಲಾಗುತ್ತಿತ್ತು. ಈ ಪ್ರದೇಶ ಹಾಗೂ ಸಿಎಎ ಪರವಾಗಿ ನಡೆಯುತ್ತಿದ್ದ ಮೆರವಣಿಗೆಯ ಪ್ರದೇಶ ಹತ್ತಿರ ಹತ್ತಿರವೇ ಇದ್ದುದರಿಂದ ಘರ್ಷಣೆ ನಡೆದಿದೆ ಎನ್ನಲಾಗಿದೆ. ಎರಡು ಗುಂಪುಗಳು ಹತ್ತಿರವೇ ಇದ್ದುದರಿಂದ ಘರ್ಷಣೆ ನಡೆದಿದೆ. […]

ದಿಲ್ಲಿ: ಸಿಎಎ ಪರ-ವಿರೋಧಿಗಳ ನಡುವೆ ಘರ್ಷಣೆ; ಕಲ್ಲು ತೂರಾಟ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇಂದು ಡೊನಾಲ್ಡ್ ಟ್ರಂಪ್ ಭಾರತಕ್ಕೆ

ಹೊಸದಿಲ್ಲಿ, ಫೆ.24: ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಭಾರತಕ್ಕೆ ಭೇಟಿ ನೀಡಲಿದ್ದು, ಎರಡು ದಿನ ಇಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಕೆಲವು ಒಪ್ಪಂದಗಳಿಗೆ ಭಾರತ-ಅಮೆರಿಕ ಸಹಿ ಹಾಕುವ ನಿರೀಕ್ಷೆ ಇದೆ. ಭಾರತ ಭೇಟಿ ನಿಗದಿಯಾದ ಆರಂಭದಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಸುಳಿವು ನೀಡಿದ್ದ ಟ್ರಂಪ್ ಬಳಿಕ, ಈ ಬಾರಿ ಒಪ್ಪಂದ ಏರ್ಪಡುವುದು ಅನುಮಾನ ಎಂದು ಹೇಳಿದ್ದರು. ಹಲವು ನಿರೀಕ್ಷೆ,

ಇಂದು ಡೊನಾಲ್ಡ್ ಟ್ರಂಪ್ ಭಾರತಕ್ಕೆ Read More »

ರಾಷ್ಟ್ರೀಯ ನ್ಯೂಸ್

ಟ್ರಂಪ್ ಭೇಟಿಯಿಂದ ಭಾರತಕ್ಕೆ ಲಾಭವಿಲ್ಲ: ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ

ಭುವನೇಶ್ವರ, ಫೆ.23: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಿಂದಾಗಿ ಭಾರತಕ್ಕೆ ಯಾವುದೇ ಲಾಭವಿಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಟ್ರಂಪ್ ಅಮೆರಿಕದ ಆರ್ಥಿಕತೆಗೆ ಪುಷ್ಠಿ ನೀಡುವ ಉದ್ದೇಶದಿಂದ ಭಾರತಕ್ಕೆ ಆಗಮಿಸುತ್ತಿದ್ದಾರೆ. ನಮ್ಮ ದೇಶಕ್ಕೆ ಅವರ ಭೇಟಿಯಿಂದಾಗಿ ಯಾವುದೇ ಲಾಭವಿದೆ ಎಂದು ನನಗೆ ಅನಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವು ರಕ್ಷಣಾ ಒಪ್ಪಂದಗಳು ಟ್ರಂಪ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಗಬಹುದು. ಅದೂ ಕೂಡ ಅಮೆರಿಕದ ಆರ್ಥಿಕತೆಗೆ ಆಗುವ ಲಾಭದ ದೃಷ್ಟಿಯಿಂದಲ್ಲೇ

ಟ್ರಂಪ್ ಭೇಟಿಯಿಂದ ಭಾರತಕ್ಕೆ ಲಾಭವಿಲ್ಲ: ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ Read More »

ರಾಷ್ಟ್ರೀಯ ನ್ಯೂಸ್

ವೈದ್ಯಕೀಯ ಚಿಕಿತ್ಸೆ ಕೋರಿ ನಿರ್ಭಯಾ ಅಪರಾಧಿ ಸಲ್ಲಿಸಿದ ಅರ್ಜಿ ವಜಾ

ಹೊಸದಿಲ್ಲಿ, ಫೆ.22: ತಾನು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ತನಗೆ ಉತ್ತಮ ವೈದ್ಯಕೀಯ ಚಿಕಿತ್ಸೆಗೆ ಅನುಮತಿ ನೀಡಬೇಕೆಂದು ಕೋರಿ ನಿರ್ಭಯಾ ಪ್ರಕರಣ ಅಪರಾಧಿ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಪಟಿಯಾಲಾ ಹೌಸ್ ಕೋರ್ಟ್ ಶನಿವಾರ ವಜಾಗೊಳಿಸಿದೆ. ತಾನು ಮಾನಸಿಕ ಅಸ್ವಸ್ಥ, ತಲೆ ಹಾಗೂ ತೋಳಿಗೆ ಗಾಯವಾಗಿದೆ ಇದಕ್ಕೆ ಸರಿಯಾದ ಚಿಕಿತ್ಸೆ ಪಡೆಯಲು ಅನುಮತಿ ನೀಡಬೇಕೆಂದು ಕೋರಿ ಅಪರಾಧಿ ವಿನಯ್ ಶರ್ಮಾ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ, ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್ ವಿನಯ್ ಶರ್ಮಾನ ಅರ್ಜಿಯನ್ನು

ವೈದ್ಯಕೀಯ ಚಿಕಿತ್ಸೆ ಕೋರಿ ನಿರ್ಭಯಾ ಅಪರಾಧಿ ಸಲ್ಲಿಸಿದ ಅರ್ಜಿ ವಜಾ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪಾಕ್ ಪರ ಘೋಷಣೆ ಕೂಗಿದ ‘ಅಮೂಲ್ಯ’ ➤ ಸ್ಟೇಜ್ ನಿಂದ ಹೊರದಬ್ಬಿ ಪೊಲೀಸರಿಗೆ ಒಪ್ಪಿಸಿದ ಆಯೋಜಕರು

ಬೆಂಗಳೂರು, ಫೆ.20: ಸಿಎಎ ವಿರೋಧಿಸಿ ಇಲ್ಲಿನ ಟಿಪ್ಪುಸುಲ್ತಾನ್ ಯುನೈಟೆಡ್ ಫ್ರಂಟ್ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಪ್ರತಿಭಟನೆ ವೇಳೆ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ ಅಮೂಲ್ಯ ಎಂಬ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆ ಸಭೆ ಆರಂಭವಾಗುತ್ತಿದ್ದಂತೆ ವೇದಿಕೆ ಏರಿದ ಅಮೂಲ್ಯ, ಮೂರು ಬಾರಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದರು. ತಕ್ಷಣ ಅಲ್ಲೇ ಇದ್ದ ಪೊಲೀಸರು, ಅಮೂಲ್ಯರನ್ನು ತಮ್ಮ ವಶಕ್ಕೆ ಪಡೆದುಕೊಂಡರು.

ಪಾಕ್ ಪರ ಘೋಷಣೆ ಕೂಗಿದ ‘ಅಮೂಲ್ಯ’ ➤ ಸ್ಟೇಜ್ ನಿಂದ ಹೊರದಬ್ಬಿ ಪೊಲೀಸರಿಗೆ ಒಪ್ಪಿಸಿದ ಆಯೋಜಕರು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮುಂದಿನ ತಿಂಗಳು ಎಲ್‌ಪಿಜಿ ದರದಲ್ಲಿ ಇಳಿಕೆ: ಸಚಿವ ಪ್ರಧಾನ್

ರಾಂಚಿ, ಫೆ.20: ಮುಂದಿನ ತಿಂಗಳು ಎಲ್‌ಪಿಜಿ ಸಿಲಿಂಡರ್ ಬೆಲೆ ಕಡಿಮೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಸಿದ್ದಾರೆ. ಜಾರ್ಖಂಡ್ ಪ್ರವಾಸದಲ್ಲಿರುವ ಅವರು ಇಲ್ಲಿನ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಎಲ್‌ಪಿಜಿ ಸಿಲಿಂಡರ್ ಬೆಲೆಗಳ ನಿರಂತರ ಏರಿಕೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಪ್ರಧಾನ್, ಎಲ್‌ಪಿಜಿ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ ಎಂಬುದು ವಾಸ್ತವಿಕವಾಗಿ ನಿಜವಲ್ಲ. ಈ ತಿಂಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಾರಣ ದರ ಹೆಚ್ಚಾಗಿದೆ ಆದರೆ ಮುಂದಿನ ದಿನಗಳಲ್ಲಿ ಬೆಲೆಗಳು ಖಂಡಿತವಾಗಿ ಕಡೆಮೆಯಾಗಲಿದೆ ಎಂಬ

ಮುಂದಿನ ತಿಂಗಳು ಎಲ್‌ಪಿಜಿ ದರದಲ್ಲಿ ಇಳಿಕೆ: ಸಚಿವ ಪ್ರಧಾನ್ Read More »

ರಾಷ್ಟ್ರೀಯ ನ್ಯೂಸ್

ರಾಜಸ್ಥಾನ: ಕಳ್ಳತನ ಆರೋಪದಲ್ಲಿ ದಲಿತ ಯುವಕರಿಗೆ ಚಿತ್ರಹಿಂಸೆ, ಸ್ಕ್ರೂಡ್ರೈವರ್‌ನಿಂದ ಖಾಸಗಿ ಭಾಗಕ್ಕೆ ತಿವಿದ ದುಷ್ಕರ್ಮಿಗಳು

ಅಮಾನವೀಯ ಘಟನೆಯ ವೀಡಿಯೊ ವೈರಲ್ ಜೈಪುರ್, ಫೆ.20: ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ದಲಿತ ಯುವಕರಿಗೆ ಚಿತ್ರಹಿಂಸೆ ನೀಡಿದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದ್ದು, ವೈರಲ್ ಆದ ವೀಡಿಯೊದಲ್ಲಿ ದುಷ್ಕರ್ಮಿಯೊಬ್ಬ ಸಂತ್ರಸ್ತನನ್ನು ಪೆಟ್ರೋಲ್‌ನಲ್ಲಿ ಅದ್ದಿದ ಸ್ಕ್ರೂಡ್ರೈವರ್‌ನಿಂದ ಆತನ ಖಾಸಗಿ ಭಾಗಕ್ಕೆ ತಿವಿದಿದ್ದಾನೆ. ದ್ವಿಚಕ್ರ ವಾಹನ ಶೋರೂಂನಲ್ಲಿ ಹಣ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಆರೋಪಿಸಿ ಶೋರೂಂ ಸಿಬ್ಬಂದಿ, ಇಬ್ಬರು ದಲಿತ ಯುವಕರ ಬಟ್ಟೆ ಬಿಚ್ಚಿ, ಅವರನ್ನು

ರಾಜಸ್ಥಾನ: ಕಳ್ಳತನ ಆರೋಪದಲ್ಲಿ ದಲಿತ ಯುವಕರಿಗೆ ಚಿತ್ರಹಿಂಸೆ, ಸ್ಕ್ರೂಡ್ರೈವರ್‌ನಿಂದ ಖಾಸಗಿ ಭಾಗಕ್ಕೆ ತಿವಿದ ದುಷ್ಕರ್ಮಿಗಳು Read More »

ರಾಷ್ಟ್ರೀಯ ನ್ಯೂಸ್

Breaking: ಕೆಎಸ್ಸಾರ್ಟಿಸಿ ವೋಲ್ವೋ – ಕಂಟೇನರ್ ನಡುವೆ ಭೀಕರ ಅಪಘಾತ ➤ 16 ಮಂದಿ ಮೃತ್ಯು, ಹಲವರು ಗಂಭೀರ

(ನ್ಯೂಸ್ ಕಡಬ) newskadaba.com ತಮಿಳುನಾಡು, ಫೆ.20. ಬೆಂಗಳೂರಿನಿಂದ ಕೇರಳದ ಕೊಚ್ಚಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ವೋಲ್ವೋ ಬಸ್ ಹಾಗೂ ಕಂಟೇನರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ 16 ಮಂದಿ ಪ್ರಯಾಣಿಕರು ಮೃತಪಟ್ಟು, ಹಲವರು ಗಂಭೀರ ಗಾಯಗೊಂಡ ಘಟನೆ ತಮಿಳುನಾಡಿನ ತಿರುಪುರ್ ನಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ. ಬೆಂಗಳೂರಿನಿಂದ ಬುಧವಾರ ರಾತ್ರಿ ಹೊರಟಿದ್ದ ಕೇರಳ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ಗೆ ಸೇರಿದ ವೋಲ್ವೋ ಬಸ್ ತಮಿಳುನಾಡಿನ ತಿರುಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆ ಬೃಹತ್ ಕಂಟೇನರ್ ನಡುವೆ

Breaking: ಕೆಎಸ್ಸಾರ್ಟಿಸಿ ವೋಲ್ವೋ – ಕಂಟೇನರ್ ನಡುವೆ ಭೀಕರ ಅಪಘಾತ ➤ 16 ಮಂದಿ ಮೃತ್ಯು, ಹಲವರು ಗಂಭೀರ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜಮ್ಮು- ಕಾಶ್ಮೀರ್ : ಎನ್ ಕೌಂಟರ್ ಗೆ ಮೂವರು ಬಲಿ

(ನ್ಯೂಸ್ ಕಡಬ) newskadaba.com ಶ್ರೀನಗರ. ಫೆ.19. ಉಗ್ರ ನಿಗ್ರಹ ದಳದ ಕಾರ್ಯಾಚರಣೆಯು ಮುಂದುವರಿದ ಪರಿಣಾಮವಾಗಿ ಜಮ್ಮು – ಕಾಶ್ಮೀರದಲ್ಲಿ ಬುಧವಾರ ನಸುಕಿನ ಜಾವ ನಡೆದ ಎನ್ ಕೌಂಟರ್ ಗೆ ಮೂವರು ಉಗ್ರರು ಹತರಾಗಿದ್ದಾರೆ. ಹತರನ್ನು ಜಂಗೀರ್ ರಫೀಕ್ ವಾನಿ, ರಾಜಾ ಉಮರ್ ಮಕ್ಬೂಲ್ ಭಟ್, ಉಜೈರ್ ಆಮಿನ್ ಭಟ್ ಎಂದು ಸೇನಾ ಮೂಲಗಳು ತಿಳಿಸಿದೆ. ಉಗ್ರರು ಅನ್ಸಾರ್ ಫಜ್ವಾ ಉಲ್ ಹಿಂದ್ ಸಂಘಟನೆಗೆ ಸೇರಿದವರಾಗಿದ್ದು ಎಂದು ಕಾಶ್ಮೀರಿ ಪೊಲೀಸರು ತಿಳಿಸಿದ್ದಾರೆ.

ಜಮ್ಮು- ಕಾಶ್ಮೀರ್ : ಎನ್ ಕೌಂಟರ್ ಗೆ ಮೂವರು ಬಲಿ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಂಗಳೂರಿಗೆ ತೆರಳುತ್ತಿದ್ದ ಗೋ ಏರ್ ವಿಮಾನದಲ್ಲಿ ಬೆಂಕಿ: ಅಪಾಯದಿಂದ ಪಾರು

ಬೆಂಗಳೂರು, ಫೆ.18: ಬೆಂಗಳೂರಿಗೆ ಹೊರಟಿದ್ದ ಗೋ ಏರ್ ವಿಮಾನ ಟೇಕಾಫ್ ಸಂದರ್ಭ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಪರಿಣಾಮ ಆತಂಕದ ಸನ್ನಿವೇಶ ನಿರ್ಮಾಣವಾದ ಘಟನೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ. ಘಟನೆ ನಡೆಯುತ್ತಿದ್ದಂತೆ ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ವಿಮಾನದಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ‘ಅಹಮದಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಗೋಏರ್ ವಿಮಾನ ‘ಜಿ8 802’ರ ಬಲಭಾಗದ ಎಂಜಿನ್‌ಗೆ ಟೇಕ್‌ಆಫ್ ವೇಳೆ ಅನ್ಯವಸ್ತು ಡಿಕ್ಕಿಯಾದ ಅನುಮಾನವಿದೆ. ಡಿಕ್ಕಿಯ ಪರಿಣಾಮವಾಗಿ ಸಣ್ಣದಾಗಿ ಬೆಂಕಿ ಹೊತ್ತಿಕೊಂಡಿದೆ. ಎಲ್ಲ ಪ್ರಯಾಣಿಕರು

ಬೆಂಗಳೂರಿಗೆ ತೆರಳುತ್ತಿದ್ದ ಗೋ ಏರ್ ವಿಮಾನದಲ್ಲಿ ಬೆಂಕಿ: ಅಪಾಯದಿಂದ ಪಾರು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top