ಸೇತುವೆಯಲ್ಲಿ ನಿಂತು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೃದ್ದೆಯ ರಕ್ಷಿಸಿದ ಪೊಲೀಸ್
(ನ್ಯೂಸ್ ಕಡಬ) newskadaba.com ಕಲಬುರಗಿ, ಜ. 03. ಭೀಮಾ ನದಿಗೆ ಹಾರಿ ಆತ್ಮಹತ್ಯೆಗೈಯಲು ಯತ್ನಿಸುತ್ತಿದ್ದ ವೃದ್ದೆಯೋರ್ವರನ್ನು ಪೊಲೀಸ್ ಪೇದೆಯೊಬ್ಬರು ರಕ್ಷಿಸಿದ ಘಟನೆ ಜಿಲ್ಲೆಯ ಕಟ್ಟಿಸಂಗಾವಿ ಬಳಿಯ ಭೀಮಾ ನದಿ ಸೇತುವೆಯಲ್ಲಿ ನಡೆದಿದೆ. ಆಳಂದ ಮೂಲದ ಗುರುಬಾಯಿ (60) ಎಂಬ ವೃದ್ದೆ ಭೀಮಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ತಿಸುತ್ತಿದ್ದ ವೇಳೆ ಗಸ್ತು ತಿರುಗುತ್ತಿದ್ದ ಜೇವರ್ಗಿ ಪೊಲೀಸ್ ಠಾಣೆ ಪೇದೆ ಅನಿಲ್ ಕುಮಾರ್ ಆಕೆಯನ್ನು ಗಮನಿಸಿ ರಕ್ಷಣೆ ಮಾಡಿದ್ದಾರೆ.
ಸೇತುವೆಯಲ್ಲಿ ನಿಂತು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೃದ್ದೆಯ ರಕ್ಷಿಸಿದ ಪೊಲೀಸ್ Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್








