ರಾಷ್ಟ್ರೀಯ ನ್ಯೂಸ್

ಕೃಷಿ ಮಸೂದೆ ವಿರುದ್ದದ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಕಾಂಗ್ರೆಸ್

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 05 ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಮಸೂದೆಯನ್ನು ವಿರುದ್ದ ಪ್ರತಿಭಟಿಸುತ್ತಿರುವ ರೈತರು 41 ದಿನಕ್ಕೆ ಕಾಲಿಟ್ಟಿದ್ದು, ಈ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ನೀಡುವುದಾಗಿ ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ತಿಳಿಸಿದ್ದಾರೆ.   ಈ ಕುರಿತು ಟ್ವೀಟ್ ಮೂಲಕ “ಕೇಂದ್ರ ಸರ್ಕಾರದ ಕೃಷಿ ಮಸೂದೆಯ ವಿರುದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ 50 ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದು, ಕಾಂಗ್ರೆಸ್‌ ನ ಎಲ್ಲ ಮುಖಂಡರು […]

ಕೃಷಿ ಮಸೂದೆ ವಿರುದ್ದದ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಕಾಂಗ್ರೆಸ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೇರಳದಲ್ಲಿ ಹಕ್ಕಿ ಜ್ವರ ಪತ್ತೆಯಾದ ಹಿನ್ನೆಲೆ ➤ ಕಾಸರಗೋಡಿನಲ್ಲೂ ಹೈ ಅಲರ್ಟ್

(ನ್ಯೂಸ್ ಕಡಬ) newskadaba.com ಕೇರಳ, ಜ. 05. ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರವು ಆತಂಕ ಮೂಡಿಸಿದ್ದು, ಇದೀಗ ಕೇರಳವನ್ನೂ ಪ್ರವೇಶಿಸಿದ್ದು, ಕೊಟ್ಟಾಯಂ ಮತ್ತು ಅಳಪ್ಪುಝ ಜಿಲ್ಲೆಗಳ ಬಾತುಕೋಳಿಗಳಲ್ಲಿ ಈ ಸೋಂಕು ಪತ್ತೆಯಾಗಿದೆ. ಕೊಟ್ಟಾಯಂನ ನೀಂದೂರ್‌ ಎಂಬಲ್ಲಿರುವ ಬಾತುಕೋಳಿ ಫಾರಂ ಒಂದರಲ್ಲಿ ಎಚ್‌-5 ಎನ್‌-8 ವೈರಸ್‌ ಸೋಂಕಿನಿಂದ ಸುಮಾರು 1,500ರಷ್ಟು ಬಾತುಕೋಳಿಗಳು ಸತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿರುವ ಎಲ್ಲ ಬಾತುಕೋಳಿಗಳು, ಕೋಳಿಗಳು ಮತ್ತು ಇತರ ಸಾಕು ಹಕ್ಕಿಗಳನ್ನು ಕೊಲ್ಲಲು ಆಡಳಿತ ಮಂಡಲಿ ನಿರ್ಧರಿಸಿದೆ. ಅಳಪ್ಪುಳದಲ್ಲೂ ಪ್ರಕರಣಗಳು ಬೆಳಕಿಗೆ ಬಂದಿದ್ದು,

ಕೇರಳದಲ್ಲಿ ಹಕ್ಕಿ ಜ್ವರ ಪತ್ತೆಯಾದ ಹಿನ್ನೆಲೆ ➤ ಕಾಸರಗೋಡಿನಲ್ಲೂ ಹೈ ಅಲರ್ಟ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಆಟೋ ರಿಕ್ಷಾ ಮಗುಚಿ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 04. ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಮಗುವೊಂದು ಮೃತಪಟ್ಟ ಘಟನೆ ಇಂದು ಸಂಜೆ ಬಂದ್ಯೋಡು- ಪೆರ್ಮುದೆ ರಸ್ತೆಯ ಮೀಪಿರಿ ಎಂಬಲ್ಲಿ ನಡೆದಿದೆ.   ಮೃತಪಟ್ಟ ಮಗುವನ್ನು ಕಯ್ಯಾರ್ ಪಿಲಿಯಂದೂರಿನ ರಿಜ್ವಾನ್ ಎಂದು ಗುರುತಿಸಲಾಗಿದೆ. ತಾಯಿ ಹಾಗೂ ಮಗು ಬಂದ್ಯೋಡು ಕಡೆಗೆ ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಆಟೋ ರಿಕ್ಷಾದ ಟಯರ್ ಕಳಚಿದ ಪರಿಣಾಮ ಆಟೋ ಮಗುಚಿ ಬಿದ್ದಿದ್ದು ಗಂಭೀರ ಗಾಯಗೊಂಡ ಮಗು ಮೃತಪಟ್ಟಿದೆ. ತಾಯಿ ಫಾಯಿಸಾ ಮತ್ತು

ಕಾಸರಗೋಡು: ಆಟೋ ರಿಕ್ಷಾ ಮಗುಚಿ ಮಗು ಮೃತ್ಯು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಜೇಶ್ವರ ಶಾಸಕ ಕಮರುದ್ದೀನ್ ಗೆ ಮೂರು ಪ್ರಕರಣಗಳ ಜಾಮೀನು ನೀಡಿದ ಹೈಕೋರ್ಟ್

(ನ್ಯೂಸ್ ಕಡಬ) newskadaba.com ಕೊಚ್ಚಿ, ಜ.04. ಹೂಡಿಕೆದಾರರನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿದ್ದ ಶಾಸಕ ಕಮರುದ್ದೀನ್ ಅವರಿಗೆ ಕೇರಳ ಹೈಕೋರ್ಟ್ ಮೂರು ಪ್ರಕರಣಗಳಲ್ಲಿ ಮಾತ್ರ ಜಾಮೀನು ನೀಡಿದೆ. ಶಾಸಕ ಕಮರುದ್ದೀನ್ ವಿರುದ್ದ ಫ್ಯಾಷನ್ ಗೋಲ್ಡ್ ಸಂಸ್ಥೆಯು ಗ್ರಾಹಕರಿಂದ ಹಣ ಪಡೆದು ಚಿನ್ನ ನೀಡಿಲ್ಲ ಎಂಬುವುದಾಗಿ ಆರೋಪಿಸಿತ್ತು. ಇವರ ವಿರುದ್ದ ಈಗಾಗಲೇ 100ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ.

ಮಂಜೇಶ್ವರ ಶಾಸಕ ಕಮರುದ್ದೀನ್ ಗೆ ಮೂರು ಪ್ರಕರಣಗಳ ಜಾಮೀನು ನೀಡಿದ ಹೈಕೋರ್ಟ್ Read More »

ರಾಷ್ಟ್ರೀಯ ನ್ಯೂಸ್

ಅಕ್ರಮ 1.47 ಕೋಟಿ ನೇಪಾಳ ಕರೆನ್ಸಿ ಹೊಂದಿದ್ದ ಆರೋಪ ➤ ಭಾರತದ ನಾಗರಿಕ ನೇಪಾಳದಲ್ಲಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಠ್ಮಂಡು, ಜ. 04. ಅಕ್ರಮವಾಗಿ ನೇಪಾಳದ ಕರೆನ್ಸಿ ಆರೋಪದಡಿಯಲ್ಲಿ ಭಾರತೀಯ ನಾಗರಿಕ ಸೇರಿದಂತೆ ಇಬ್ಬರು ಆರೋಪಿಗಳನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಭಾರತದ ಗೋರಖ್ ಪುರದ ನಿವಾಸಿ ಅಮಿತ್ ಕುಮಾರ್ ಗುಪ್ತಾ (30) ಹಾಗೂ ಕಪಿಲವಸ್ತು ಜಿಲ್ಲೆಯ ಸಂಗಮ್ ತರು (22) ಎಂದು ಗುರುತಿಸಲಾಗಿದೆ. ಪ್ರತಿನಿತ್ಯದಂತೆ ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ಇಬ್ಬರು ಪ್ರಯಾಣಿಕರಿದ್ದ ಕಾರಿನಲ್ಲಿ ಸುಮಾರು 1.47 ಕೋಟಿ ನೇಪಾಳ ಕರೆನ್ಸಿ ಪತ್ತೆಯಾಗಿದ್ದು, ಇದನ್ನು ಮೂರು ಚೀಲದಲ್ಲಿ ತುಂಬಿ ಕಾರಿನಲ್ಲಿ

ಅಕ್ರಮ 1.47 ಕೋಟಿ ನೇಪಾಳ ಕರೆನ್ಸಿ ಹೊಂದಿದ್ದ ಆರೋಪ ➤ ಭಾರತದ ನಾಗರಿಕ ನೇಪಾಳದಲ್ಲಿ ಅರೆಸ್ಟ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಂಗ್ರೆಸ್ ನಾಯಕ ವಿಲಾಸ್ ರಾವ್ ಪಾಟೀಲ್ ನಿಧನ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ,ಜ. 04. ರಾಜ್ಯದ ಮಾಜಿ ಸಹಕಾರಿ ಸಚಿವ ವಿಲಾಸ್ ರಾವ್ ಪಾಟೀಲ್ ಉಂಡಾಲ್ಕರ್ ಇಂದು ಬೆಳಗ್ಗೆ ಸತಾರ ಜಿಲ್ಲೆಯ ಕರಾಡ್ ತಾಲೂಕಿನಲ್ಲಿ ನಿಧನರಾದರು.   ಇವರಿಗೆ 84 ವರ್ಷ ವಯಸ್ಸಾಗಿತ್ತು. ವಿಲಾಸ್ ರಾವ್ ಗೆ ಕಳೆದ 15 ದಿನಗಳಿಂದ ಅನಾರೋಗ್ಯ ಕಾಡುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇಂದು ಬೆಳಗ್ಗೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಕಾಂಗ್ರೆಸ್ ನಾಯಕ ವಿಲಾಸ್ ರಾವ್ ಪಾಟೀಲ್ ನಿಧನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮೊಬೈಲ್ ಕೊಡಿಸಲಿಲ್ಲವೆಂದು ಆತ್ಮಹತ್ಯೆಗೈದ ಬಾಲಕ

(ನ್ಯೂಸ್ ಕಡಬ) newskadaba.com ಕಾನ್ಪುರ, ಜ. 04. ಹೊಸ ಮೊಬೈಲ್ ಕೊಡಿಸಲಿಲ್ಲವೆಂಬ ಬೇಸರದಲ್ಲಿ ಅಪ್ರಾಪ್ತ ಬಾಲಕನೋರ್ವ ನೇಣಿಗೆ ಶರಣಾದ ಘಟನೆ ಕಾನ್ಪುರದಲ್ಲಿ ನಡೆದಿದೆ. ಮೃತ ಬಾಲಕನು ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದು, ಹಣಕಾಸಿನ ಸಮಸ್ಯೆಯಿರುವುದರಿಂದ ಕೆಲವು ದಿನಗಳ ಬಳಿಕ ಹೊಸ ಫೋನ್ ಕೊಡಿಸುವುದಾಗಿ ತಂದೆ ಹೇಳಿದ್ದರು. ಆದರೆ ಇದಕ್ಕೆ ಒಪ್ಪದ ಮಗ ಆಕ್ರೋಶದಲ್ಲಿ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೊಬೈಲ್ ಕೊಡಿಸಲಿಲ್ಲವೆಂದು ಆತ್ಮಹತ್ಯೆಗೈದ ಬಾಲಕ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೃಷಿ ಕಾನೂನು ವಿರೋಧಿಸಿ ಮುಂದುವರಿದ ರೈತರ ಪ್ರತಿಭಟನೆ ➤ ಮತ್ತೆ ಮೂವರು ಮೃತ್ಯು

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 04.  ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ  ದೆಹಲಿಯಲ್ಲಿ ಮುಂದುವರಿದ ರೈತರ ಪ್ರತಿಭಟನೆಯಲ್ಲಿ ಹಲವರು ಮೃತಪಟ್ಟಿದ್ದು, ಭಾನುವಾರದಂದು ಮಧ್ಯರಾತ್ರಿ ಮತ್ತೆ ಮೂರು ರೈತರು ಮೃತಪಟ್ಟಿರುವ ಘಟನೆ ನಡೆದಿವೆ. ಓರ್ವ ರೈತ ಹೃದಯಸ್ತಂಭನದಿಂದ ಮೃತಪಟ್ಟರೆ, ಮತ್ತೋರ್ವರರು  ಜ್ವರದಿಂದ ಬಳಲಿ ಮೃತಪಟ್ಟಿದ್ದು, ಮತ್ತೋರ್ವ ರೈತನ ಸಾವಿಗೆ ಕಾರಣ ಮರಣೋತ್ತರ ವರದಿ ಬಳಿಕವಷ್ಟೇ ತಿಳಿದುಬರಬೇಕಿದೆ. ಪಂಜಾಬ್ ನ ಸಂಗ್ರುರ್ ಜಿಲ್ಲೆಯ ಲಿಧ್ರಾ ಗ್ರಾಮದ ಶಮ್ಶೀರ್ ಸಿಂಗ್ (45) ಪಂಜಾಬ್ ನ ಬಥಿಂದಾ ಜಿಲ್ಲೆಯ ಚೌಕೆ ಗ್ರಾಮದ

ಕೃಷಿ ಕಾನೂನು ವಿರೋಧಿಸಿ ಮುಂದುವರಿದ ರೈತರ ಪ್ರತಿಭಟನೆ ➤ ಮತ್ತೆ ಮೂವರು ಮೃತ್ಯು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಕೊಂದ ಯುವತಿ

(ನ್ಯೂಸ್ ಕಡಬ) newskadaba.com ಚೆನ್ನೈ, ಜ.04. ಅತ್ಯಾಚಾರಕ್ಕೆ ಯತ್ನಿಸಿದ ದುಷ್ಕರ್ಮಿಯನ್ನು ಚಾಕುವಿನಿಂದ ಇರಿದು ಕೊಂದ ಘಟನೆ ತಮಿಲಕುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ. ಯುವತಿಯು ಶೋಲಾವರಂನಲ್ಲಿನ ಚಿಕ್ಕಮ್ಮನ ಮನೆಗೆ ತೆರಳಿದ್ದ ವೇಳೆ ಅಲ್ಲಿದ್ದ ಅಜಿತ್ ಎಂಬಾತನು ಆಕೆಯ ಅತ್ಯಾಚರಾಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈತನ ಕೃತ್ಯಕ್ಕೆ ಆಕೆ ವಿರೋಧಿಸಿದಾಗ ಚಾಕು ತೋರಿಸಿ ಬೆದರಿಕೆ ಹಾಕಿದ್ದು, ಈ ಸಂದರ್ಭ ಆತನಿಂದ ಚಾಕುವನ್ನು ಕಸಿದು ಆತನ ಕುತ್ತಿಗೆಗೆ ಇರಿದಿದ್ದಾಳೆ. ಪರಿಣಾಮ ಅಜಿತ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಕೊಂದ ಯುವತಿ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚಲಿಸುತ್ತಿದ್ದ ರೈಲಿನಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ ಕಾಮಪಿಶಾಚಿ

(ನ್ಯೂಸ್ ಕಡಬ) newskadaba.com ಮುಂಬೈ, ಜ. 03. ಚಲಿಸುತ್ತಿದ್ದ ರೈಲಿನಲ್ಲಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಮುಂಬೈ ಸಮೀಪದ ವಡಾಲದಲ್ಲಿ ನಡೆದಿದೆ. ಪ್ರಿಯಕರನನ್ನು ಭೇಟಿ ಮಾಡಲೆಂದು ಯುವತಿಯೋರ್ವಳು ಮುಂಜಾನೆ ನಾಲ್ಕು ಗಂಟೆಯ ರೈಲಿನಲ್ಲಿ ಸಂಚರಿಸುತ್ತಿದ್ದ ವೇಳೆ ಮಹಿಳೆಯರ ಬೋಗಿಯಲ್ಲಿ ಒಬ್ಬಳೇ ಇರುವುದನ್ನು ಕಂಡ ಕಿರಾತಕ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದರಿಂದ ತಪ್ಪಿಸಿಕೊಳ್ಳಲು ಯುವತಿಯು ಪ್ರಯತ್ನಿಸಿದಾಗ ಸಿಟ್ಟಿಗೆದ್ದ ಕಿರಾತಕ ಆಕೆಯನ್ನು ರೈಲಿನಿಂದ ಹೊರದಬ್ಬಿ ಪರಾರಿಯಾಗಿದ್ದಾನೆ. ಯುವತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ದುಷ್ಕರ್ಮಿಯ ಬಂದನಕ್ಕೆ ತನಿಖೆ ಮುಂದುವರಿದಿದೆ.

ಚಲಿಸುತ್ತಿದ್ದ ರೈಲಿನಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ ಕಾಮಪಿಶಾಚಿ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top