ರಾಷ್ಟ್ರೀಯ ನ್ಯೂಸ್

ಟ್ರಾಫಿಕ್ ನಲ್ಲಿ ದಂಡ ವಿಧಿಸಿದರೆಂದು ರಾತ್ರಿಯಿಡೀ ಠಾಣೆಯ ಕರೆಂಟ್ ತೆಗೆದ ಲೈನ್ ಮ್ಯಾನ್..!!! ➤ ಪೊಲೀಸರು ಕಂಗಾಲು

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಜೂ. 13. ಪೊಲೀಸರು ದಂಡ ಹಾಕಿದರೆಂದು ಕೋಪಗೊಂಡ ಲೈನ್​ಮ್ಯಾನ್​ ಓರ್ವ ಠಾಣೆಯ ವಿದ್ಯುತ್​ ಸಂಪರ್ಕವನ್ನೇ ಕಡಿತಗೊಳಿಸಿರುವ ಘಟನೆ ಉತ್ತರಪ್ರದೇಶದ ಹರ್ದಸ್​ಪುರ್ ಪೊಲೀಸ್ ಠಾಣೆಯಲ್ಲಿ‌ ನಡೆದಿದೆ. ಭಗವಾನ್​ ಸ್ವರೂಪ್ ಎಂಬ ಲೈನ್​ಮ್ಯಾನ್​ ಈ ಕೃತ್ಯ ಎಸಗಿದ್ದಾನೆ. ತಪಾಸಣಾ ನಿರತರಾಗಿದ್ದ ಪೊಲೀಸರು ಲೈನ್ ಮ್ಯಾನ್ ನ ಬೈಕ್ ನಿಲ್ಲಿಸಿ ದಾಖಲೆ ತೋರಿಸುವಂತೆ ಹೇಳಿದ್ದು, ದಾಖಲೆ ಕೊಡಲು ವಿಫಲನಾದ ಲೈನ್​ಮ್ಯಾನ್​ ಮನೆಗೆ ಹೋಗಿ ತರುವುದಾಗಿ ಹೇಳಿದ್ದರೂ ಕೇಳದ ಪೊಲೀಸರು 500 ರೂ. ದಂಡ ವಿಧಿಸಿದ್ದರು. ಇದರಿಂದ […]

ಟ್ರಾಫಿಕ್ ನಲ್ಲಿ ದಂಡ ವಿಧಿಸಿದರೆಂದು ರಾತ್ರಿಯಿಡೀ ಠಾಣೆಯ ಕರೆಂಟ್ ತೆಗೆದ ಲೈನ್ ಮ್ಯಾನ್..!!! ➤ ಪೊಲೀಸರು ಕಂಗಾಲು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಹಡಿಯಿಂದ ಕೆಳಗೆಬಿದ್ದು ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.com ಕುಂಬಳೆ, ಜೂ. 13. ಮಹಡಿಯಿಂದ ಬಿದ್ದು‌ ಯುವಕನೋರ್ವ ಮೃತಪಟ್ಟ ಘಟನೆ ಕಿಂಬಳೆ ಮಂಡೆಕಾಪು ಎಂಬಲ್ಲಿ ನಡೆದಿದೆ.   ಮೃತ ಯುವಕನನ್ನು ಮಂಗಲ್ಪಾಡಿ ಪಂಚಾಯತ್‌ನ ಹೇರೂರು ಕಂಗ್ವೆ ನಿವಾಸಿ, ಐತ್ತಪ್ಪ ಶೆಟ್ಟಿ ಅವರ ಪುತ್ರ ಸಂದೀಪ್‌ ಶೆಟ್ಟಿ (35) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಸಂದೀಪ್, ಕೆಲಸದ ನಿಮಿತ್ತ ಮಂಡೆಕಾಪು ಎಂಬಲ್ಲಿ ಮನೆಯೊಂದರ ಛಾವಣಿಗೆ ಶೀಟ್‌ ಹಾಕಲು ಅಳತೆ ತೆಗೆಯುತ್ತಿದ್ದ ಸಂದರ್ಭ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.  

ಮಹಡಿಯಿಂದ ಕೆಳಗೆಬಿದ್ದು ಯುವಕ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

80 ಅಡಿ ಆಳದ ಬೋರ್ ವೆಲ್ ಗೆ ಬಿದ್ದ ಬಾಲಕ..!! ➤ ಮುಂದುವರಿದ ರಕ್ಷಣಾ ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಜಾಂಜ್ ಗಿರ್, ಜೂ. 11. ಹನ್ನೊಂದು ವರ್ಷದ ಬಾಲಕನೋರ್ವ 80 ಅಡಿ ಆಳದ ಬೋರ್ ವೆಲ್ ಗೆ ಬಿದ್ದ ಘಟನೆ ಘತ್ತೀಸ್ ಗಡದ ಜಂಜ್ ಗಿರ್ ಚಂಪಾ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ. ಬಾಲಕನನ್ನು ರಾಹುಲ್ ಸಾಹು ಎಂದು ಗುರುತಿಸಲಾಗಿದೆ. ಈತ ಶುಕ್ರವಾರದಂದು ಮಧ್ಯಾಹ್ನದ ವೇಳೆ ಆಟವಾಡುತ್ತಿದ್ದ ಸಂದರ್ಭ ತನ್ನ ಮನೆಯ ಹಿತ್ತಲಿನಲ್ಲಿರುವ ಬೋರ್ವೆಲ್ ಗೆ ಬಿದ್ದಿದ್ದಾನೆ. ತುಂಬಾ ಹೊತ್ತಾದರೂ ಬಾಲಕ ಮನೆಗೆ ಬಾರದೇ ಇರುವುದನ್ನು ಮನಗಂಡ ಮನೆಯವರು ಹುಡುಕಾಡಲು ಆರಂಭಿಸಿದ್ದು, ಈ ಸಂದರ್ಭ

80 ಅಡಿ ಆಳದ ಬೋರ್ ವೆಲ್ ಗೆ ಬಿದ್ದ ಬಾಲಕ..!! ➤ ಮುಂದುವರಿದ ರಕ್ಷಣಾ ಕಾರ್ಯಾಚರಣೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಊಟ ಕೇಳಿದ ಮಗುವಿಗೆ ಅನ್ನದ ಬದಲು ಕಾದ ಸಲಾಕೆಯಿಂದ ಬರೆಯಿಟ್ಟ ಮಲತಾಯಿ..!!! ➤ ರೋಧಿಸುತ್ತಾ ಪಕ್ಕದ ಮನೆಯಲ್ಲಿ ಅಡಗಿ ಕುಳಿತ ಎಳೆಯ ಕಂದಮ್ಮ..!!

(ನ್ಯೂಸ್ ಕಡಬ) newskadaba.com ಚಿತ್ತಾಪುರ, ಜೂ. 07. ‘ಅಮ್ಮ ಹಸಿವಾಗಿದೆ ಊಟ ಕೊಡು’ ಎಂದ ಮಗುವಿಗೆ ಬಾ ಕೊಡ್ತೀನಿ ಎಂದು ಹತ್ತಿರ ಕರೆದ ಮಲತಾಯಿ, ಅನ್ನದ ಬದಲು ಕೆಂಡದಿಂದ ಕಾದ ಸಲಾಕೆಯಿಂದ ಕೈಗೆ ಬರೆಯಿಟ್ಟಿದ್ದು, ಸುಟ್ಟ ಗಾಯದಿಂದ ರೋಧಿಸಿದ ಮಗು ಪಕ್ಕದ ಮನೆಯಲ್ಲಿ ಅಡಗಿ ಕುಳಿತ ಘಟನೆ ತಾಲೂಕಿನ ವಾಡಿ ನಗರದ ನಾಲವಾರ ಸ್ಟೇಷನ್ ಬಡಾವಣೆಯಲ್ಲಿ ನಡೆದಿದೆ. ಗಾಯಗೊಂಡ ಮಗುವನ್ನು ಸೊನಾಲಿಕಾ ಎಂದು ಗುರುತಿಸಲಾಗಿದೆ. ಮಗುವಿನ ತಾಯಿ ಮೃತಪಟ್ಟ ಹಿನ್ನೆಲೆ ತಂದೆ ತಿಪ್ಪಣ್ಣ ಎರಡನೇ ಮದುವೆಯಾಗಿದ್ದು, ಮಗುವನ್ನು

ಊಟ ಕೇಳಿದ ಮಗುವಿಗೆ ಅನ್ನದ ಬದಲು ಕಾದ ಸಲಾಕೆಯಿಂದ ಬರೆಯಿಟ್ಟ ಮಲತಾಯಿ..!!! ➤ ರೋಧಿಸುತ್ತಾ ಪಕ್ಕದ ಮನೆಯಲ್ಲಿ ಅಡಗಿ ಕುಳಿತ ಎಳೆಯ ಕಂದಮ್ಮ..!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

RSS ಕಛೇರಿಗಳನ್ನು ಸ್ಫೋಟಿಸುವುದಾಗಿ ಬೆದರಿಕೆ..!! ➤ ಎಫ್ಐಆರ್ ದಾಖಲು

(ನ್ಯೂಸ್ ಕಡಬ) newskadaba.com ನೋಯ್ಡಾ, ಜೂ. 07. ಉ.ಪ್ರದೇಶದ ಲಕ್ನೋ ಮತ್ತು ಉನ್ನಾವೋದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಛೇರಿಗಳನ್ನು ಸ್ಫೋಟಿಸುವುದಾಗಿ ವಾಟ್ಸಾಪ್ ನಲ್ಲಿ ಬೆದರಿಕೆ ಹಾಕಿದ ಕುರಿತು ಲಕ್ನೋದ ಮಡಿಯಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಘದ ಸದಸ್ಯ ನೀಲಕಂಠ ತಿವಾರಿ ಎಂಬವರಿಗೆ ಬೆದರಿಕೆ ಸಂದೇಶವನ್ನು ಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ರಾತ್ರಿ ಎಂಟು ಗಂಟೆಯ ವೇಳೆಗೆ ಅಂತರಾಷ್ಟ್ರೀಯ ಸಂಖ್ಯೆಯಿಂದ ಕಳುಹಿಸಲಾಗಿದ್ದು, ಸೈಬರ್ ಸೆಲ್ ಸಹಾಯದಿಂದ ಸಂದೇಶ ಕಳುಹಿಸಿದ ಸಂಖ್ಯೆಯನ್ನು ಪತ್ತೆಹಚ್ಚಲಾಗುವುದು ಎಂದು ಲಕ್ನೋ ಪೊಲೀಸರು

RSS ಕಛೇರಿಗಳನ್ನು ಸ್ಫೋಟಿಸುವುದಾಗಿ ಬೆದರಿಕೆ..!! ➤ ಎಫ್ಐಆರ್ ದಾಖಲು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸವಾರನ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಟ್ರಾನ್ಸ್ ಫಾರ್ಮರ್ ಏರಿದ ಬೈಕ್..!! ➤ ಯುವಕ ಪಾರು

(ನ್ಯೂಸ್ ಕಡಬ) newskadaba.com ಕೇರಳ, ಜೂ. 04. ಬೈಕ್ ಸವಾರನೋರ್ವ ಅತಿ ವೇಗವಾಗಿ ಬೈಕ್ ಚಲಾಯಿಸಿದ್ದ ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ವಿದ್ಯುತ್ ಟ್ರಾನ್ಸ್ ಫಾರ್ಮರ್ ಏರಿದ ಘಟನೆ ಕೇರಳದ ಇಡುಕಿಯಲ್ಲಿ ಸಂಭವಿಸಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೈಕ್ ಸವಾರ ವಿಷ್ಣುಪ್ರಸಾದ್ ದೊಡ್ಡ ಅನಾಹುತದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ. ಈತ ಬೈಕ್ ನ್ನು ಅತ್ಯಂತ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದು, ಈ ಸಂದರ್ಭ ನಿಯಂತ್ರಣ ತಪ್ಪಿದ ಬೈಕ್ ಮೂರು ಪಲ್ಟಿ ಹೊಡೆದು

ಸವಾರನ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಟ್ರಾನ್ಸ್ ಫಾರ್ಮರ್ ಏರಿದ ಬೈಕ್..!! ➤ ಯುವಕ ಪಾರು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹೊಸ ಬೈಕ್, ಕಾರು ಖರೀದಿಯ ಖುಷಿಯಲ್ಲಿದ್ದವರಿಗೆ ಬಿಗ್ ಶಾಕ್ ➤ ಜೂನ್ 01 ರಿಂದ ವಾಹನಗಳು ದುಬಾರಿ..?

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.27. ಹೊಸ ಬೈಕ್ ಹಾಗೂ ಕಾರು ಖರೀದಿಯ ಖುಷಿಯಲ್ಲಿದ್ದವರಿಗೆ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯವು ಬಿಗ್ ಶಾಕ್‌ ನೀಡಿದ್ದು, ಥರ್ಡ್‌ ಪಾರ್ಟಿ ಇನ್ಶುರೆನ್ಸ್ ವೆಚ್ಚವನ್ನು ಹೆಚ್ಚಿಸಲು ನಿರ್ಧರಿಸಿದೆ. ಕೇಂದ್ರದ ಹೊಸ ನಿರ್ಧಾರದಿಂದ ರಾಷ್ಟ್ರದಾದ್ಯಂತ ಹೊಸ ವಾಹನಗಳ ಖರೀದಿ ದುಬಾರಿಯಾಗಲಿವೆ. ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರೀಮಿಯಂ ಮೊತ್ತವನ್ನು ಹೆಚ್ಚಳ ಮಾಡಿರುವ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯವು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಹೊಸ ಆದೇಶದಂತೆ ಜೂನ್ 01

ಹೊಸ ಬೈಕ್, ಕಾರು ಖರೀದಿಯ ಖುಷಿಯಲ್ಲಿದ್ದವರಿಗೆ ಬಿಗ್ ಶಾಕ್ ➤ ಜೂನ್ 01 ರಿಂದ ವಾಹನಗಳು ದುಬಾರಿ..? Read More »

ರಾಷ್ಟ್ರೀಯ ನ್ಯೂಸ್

ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆಯಲ್ಲಿ ಭಾರೀ ಇಳಿಕೆ ➤ ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ ಸರಕಾರ

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.21. ಕೇಂದ್ರ ಸರಕಾರವು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯ ಜೊತೆಗೆ ಅಡುಗೆ ಅನಿಲದ ಬೆಲೆಯನ್ನು ಕಡಿತಗೊಳಿಸಿ ಆದೇಶಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದ್ದು, ಅದರಂತೆ ಪೆಟ್ರೋಲ್‌ ಬೆಲೆ ಲೀಟರಿಗೆ 9.5 ರೂ. ಹಾಗೂ ಡೀಸೆಲ್‌ 7 ರೂ. ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿರುವುದಾಗಿ ತಿಳಿಸಿದ್ದಾರೆ.

ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆಯಲ್ಲಿ ಭಾರೀ ಇಳಿಕೆ ➤ ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ ಸರಕಾರ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಷ್ಟ್ರ ರಾಜಧಾನಿಯಲ್ಲಿ ಅಗ್ನಿ ಅವಘಡ ➤ 26 ಮಂದಿ ಸಜೀವ ದಹನ

ಫೋಟೊ ಕೃಪೆ: NDTV (ನ್ಯೂಸ್ ಕಡಬ) newskadaba.com ನವದೆಹಲಿ, ಮೇ.14. ರಾಷ್ಟ್ರ ರಾಜಧಾನಿ ದಿಲ್ಲಿಯ ಮುಂಡ್ಕಾ ಪ್ರದೇಶದ ಬಹುಮಹಡಿ ಕಟ್ಟಡವೊಂದರಲ್ಲಿ ಶುಕ್ರವಾರ ಸಂಜೆ ಕಾಣಿಸಿಕೊಂಡ ಭಾರೀ ಅಗ್ನಿ ಅವಘಡದಲ್ಲಿ 26 ಮಂದಿ ಸಜೀವ ದಹನಗೊಂಡಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪಶ್ಚಿಮ ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಪಿಲ್ಲರ್ ಸಂಖ್ಯೆ 544 ರ ಸಮೀಪವಿರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದಲ್ಲಿ ಹಲವು ಜನರು ಸಿಲುಕಿಕೊಂಡಿದ್ದರು. ಘಟನೆಯಲ್ಲಿ ಕನಿಷ್ಟ 26 ಮಂದಿ ಮೃತಪಟ್ಟಿದ್ದು, 30 ಕ್ಕೂ ಅಧಿಕ ಮಂದಿಗೆ

ರಾಷ್ಟ್ರ ರಾಜಧಾನಿಯಲ್ಲಿ ಅಗ್ನಿ ಅವಘಡ ➤ 26 ಮಂದಿ ಸಜೀವ ದಹನ Read More »

ರಾಷ್ಟ್ರೀಯ ನ್ಯೂಸ್

ಬೇವು ಬೆಲ್ಲದ ಸಿಹಿಯ ನಡುವೆ ಪೆಟ್ರೊಲ್, ಗ್ಯಾಸ್ ಕಹಿ ಕಹಿ..‼️ ➤ ಕಡಬದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 108.94

(ನ್ಯೂಸ್ ಕಡಬ) newskadaba.com ಕಡಬ, ಎ.03. ದಿನೇ ದಿನೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದ್ದು, ಕಳೆದ 13 ದಿನಗಳಲ್ಲಿ ಪೆಟ್ರೋಲ್ ಬೆಲೆ 8 ರೂ ಜಾಸ್ತಿಯಾಗಿದೆ. ಯುಗಾದಿಯ ಬೇವು ಬೆಲ್ಲದ ಸಿಹಿಯ ನಡುವೆ ಪೆಟ್ರೋಲ್, ಡೀಸೆಲ್ ಬೆಲೆ ಕಹಿಯಾಗಿದ್ದು, ಗ್ಯಾಸ್ ಸಿಲಿಂಡರ್ ಬೆಲೆಯೂ ತಾರಕಕ್ಕೇರಿದೆ‌. ಗ್ಯಾಸ್ ಸಿಲಿಂಡರ್ ಬೆಲೆ 250 ರೂ‌. ಹೆಚ್ಚಳವಾಗಿದ್ದು, ಜನಸಾಮಾನ್ಯರ ಜೀವನಶೈಲಿಯ ಹೊರೆ ಹೆಚ್ಚಾಗಿದೆ. ಇನ್ನು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದ ನಡುವೆ ಅಗತ್ಯ ವಸ್ತುಗಳ ಬೆಲೆಯೂ ತಾರಕಕ್ಕೇರಿದ್ದು, ಪಾಡು ಪಡುವಂತಾಗಿದೆ.

ಬೇವು ಬೆಲ್ಲದ ಸಿಹಿಯ ನಡುವೆ ಪೆಟ್ರೊಲ್, ಗ್ಯಾಸ್ ಕಹಿ ಕಹಿ..‼️ ➤ ಕಡಬದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 108.94 Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top