ರಾಷ್ಟ್ರೀಯ ನ್ಯೂಸ್

ಮಗುವಿಗೆ ಜನ್ಮವಿತ್ತು ಆವರಣಗೋಡೆಯ ಬಳಿ ಉಪೇಕ್ಷಿಸಿದ ಪಿಯುಸಿ ವಿದ್ಯಾರ್ಥಿನಿ ➤ ಎಸ್ಸೆಸ್ಸೆಲ್ಸಿ ಬಾಲಕನ ಬಂಧನ

(ನ್ಯೂಸ್ ಕಡಬ) newskadaba.com ಚೆನ್ನೈ, ಸೆ. 06. ಎಸ್ಸೆಸ್ಸೆಲ್ಸಿ ಬಾಲಕನಿಂದ ಗರ್ಭಿಣಿಯಾದ ಪಿಯುಸಿ ವಿದ್ಯಾರ್ಥಿನಿಯು, ಜನನವಾದ ಬಳಿಕ ಮಗುವನ್ನು ಶಾಲೆಯ ಪಕ್ಕದ ಆವರಣ ಗೋಡೆಯ ಬಳಿ ಬಿಟ್ಟುಹೋದ ಘಟನೆ ತಮಿಳು ನಾಡಿನ ಕಡಲೂರು ಜಿಲ್ಲೆಯ ಭುವನಗಿರಿಯಲ್ಲಿ‌ ನಡೆದಿದೆ. ಶಾಲಾ ಆವರಣದ ಬಳಿ ನವಜಾತ ಶಿಶುವನ್ನು ಗಮನಿಸಿದ ವಿದ್ಯಾರ್ಥಿನಿಯೋರ್ವಳು ಶಿಕ್ಷಕರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಶಿಶುವಿನ ಹೊಕ್ಕುಳ ಬಳ್ಳಿ ಸರಿಯಾದ ರೀತಿಯಲ್ಲಿ ತುಂಡರಿಸಿರದಿಂದ, ಶಾಲಾ ವಿದ್ಯಾರ್ಥಿನಿಯರ ಪೈಕಿ ಯಾರೋ ಈ ಕೃತ್ಯ ನಡೆಸಿರಬಹುದೆಂದು ಪ್ರಾಥಮಿಕ […]

ಮಗುವಿಗೆ ಜನ್ಮವಿತ್ತು ಆವರಣಗೋಡೆಯ ಬಳಿ ಉಪೇಕ್ಷಿಸಿದ ಪಿಯುಸಿ ವಿದ್ಯಾರ್ಥಿನಿ ➤ ಎಸ್ಸೆಸ್ಸೆಲ್ಸಿ ಬಾಲಕನ ಬಂಧನ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅ. 24ರಿಂದ iOS 10 ಐಫೋನ್ ಮಾಡೆಲ್ ಗಳಲ್ಲಿ ವ್ಹಾಟ್ಸಾಪ್ ಕೆಲಸ ಮಾಡಲ್ಲ…!!!

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 03. ಅಕ್ಟೋಬರ್ 24 ರಿಂದ iOS 10 ಅಥವಾ iOS 11 ಆವೃತ್ತಿಯ ಐಫೋನ್ ಮಾಡೆಲ್ ಗಳಲ್ಲಿ ಇನ್ನು ಮುಂದೆ ವಾಟ್ಸ್ಆ್ಯಪ್ ಕೆಲಸ ಮಾಡಲ್ಲ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ವಾಟ್ಸ್ ಆ್ಯಪ್ ಬೇಕಾದರೆ ಹಳೆಯ ಐಫೋನ್ ಹೊಂದಿರುವವರು ತಮ್ಮ ಮೊಬೈಲ್ ಗಳನ್ನು iOS 12 ಅಥವಾ ಅದಕ್ಕೂ ಹೆಚ್ಚಿನ ಆವೃತ್ತಿಗೆ ಬದಲಾಯಿಸಿಕೊಳ್ಳಬೇಕಾಗುತ್ತದೆ. ಅಂದರೆ iOS 10 ಅಥವಾ iOS 11 ಮಾಡೆಲ್ ಗಳನ್ನು ಬಳಸುತ್ತಿರುವವರು ಇನ್ಮುಂದೆ ಹೊಸ ಫೋನ್ ಖರೀದಿಸಬೇಕಾಗುತ್ತದೆ.

ಅ. 24ರಿಂದ iOS 10 ಐಫೋನ್ ಮಾಡೆಲ್ ಗಳಲ್ಲಿ ವ್ಹಾಟ್ಸಾಪ್ ಕೆಲಸ ಮಾಡಲ್ಲ…!!! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ..!

(ನ್ಯೂಸ್ ಕಡಬ) newskadaba.com ಚೆನ್ನೈ, ಆ. 29. ಭಾರತ- ಶ್ರೀಲಂಕಾ ನಡುವಿನ ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿದ್ದ ಆರು ಮೀನುಗಾರರನ್ನು ಶ್ರೀಲಂಕಾ ಬಂಧಿಸಿದ್ದು, ಇನ್ನುಳಿದವರನ್ನು ಬೆನ್ನಟ್ಟಿ ಬಂದಿರುವ ಕುರಿತು ರಾಮೇಶ್ವರಂನ ಮೀನುಗಾರರ ಸಂಘವು ಆರೋಪಿಸಿದೆ. ಮೀನುಗಾರರು ಭಾರತೀಯ ಸಮುದ್ರ ಮಿತಿಯೊಳಗಿದ್ದರೂ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದ ಸಂಘವು, ಕೂಡಲೇ ನಮ್ಮ ಮೀನುಗಾರರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದೆ.

ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತಮಿಳುನಾಡಿನಲ್ಲಿ ರಸ್ತೆ ಅಪಘಾತ ➤‌ ಮಂಗಳೂರಿನ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ತಮಿಳುನಾಡಿನ ಆಂಬೂರು ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತ‌ದಲ್ಲಿ ಬಿ.ಸಿ.ರೋಡಿನ ಯುವಕನೋರ್ವ ಮೃತಪಟ್ಟ ಘಟನೆ ತಡರಾತ್ರಿ ಸಂಭವಿಸಿದೆ. ಮೃತರನ್ನು ಇರ್ಷಾದ್ ತಲಪಾಡಿ (37) ಎಂದು ಗುರುತಿಸಲಾಗಿದೆ. ಮಂಗಳೂರು ಬಂದರಿನಿಂದ ತಮಿಳುನಾಡಿನ ಚೆನ್ನೈ ಮಾರುಕಟ್ಟೆಗೆ ಮೀನು ಸಾಗಿಸುತ್ತಿದ್ದ ಲಾರಿಯು ಆಂಬೂರ್ ಎಂಬಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆನ್ನಲಾಗಿದೆ.

ತಮಿಳುನಾಡಿನಲ್ಲಿ ರಸ್ತೆ ಅಪಘಾತ ➤‌ ಮಂಗಳೂರಿನ ಯುವಕ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಡೈಮಂಡ್ ಲೀಗ್ ಜಯಿಸಿ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ

(ನ್ಯೂಸ್ ಕಡಬ) newskadaba.com ಲಾಸೆನ್, ಆ. 27. ಭಾರತದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಅವರು ಸ್ವಿಟ್ಜರ್​ಲ್ಯಾಂಡ್​ನ ಲಾಸನ್ ನಲ್ಲಿ ನಡೆದ ಡೈಮಂಡ್​ ಲೀಗ್​ನಲ್ಲಿ ಅಗ್ರಸ್ಥಾನ ಪಡೆದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೇ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ವಿಶ್ವ ಚಾಂಪಿಯನ್​ ಶಿಪ್​ನಲ್ಲಿ ಬೆಳ್ಳಿ ಗೆದ್ದ ಬಳಿಕ ನೀರಜ್ ಚೋಪ್ರಾ ಗಾಯಕ್ಕೆ ತುತ್ತಾಗಿದ್ದರು. ಇದರಿಂದ ಕಾಮನ್​ವೆಲ್ತ್​ ಗೇಮ್ಸ್​ನಿಂದ ಹೊರಗುಳಿದಿದ್ದ ಇವರು ಸ್ವಿಸ್​​ನ ಡೈಮಂಡ್​ ಲೀಗ್​ನಲ್ಲಿ 89.08 ಮೀಟರ್​ ದೂರ ಜಾವೆಲಿನ್​

ಡೈಮಂಡ್ ಲೀಗ್ ಜಯಿಸಿ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಟೋಲ್’ನ ಮಹಿಳಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಕಾರು ಚಾಲಕ ➤‌ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಭೋಪಾಲ್, ಆ. 22. ವ್ಯಕ್ತಿಯೊಬ್ಬ ಟೋಲ್ ನಲ್ಲಿದ್ದ ಮಹಿಳಾ ಉದ್ಯೋಗಿಗೆ ಕಪಾಳಮೋಕ್ಷ ಮಾಡಿದ ಘಟನೆ ಮಧ್ಯಪ್ರದೇಶದ ರಾಜಗಢ-ಭೋಪಾಲ್ ರಸ್ತೆಯಲ್ಲಿನ ಕಚ್ನಾರಿಯಾ ಟೋಲ್ ಪ್ಲಾಝಾದಲ್ಲಿ ನಡೆದಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯ ನಿವಾಸಿಯೋರ್ವರ ಕಾರಿನಲ್ಲಿ ಟೋಲ್ ಪಾವತಿಸಲು ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಹೊಂದಿರಲಿಲ್ಲ. ಆದರೆ ಮಹಿಳೆ ಟೋಲ್ ಪಾವತಿಸದೇ ವಾಹನ ಹೋಗಲು ಬಿಡುವುದಿಲ್ಲ ಎಂದಿದ್ದಕ್ಕೆ ಕೋಪಗೊಂಡ ರಾಜ್ ಕುಮಾರ್, ತಾನು ಸ್ಥಳೀಯನಾಗಿದ್ದು ಟೋಲ್ ನಿಂದ ವಿನಾಯಿತಿ ನೀಡಬೇಕು ಎಂದು

ಟೋಲ್’ನ ಮಹಿಳಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಕಾರು ಚಾಲಕ ➤‌ ವಿಡಿಯೋ ವೈರಲ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮನೆಯೊಳಗೆ 6 ಮಂದಿ ಶವವಾಗಿ ಪತ್ತೆ..!

(ನ್ಯೂಸ್ ಕಡಬ) newskadaba.com ಜಮ್ಮು, ಆ. 17. ಒಂದೇ ಕುಟುಂಬದ ಆರು ಮಂದಿ ಶವವಾಗಿ ಪತ್ತೆಯಾದ ಘಟನೆ ಜಮ್ಮುವಿನ ಸಿದ್ರಾ ಪ್ರದೇಶದ ಮನೆಯಲ್ಲಿ ನಡೆದಿದೆ. ಆರು ಮಂದಿಯ ಮೃತದೇಹಗಳನ್ನು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದ್ದು, ವಿವರಗಳಿಗಾಗಿ ಕಾಯಲಾಗುತ್ತಿದೆ. ಇನ್ನು ಆರು ಮಂದಿಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ವೈದ್ಯಕೀಯ ವರದಿಯಿಂದಷ್ಟೇ ತಿಳಿದು ಬರಬೇಕಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಮನೆಯೊಳಗೆ 6 ಮಂದಿ ಶವವಾಗಿ ಪತ್ತೆ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮುಖೇಶ್ ಅಂಬಾನಿಗೆ ಬೆದರಿಕೆ ಕರೆ ಆರೋಪ ➤‌ ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 15. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ ಹಿನ್ನೆ ವ್ಯಕ್ತಿಯೋರ್ವನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಫ್ಜಲ್ ಎಂದು ಗುರುತಿಸಲಾಗಿದೆ. ಈತ ಇಂದು ಬೆಳಗ್ಗೆ ಮುಂಬೈನ ಗಿರ್‌ಗಾಂವ್‌ನಲ್ಲಿರುವ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಲ್ಯಾಂಡ್‌ಲೈನ್ ಸಂಖ್ಯೆಗೆ 8 ಬಾರಿ ಬೆದರಿಕೆ ಕರೆ ಮಾಡಿರುವುದಾಗಿ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಆಡಳಿತಾಧಿಕಾರಿಗಳು ಡಿಬಿ ಮಾರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಮೇರೆಗೆ ಇದೀಗ ಅಫ್ಜಲ್

ಮುಖೇಶ್ ಅಂಬಾನಿಗೆ ಬೆದರಿಕೆ ಕರೆ ಆರೋಪ ➤‌ ಓರ್ವನ ಬಂಧನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಊಟದ ತಟ್ಟೆಯನ್ನು ಹಿಡಿದು ಕಣ್ಣೀರು ಹಾಕಿದ ಕಾನ್ಸ್‌ಟೇಬಲ್ ➤‌ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಆ. 11. ಪೊಲೀಸ್​​ ಮೆಸ್​ನಲ್ಲಿ ಉಣಬಡಿಸಿದ ಕಳಪೆ ಆಹಾರದ ತಟ್ಟೆಯನ್ನು ಹಿಡಿದು ಸಾರ್ವಜನಿಕ ಪ್ರದೇಶದಲ್ಲಿ ಪೇದೆಯೋರ್ವ ಕಣ್ಣೀರು ಸುರಿಸಿದ ಘಟನೆ ಉತ್ತರ ಪ್ರದೇಶದ ಫಿರೋಝಾಬಾದ್ ನಲ್ಲಿ ನಡೆದಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನ್ನ, ದಾಲ್​ ಮತ್ತು ರೋಟಿ ಇರುವ ಊಟದ ತಟ್ಟೆಯನ್ನು ಹಿಡಿದು ಕಾನ್ಸ್​ಟೇಬಲ್​ ಮನೋಜ್​ ಕುಮಾರ್​ ಎಂಬವರು ರಸ್ತೆ ಮಧ್ಯೆ ನಿಂತು ಕಣ್ಣೀರಿಟ್ಟಿದ್ದಾರೆ. ‘ನಾನು ಅನೇಕ ಬಾರಿ ಊಟದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ

ಊಟದ ತಟ್ಟೆಯನ್ನು ಹಿಡಿದು ಕಣ್ಣೀರು ಹಾಕಿದ ಕಾನ್ಸ್‌ಟೇಬಲ್ ➤‌ ವಿಡಿಯೋ ವೈರಲ್ Read More »

ರಾಷ್ಟ್ರೀಯ ನ್ಯೂಸ್

8ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಪಾಟ್ನಾ, ಆ. 10. ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪಾಟ್ನಾದ ರಾಜಭವನದಲ್ಲಿ ಬುಧವಾರದಂದು ನಡೆದ ಸಮಾರಂಭದಲ್ಲಿ ರಾಜ್ಯಪಾಲ ಫಾಗು ಚೌಹಾಣ್ ಅವರು ನಿತೀಶ್ ಕುಮಾರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭ 160 ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲ ಫಾಗು ಚೌಹಾಣ್ ಅವರಿಗೆ ನಿತೀಶ್ ಕುಮಾರ್ ಸಲ್ಲಿಸಿದ್ದರು. ನಿತೀಶ್ ಅವರು ಎನ್ ಡಿಎ ಮೈತ್ರಿಯನ್ನು ತೊರೆದು ಆರ್ ಜೆಡಿ, ಕಾಂಗ್ರೆಸ್ ಎಡಪಕ್ಷಗಳ ಬೆಂಬಲದಿಂದ ಸರ್ಕಾರ ರಚಿಸಿದ್ದಾರೆ.

8ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅಧಿಕಾರ ಸ್ವೀಕಾರ Read More »

ರಾಷ್ಟ್ರೀಯ ನ್ಯೂಸ್
Scroll to Top