ರಾಷ್ಟ್ರೀಯ ನ್ಯೂಸ್

ಕಾಣಿಕೆ ಹುಂಡಿ ಕದಿಯುವ ಮುನ್ನ ದೇವಿಗೆ ಕೈಮುಗಿದು ಪ್ರಾರ್ಥಿಸಿದ ಕಳ್ಳ..! ➤‌ ವೀಡಿಯೊ ವೈರಲ್

(ನ್ಯೂಸ್ ಕಡಬ) newskadaba.com ಜಬಲ್‌ಪುರ, ಆ. 10. ಕಳ್ಳನೋರ್ವ ದೇವಸ್ಥಾನದ ಕಾಣಿಕೆ ಪೆಟ್ಟಿಗೆಯನ್ನು ಕದಿಯುವ ಮುನ್ನ ದೇವತೆಯ ಮುಂದೆ ಕೈಮುಗಿದು ಪ್ರಾರ್ಥಿಸಿದ ಘಟನೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿದೆ. ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಕಳ್ಳನು ದೇವಾಲಯಕ್ಕೆ ಪ್ರವೇಶಿಸಿ ದೇವಿಗೆ ಕೈಮುಗಿದು ಬಳಿಕ ಕಾಣಿಕೆ ಪೆಟ್ಟಿಗೆಯೊಂದಿಗೆ ಪರಾರಿಯಾಗುವುದನ್ನು ಕಾಣಬಹುದು. ಕೆಲವು ಬಳಕೆದಾರರು ಘಟನೆಯ ಬಗ್ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದರೆ, ಇತರರು ಆತನ ಕುರಿತು ಅನುಕಂಪ ವ್ಯಕ್ತಪಡಿಸಿದ್ದಾರೆ. ಆ ವ್ಯಕ್ತಿ […]

ಕಾಣಿಕೆ ಹುಂಡಿ ಕದಿಯುವ ಮುನ್ನ ದೇವಿಗೆ ಕೈಮುಗಿದು ಪ್ರಾರ್ಥಿಸಿದ ಕಳ್ಳ..! ➤‌ ವೀಡಿಯೊ ವೈರಲ್ Read More »

ರಾಷ್ಟ್ರೀಯ ನ್ಯೂಸ್

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

(ನ್ಯೂಸ್ ಕಡಬ) newskadaba.com ಪಾಟ್ನಾ, ಆ. 09. ಜೆಡಿ(ಯು) ಪಕ್ಷಕ್ಕೆ ಆರ್.ಸಿ.ಪಿ. ಸಿಂಗ್ ರಾಜೀನಾಮೆ ಸಲ್ಲಿಸಿದ ಬಳಿಕ ಬಿಹಾರದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಗೊಂಡಿದ್ದು, ಈ ಹಿನ್ನೆಲೆ ಬಿಜೆಪಿ ಮೈತ್ರಿ ತೊರೆದು ಆರ್ ಜೆಡಿ ಜೊತೆ ಸರ್ಕಾರ ರಚನೆಗೆ ಮುಂದಾದ ನಿತೀಶ್ ಕುಮಾರ್ ಇದೀಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆರ್ ಜೆಡಿ ಶಾಸಕ ತೇಜಸ್ವಿ ಅವರೊಂದಿಗೆ ಆಗಮಿಸಿ ರಾಜ್ಯಪಾಲರನ್ನು ಭೇಟಿಯಾದ ನಿತೀಶ್ ಕುಮಾರ್ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ➤ ಬೈಕ್ ನಲ್ಲಿ ಏಕಾಂಗಿಯಾಗಿ ದೇಶ ಪರ್ಯಟನೆ ಮಾಡಿದ ಕೆನರಾ ಗರ್ಲ್ಸ್ ಹೈಸ್ಕೂಲ್ ನ ಹಳೆ ವಿದ್ಯಾರ್ಥಿನಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 09. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಸವಿನೆನಪಿನಲ್ಲಿ ಕಾಸರಗೋಡು ಮೂಲದ, ಮಂಗಳೂರಿನ ಕೆನರಾ ಗರ್ಲ್ಸ್ ಹೈಸ್ಕೂಲ್ ನ ಹಳೆ ವಿದ್ಯಾರ್ಥಿನಿ ಅಮೃತಾ ಜೋಷಿ ಏಕಾಂಗಿಯಾಗಿ ಬೈಕ್ ನಲ್ಲಿ ದೇಶ ಪರ್ಯಟನೆ ಮಾಡಿದ್ದಾರೆ. 21 ವರ್ಷ ಅಮೃತಾ ಜೋಷಿ ತಿರಂಗ ಯಾತ್ರಾ ಅಭಿಯಾನದ ಅಂಗವಾಗಿ, ದೇಶದ ಏಕತೆಯನ್ನು ಸಾರುವ ಸಲುವಾಗಿ ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್ ನಲ್ಲಿ 22,000 ಕಿ.ಮೀ ಸಂಚರಿಸಿ ದೇಶ ಪರ್ಯಟನೆ ಮಾಡಿದ್ದಾರೆ. ಈಶಾನ್ಯ ಭಾರತ, ಕಾಶ್ಮೀರ

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ➤ ಬೈಕ್ ನಲ್ಲಿ ಏಕಾಂಗಿಯಾಗಿ ದೇಶ ಪರ್ಯಟನೆ ಮಾಡಿದ ಕೆನರಾ ಗರ್ಲ್ಸ್ ಹೈಸ್ಕೂಲ್ ನ ಹಳೆ ವಿದ್ಯಾರ್ಥಿನಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಿಜೆಪಿ ನಾಯಕನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಹೈದರಾಬಾದ್, ಆ. 09. ತೆಲಂಗಾಣದ ಬಿಜೆಪಿ ನಾಯಕ ಜ್ಞಾನೇಂದ್ರ ಪ್ರಸಾದ್ ಅವರ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಿಯಾಪುರ್ ಠಾಣೆಗೆ ಬಂದ ಫೋನ್ ಕರೆ ಆಧರಿಸಿ ಜ್ಞಾನೇಂದ್ರ ಪ್ರಸಾದ್ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

ಬಿಜೆಪಿ ನಾಯಕನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಎಡೆಬಿಡದೆ ಸುರಿಯುತ್ತಿರುವ ಮಳೆ ➤ ಕಾಡಿನಲ್ಲಿಯೇ ಮಗುವಿಗೆ ಜನ್ಮವಿತ್ತ ಮಹಿಳೆ- ರಕ್ಷಣೆ

(ನ್ಯೂಸ್ ಕಡಬ) newskadaba.com ತಿರುವನಂತಪುರಂ, ಆ. 06. ಕೇರಳದಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಈ ಸಂದರ್ಭ ಮಹಿಳೆಯೊಬ್ಬರು ಕಾಡಿನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ. ಮಳೆಯಿಂದಾಗಿ 2 ಸಾವಿರಕ್ಕೂ ಅಧಿಕ ಮಂದಿಯನ್ನು ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಇನ್ನು ಇದೇ ವೇಳೆ ಮಹಿಳೆಯೊಬ್ಬರು ಕಾಡಿನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎಡೆಬಿಡದೆ ಸುರಿಯುತ್ತಿರುವ ಮಳೆ ➤ ಕಾಡಿನಲ್ಲಿಯೇ ಮಗುವಿಗೆ ಜನ್ಮವಿತ್ತ ಮಹಿಳೆ- ರಕ್ಷಣೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಾದಕ ವಸ್ತು ಸಾಗಾಟ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 05. ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಾದಕ ವಸ್ತುಗಳ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತರನ್ನು ಕಣ್ಣೂರು ಮಾಡಾಯಿಯ ನಿಜಾಮ್ ಮತ್ತು ಮುಹಮ್ಮದ್ ತಾಹಾ ಎಂದು ಗುರುತಿಸಲಾಗಿದೆ. ನೀಲೇಶ್ವರ ಪಳ್ಳಿಕೆರೆ ಎಂಬಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೇನಾ ನೇತೃತ್ವದ ತಂಡವು ವಾಹನ ತಪಾಸಣೆ ನಡೆಸುತ್ತಿದ್ದಾಗ ಕಾರಿನಲ್ಲಿದ್ದವರ ಚಲನವಲನದ ಬಗ್ಗೆ ಗಮನಿಸಿದ ಪೊಲೀಸರು ತಪಾಸಣೆ ನಡೆಸಿದಾಗ ಎರಡು ಕಿಲೋ ಗಾಂಜಾ ಹಾಗೂ 25 ಗ್ರಾಂ ಎಂಡಿಎಂಎ ಮಾದಕ

ಮಾದಕ ವಸ್ತು ಸಾಗಾಟ ➤ ಇಬ್ಬರ ಬಂಧನ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪೇಟಿಎಂ ಗ್ರಾಹಕರಿಗೆ ಬಿಗ್ ಶಾಕ್ ➤ ಪೇಟಿಎಂ ವೆಬ್ಸೈಟ್, ಅಪ್ಲಿಕೇಶನ್ ಹಾಗೂ ಪಾವತಿಗಳು ಸ್ಥಗಿತ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 05. ಭಾರತೀಯ ಪಾವತಿ ಪ್ಲಾಟ್ ಫಾರ್ಮ್ ಪೇಟಿಎಂ ಪ್ರಸ್ತುತ ಭಾರತದಲ್ಲಿ ಸ್ಥಗಿತವನ್ನು ಎದುರಿಸುತ್ತಿದೆ. ಸ್ಥಗಿತವು ಕೇವಲ ಪಾವತಿಗಳ ಮೇಲೆ ಮಾತ್ರವಲ್ಲದೇ ಇಡೀ ಅಪ್ಲಿಕೇಶನ್ ಮತ್ತು ವೆಬ್ಸೈಟ್ ಮೇಲೆ ಪರಿಣಾಮ ಬೀರುತ್ತಿದೆ. ಬಳಕೆದಾರರೆಲ್ಲ ಇದ್ದಕ್ಕಿದ್ದಂತೆ ಲಾಗ್ ಔಟ್ ಆಗಿರುವುದು ವರದಿಯಾಗಿದೆ. ಪೇಟಿಎಂ ವಾಲೆಟ್ ಪಾವತಿಗಳು ಸೇರಿದಂತೆ ಎಲ್ಲಾ ವಹಿವಾಟುಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಒಂದು ವಹಿವಾಟನ್ನು ಮಾಡಲು ಪ್ರಯತ್ನಿಸುವುದರಿಂದ ಬಳಕೆದಾರರನ್ನು ಅಪ್ಲಿಕೇಶನ್ ನಿಂದ ಲಾಗ್ ಔಟ್ ಮಾಡುತ್ತದೆ, ಮತ್ತು ಹಣವನ್ನು ಕಳುಹಿಸಲು ಅಥವಾ

ಪೇಟಿಎಂ ಗ್ರಾಹಕರಿಗೆ ಬಿಗ್ ಶಾಕ್ ➤ ಪೇಟಿಎಂ ವೆಬ್ಸೈಟ್, ಅಪ್ಲಿಕೇಶನ್ ಹಾಗೂ ಪಾವತಿಗಳು ಸ್ಥಗಿತ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹಾವು ಕಡಿತದಿಂದ ಮೃತಪಟ್ಟ ಅಣ್ಣನ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ತಮ್ಮನಿಗೂ ಹಾವು ಕಡಿತ- ಮೃತ್ಯು..!

(ನ್ಯೂಸ್ ಕಡಬ) newskadaba.com ಬಲರಾಮಪುರ, ಆ. 05. ಹಾವು ಕಡಿತದಿಂದ ಮೃತಪಟ್ಟ ಸಹೋದರನ ಅಂತ್ಯಕ್ರಿಯೆಗೆ ಬಂದಿದ್ದ ವ್ಯಕ್ತಿಯೂ ಹಾವು ಕಡಿತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಉ.ಪ್ರದೇಶದ ಬಲರಾಮಪುರದಲ್ಲಿ ನಡೆದಿದೆ. ಮೃತಪಟ್ಟವರನ್ನು ಅರವಿಂದ್ ಮಿಶ್ರಾ ಹಾಗೂ ಅವರ ಅಂತ್ಯಕ್ರಿಯೆಗೆ ಬಂದಿದ್ದ ತಮ್ಮ ಗೋವಿಂದ ಮಿಶ್ರಾ ಎಂದು ಗುರುತಿಸಲಾಗಿದೆ. ಗೋವಿಂದ ಮಿಶ್ರಾ ಅವರು ಲುಧಿಯಾನದಿಂದ ಭವಾನಿಪುರಕ್ಕೆ ಅಣ್ಣನ ಅಂತ್ಯ ಸಂಸ್ಕಾರಕ್ಕೆಂದು ಬಂದು, ವಿಧಿವಿಧಾನಗಳನ್ನೆಲ್ಲ ಮುಗಿಸಿ, ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಹಾವು ಕಡಿದಿದ್ದು, ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೇ ಅವರ ಜೊತೆಗೆ

ಹಾವು ಕಡಿತದಿಂದ ಮೃತಪಟ್ಟ ಅಣ್ಣನ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ತಮ್ಮನಿಗೂ ಹಾವು ಕಡಿತ- ಮೃತ್ಯು..! Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸ್ಕೇಟ್ ಬೋರ್ಡ್ ಮೇಲೆ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ತೆರಳುತ್ತಿದ್ದ ಯುವಕ ಅಪಘಾತಕ್ಕೆ ಬಲಿ…!

(ನ್ಯೂಸ್ ಕಡಬ) newskadaba.com ಹರಿಯಾಣ, ಆ. 04. ಸ್ಕೇಟಿಂಗ್ ಬೋರ್ಡ್ ಮೇಲೆ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ತೆರಳುತ್ತಿದ್ದ ಕೇರಳ ಮೂಲದ ಕ್ರೀಡಾಪಟುವೊಬ್ಬರು ಅಪಘಾತದಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಕೇರಳ ತಿರುವನಂತಪುರಂ ಮೂಲದಲ್ಲಿ ಅನಾಸ್ ಅಜಾಸ್ ಎಂದು ಗುರುತಿಸಲಾಗಿದೆ. ಈತ ಪಂಚಕುಲದ ಪಿಂಜೋರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಕೇಟಿಂಗ್ ಮಾಡುತ್ತಿದ್ದ ವೇಳೆ ಅಪರಿಚಿತ ಟ್ರಕ್ ಢಿಕ್ಕಿ ಹೊಡೆದು ಪರಾರಿಯಾಗಿದೆ. ಕೂಡಲೇ ಸ್ಥಳೀಯರು ಸೇರಿ ಅನಸ್ ಅವರನ್ನು ಆಸ್ಪತ್ರೆಗೆ ಸೇರಿಸಿದರಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದೆನ್ನಲಾಗಿದೆ. ಮೇ. 29ರಂದು ಕನ್ಯಾಕುಮಾರಿಯಿಂದ

ಸ್ಕೇಟ್ ಬೋರ್ಡ್ ಮೇಲೆ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ತೆರಳುತ್ತಿದ್ದ ಯುವಕ ಅಪಘಾತಕ್ಕೆ ಬಲಿ…! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೇರಳ ವ್ಲಾಗರ್ ರಿಫಾ ಆತ್ಮಹತ್ಯೆ ಪ್ರಕರಣ ➤ ಪತಿ ಮೆಹನಾಝ್ ಬಂಧನ

(ನ್ಯೂಸ್ ಕಡಬ) newskadaba.com ಕೋಝಿಕ್ಕೋಡ್, ಆ. 04. ದುಬೈನಲ್ಲಿ ಆತ್ಮಹತೆಗೈದಿದ್ದಾಳೆಂದು ಹೇಳಲಾಗಿದ್ದ ವ್ಲಾಗರ್ ರಿಫಾ ಮೆಹ್ನು ಸಾವಿಗೆ ಸಂಬಂಧಿಸಿದಂತೆ ಅವರ ಪತಿ ಮೆಹನಾಝ್ ರನ್ನು ಪೋಕ್ಸೊ ಪ್ರಕರಣದಡಿ ಬಂಧಿಸಲಾಗಿದೆ. ಇವರಿಬ್ಬರ ವಿವಾಹದ ವೇಳೆ ರಿಫಾ ಮೆಹ್ನು ಅಪ್ರಾಪ್ತೆಯಾಗಿದ್ದಳು ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆ ಪೋಕ್ಸೊ ಕಾಯ್ದೆಯಡಿ ಅವರ ಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡಿನಲ್ಲಿರುವ ಮೆಹನಾಝ್ ನನ್ನು ತಾಮರಶ್ಶೇರಿ ಡಿವೈಎಸ್ಪಿ ನೇತೃತ್ವದ ತನಿಖಾ ತಂಡವು ಕರೆದುಕೊಂಡು ಹೋಗಿದ್ದು, ಆತನನ್ನು ಪೋಕ್ಸೋ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮಾಹಿತಿ

ಕೇರಳ ವ್ಲಾಗರ್ ರಿಫಾ ಆತ್ಮಹತ್ಯೆ ಪ್ರಕರಣ ➤ ಪತಿ ಮೆಹನಾಝ್ ಬಂಧನ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top