ರಾಷ್ಟ್ರೀಯ ನ್ಯೂಸ್

ಬಾಲಿವುಡ್ ನಟಿ ರಾಖಿ ಸಾವಂತ್ ತಾಯಿ ನಿಧನ !

(ನ್ಯೂಸ್ ಕಡಬ)newskadaba.com ಮುಂಬೈ, ಜ.30. ಬಾಲಿವುಡ್ ನಟಿ ರಾಖಿ ಸಾವಂತ್‌ ಅವರ ತಾಯಿ ಜಯಾ ಭೇದಾ ಸಾವಂತ್‌ ಅವರು ನಿಧನರಾಗಿದ್ದಾರೆ. ಸುದೀರ್ಘ ಕಾಲದಿಂದ ಕ್ಯಾನ್ಸರ್ ಹಾಗೂ ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಜಯಾ ಭೇದಾ, ಮುಂಬೈನ ಜುಹು ಪ್ರದೇಶದಲ್ಲಿರುವ ಸಿಟಿ ಕೇರ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.   ಮೃತದೇಹವನ್ನು ಆಸ್ಪತ್ರೆಯಿಂದ ಅಂತಿಮ ವಿಧಿ ವಿಧಾನಕ್ಕಾಗಿ ತೆಗೆದುಕೊಂಡು ಹೋಗಲಾಗಿದೆ. ರಾಖಿ ಸಾವಂತ್‌ ತಾಯಿಯ ನಿಧನಕ್ಕೆ ಬಾಲಿವುಡ್‌ನ ಹಲವರು ಕಂಬನಿ ಮಿಡಿದಿದ್ದಾರೆ. ತಾಯಿಯನ್ನು ಕಳೆದುಕೊಂಡು ರಾಖಿ ಸಾವಂತ್ ದುಃಖತಪ್ತರಾಗಿದ್ದಾರೆ.  

ಬಾಲಿವುಡ್ ನಟಿ ರಾಖಿ ಸಾವಂತ್ ತಾಯಿ ನಿಧನ ! Read More »

ರಾಷ್ಟ್ರೀಯ ನ್ಯೂಸ್

➤ಗುಜರಾತ್ ನ ಕಚ್ ನಲ್ಲಿ ಭೂಕಂಪನ

(ನ್ಯೂಸ್ ಕಡಬ) newskadaba.com, ಗುಜರಾತ್, ಜ.30. ಗುಜರಾತ್​ನ ಕಚ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನ ಸಂಶೋಧನಾ ಸಂಸ್ಥೆ ಈ  ಬಗ್ಗೆ ಮಾಹಿತಿಯನ್ನು ನೀಡಿದೆ.   ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾಗಿಲ್ಲ.  ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಇಂದು ಬೆಳಿಗ್ಗೆ 6.38 ಕ್ಕೆ 4.2 ತೀವ್ರತೆಯ ಭೂಕಂಪ ಸಂಭವಿಸಿತು. ಮತ್ತು ಅದರ ಕೇಂದ್ರಬಿಂದು ಕಚ್‌ನ ದುಧೈ ಗ್ರಾಮದ ಉತ್ತರ-ಈಶಾನ್ಯಕ್ಕೆ 11 ಕಿ.ಮೀ ಇತ್ತು ಎಂದು ಹೇಳಲಾಗಿದೆ.

➤ಗುಜರಾತ್ ನ ಕಚ್ ನಲ್ಲಿ ಭೂಕಂಪನ Read More »

ರಾಷ್ಟ್ರೀಯ ನ್ಯೂಸ್

ಐಎಎಫ್ 2 ಯುದ್ಧ ವಿಮಾನಗಳ ಅಪಘಾತ ➤ ಓರ್ವ ಪೈಲಟ್ ಮೃತ್ಯು

(ನ್ಯೂಸ್ ಕಡಬ)newskadaba.com ಭೋಪಾಲ್, ಜ.28. ಮಧ್ಯಪ್ರದೇಶದ ಮೊರೆನಾದಲ್ಲಿ ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿವೆ. ಈ ಭೀಕರ ದುರಂತದಲ್ಲಿ ವಿಮಾನಗಳು ಪುಡಿಪುಡಿಯಾಗಿವೆ. ಆದರೆ ಸುಖೋಯ್ ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ಇಬ್ಬರನ್ನೂ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದು ಫೈಟರ್ ಜೆಟ್‌ನ ಪೈಲಟ್‌ಗೆ ಮೃತಪಟ್ಟಿದ್ದಾರೆ. “ಸುಖೋಯ್- 30 ಮತ್ತು ಮಿರಾಜ್ 2000 ಯುದ್ಧ ವಿಮಾನಗಳು ಮಧ್ಯಪ್ರದೇಶದ ಮೊರೆನಾ ಸಮೀಪ ಪತನಗೊಂಡಿವೆ. ಪತ್ತೆ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಆರಂಭಿಸಲಾಗಿದೆ” ಎಂದು

ಐಎಎಫ್ 2 ಯುದ್ಧ ವಿಮಾನಗಳ ಅಪಘಾತ ➤ ಓರ್ವ ಪೈಲಟ್ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಗೋಧಿ ಮಾರಾಟಕ್ಕೆ ಟೆಂಡರ್‌ ಆಹ್ವಾನಿಸಿದ ಎಫ್‌ಸಿಐ ➤ ಒಂದೇ ದಿನ ಗೋಧಿ ದರ 9% ಇಳಿಕೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.28. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) 25 ಲಕ್ಷ ಟನ್‌ ಗೋಧಿಯನ್ನು ಮಾರಾಟ ಮಾಡಲು ಟೆಂಡರ್‌ ಆಹ್ವಾನಿಸಿದ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಒಂದೇ ದಿನದಲ್ಲಿ ಗೋಧಿ ಬೆಲೆ ಶೇ. 6-9ರಷ್ಟು ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಗೋಧಿ ಹಿಟ್ಟಿನ (ಆಟ್ಟಾ) ಬೆಲೆ 10 ದಿನಗಳಲ್ಲಿ ಇಳಿಕೆಯಾಗುವ ಎಲ್ಲಾ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಗೋಧಿ ದಾಸ್ತಾನು ನಾಲ್ಕು ಮಿಲ್‌ಗಳಿಗೆ

ಗೋಧಿ ಮಾರಾಟಕ್ಕೆ ಟೆಂಡರ್‌ ಆಹ್ವಾನಿಸಿದ ಎಫ್‌ಸಿಐ ➤ ಒಂದೇ ದಿನ ಗೋಧಿ ದರ 9% ಇಳಿಕೆ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಬ್ರೇಕಪ್‌ ಆಗಿದ್ದಕ್ಕೆ 40 ಲಕ್ಷ ರೂ. ಮೌಲ್ಯದ ಕಾರಿಗೆ ಬೆಂಕಿ ಹಚ್ಚಿದ ಭೂಪ

(ನ್ಯೂಸ್ ಕಡಬ)newskadaba.com ಚೆನ್ನೈ, ಜ.28. ಪ್ರೇಯಸಿಯೊಂದಿಗೆ ಜಗಳ ಆಗಿದ್ದಕ್ಕೆ ಹುಡುಗರು ಫೋನ್‌ ಹೊಡೆದಾಕಬಹುದು, ಅಳಬಹುದು, ಒಂದಿಷ್ಟು ದಿನ ಮಾತು ಬಿಡಬಹುದು. ಆದರೆ, ಇಲ್ಲೊಬ್ಬ ತನ್ನ 40 ಲಕ್ಷ ರೂ. ಮೌಲ್ಯದ ಮರ್ಸಿಡಿಸ್‌ ಬೆಂಜ್‌ ಕಾರಿಗೆ ಬೆಂಕಿ ಹಚ್ಚಿದ್ದಾನೆ. ತಮಿಳುನಾಡಿನ ಕಂಚಿಯಲ್ಲಿ 28 ವರ್ಷದ ವೈದ್ಯನೊಬ್ಬ ಬ್ರೇಕಪ್‌ ಆಗಿದ್ದಕ್ಕೆ ತನ್ನ ಐಷಾರಾಮಿ ಕಾರಿಗೆ ಅಗ್ನಿ ಸ್ಪರ್ಶ ಮಾಡಿದ್ದಾನೆ. ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬ್ರೇಕಪ್‌ ಆಗಿದ್ದಕ್ಕೆ 40 ಲಕ್ಷ ರೂ. ಮೌಲ್ಯದ ಕಾರಿಗೆ ಬೆಂಕಿ ಹಚ್ಚಿದ ಭೂಪ Read More »

ರಾಷ್ಟ್ರೀಯ ನ್ಯೂಸ್

ಖಾಸಗಿ ನರ್ಸಿಂಗ್ ಹೋಂನಲ್ಲಿ ಬೆಂಕಿ ಅವಘಡ    ➤ ಐವರು ಮೃತ್ಯು

(ನ್ಯೂಸ್ ಕಡಬ)newskadaba.com ಜಾರ್ಖಂಡ್‌, ಜ.28. ಖಾಸಗಿ ನರ್ಸಿಂಗ್ ಹೋಂವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ವೈದ್ಯ ದಂಪತಿ ಸೇರಿದಂತೆ ಕನಿಷ್ಠ ಐವರು ಮೃತಪಟ್ಟ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಸಂಸ್ಥೆಯ ಮಾಲಕ ಡಾ. ವಿಕಾಸ್ ಹಜ್ರಾ, ಅವರ ಪತ್ನಿ ಡಾ. ಪ್ರೇಮಾ ಹಜ್ರಾ, ಮಾಲಕರ ಸೋದರಳಿಯ ಸೋಹನ್ ಖಮಾರಿ ಮತ್ತು ಮನೆಯ ಸಹಾಯಕಿ ತಾರಾದೇವಿ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಮೃತಪಟ್ಟ ಇನ್ನೋರ್ವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಜಾರ್ಖಂಡ್‌ನ ಧನ್‌ಬಾದ್‌ನ ಬ್ಯಾಂಕ್ ಮೋರ್ ಪ್ರದೇಶದಲ್ಲಿರುವ ಖಾಸಗಿ ನರ್ಸಿಂಗ್ ಹೋಂನ ಸ್ಟೋರ್ ರೂಮ್‌ನಲ್ಲಿ

ಖಾಸಗಿ ನರ್ಸಿಂಗ್ ಹೋಂನಲ್ಲಿ ಬೆಂಕಿ ಅವಘಡ    ➤ ಐವರು ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಭಾರತದಲ್ಲಿ 2,967 ಹುಲಿಗಳಿವೆ ! ➤ ‘ಸುಪ್ರೀಂ’ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

(ನ್ಯೂಸ್ ಕಡಬ)newskadaba.com ನವದೆಹಲಿ, ಜ.28. ‘2018ರ ವರದಿಯೊಂದರ ಪ್ರಕಾರ ಭಾರತದಾದ್ಯಂತ ಇರುವ 53 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟು 2,967 ಹುಲಿಗಳು ಇವೆ’ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ದೇಶದಲ್ಲಿ ಅಪಾಯದಲ್ಲಿರುವ ಹುಲಿಗಳನ್ನು ರಕ್ಷಿಸಲು ಕೋರಿ 2017ರಲ್ಲಿ ವಕೀಲ ಅನುಪಮ್‌ ತ್ರಿಪಾಠಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್‌ ಹಾಗೂ ಬಿ.ವಿ. ನಾಗರತ್ನ ಅವರಿದ್ದ ಪಿಠವು ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ

ಭಾರತದಲ್ಲಿ 2,967 ಹುಲಿಗಳಿವೆ ! ➤ ‘ಸುಪ್ರೀಂ’ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ Read More »

ರಾಷ್ಟ್ರೀಯ ನ್ಯೂಸ್

15 ವರ್ಷ ತುಂಬಿದ ಎಲ್ಲಾ ಸರ್ಕಾರಿ ವಾಹನ ಈ ವರ್ಷ, ಖಾಸಗಿ ವಾಹನ ಮುಂದಿನ ವರ್ಷ ಗುಜರಿಗೆ

(ನ್ಯೂಸ್ ಕಡಬ)newskadaba.com ನವದೆಹಲಿ, ಜ.28. 15 ವರ್ಷ ತುಂಬಿದ ಕೇಂದ್ರ, ರಾಜ್ಯ ಸರ್ಕಾರಿ ವಾಹನಗಳು ಏಪ್ರಿಲ್ 1 ರಿಂದ ಗುಜರಿ ಸೇರಲಿವೆ. ಪರಿಸರಕ್ಕೆ ಮಾರಕವಾಗಿರುವ ವಾಹನ ಬಳಕೆ ನಿಲ್ಲಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, 15 ವರ್ಷ ಪೂರ್ಣಗೊಂಡ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಾಹನಗಳ ನೋಂದಣಿಯನ್ನು ಏಪ್ರಿಲ್ 1 ರಿಂದ ರದ್ದುಪಡಿಸಲಾಗುವುದು. ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳು ಗುಜರಿ ಸೇರಲಿವೆ. ಕಳೆದ ವರ್ಷ ನವೆಂಬರ್ ನಲ್ಲಿ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರ್

15 ವರ್ಷ ತುಂಬಿದ ಎಲ್ಲಾ ಸರ್ಕಾರಿ ವಾಹನ ಈ ವರ್ಷ, ಖಾಸಗಿ ವಾಹನ ಮುಂದಿನ ವರ್ಷ ಗುಜರಿಗೆ Read More »

ರಾಷ್ಟ್ರೀಯ ನ್ಯೂಸ್

ಗ್ರಾಹಕರೇ ಗಮನಿಸಿ ! ➤ ಫೆ. 01 ರಿಂದ ಬದಲಾಗಲಿವೆ ಈ ನಿಯಮಗಳು..!

(ನ್ಯೂಸ್ ಕಡಬ)newskadaba.com ನವದೆಹಲಿ, ಜ.28.  2023 ರ ವರ್ಷದ ಮೊದಲ ತಿಂಗಳು ಕೊನೆಗೊಳ್ಳಲಿದೆ. ನಂತರ ಹೊಸ ತಿಂಗಳು ಹೊಸ ಬದಲಾವಣೆಗಳೊಂದಿಗೆ ಪ್ರಾರಂಭವಾಗುತ್ತದೆ. ಫೆಬ್ರವರಿ 1 ರಿಂದ ಅನೇಕ ನಿಯಮಗಳು ಬದಲಾಗಲಿವೆ. ಅವುಗಳ ಪರಿಣಾಮವು ಸಾಮಾನ್ಯ ಜನರ ಮೇಲೂ ಪರಿಣಾಮ ಬೀರಲಿವೆ ಎನ್ನಲಾಗಿದೆ. ಸಂಚಾರ, ಪ್ಯಾಕೇಜಿಂಗ್, ಗೇಮಿಂಗ್, ಆದಾಯ ತೆರಿಗೆ ಇಲಾಖೆ ಮತ್ತು ಸಂಬಳಕ್ಕೆ ಸಂಬಂಧಿಸಿದ ಹೊಸ ನಿಯಮಗಳು ಫೆಬ್ರವರಿ 1 ರಿಂದ ಪ್ರಾರಂಭವಾಗಲಿವೆ. ಹೀಗಾಗಿ ಹೊಸ ನಿಯಮಗಳನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ ಪ್ರತಿ ತಿಂಗಳು ಹೊಸ

ಗ್ರಾಹಕರೇ ಗಮನಿಸಿ ! ➤ ಫೆ. 01 ರಿಂದ ಬದಲಾಗಲಿವೆ ಈ ನಿಯಮಗಳು..! Read More »

ರಾಷ್ಟ್ರೀಯ ನ್ಯೂಸ್

ಸರಕಾರಿ ಶಾಲೆಯ ಶಿಕ್ಷಕ ಪತ್ನಿ, ಮಗಳ ಜೊತೆ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಚಂಡೀಗಢ, ಜ.28. ಸರಕಾರಿ ಶಾಲೆಯ ಶಿಕ್ಷಕ ಮತ್ತು ಪತ್ನಿ,ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಚಂಡೀಗಢದಲ್ಲಿ ನಡೆದಿದೆ. ಶಿಕ್ಷಕ ಜಿತೇಂದ್ರ,ಪತ್ನಿ ಸುಶೀಲಾ,ಮಗಳು ಹಿಮಾನಿ ಮೃತರು. ಇವರ ಮೃತದೇಹ ಹರಿಯಾಣದ ಭಿವಾನಿಯ ಅವರ ಮನೆಯಲ್ಲಿ ಹಾಸಿಗೆಯ ಮೇಲೆ ಮಲಗಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ. ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡು ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿ ತನಿಖೆ ಬಳಿಕ ತಿಳಿದು ಬರಬೇಕಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ಸಿಂಗ್ ತಿಳಿಸಿದ್ದಾರೆ.  

ಸರಕಾರಿ ಶಾಲೆಯ ಶಿಕ್ಷಕ ಪತ್ನಿ, ಮಗಳ ಜೊತೆ ಆತ್ಮಹತ್ಯೆ Read More »

ರಾಷ್ಟ್ರೀಯ ನ್ಯೂಸ್
Scroll to Top