ರಾಷ್ಟ್ರೀಯ ನ್ಯೂಸ್

ಲಸಿಕೆ ಪಡೆಯಲು ಬಲವಂತ ಪಡಿಸುವಂತಿಲ್ಲ ➤ ಹೈ ಕೋರ್ಟ್ ಮಹತ್ವದ ತೀರ್ಪು

(ನ್ಯೂಸ್ ಕಡಬ)newskadaba.com  ನವದೆಹಲಿ, ಜ.27. ಉದ್ಯೋಗಿಗೆ ಕೋವಿಡ್ -19 ಲಸಿಕೆ ಪಡೆಯಲು ಬಲವಂತ ಪಡಿಸುವಂತಿಲ್ಲ ಎಂದು ದೆಹಲಿ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಲ್ಲದೆ ಕರ್ತವ್ಯಕ್ಕೆ ಅವಕಾಶ ನಿರಾಕರಿಸಲಾಗಿದ್ದ ಉದ್ಯೋಗಿಗೆ 30 ದಿನಗಳೊಳಗಾಗಿ ಮರಳಿ ಪಡೆಯುವಂತೆ ನಿರ್ದೇಶಿಸಿದೆ.ಕೋವಿಡ್- 19 ಲಸಿಕೆ ತಮಗೆ ಬಲವಂತಪಡಿಸಲಾಗುತ್ತಿದ್ದು, ಕರ್ತವ್ಯ ನಿರ್ವಹಣೆಗೆ ಅವಕಾಶ ನೀಡುತ್ತಿಲ್ಲ ಎಂದು ಶಿಕ್ಷಕರೊಬ್ಬರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಪ್ರಕರಣದ ವಿಚಾರಣೆ ವೇಳೆ ಮಹತ್ವದ ತೀರ್ಪು ಹೊರ ಬಿದ್ದಿದೆ. ಅಲ್ಲದೆ ಶಿಕ್ಷಕರಿಗೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅನುವು […]

ಲಸಿಕೆ ಪಡೆಯಲು ಬಲವಂತ ಪಡಿಸುವಂತಿಲ್ಲ ➤ ಹೈ ಕೋರ್ಟ್ ಮಹತ್ವದ ತೀರ್ಪು Read More »

ರಾಷ್ಟ್ರೀಯ ನ್ಯೂಸ್

ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

(ನ್ಯೂಸ್ ಕಡಬ)newskadaba.com  ಟೋಕಿಯಾ, ಜ.27. ಟೋಕಿಯೊ-ನರಿಟಾದಿಂದ ದುಬೈಗೆ ತೆರಳುತ್ತಿದ್ದ ವೇಳೆ ಮಹಿಳಾ ಪ್ರಯಾಣಿಕರೋರ್ವರು ವಿಮಾನದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ಎಮಿರೇಟ್ಸ್ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನ ದುಬೈಗೆ ಆಗಮಿಸಿದ ಬಳಿಕ ತಾಯಿ ಮತ್ತು ಮಗುವನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಯಿತು. ವಿಮಾನ ಸಿಬ್ಬಂದಿ ಇಬ್ಬರನ್ನೂ ಸುರಕ್ಷಿತವಾಗಿ ನೋಡಿಕೊಂಡರು. ಇಬ್ಬರ ಆರೋಗ್ಯವೂ ಸ್ಥಿರವಾಗಿದೆ ಎಂದು ಎಮಿರೇಟ್ಸ್‌ ತಿಳಿಸಿದೆ. ಕೊಲೊರಾಡೊಗೆ ಪ್ರಯಾಣಿಸುತ್ತಿದ್ದ ಫ್ರಾಂಟಿಯರ್ ಏರ್‌ಲೈನ್ಸ್‌ ವಿಮಾನದಲ್ಲಿ ಶೌಚಾಲಯದಲ್ಲೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು.

ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ Read More »

ರಾಷ್ಟ್ರೀಯ ನ್ಯೂಸ್

ವರ್ಷದಲ್ಲಿ 3 ಸಾವಿರ ಉದ್ಯೋಗ ಕಡಿತ ಮಾಡಲಿದೆ ಜರ್ಮನಿಯ ಎಸ್‌ಎಪಿ

(ನ್ಯೂಸ್ ಕಡಬ)newskadaba.com  ಫ್ರಾಂಕ್‌ಫರ್ಟ್‌, ಜ.27. ಜರ್ಮನಿಯ ಸಾಫ್ಟ್ ವೇರ್‌ ಕಂಪನಿ ಎಸ್‌ಎಪಿ ಈ ವರ್ಷದಲ್ಲಿ 3 ಸಾವಿರ ನೌಕರರನ್ನು ಕೆಲಸದಿಂದ ತೆಗೆಯಲು ಯೋಜಿಸಿರುವುದಾಗಿ ಹೇಳಿದೆ. ಮೂಲ ವಹಿವಾಟಿನ ಕಡೆಗೆ ಹೆಚ್ಚು ಗಮನ ಕೊಡುವ ಉದ್ದೇಶದಿಂದ ಕಂಪನಿಯಲ್ಲಿ ಕೆಲವು ಬದಲಾವಣೆಗಳನ್ನು ತರಲು ನಿರ್ಧರಿಸಲಾಗಿದೆ. ಇದರಿಂದಾಗಿ ಕಂಪನಿಯ ಒಟ್ಟು ಉದ್ಯೋಗಿಗಳಲ್ಲಿ ಶೇಕಡ 2.5ರಷ್ಟು ಮಂದಿಗೆ ಸಮಸ್ಯೆ ಆಗುವ ಅಂದಾಜು ಮಾಡಲಾಗಿದೆ ಎಂದು ಅದು ತಿಳಿಸಿದೆ. ಕಂಪನಿಯು ಜಾಗತಿಕವಾಗಿ ಒಟ್ಟು 1.20 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.

ವರ್ಷದಲ್ಲಿ 3 ಸಾವಿರ ಉದ್ಯೋಗ ಕಡಿತ ಮಾಡಲಿದೆ ಜರ್ಮನಿಯ ಎಸ್‌ಎಪಿ Read More »

ರಾಷ್ಟ್ರೀಯ ನ್ಯೂಸ್

➤ಇಬ್ಬರು ಮಕ್ಕಳಿಗೆ ವಾಸಿಯಾಗದ ಖಾಯಿಲೆ ➤ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ಬಿಜೆಪಿ ಮುಖಂಡ

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ.27. ಮಧ್ಯಪ್ರದೇಶದ ವಿದಿಶಾದಲ್ಲಿ ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಬಿಜೆಪಿ ಮುಖಂಡರೊಬ್ಬರು ತಮ್ಮ ಪತ್ನಿ ಹಾಗೂ ಇಬ್ಬರು ಪುತ್ರರೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿದಿಶಾದ ಈ ಬಿಜೆಪಿ ನಾಯಕ ಸಂಜೀವ್ ಮಿಶ್ರಾ ತನ್ನ ಇಬ್ಬರು ಪುತ್ರರ ವಾಸಿಯಾಗದ ಕಾಯಿಲೆಯಿಂದ ಅವರು ಕಂಗಾಲಾಗಿದ್ದರು. ಈ ಕಾರಣಕ್ಕಾಗಿಯೇ ಗುರುವಾರ ಸಂಜೆ ಪತ್ನಿ ಹಾಗೂ ಇಬ್ಬರು ಪುತ್ರರಿಗೆ ವಿಷವುಣಿಸಿ, ತಾನೂ ಕೂಡ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಂಜೀವ್ ಮಿಶ್ರಾ ಅವರು

➤ಇಬ್ಬರು ಮಕ್ಕಳಿಗೆ ವಾಸಿಯಾಗದ ಖಾಯಿಲೆ ➤ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ಬಿಜೆಪಿ ಮುಖಂಡ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

4 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿ

(ನ್ಯೂಸ್ ಕಡಬ)newskadaba.com  ಭುವನೇಶ್ವರ, ಜ.27. ನಾಲ್ಕು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಅಸ್ಕಾ ಬಳಿ ಬಂಧಿಸಲಾಗಿದೆ. ಮಗು ನಾಪತ್ತೆಯಾದ ಬಳಿಕ ಮನೆಯವರು ಮನೆಯ ಟೆರೇಸ್‌ನಿಂದ ರಕ್ತದ ಮಡುವಿನಲ್ಲಿ ಮಗುವನ್ನು ಕಂಡಿದ್ದಾರೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಲಾಗಲಿಲ್ಲ. ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕಬ್ಬಿಣದ ಬಾಗಿಲಿನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ ಎಂಬುದು

4 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

20 ವರ್ಷದ ಯುವಕನನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ

(ನ್ಯೂಸ್ ಕಡಬ)newskadaba.com  ಉತ್ತರಪ್ರದೇಶ, ಜ.27. ಪ್ರತಾಪ್‌ಗಢ ಜಿಲ್ಲೆಯಲ್ಲಿ ಸ್ಥಳೀಯ ಪತ್ರಕರ್ತರೊಬ್ಬರ 20 ವರ್ಷದ ಮಗನನ್ನು ಅಪರಿಚಿತ ವ್ಯಕ್ತಿಗಳು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಅತರ್ಸುಯಿ ಬದ್ಲಿ ಕಾ ಪೂರ್ವಾ ಗ್ರಾಮದಲ್ಲಿ ರಾತ್ರಿ ಬಾಘರೈ ಪೊಲೀಸ್ ಠಾಣೆ ವ್ಯಾಪ್ತಿಯ ರೋರ್ ಗ್ರಾಮದ ನಿವಾಸಿ ವಿಶಾಲ್ ಪಾಂಡೆ ಎಂಬಾತನನ್ನು ಅಪರಿಚಿತರು ಕಾರಿನಿಂದ ಡಿಕ್ಕಿ ಹೊಡೆದು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸದರ್ ಅಮರ್

20 ವರ್ಷದ ಯುವಕನನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಶಾಲಾ ಬಾಲಕನ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com  ಕಾಸರಗೋಡು, ಜ.27. ನಾಪತ್ತೆಯಾಗಿದ್ದ ಶಾಲಾ ಬಾಲಕನ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆಯಾದ ಘಟನೆ ಪಲ್ಲಿಕೆರೆ ಪೂಚೆಕ್ಕಾಡ್ ಬಳಿ ನಡೆದಿದೆ. ಮುಹಮ್ಮದ್ ಶಹೀಮ್ ಮೃತ ಬಾಲಕ ಎಂದು ಗುರುತಿಸಲಾಗಿದೆ. ಈತ ತೆಕ್ಕುಪುರಂ ನಿವಾಸಿ ಸುಬೈರ್ ಮತ್ತು ಸಮೀರಾ ದಂಪತಿಯ ಪುತ್ರನಾಗಿದ್ದ. ಶಹೀಮ್ ಶಾಲೆಯಿಂದ ಬೇಗನೇ‌ ಬಂದಿದ್ದ. ಆದರೆ ಮನೆಗೆ ತೆರಳಿಲ್ಲ. ಸಂಜೆ ಶಾಲಾ ಸಮಯ‌ ಕಳೆದರೂ‌ ಮಗು ಮನೆಗೆ ಬರದಿದ್ದಾಗ ಪೋಷಕರು ವಿಚಾರಿಸಿದ್ದಾರೆ.ಈ ವೇಳೆ‌ ಶಹೀಮ್‌ ಶಾಲೆಯಿಂದ ಮಧ್ಯಾಹ್ನ‌ ತೆರಳಿರುವ ಬಗ್ಗೆ ಶಿಕ್ಷಕರು ಮಾಹಿತಿ ನೀಡಿದ್ದಾರೆ.

ಕಾಸರಗೋಡು: ಶಾಲಾ ಬಾಲಕನ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹಾವಿನ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ಹಾವಿನಿಂದ ಕಚ್ಚಿಸಿಕೊಂಡು ಯುವಕ ಮೃತ್ಯು

(ನ್ಯೂಸ್ ಕಡಬ)newskadaba.com ಹೈದರಾಬಾದ್​, ಜ.27. ಹಾವಿನ ಜೊತೆ ಸೆಲ್ಫಿ ತೆಗೆಯುವಾಗ ಹಾವು ಕಡಿದು ಯುವಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ. ಮೃತನನ್ನು ಮಣಿಕಂಠ ರೆಡ್ಡಿ (32) ಎಂದು ಗುರುತಿಸಲಾಗಿದೆ. ಮಣಿಕಂಠ ಅವರ ಅಂಗಡಿಗೆ ಹಾವಾಡಿಗನೊಬ್ಬ ಬಂದಿದ್ದಾನೆ. ಈ ವೇಳೆ ತನ್ನ ಬಳಿ ಅನೇಕ ಹಾವುಗಳಿವೆ ಮತ್ತು ಅವು ಯಾರಿಗೂ ಹಾನಿ ಮಾಡುವುದಿಲ್ಲ ಎಂದು ಹೇಳಿದ್ದಾನೆ. ಹಾವಾಡಿಗ ಹೇಳಿದ ಮಾತನ್ನು ನಂಬಿದ ಮಣಿಕಂಠ ಹಾವಿನ ಜೊತೆ ಸೆಲ್ಫಿ ತೆಗೆದುಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಾನೆ. ಹಾವಾಡಿಗ ತಕ್ಷಣವೇ

ಹಾವಿನ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ಹಾವಿನಿಂದ ಕಚ್ಚಿಸಿಕೊಂಡು ಯುವಕ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮೈಕ್ರೋಸಾಫ್ಟ್​ ಸರ್ವರ್​ ಡೌನ್​​ ➤ ಆನಂದದಿಂದ ಕುಣಿದಾಡಿದ ಸಿಬ್ಬಂದಿಗಳು     

(ನ್ಯೂಸ್ ಕಡಬ)newskadaba.com ನವದೆಹಲಿ, ಜ.27. ಮೈಕ್ರೋಸಾಫ್ಟ್ ಸೇವೆಗಳಾದ ಎಂಎಸ್ ಟೀಮ್ಸ್, ಔಟ್​​ಲುಕ್, ಅಜೂರ್ ಹಾಗೂ ಮೈಕ್ರೋಸಾಫ್ಟ್ 365 ಸರ್ವರ್​ ಭಾರತದಲ್ಲಿ ಕೆಲವು ಕಾಲ ಡೌನ್ ಆಗಿತ್ತು. ಟೀಮ್ಸ್​ ಸರ್ವರ್ ಡೌನ್ ಆಗಿರುವ ಬಗ್ಗೆ ಡೌನ್​ಡಿಟೆಕ್ಟರ್ ಸುಮಾರು 3,500ರಷ್ಟು ಮಂದಿ ವರದಿ ಮಾಡಿದ್ದರು. ಲಿಂಕ್ಡ್​ಇನ್ ಸರ್ವರ್ ಕೂಡ ಡೌನ್ ಆಗಿತ್ತು. ಸಮಸ್ಯೆ ಇರುವುದನ್ನು ಮೈಕ್ರೋಸಾಫ್ಟ್ ಒಪ್ಪಿಕೊಂಡಿದೆ. ಈ ಸಂದರ್ಭದಲ್ಲಿ ಮೈಕ್ರೋಸಾಫ್ಟ್ ಉದ್ಯೋಗಿಗಳು ಭಾರಿ ಖುಷಿಯಲ್ಲಿ ಕೆಲವು ಕ್ಷಣ ಕಳೆದಿರುವ ಫೋಟೋ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಕೆಲವು ನಿಮಿಷಗಳ ಆನಂದವನ್ನು

ಮೈಕ್ರೋಸಾಫ್ಟ್​ ಸರ್ವರ್​ ಡೌನ್​​ ➤ ಆನಂದದಿಂದ ಕುಣಿದಾಡಿದ ಸಿಬ್ಬಂದಿಗಳು      Read More »

ರಾಷ್ಟ್ರೀಯ ನ್ಯೂಸ್

ಪೊಲೀಸ್ ವಾಹನ ಢಿಕ್ಕಿ-ಅಮೆರಿಕಾದಲ್ಲಿ ಭಾರತ ಮೂಲದ ಯುವತಿ ಮೃತ್ಯು

(ನ್ಯೂಸ್ ಕಡಬ)newskadaba.com ಅಮೆರಿಕಾ, ಜ.27. ಸಿಯಾಟಲ್ ಪೊಲೀಸ್ ಗಸ್ತು ವಾಹನ ಢಿಕ್ಕಿ ಹೊಡೆದು ಭಾರತ ಮೂಲದ 23 ವರ್ಷದ ಯುವತಿ ಮೃತಪಟ್ಟ ಘಟನೆ ಅಮೆರಿಕದ ಸೌತ್ ಲೇಕ್ ಯೂನಿಯನ್‌ನಲ್ಲಿ ನಡೆದಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಜಾಹ್ನವಿ ಕಂದುಲಾ ಮೃತ ಯುವತಿ ಎನ್ನಲಾಗಿದೆ. ಈಕೆ ಈಶಾನ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ವಿದ್ಯಾರ್ಥಿನಿಯಾಗಿದ್ದಳು ಎಂದು ವರದಿಯಾಗಿದೆ. ಸಂತ್ರಸ್ತೆ ಗಂಭೀರ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.  

ಪೊಲೀಸ್ ವಾಹನ ಢಿಕ್ಕಿ-ಅಮೆರಿಕಾದಲ್ಲಿ ಭಾರತ ಮೂಲದ ಯುವತಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್
Scroll to Top