ರಾಷ್ಟ್ರೀಯ ನ್ಯೂಸ್

 ಉಗ್ರರ ಒಳನುಸುಳುವಿಕೆ ಯತ್ನ ವಿಫಲ ➤ಓರ್ವ ಉಗ್ರನ ಹತ್ಯೆ

(ನ್ಯೂಸ್ ಕಡಬ) newskadaba.com ಶ್ರೀ ನಗರ, ಫೆ.16. ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಭದ್ರತಾ ಪಡೆಗಳು ಒಳನುಸುಳುವಿಕೆ ಪ್ರಯತ್ನವನ್ನು ಗುರುವಾರ ನಸುಕಿನ ಜಾವ ವಿಫಲಗೊಳಿಸಿದ್ದು ಗುಂಡಿನ ದಾಳಿಯಲ್ಲಿ ಓರ್ವ ಭಯೋತ್ಪಾದಕ ಹತನಾಗಿದ್ದಾನೆ ಎಂದು ವರದಿ ತಿಳಿಸಿದೆ. ಕುಪ್ವಾರ ಪೊಲೀಸರ ಸ್ಪಷ್ಟ ಮಾಹಿತಿಯೊಂದಿಗೆ ಸೇನೆ ಮತ್ತು ಪೊಲೀಸ್ ಇಲಾಖೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸೈದ್ಪೋರಾ ಫಾರ್ವರ್ಡ್ ಪ್ರದೇಶದಲ್ಲಿ ಉಗ್ರರ ಒಳನುಸುಳುವಿಕೆಯನ್ನು ತಡೆಯಲಾಯಿತು. ಕಾರ್ಯಾಚರಣೆಯಲ್ಲಿ ಓರ್ವ ನುಸುಳುಕೋರನನ್ನು ಹತ್ಯೆಗೈಯಲಾಗಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. […]

 ಉಗ್ರರ ಒಳನುಸುಳುವಿಕೆ ಯತ್ನ ವಿಫಲ ➤ಓರ್ವ ಉಗ್ರನ ಹತ್ಯೆ Read More »

ರಾಷ್ಟ್ರೀಯ ನ್ಯೂಸ್

ಒಂದೇ ತಿಂಗಳ ಅವಧಿಯಲ್ಲಿ ಭಾರತದಲ್ಲಿ 24 ಹುಲಿಗಳು ಬಲಿ

(ನ್ಯೂಸ್ ಕಡಬ)newskadaba.com ನವದೆಹಲಿ, ಫ.16. ದೇಶಾದ್ಯಂತ 24 ಹುಲಿಗಳು ಮೃತಪಟ್ಟಿದ್ದು, ಕಳೆದ ಮೂರು ವರ್ಷಗಳಲ್ಲೇ ದೊಡ್ಡ ಸಂಖ್ಯೆಯ ಹುಲಿಗಳು ಜನವರಿಯಲ್ಲಿ ಬಲಿಯಾಗಿರುವುದು ಇದೇ ಮೊದಲು ಎಂದು ವರದಿಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 16 ಹುಲಿಗಳು ಮೃತಪಟ್ಟಿದ್ದು, 2021ರಲ್ಲಿ 20 ಹುಲಿಗಳು ಸಾವನ್ನಪ್ಪಿತ್ತು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಂಕಿ ಅಂಶ ತಿಳಿಸಿದೆ. ಉತ್ತರ ಪ್ರದೇಶದಲ್ಲಿ 9, ಮಹಾರಾಷ್ಟ್ರ 6) ರಾಜಸ್ಥಾನ 3, ಕರ್ನಾಟಕ 2 ಉತ್ತರಾಖಂಡ 2 ಮತ್ತು ಕೇರಳ ಹಾಗೂ ಅಸ್ಸಾಂನಲ್ಲಿ ತಲಾ

ಒಂದೇ ತಿಂಗಳ ಅವಧಿಯಲ್ಲಿ ಭಾರತದಲ್ಲಿ 24 ಹುಲಿಗಳು ಬಲಿ Read More »

ರಾಷ್ಟ್ರೀಯ ನ್ಯೂಸ್

ಸೇನೆಯ ನೂತನ ಉಪ ಮುಖ್ಯಸ್ಥರಾಗಿ ಸುಚೇಂದ್ರಕುಮಾರ್ ನೇಮಕ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.16. ಲೆಫ್ಟಿನೆಂಟ್​  ಜನರಲ್ ಎಂ.ವಿ.​ ಸುಚೇಂದ್ರ ಕುಮಾರ್ ಅವರನ್ನು ಭಾರತೀಯ ಸೇನೆಯ ನೂತನ ಉಪ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಇಲ್ಲಿವರೆಗೆ ಸೇನೆಯ ಉಪ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್​ ಬಿ.ಎಸ್​. ರಾಜು ಅವರನ್ನು ಸೇನೆಯ ನೈಋತ್ಯ ವಲಯದ ಕಮಾಂಡರ್​ ಆಗಿ ನಿಯೋಜನೆ ಮಾಡಲಾಗಿದೆ. ಸೇನೆಯ ನೈಋತ್ಯ ವಲಯದ ಕಮಾಂಡರ್ ಲೆಫ್ಟಿನೆಂಟ್​ ಜನರಲ್​ ಎ.ಎಸ್​.ಭಿಂದರ್​ ಅವರು ಫೆ. 28ರಂದು ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಬಿ. ಎಸ್. ರಾಜು ನೇಮಕಗೊಂಡಿದ್ದಾರೆ.  

ಸೇನೆಯ ನೂತನ ಉಪ ಮುಖ್ಯಸ್ಥರಾಗಿ ಸುಚೇಂದ್ರಕುಮಾರ್ ನೇಮಕ Read More »

ರಾಷ್ಟ್ರೀಯ ನ್ಯೂಸ್

ನಾಲ್ವರು ಬಾಲಕಿಯರು ನೀರುಪಾಲು

(ನ್ಯೂಸ್ ಕಡಬ) newskadaba.com ತಮಿಳುನಾಡು, ಫೆ.16. ಪುದುಕೊಟ್ಟೈ ಜಿಲ್ಲೆಯ ವಿರಲಿಮಲೈ ಫಿಲಿಪ್ಪೂರ್ ಸರ್ಕಾರಿ ಮಾಧ್ಯಮಿಕ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಕರೂರ್ ಜಿಲ್ಲೆಯ ಮಾಯನೂರಿನ ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತಮಿಳರಸಿ,ಇನಿಯಾ,ಲಾವಣ್ಯ ಮತ್ತು ಸೋಫಿಯಾ ಮೃತ ಬಾಲಕಿಯರು.ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕರೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ. ಪುದುಕೊಟ್ಟೈ ಜಿಲ್ಲೆಯ ವಿರಲಿಮಲೈ ಫಿಲಿಪ್ಪೂರ್ ಸರ್ಕಾರಿ ಮಾಧ್ಯಮಿಕ ಶಾಲೆಯ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಿರುಚ್ಚಿ ಜಿಲ್ಲೆಯ ಥಾನಿಯಂನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಫುಟ್ಬಾಲ್ ಪಂದ್ಯದಲ್ಲಿ ಭಾಗವಹಿಸಲು ಹೋಗಿದ್ದರು. ಮೊದಲು

ನಾಲ್ವರು ಬಾಲಕಿಯರು ನೀರುಪಾಲು Read More »

ರಾಷ್ಟ್ರೀಯ ನ್ಯೂಸ್

ಜಾತಿ ನಿಂದನೆ ವಿದ್ಯಾರ್ಥಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಮುಂಬೈ,ಫೆ.15. ಐಐಟಿ ಬಾಂಬೆಯಲ್ಲಿ18 ವರ್ಷದ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು ಜಾತಿ ನಿಂದನೆಯೇ ಇದಕ್ಕೆ ಕಾರಣ ಎಂದು ಆತನ ಕುಟುಂಬ ಹೇಳಿದೆ. ತನ್ನ ಜಾತಿಯಿಂದಾಗಿ ಸ್ನೇಹಿತರು ಕೂಡಾ ಅವಮಾನಿಸುತ್ತಿದ್ದರು ಎಂದು ಸಹೋದರಿ ಮತ್ತು ಅತ್ತೆಯೊಂದಿಗೆ ಈತ ಹೇಳಿದ್ದ ಎಂದು ವಿದ್ಯಾರ್ಥಿಯ ಕುಟುಂಬವು ಎನ್‌ಡಿಟಿವಿಗೆ ತಿಳಿಸಿದೆ. ಐಐಟಿ ಬಾಂಬೆಯ ಅಧಿಕಾರಿಗಳು ಕ್ಯಾಂಪಸ್‌ನಲ್ಲಿ ಯಾವುದೇ ತಾರತಮ್ಯವಿಲ್ಲ ಎಂದು ಹೇಳಿದ್ದು, ದರ್ಶನ್ ಸೋಲಂಕಿ ಎಂಬ ವಿದ್ಯಾರ್ಥಿಯ ಕುಟುಂಬವು ತಮ್ಮ ಮಗ ಕಿರುಕುಳ ಅನುಭವಿಸಿದ್ದಾನೆ ಎಂದು ಹೇಳಿದೆ. “ಕಳೆದ ತಿಂಗಳು ಅವ

ಜಾತಿ ನಿಂದನೆ ವಿದ್ಯಾರ್ಥಿ ಆತ್ಮಹತ್ಯೆ Read More »

ರಾಷ್ಟ್ರೀಯ ನ್ಯೂಸ್

ಕೊರೊನಾವೈರಸ್ ಪ್ರಕರಣ ➤‌ ಮೂರು ಮಂದಿ ಮೃತ್ಯು

(ನ್ಯೂಸ್ ಕಡಬ)newskadaba.comನವದೆಹಲಿ,ಫೆ.15. ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 102 ಹೊಸ ಕೊರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,823ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಮುಂಜಾನೆ 8 ಗಂಟೆಗೆ ಲಭ್ಯವಾದ ಮಾಹಿತಿ ಪ್ರಕಾರ, ಉತ್ತರ ಪ್ರದೇಶದಲ್ಲಿ ಎರಡು ಮತ್ತು ಕೇರಳದಲ್ಲಿ ಒಂದು ಸೇರಿದಂತೆ ಈವರೆಗೆ ದೇಶದಲ್ಲಿ 5,30,756 ಮಂದಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ.    

ಕೊರೊನಾವೈರಸ್ ಪ್ರಕರಣ ➤‌ ಮೂರು ಮಂದಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ➤  ಸ್ಥಳದಲ್ಲಿಯೇ ಮೂವರ ಮೃತ್ಯು.!

(ನ್ಯೂಸ್ ಕಡಬ)newskadaba.com  ತಮಿಳುನಾಡು, ಫೆ.15. ದ್ವಿಚಕ್ರ ವಾಹನಕ್ಕೆ ಐಷರ್ ಕ್ಯಾಂಟರ್ ವಾಹನ ಢಿಕ್ಕಿಯಾಗಿ ಮೂವರು ಹದಿಹರೆಯದ ಮಂದಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ತಮಿಳರಸಿ(19), ತಮಿಳುಪ್ರಿಯಾ(17) ಹಾಗೂ ಅಂಬೇಡ್ಕರ್ ವಲವನ್(14) ಮೃತಪಟ್ಟವರು. ಈ ಘಟನೆ ತಮಿಳುನಾಡಿನ ಡೆಂಕಣಿಕೋಟೆ ಡೆಂಕಣಿಕೋಟೆ ಸಮೀಪದ ಸಿಂಗಾರತೋಪು ಬಳಿ ನಡೆದಿದೆ. ಸಹೋದರಿಯರಿಬ್ಬರು ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗುತ್ತಿದ್ದ. ಕಾಲೇಜಿನಿಂದ ಮರಳುವಾಗ ಸಂಬಂಧಿಕರ ಮಗ ಅಂಬೇಡ್ಕರ್ ವಲವನ್​ನನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬರುತ್ತಿದ್ದರು.  

ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ➤  ಸ್ಥಳದಲ್ಲಿಯೇ ಮೂವರ ಮೃತ್ಯು.! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಐಸಿಸ್ ಬೆಂಬಲಿಗರಿಗಾಗಿ ಹುಡುಕಾಟ ➤‌ ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಎನ್‌ಐಎ ದಾಳಿ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ,ಫೆ.15.  ಕರ್ನಾಟಕದ ಸೇರಿದಂತೆ ದಕ್ಷಿಣ ಭಾರತದ ಮೂರು ರಾಜ್ಯಗಳ ಅನೇಕ ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತೊಂದು ಬೃಹತ್ ದಾಳಿ ನಡೆಸಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರರ ಶಂಕಿತ ಬೆಂಬಲಿಗರಿಗೆ ಸಂಬಂಧಿಸಿದಂತೆ ಈ ಪತ್ತೆ ಕಾರ್ಯಾಚರಣೆ ನಡೆದಿದೆ. ಕರ್ನಾಟಕದ ಅನೇಕ ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿದೆ ಎಂದು ವರದಿಯಾಗಿದೆ. ತಮಿಳುನಾಡು ಮತ್ತು ಕೇರಳದ 60ಕ್ಕೂ ಅಧಿಕ ಪ್ರದೇಶಗಳಲ್ಲಿ ಕೂಡ ಭಯೋತ್ಪಾದನಾ ನಿಗ್ರಹ ತಂಡ ದಾಳಿ ಮಾಡಿದೆ. ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ

ಐಸಿಸ್ ಬೆಂಬಲಿಗರಿಗಾಗಿ ಹುಡುಕಾಟ ➤‌ ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಎನ್‌ಐಎ ದಾಳಿ Read More »

ರಾಷ್ಟ್ರೀಯ ನ್ಯೂಸ್

ದುಬೈನಲ್ಲಿ 2026ಕ್ಕೆ ಹಾರುವ ಟ್ಯಾಕ್ಸಿ!

(ನ್ಯೂಸ್ ಕಡಬ)newskadaba.com  ದುಬೈ, ಫೆ, 15. ದುಬೈನಲ್ಲಿ 2026ರ ವೇಳೆಗೆ ಹಾರುವ ಟ್ಯಾಕ್ಸಿಗಳು ಮತ್ತೆ ಸಕ್ರಿಯವಾಗಿರಲಿವೆ ಎಂದು ರಾಜರ ಆಡಳಿತದ ಸರ್ಕಾರ ಘೋಷಿಸಿದೆ. ಈ ಬಾರಿ ಕ್ಯಾಲಿಫೋರ್ನಿಯಾದ ಸಾಂಟಾ ಕ್ರೂಜ್​ನ ಜಾಬಿ ಏವಿಯೇಷನ್ ತಯಾರಿಸಿದ ಆರು -ರೋಟರ್ ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಗಳು ಹಾರಾಟ ನಡೆಸಲಿವೆ ಎಂದು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕೌಮ್ ಹೇಳಿದ್ದಾರೆ. ಆ ಬಗ್ಗೆ ಸ್ಪಷ್ಟ ವಿವರಣೆಯೊಂದಿಗೆ ವಿಡಿಯೋವನ್ನು ಸಹ ಬಿಡುಗಡೆ ಮಾಡಲಾಗಿದೆ. ನಗರದ ಪ್ರಮುಖ ಹೆಗ್ಗುರುತು ಸಮೀಪದಲ್ಲಿ ಏರ್

ದುಬೈನಲ್ಲಿ 2026ಕ್ಕೆ ಹಾರುವ ಟ್ಯಾಕ್ಸಿ! Read More »

ರಾಷ್ಟ್ರೀಯ ನ್ಯೂಸ್

ಲಿವ್-ಇನ್ ಸಂಗಾತಿಯ ಹತ್ಯೆ ➤  ಮೃತದೇಹವನ್ನು ಹಾಸಿಗೆಯೊಳಗೆ ತುಂಬಿಸಿಟ್ಟ ಪಾಗಲ್ ಪ್ರೇಮಿ.!

(ನ್ಯೂಸ್ ಕಡಬ)newskadaba.com  ಮಹಾರಾಷ್ಟ್ರ, ಫೆ. 15. ಪ್ರಿಯಕರನೊಬ್ಬ ಲಿವ್-ಇನ್-ಟುಗೆದರ್ ಸಂಬಂಧದಲ್ಲಿದ್ದ ಪ್ರೇಯಸಿಯನ್ನು ಕೊಂದು, ಆಕೆಯ ಮೃತದೇಹವನ್ನು ಹಾಸಿಗೆಯಲ್ಲಿ ತುಂಬಿಸಿಟ್ಟಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸದ್ಯ ಕೊಲೆ ಆರೋಪಿ ಹಾರ್ದಿಕ್ ಶಾ(27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮಹಾರಾಷ್ಟ್ರದ ನಲಸೋಪಾರ ಎಂಬಲ್ಲಿ ನಡೆದಿದೆ. ಪಾಲ್ಘರ್ ಜಿಲ್ಲೆಯ ತುಳಿಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾರ್ದಿಕ್ ಶಾ ನಲಸೋಪಾರಾದ ಸೀತಾ ಸದನ್ ಸೊಸೈಟಿ ಎಂಬಲ್ಲಿ ಕೊಲೆಯಾಗಿರುವ ಮೇಘ ಧನ್ ಸಿಂಗ್(35) ಎಂಬಾಕೆಯೊಂದಿಗೆ ವಾಸವಾಗಿದ್ದ. ನೆರೆಹೊರೆಯ ಮಂದಿಯಲ್ಲಿ ನಾವಿಬ್ಬರು

ಲಿವ್-ಇನ್ ಸಂಗಾತಿಯ ಹತ್ಯೆ ➤  ಮೃತದೇಹವನ್ನು ಹಾಸಿಗೆಯೊಳಗೆ ತುಂಬಿಸಿಟ್ಟ ಪಾಗಲ್ ಪ್ರೇಮಿ.! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top