ರಾಷ್ಟ್ರೀಯ ನ್ಯೂಸ್

ವಿದ್ಯಾರ್ಥಿಯೊಬ್ಬ ಗೆಳತಿಯೊಂದಿಗೆ ನಿರ್ಜನ ಪ್ರದೇಶದಲ್ಲಿ ಪತ್ತೆ ➤ವಿದ್ಯಾರ್ಥಿಗಳಿಬ್ಬರು ಪರಾರಿ

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಫೆ.17. ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ನಿರ್ಜನ ಪ್ರದೇಶದಲ್ಲಿ ತನ್ನ ಗೆಳತಿಯೊಂದಿಗೆ ಕಾರಿನಲ್ಲಿ ಕುಳಿತಿದ್ದ ವೇಳೆ ರೌಂಡ್ಸ್ ನಲ್ಲಿದ್ದ ಪೊಲೀಸರ ತಂಡ ಅಲ್ಲಿಗೆ ಬಂದಿದ್ದು, ಸಿಕ್ಕಿ ಬೀಳುವ ಭಯದಲ್ಲಿ ಆತ ಪೇದೆಯೊಬ್ಬರ ಕಾಲಿನ ಮೇಲೆ ಕಾರು ಹರಿಸಿ ಗೆಳತಿಯೊಂದಿಗೆ ಪರಾರಿಯಾಗಿದ್ದಾನೆ.ಇಂತಹದೊಂದು ಘಟನೆ ಮಧ್ಯಪ್ರದೇಶದ ಇಂದೋರಿನ ತೇಜಾಜಿ ನಗರ ಪ್ರದೇಶದಲ್ಲಿ ಸಂಭವಿಸಿದೆ. ಕೋಚಿಂಗ್ ಕ್ಲಾಸಿಗೆ ತೆರಳಿದ್ದ ಈತ ಬಳಿಕ ತನ್ನ ಗೆಳತಿಗೆ ಕರೆ ಮಾಡಿ ಕರೆಸಿಕೊಂಡಿದ್ದು, ಇಬ್ಬರೂ ಬೆಳಗಿನ ಜಾವ 3:30ರ […]

ವಿದ್ಯಾರ್ಥಿಯೊಬ್ಬ ಗೆಳತಿಯೊಂದಿಗೆ ನಿರ್ಜನ ಪ್ರದೇಶದಲ್ಲಿ ಪತ್ತೆ ➤ವಿದ್ಯಾರ್ಥಿಗಳಿಬ್ಬರು ಪರಾರಿ Read More »

ರಾಷ್ಟ್ರೀಯ ನ್ಯೂಸ್

ಗೂಗಲ್ ಇಂಡಿಯಾದ ಉದ್ಯೋಗಿಗಳಿಗೆ ಬಿಗ್ ಶಾಕ್ !       ➤453 ನೌಕರರು ವಜಾ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.17. ಕಂಪನಿಗಳು ಉದ್ಯೋಗ ಕಡಿತವನ್ನು ಮುಂದುವರಿಸಿವೆ. ಟೆಕ್ ದೈತ್ಯ ಗೂಗಲ್ ಕೂಡ ಮತ್ತಷ್ಟು ನೌಕರರನ್ನು ವಜಾ ಮಾಡ್ತಿದೆ. ಭಾರತದ ವಿವಿಧ ಇಲಾಖೆಗಳಲ್ಲಿ ಸುಮಾರು 450 ಉದ್ಯೋಗಿಗಳನ್ನು ಗೂಗಲ್‌ ವಜಾ ಮಾಡಿದೆ. ಉದ್ಯೋಗಿಗಳಿಗೆ ತಮ್ಮನ್ನು ವಜಾಗೊಳಿಸುವ ಬಗ್ಗೆ ಅಂಚೆ ಮೂಲಕ ತಿಳಿಸಲಾಗಿದೆ.    ಗೂಗಲ್ ಇಂಡಿಯಾದ ಮುಖ್ಯಸ್ಥ ಮತ್ತು ಉಪಾಧ್ಯಕ್ಷ ಸಂಜಯ್ ಗುಪ್ತಾ, ಉದ್ಯೋಗಿಗಳಿಗೆ ಮೇಲ್ ರವಾನಿಸಿದ್ದಾರಂತೆ. ಈ ಬೆಳವಣಿಗೆ ಕುರಿತಂತೆ ಗೂಗಲ್‌ ಇಂಡಿಯಾ ಅಧಿಕೃತವಾಗಿ ಇನ್ನೂ ಪ್ರತಿಕ್ರಿಯಿಸಿಲ್ಲ.

ಗೂಗಲ್ ಇಂಡಿಯಾದ ಉದ್ಯೋಗಿಗಳಿಗೆ ಬಿಗ್ ಶಾಕ್ !       ➤453 ನೌಕರರು ವಜಾ Read More »

ರಾಷ್ಟ್ರೀಯ ನ್ಯೂಸ್

ಯೂಟ್ಯೂಬ್‌‌ನ ನೂತನ ಸಿಇಓ ಆಗಿ ಭಾರತೀಯ ಮೂಲದ ನೀಲ್ ಮೋಹನ್ ನೇಮಕ!

(ನ್ಯೂಸ್ ಕಡಬ)newskadaba.com ವಾಷಿಂಗ್ಟನ್, ಫೆ.17. ಯೂಟ್ಯೂಬ್‌‌ನ ಹೊಸ ಸಿಇಓ ಆಗಿ ಭಾರತೀಯ ಅಮೆರಿಕನ್ ನೀಲ್ ಮೋಹನ್ ಅವರ ನೇಮಕವಾಗಿದ್ದಾರೆ. ಯೂಟ್ಯೂಬ್ ಸಿಇಓ ಮತ್ತು ಮೊದಲ ಗೂಗಲ್ ಉದ್ಯೋಗಿಗಳಲ್ಲಿ ಒಬ್ಬರಾದ ಸುಸಾನ್ ವೊಜ್ಸಿಕಿ ಅವರು 25 ವರ್ಷಗಳ ಹಿಂದೆ ತನ್ನ ಗ್ಯಾರೇಜ್‌ ನಲ್ಲಿ ಪ್ರಾರಂಭವಾದ ಯೂಟ್ಯೂಬ್ ನ ಹುದ್ದೆಯಿಂದ ಕೆಳಗಿಳಿಯುತ್ತಿದ್ದು, ಇದೀಗ ಭಾರತೀಯ ಮೂಲದ ನೀಲ್ ಮೋಹನ್ ನೇಮಕವಾಗಿದ್ದಾರೆ.

ಯೂಟ್ಯೂಬ್‌‌ನ ನೂತನ ಸಿಇಓ ಆಗಿ ಭಾರತೀಯ ಮೂಲದ ನೀಲ್ ಮೋಹನ್ ನೇಮಕ! Read More »

ರಾಷ್ಟ್ರೀಯ ನ್ಯೂಸ್

 ಟ್ಯಾಂಕರ್-ಟ್ರಕ್ ನಡುವೆ ಢಿಕ್ಕಿ ➤ ನಾಲ್ವರು ಮೃತ್ಯು

(ನ್ಯೂಸ್ ಕಡಬ) newskadaba.com ಜೈಪುರ, ಫೆ.17.  ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ಎಲ್ ಪಿಜಿ ಸಿಲಿಂಡರ್ ಗಳನ್ನು ಸಾಗಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಮಾರ್ಬಲ್ ಸಾಗಿಸುತ್ತಿದ್ದ ಟ್ರಕ್ ಗೆ ಢಿಕ್ಕಿ ಹೊಡದ ಪರಿಣಾಮವಾಗಿ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ”ಅಪಘಾತದಲ್ಲಿ ನಾಲ್ವರು ಸಜೀವ ದಹನವಾಗಿದ್ದಾರೆ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ.ಅಕ್ಕ ಪಕ್ಕದ ಅಂಗಡಿಗಳು ಮತ್ತು ನಿವಾಸಗಳು ಸಹ ಬೆಂಕಿಗೆ ಆಹುತಿಯಾಗಿವೆ”ಎಂದು ಅಜ್ಮೀರ್ ಪೊಲೀಸ್ ಸೂಪರಿಂಟೆಂಡೆಂಟ್  ಚುನಾರಾಮ್ ಜಾಟ್ ಹೇಳಿದ್ದಾರೆ ಎಂದು ವರದಿಯಾಗಿದೆ.

 ಟ್ಯಾಂಕರ್-ಟ್ರಕ್ ನಡುವೆ ಢಿಕ್ಕಿ ➤ ನಾಲ್ವರು ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಚೇತನ್ ಶರ್ಮಾ ರಾಜೀನಾಮೆ!

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.17. ಭಾರತೀಯ ಕ್ರಿಕೆಟ್ ತಂಡದ ಒಳ ಸಂಗತಿಗಳನ್ನು ಖಾಸಗಿ ಟಿವಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಾಯಿಬಿಟ್ಟಿದ್ದ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ. ಚೇತನ್ ಶರ್ಮಾ ಅವರು ಭಾರತೀಯ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಜಯ್ ಶಾ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.

ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಚೇತನ್ ಶರ್ಮಾ ರಾಜೀನಾಮೆ! Read More »

ರಾಷ್ಟ್ರೀಯ ನ್ಯೂಸ್

ಇಕ್ಕುಳದಿಂದ ಏಳು ವರ್ಷದ ಮಗಳಿಗೆ ಸುಟ್ಟ ಪಾಪಿ ಮಲತಾಯಿ!!

(ನ್ಯೂಸ್ ಕಡಬ) newskadaba.com ದೆಹಲಿ, ಫೆ.17.ಮಲತಾಯಿಯೇ ತನ್ನ ಏಳು ವರ್ಷದ ಮಗಳನ್ನು ಇಕ್ಕಳಗಳಿಂದ ಸುಟ್ಟ ದಾರುಣ ಘಟನೆ ದೆಹಲಿಯ ಆರ್.ಕೆ.ಪುರಂನಲ್ಲಿ ಸಂಭವಿಸಿದೆ. ಪ್ರಕರಣ ಕುರಿತು ಮಲತಾಯಿ ಹಾಗೂ ಆಕೆಯ ಮಗನ್ನು ಪೋಲಿಸರು ಬಂಧಿಸಿದ್ದಾರೆ. ಬಾಲಕಿಯ ಜೈವಿಕ ಪೋಷಕರು ಮಲತಾಯಿಗೆ ಸಂಬಂಧಿಗಳಾಗಿದ್ದಾರೆ ಎಂದು  ಪೋಲಿಸರು ಹೇಳಿದ್ದಾರೆ ಎಂದು ವರದಿಯಾಗಿದೆ.  

ಇಕ್ಕುಳದಿಂದ ಏಳು ವರ್ಷದ ಮಗಳಿಗೆ ಸುಟ್ಟ ಪಾಪಿ ಮಲತಾಯಿ!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನ್ಯಾಯಕೊಡಿ ಎಂದು ಹಲ್ಲೆಗೊಳಗಾದ ಪತಿಯನ್ನು ಎಸ್ಪಿ ಕಚೇರಿಗೆ ಹೆಗಲ ಮೇಲೆ ಹೊತ್ತುಕೊಂಡು ಬಂದ ಪತ್ನಿ

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಫೆ.17.  ಹಲ್ಲೆಗೊಳಗಾದ ವ್ಯಕ್ತಿಯೋರ್ವನಿಗೆ ನ್ಯಾಯ ಕೋರಿ ಆತನ ಪತ್ನಿ ಆತನನ್ನು ಹೆಗಲ ಮೇಲೆ ಹೊತ್ತು ಎಸ್ ಪಿ ಕಚೇರಿಗೆ ಕರೆದುಕೊಂಡು ಬಂದ ಘಟನೆ ಮಧ್ಯಪ್ರದೇಶದಲ್ಲಿ ಸಂಭವಿಸಿದೆ.   ಶಾದೂಲ್ ಜಿಲ್ಲೆಯಲ್ಲಿ ಸೋಹಾಗ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹರಿ ಗ್ರಾಮದ ಗೆಂಡಲಾಲ್ ಯಾದವ್ ಎಂಬ ಕೂಲಿ ಕಾರ್ಮಿಕ ಕೆಲಸ ಮುಗಿಸಿಕೊಂಡು ಬರುವಾಗ ಮೂವರು ದುಷ್ಕರ್ಮಿಗಳು ಆತನಿಗೆ ಹಲ್ಲೆ ನಡೆಸಿ ದರೋಡೆ ಮಾಡಿದ್ದರು. ಇದರಿಂದ ಗೆಂಡಲಾಲ್ ಪತ್ನಿ ತನ್ನ ಗಾಯಾಳು ಪತಿಯನ್ನು ಹೆಗಲ ಮೇಲೆ

ನ್ಯಾಯಕೊಡಿ ಎಂದು ಹಲ್ಲೆಗೊಳಗಾದ ಪತಿಯನ್ನು ಎಸ್ಪಿ ಕಚೇರಿಗೆ ಹೆಗಲ ಮೇಲೆ ಹೊತ್ತುಕೊಂಡು ಬಂದ ಪತ್ನಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಾಹನವೊಂದರಲ್ಲಿ ಸುಟ್ಟು ಸ್ಥಿತಿಯಲ್ಲಿ ಎರಡು ಮೃತದೇಹಗಳು ಪತ್ತೆ

(ನ್ಯೂಸ್ ಕಡಬ) newskadaba.com ಹರಿಯಾಣ, ಫೆ.17.  ವಾಹನವೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಎರಡು ಶವಗಳು ಪತ್ತೆಯಾಗಿದ್ದು. ಮೃತರನ್ನು ನಾಸಿರ್ (25) ಮತ್ತು ಜುನೈದ್ ಅಲಿಯಾಸ್ ಜುನಾ (35) ಎಂದು ಗುರುತಿಸಲಾಗಿದೆ. ಇಬ್ಬರನ್ನು ಅಪಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ಕು ಚಕ್ರದ ವಾಹನದಲ್ಲಿ ಎರಡು ಸುಟ್ಟ ಮೃತದೇಹಗಳು ಪತ್ತೆಯಾಗಿವೆ. ಅಪಹರಣಕಾರರು ಮೊದಲು ಇಬ್ಬರನ್ನೂ ಥಳಿಸಿ, ನಂತರ ಅಪಹರಿಸಿ, ವಾಹನವನ್ನು ತೆಗೆದುಕೊಂಡು ಹೋಗಿ ಸುಟ್ಟುಹಾಕಲಾಗಿದೆ ಎಂದು ವರದಿ ತಿಳಿಸಿದೆ.      

ವಾಹನವೊಂದರಲ್ಲಿ ಸುಟ್ಟು ಸ್ಥಿತಿಯಲ್ಲಿ ಎರಡು ಮೃತದೇಹಗಳು ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಡಿಎಂಕೆಗೆ ಸೇನೆಯ ಮೇಲೆ ಎಂದಿಗೂ ಗೌರವವಿಲ್ಲ   ➤ಅಣ್ಣಾಮಲೈ ಕೆಂಡಾಮಂಡಲ

(ನ್ಯೂಸ್ ಕಡಬ) newskadaba.com ಚೆನ್ನೈ, ಫೆ.16. ಡಿಎಂಕೆ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಿದ್ದು, 1965-67ರಲ್ಲಿ ಪಕ್ಷ ರಚನೆಯಾಗಿದ್ದೇ ಹಾಗೆ. ಅವರಿಗೆ ಸೇನೆಯ ಮೇಲೆ ಎಂದಿಗೂ ಗೌರವ ಇಲ್ಲ ಎಂದು ಕೃಷ್ಣಗಿರಿಯಲ್ಲಿ ಸೇನಾ ಸಿಬಂದಿಯ ಹತ್ಯೆಯ ಕುರಿತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮವಸ್ತ್ರವನ್ನು ಧರಿಸಿದ ಯಾವುದೇ ವ್ಯಕ್ತಿಗೆ ಗೌರವ ಸಿಗುವುದಿಲ್ಲ ಎಂಬುದು ಅವರ ಸಿದ್ದಾಂತ ಮತ್ತು ಸಂಸ್ಕೃತಿಯಲ್ಲಿದೆ. ಡಿಎಂಕೆ ಲಜ್ಜೆಗೆಟ್ಟ, ದುಷ್ಟ ಪಕ್ಷ ಎಂದು ಕಿಡಿ ಕಾರಿದರು ಎಂದು ವರದಿಯಾಗಿದೆ.

ಡಿಎಂಕೆಗೆ ಸೇನೆಯ ಮೇಲೆ ಎಂದಿಗೂ ಗೌರವವಿಲ್ಲ   ➤ಅಣ್ಣಾಮಲೈ ಕೆಂಡಾಮಂಡಲ Read More »

ರಾಷ್ಟ್ರೀಯ ನ್ಯೂಸ್

11 ಲಕ್ಷ ರೂ. ಗಾಂಜಾ ಜಪ್ತಿ ➤ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ಭಾಲ್ಕಿ, ಫೆ.16.  ಭಾಲ್ಕಿ ಉಪವಿಭಾಗದ ಭಾಲ್ಕಿ ಗ್ರಾಮೀಣ ಠಾಣೆ ಪೊಲೀಸರ ಕಾರ್ಯಾರಣೆಯಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರೂ.11,2000/- ಗಾಂಜಾ ಜಪ್ತಿ ಮಾಡಿ, ಗಾಂಜಾ ಸಾಗಾಟ ಪ್ರಕರಣದಲ್ಲಿ ಆರೋಪಿತರನ್ನು ಬಂಧಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಚನ್ನಬಸವಣ್ಣ ಲಂಗೋಟಿ ಮೆಚ್ಚುಗೆ ವ್ಯಕ್ತ ಪಡಿಸಿದರು ಎಂದು ವರದಿಯಾಗಿದೆ. ಗ್ರಾಮೀಣ ಪೊಲೀಸ್ ಠಾಣೆಗೆ ಆಗಮಿಸಿದ ಎಸ್.ಪಿ ಚನ್ನಬಸವಣ್ಣ ಲಂಗೋಟಿಯವರು ಪತ್ರಕರ್ತರೊಂದಿಗೆ ಮಾತನಾಡಿ, ಭಾಲ್ಕಿ ಗ್ರಾಮೀಣ ಠಾಣೆಯ ವ್ಯಾಪ್ತಿಯ ಅಂಬೇಸಾಂಗವಿ ಕ್ರಾಸ್ ಹತ್ತಿರ ರಾಷ್ಟೀಯ ಹೆದ್ದಾರಿ 50 ರಲ್ಲಿ ವಿಶಾಖಪಟ್ಟಣ

11 ಲಕ್ಷ ರೂ. ಗಾಂಜಾ ಜಪ್ತಿ ➤ಆರೋಪಿ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top