ರಾಷ್ಟ್ರೀಯ ನ್ಯೂಸ್

ನೀತಿ ಆಯೋಗದ ನೂತನ ಸಿಇಒ ಆಗಿ ಬಿವಿಆರ್ ಸುಬ್ರಹ್ಮಣ್ಯಂ ನೇಮಕ

(ನ್ಯೂಸ್ ಕಡಬ)newskadaba.com  ನವದೆಹಲಿ, ಫೆ.21. ಎರಡು ವರ್ಷಗಳ ಅವಧಿಗೆ ನೀತಿ ಆಯೋಗದ ಸಿಇಒ ಆಗಿ ನೇಮಕಗೊಂಡಿದ್ದ ಪರಮೇಶ್ವರನ್ ಅಯ್ಯರ್ ಅವರು ಏಳು ತಿಂಗಳ ನಂತರ ಹುದ್ದೆಯಿಂದ ಕೆಳಗಿಳಿದಿದ್ದು, ಇದೀಗ ಸರ್ಕಾರವು ಬಿವಿಆರ್ ಸುಬ್ರಹ್ಮಣ್ಯಂ ಅವರನ್ನು ಮುಂದಿನ ಸಿಇಒ ಆಗಿ ನೇಮಿಸಿದೆ. 1987ರ ಬ್ಯಾಚ್‌ನ ಛತ್ತೀಸ್‌ಗಢ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದು, ವಾಣಿಜ್ಯ ಕಾರ್ಯದರ್ಶಿಯಾಗಿ ನಿವೃತ್ತರಾದ ಸುಬ್ರಹ್ಮಣ್ಯಂ ಅವರು ಈ ಹಿಂದೆ ಪ್ರಧಾನ ಮಂತ್ರಿ ಕಚೇರಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

ನೀತಿ ಆಯೋಗದ ನೂತನ ಸಿಇಒ ಆಗಿ ಬಿವಿಆರ್ ಸುಬ್ರಹ್ಮಣ್ಯಂ ನೇಮಕ Read More »

ರಾಷ್ಟ್ರೀಯ ನ್ಯೂಸ್

ವಿಮಾನದಲ್ಲಿ ಬಾಂಬ್ ಇದೆ ಎಂದು ಬೆದರಿಕೆ ➤ ವ್ಯಕ್ತಿಯೋರ್ವ ಅರೆಸ್ಟ್

(ನ್ಯೂಸ್ ಕಡಬ)newskadaba.com ಹೈದರಾಬಾದ್, ಫೆ.21. ಹೈದರಾಬಾದ್‌ನಿಂದ ಚೆನ್ನೈಗೆ ತೆರಳುತ್ತಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂದು ಸುಳ್ಳು ಕರೆ ಮಾಡಿದ್ದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಹೈದರಾಬಾದ್‌ನಿಂದ ಚೆನ್ನೈಗೆ ವಿಮಾನ ಹೊರಟಿದ್ದು, ಈ ವೇಳೆ ವಿಮಾನದಲ್ಲಿ ಬಾಂಬ್‌ ಇರುವ ಬಗ್ಗೆ ಕರೆ ಬಂದ ಹಿನ್ನೆಲೆಯಲ್ಲಿ, ವಿಮಾನವನ್ನು ಲಕ್ನೋದ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು.  

ವಿಮಾನದಲ್ಲಿ ಬಾಂಬ್ ಇದೆ ಎಂದು ಬೆದರಿಕೆ ➤ ವ್ಯಕ್ತಿಯೋರ್ವ ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

➤ ಶೀಘ್ರದಲ್ಲಿಯೇ ತಮಿಳುನಾಡು ಕರ್ನಾಟಕ ನಡುವೆ ಮೆಟ್ರೊ ಸಂಚಾರ

(ನ್ಯೂಸ್ ಕಡಬ) newskadaba.com.ಬೆಂಗಳೂರು, ಫೆ.21.  ಹೊಸೂರು ಮತ್ತು ಬೆಂಗಳೂರು ನಡುವೆ ಮೆಟ್ರೊ ಸಂಪರ್ಕ ಕಲ್ಪಿಸುವಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಚೆನ್ನೈ ಮೆಟ್ರೊ ರೈಲು ನಿಗಮವು ಬೊಮ್ಮಸಂದ್ರದಿಂದ ರೈಲು ಸಂಪರ್ಕ ನಿರ್ಮಾಣಕ್ಕೆ ಕಾರ್ಯಸಾಧ್ಯತೆ ಅಧ್ಯಯನ ನಡೆಸಲು ಅನುಮತಿ ಕೋರಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದೆ. ಸಚಿವಾಲಯ ಪ್ರಸ್ತಾವನೆಯನ್ನು ಅನುಮೋದಿಸಿದ ನಂತರ ಸಿಎಂಆರ್‌ಎಲ್‌, ಹೊಸೂರಿನಿಂದ ಕರ್ನಾಟಕದ ಬೊಮ್ಮಸಂದ್ರದವರೆಗಿನ 20.5 ಕಿ.ಮೀ. ಉದ್ದದ ಮೆಟ್ರೊ ರೈಲು ಸಂಪರ್ಕದ ನಿರ್ಮಾಣದ ಅಧ್ಯಯನ ನಡೆಸಲು ಟೆಂಡರ್‌ ಕರೆಯಲಿದೆ. ತಮಿಳುನಾಡು

➤ ಶೀಘ್ರದಲ್ಲಿಯೇ ತಮಿಳುನಾಡು ಕರ್ನಾಟಕ ನಡುವೆ ಮೆಟ್ರೊ ಸಂಚಾರ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಗಡಿಯಲ್ಲಿ ಕಳ್ಳಸಾಗಣೆ ➤ ಡ್ರಗ್ಸ್, ಶಸ್ತ್ರಾಸ್ತ್ರ ವಶಕ್ಕೆ ಪಡೆದ BFF

(ನ್ಯೂಸ್ ಕಡಬ)newskadaba.com  ನವದೆಹಲಿ, ಫೆ.18. ಪಾಕಿಸ್ತಾನದಿಂದ ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಿದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮಾದಕ ದ್ರವ್ಯಗಳು, ಚೀನಾ ಮತ್ತು ಟರ್ಕಿ ನಿರ್ಮಿತ ಪಿಸ್ತೂಲ್‌ಗಳು ಮತ್ತು 242 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ ಎನ್ನಲಾಗಿದೆ. ಗುರುದಾಸ್‌ಪುರ ಸೆಕ್ಟರ್‌ನ ಡೇರಾ ಬಾಬಾ ನಾನಕ್ (ಡಿಬಿಎನ್) ಮತ್ತು ಶಿಕಾರ್ ಗಡಿ ಪೋಸ್ಟ್‌ನ ಬಳಿ ಗಡಿ ಬೇಲಿಯ ಎರಡೂ ಬದಿಗಳಲ್ಲಿ ಶಸ್ತ್ರಸಜ್ಜಿತ ಕಳ್ಳಸಾಗಾಣಿಕೆದಾರರ ಚಲನವಲನಗಳ ಮೇಲೆ ಭದ್ರತಾ ಪಡೆಗಳು ನಿಗಾವಹಿಸಲಾಗಿತ್ತು.

ಗಡಿಯಲ್ಲಿ ಕಳ್ಳಸಾಗಣೆ ➤ ಡ್ರಗ್ಸ್, ಶಸ್ತ್ರಾಸ್ತ್ರ ವಶಕ್ಕೆ ಪಡೆದ BFF Read More »

ರಾಷ್ಟ್ರೀಯ ನ್ಯೂಸ್

ಶಾಲೆಯಲ್ಲಿ ರಾಗಿಂಗ್     ➤ ಓರ್ವ ವಿದ್ಯಾರ್ಥಿಗೆ ಗಾಯ

(ನ್ಯೂಸ್ ಕಡಬ)newskadaba.com  ಕಾಸರಗೋಡು, ಫೆ.18. ಪೈವಳಿಕೆ ಸರಕಾರಿ ಶಾಲೆಯಲ್ಲಿ ರಾಗಿಂಗ್ ಪ್ರಕರಣವೊಂದು ನಡೆದಿದ್ದು, ಪ್ಲಸ್ ಟು ವಿದ್ಯಾರ್ಥಿ ಮೇಲೆ 15 ರಷ್ಟು ವಿದ್ಯಾರ್ಥಿಗಳು ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ವಿದ್ಯಾರ್ಥಿಗೆ ಕಲ್ಲಿನಿಂದ ತಲೆ ಮತ್ತು ಹಣೆಗೆ ಹಲ್ಲೆ ಜಜ್ಜಲಾಗಿದೆ. ಇದಲ್ಲದೆ ಬೆಳ್ಳುಳ್ಳಿಯ ಸ್ಪ್ರೇಯನ್ನು ಕಣ್ಣಿಗೆ ಸ್ಪ್ರೇ ಮಾಡಲಾಗಿದೆ. ಬಳಿಕ ಥಳಿಸಲಾಗಿದೆ. ಪೈವಳಿಕೆ ಕಾಯರ್ ಕಟ್ಟೆ ಜಿ. ಎಚ್ .ಎಸ್ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಅದ್ನಾನ್ (17) ರ್‍ಯಾಗಿಂಗ್ ಗೆ ಒಳಗಾದವನು.  

ಶಾಲೆಯಲ್ಲಿ ರಾಗಿಂಗ್     ➤ ಓರ್ವ ವಿದ್ಯಾರ್ಥಿಗೆ ಗಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

➤ ದೆಹಲಿಯಲ್ಲಿ ವಾಸಿಸುವರಿಗೆ ಇನ್ನೂ ಮುಂದೆ ಕೇವಲ 5 ದಿನಗಳಲ್ಲಿ ಪಾಸ್‌ಪೋರ್ಟ್ ಪರಿಶೀಲನೆ ಪೂರ್ಣ

(ನ್ಯೂಸ್ ಕಡಬ) newskadaba.com. ಮುಂಬೈ. ಫೆ.18.  ಪಾಸ್‌ಪೋರ್ಟ್ ಮಾಡಿಸಿಕೊಳ್ಳಲು ಬಯಸುವವರಿಗೆ ಹೊಸ ಸೇವೆಯನ್ನು ಆರಂಭಿಸಲಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಪಾಸ್‌ಪೋರ್ಟ್ ಸೇವಾ ಎಂಬ ಹೊಸ ಸೌಲಭ್ಯಕ್ಕೆ ಚಾಲನೆ ನೀಡಿದ್ದಾರೆ. ಇದರ ಅಡಿಯಲ್ಲಿ ಈಗ ಪಾಸ್‌ಪೋರ್ಟ್ ಪರಿಶೀಲನೆ ಕೇವಲ 5 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಹಿಂದಿನ ಜನರು ಪರಿಶೀಲನೆಗಾಗಿ ಬಹಳ ಸಮಯ ಕಾಯಬೇಕಾಗಿತ್ತು. ಆದರೆ ಈಗ ಈ ಸೌಲಭ್ಯವು ನಿಮ್ಮ ಪಾಸ್‌ಪೋರ್ಟ್ ಪರಿಶೀಲನೆಯನ್ನು ಒಂದು ವಾರದೊಳಗೆ ಪೂರ್ಣಗೊಳಿಸುತ್ತದೆ. ಈ ಸೌಲಭ್ಯವನ್ನು ಆನ್‌ಲೈನ್‌ನಲ್ಲಿ ಮಾಡಲಾಗುವುದು. ಈ ಸೌಲಭ್ಯ ದೆಹಲಿಯಲ್ಲಿ ವಾಸಿಸುವ

➤ ದೆಹಲಿಯಲ್ಲಿ ವಾಸಿಸುವರಿಗೆ ಇನ್ನೂ ಮುಂದೆ ಕೇವಲ 5 ದಿನಗಳಲ್ಲಿ ಪಾಸ್‌ಪೋರ್ಟ್ ಪರಿಶೀಲನೆ ಪೂರ್ಣ Read More »

ರಾಷ್ಟ್ರೀಯ ನ್ಯೂಸ್

ರೋಹಿತ್ ಶರ್ಮಾ ಅತ್ಯಂತ ಶ್ರೇಷ್ಠ ನಾಯಕ… ➤ ವೀರೇಂದ್ರ ಸೆಹ್ವಾಗ್!

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ.18.   ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಶ್ರೇಷ್ಠ ನಾಯಕ ಯಾರು ಎಂಬ ಚರ್ಚೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇದೀಗ ಡೆಲ್ಲಿ ಡೇರ್ ಡೆವಿಲ್ಸ್ ಮಾಜಿ ನಾಯಕ ವೀರೇಂದ್ರ ಸೆಹ್ವಾಗ್ ಕೂಡ ಈ ವಿಷಯ ಪ್ರಸ್ತಾಪಿಸಿದ್ದಾರೆ. 4 ಬಾರಿ ಐಪಿಎಲ್ ಚಾಂಪಿಯನ್ಸ್‌ ನಾಯಕ ಮಹೇಂದ್ರ ಸಿಂಗ್ ಧೋನಿಗಿಂತ ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ ಅತ್ಯಂತ ಶ್ರೇಷ್ಠ ನಾಯಕ ಎಂದು ಗುಣಗಾನ ಮಾಡಿದ್ದಾರೆ. “ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗುವುದಕ್ಕೂ

ರೋಹಿತ್ ಶರ್ಮಾ ಅತ್ಯಂತ ಶ್ರೇಷ್ಠ ನಾಯಕ… ➤ ವೀರೇಂದ್ರ ಸೆಹ್ವಾಗ್! Read More »

ರಾಷ್ಟ್ರೀಯ ನ್ಯೂಸ್

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಯುವಕ ➤ಮುಂಬೈ ಪೊಲೀಸರಿಂದ ರಕ್ಷಣೆ!

(ನ್ಯೂಸ್ ಕಡಬ) newskadaba.com. ಮುಂಬೈ. ಫೆ.18.  ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಮುಂಬೈ ಪೊಲೀಸರು 24 ವರ್ಷದ ಯುವಕನನ್ನು ಪತ್ತೆಹಚ್ಚಿದ್ದಾರೆ ಮತ್ತು ಆತನನ್ನು ಕೌನ್ಸೆಲಿಂಗ್‌ಗಾಗಿ ಕಳುಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಸಾಲದ ಸುಳಿಗೆ ಸಿಲುಕಿರುವ ವ್ಯಕ್ತಿ, ನಗರದ ಚೆಂಬೂರು ಸಮೀಪದ ಚುನಾಭಟ್ಟಿ ನಿವಾಸಿಯಾಗಿದ್ದು, ರಾಯಗಡ ಜಿಲ್ಲೆಯ ಕರ್ಜತ್‌ನಲ್ಲಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ವ್ಯಕ್ತಿ ರೈಲಿನಲ್ಲಿ ಕಡಲೆಕಾಯಿ ಬೀಜ ಮತ್ತು ಬೆಲ್ಲದಿಂದ ತಯಾರಿಸಿದ ತಿನಿಸು ಸಿಹಿತಿಂಡಿಯನ್ನು ಮಾರಾಟ ಮಾಡುತ್ತಿದ್ದನು. ಆದರೆ, ನಷ್ಟದಿಂದಾಗಿ

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಯುವಕ ➤ಮುಂಬೈ ಪೊಲೀಸರಿಂದ ರಕ್ಷಣೆ! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹೃದಯಾಘಾತದಿಂದ ನಟ ಶಾನವಾಜ್ ಪ್ರಧಾನ್ ನಿಧನ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ.18 :  ಹೃದಯಾಘಾತದಿಂದ ನಟ ಶಾನವಾಜ್ ಪ್ರಧಾನ್ ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ತೀವ್ರ ಎದೆನೋವಿನಿಂದ ಬಳಲಿ ಕುಸಿದು ಬಿದ್ದರು. ತಕ್ಷಣ ಅವರನ್ನು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಕಳುಹಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.  

ಹೃದಯಾಘಾತದಿಂದ ನಟ ಶಾನವಾಜ್ ಪ್ರಧಾನ್ ನಿಧನ Read More »

ರಾಷ್ಟ್ರೀಯ ನ್ಯೂಸ್

ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವಿಟರ್‌ನಲ್ಲಿ ಪೋಸ್ಟ್ ➤ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಮುಂಬೈ, ಫೆ.18 : ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಮುಂಬೈ ಪೊಲೀಸರು 24 ವರ್ಷದ ಯುವಕನನ್ನು ಪತ್ತೆಹಚ್ಚಿದ್ದಾರೆ ಮತ್ತು ಆತನನ್ನು ಕೌನ್ಸೆಲಿಂಗ್‌ಗಾಗಿ ಕಳುಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಸಾಲದ ಸುಳಿಗೆ ಸಿಲುಕಿರುವ ವ್ಯಕ್ತಿ, ನಗರದ ಚೆಂಬೂರು ಸಮೀಪದ ಚುನಾಭಟ್ಟಿ ನಿವಾಸಿಯಾಗಿದ್ದು, ರಾಯಗಡ ಜಿಲ್ಲೆಯ ಕರ್ಜತ್‌ನಲ್ಲಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.    

ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವಿಟರ್‌ನಲ್ಲಿ ಪೋಸ್ಟ್ ➤ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು Read More »

ರಾಷ್ಟ್ರೀಯ ನ್ಯೂಸ್
Scroll to Top