ರಾಷ್ಟ್ರೀಯ ನ್ಯೂಸ್

ವಧುವಿಗೆ ಪಿಯುಸಿಯಲ್ಲಿ ಕಡಿಮೆ ಅಂಕ ➤ಮದುವೆ ಮುರಿದುಕೊಂಡ ವರ

(ನ್ಯೂಸ್ ಕಡಬ) newskadaba.com. ಉತ್ತರ ಪ್ರದೇಶ.  ಮಾ 14.  ವಧು 12ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಾಳೆ ಎಂಬ ಕಾರಣಕ್ಕೆ ವರನೊಬ್ಬ ವಧುವನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಉತ್ತರ ಪ್ರದೇಶದ ಕನೌಜ್ ನಲ್ಲಿ ಒಂದು ವಿಚಿತ್ರ ಘಟನೆಯೊಂದು ನಡೆದಿದೆ. ವಧು 12ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಾಳೆ ಎಂಬ ಕಾರಣಕ್ಕೆ ವರನೊಬ್ಬ ವಧುವನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಪೊಲೀಸರು ಎರಡು ಕುಟುಂಬಗಳಿಗೆ ಕೌನ್ಸಿಲಿಂಗ್ ಮಾಡುವ ಮೂಲಕ ಪ್ರಕರಣ ಬಗ್ಗೆ ಕಾರಣವನ್ನು ಪತ್ತೆ ಮಾಡಿದ್ದಾರೆ.

ವಧುವಿಗೆ ಪಿಯುಸಿಯಲ್ಲಿ ಕಡಿಮೆ ಅಂಕ ➤ಮದುವೆ ಮುರಿದುಕೊಂಡ ವರ Read More »

ರಾಷ್ಟ್ರೀಯ ನ್ಯೂಸ್

ಕೈದಿಗಳೊಂದಿಗೆ ಲೈಂಗಿಕ ಸಂಬಂಧ ➤ ಒಂದೇ ಜೈಲಿನ 18 ಮಹಿಳಾ ಅಧಿಕಾರಿಗಳು ವಜಾ

(ನ್ಯೂಸ್ ಕಡಬ)newskadaba.com ಬ್ರಿಟನ್, ಮಾ.14. ಕೈದಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಹದಿನೆಂಟು ಮಹಿಳಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಜೈಲಿನೊಳಗೆ ನಡೆದಿರುವ ಈ ಅನುಚಿತ ಸಂಬಂಧಗಳನ್ನು ಡೈಲಿ ಮಿರರ್ ಬಹಿರಂಗ ಪಡಿಸಿದೆ. ಇದು ಬ್ರಿಟನ್ ದೇಶದ ವ್ರೆಕ್ಸ್ಹ್ಯಾಮ್ನ ಎಚ್ಎಂಪಿ ಬರ್ವಿನ್ ಜೈಲಿನಲ್ಲಿ ನಡೆದಿದೆ. ಖಾಸಗಿಯಾಗಿ ನಡೆಸುವ ಜೈಲಿನಲ್ಲಿ ಆರು ವರ್ಷಗಳ ಅವಧಿಯಲ್ಲಿ ನಡೆದ ಲೈಂಗಿಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಮೂವರು ಮಹಿಳಾ ಅಧಿಕಾರಿಗಳನ್ನು ನ್ಯಾಯಾಲಯವು ವಿಚಾರಣೆಗೆ ಒಳಪಡಿಸಿತ್ತು

ಕೈದಿಗಳೊಂದಿಗೆ ಲೈಂಗಿಕ ಸಂಬಂಧ ➤ ಒಂದೇ ಜೈಲಿನ 18 ಮಹಿಳಾ ಅಧಿಕಾರಿಗಳು ವಜಾ Read More »

ರಾಷ್ಟ್ರೀಯ ನ್ಯೂಸ್

ಮದುವೆಯಾಗುವುದಾಗಿ ನಂಬಿಸಿ ಮೋಸ ➤ ಮೈಮೇಲೆ ಬಿಸಿ ಎಣ್ಣೆ ಎರಚಿದ ಪ್ರೇಯಸಿ- ಯುವಕ ಗಂಭೀರ

(ನ್ಯೂಸ್ ಕಡಬ) newskadaba.com ಕೊಯಮತ್ತೂರು, ಮಾ. 14. ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಪ್ರಿಯಕರನ ಮೈ ಮೇಲೆ ಪ್ರೇಯಸಿಯು ಕುದಿಯುವ ಎಣ್ಣೆ ಎರಚಿದ ಪರಿಣಾಮ ಯುವಕ ಗಂಭೀರ ಗಾಯಗೊಂಡ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಗಾಯಗೊಂಡ ಯುವಕನನ್ನು ಕಾರ್ತಿ (27) ಎಂದು ಗುರುತಿಸಲಾಗಿದೆ. ಮೀನಾ ದೇವಿ ಎಂಬಾಕೆ ಕೃತ್ಯ ಎಸಗಿದಾಕೆ. ಕಾರ್ತಿ ಹಾಗೂ ಮೀನಾ ಸಂಬಂಧಿಗಳಾಗಿದ್ದು, ಹಲವು ಸಮಯದಿಂದ ಪ್ರೀತಿಸುತ್ತಿದ್ದರು. ಅಲ್ಲದೇ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಆತ, ಕೆಲ ದಿನಗಳ ಹಿಂದೆ ಬೇರೆ ಯುವತಿಯೊಂದಿಗೆ ವಿವಾಹ

ಮದುವೆಯಾಗುವುದಾಗಿ ನಂಬಿಸಿ ಮೋಸ ➤ ಮೈಮೇಲೆ ಬಿಸಿ ಎಣ್ಣೆ ಎರಚಿದ ಪ್ರೇಯಸಿ- ಯುವಕ ಗಂಭೀರ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪ್ಲಾಸ್ಟಿಕ್ ನೀರಿನ ಬಾಟಲಿಗಳಲ್ಲಿ 40 ಸಾವಿರಕ್ಕೂ ಹೆಚ್ಚು ಮಾರಣಾಂತಿಕ ಬ್ಯಾಕ್ಟೀರಿಯಾಗಳು ➤ ಅಧ್ಯಯನ ವರದಿ

(ನ್ಯೂಸ್ ಕಡಬ) newskadaba.com ನವದೆಹಲಿ. ಮಾ. 14.  ಇಂದಿನ ದಿನಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಬಳಸುತ್ತೇವೆ. ಅದರಲ್ಲೇ ತಿಂಗಳುಗಳ ಕಾಲ ನೀರನ್ನು ಕುಡಿಯುತ್ತೇವೆ. ಕೆಲವೊಮ್ಮೆ ಅದನ್ನು ಸ್ವಚ್ಛಗೊಳಿಸುವುದೇ ಇಲ್ಲ, ಹಾಗೆಯೇ ಮೇಲೆ ಮೇಲೆ ನೀರಿನಿಂದ ತೊಳೆದು ಬಿಡುತ್ತೇವೆ. ಅಧ್ಯಯನವೊಂದರಲ್ಲಿ ಈ ಬಗ್ಗೆ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದ್ದು, ವರದಿಯ ಪ್ರಕಾರ ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಯಲ್ಲಿ ಲಕ್ಷಾಂತರ ಮಾರಕ ಬ್ಯಾಕ್ಟೀರಿಯಾಗಳು ಇರುತ್ತವೆ. ಅಮೆರಿಕದ ವಾಟರ್ ಫಿಲ್ಟರ್ ಗುರು ಎಂಬ ಸಂಸ್ಥೆ ಈ ವರದಿಯನ್ನು ಬಿಡುಗಡೆ ಮಾಡಿದೆ.

ಪ್ಲಾಸ್ಟಿಕ್ ನೀರಿನ ಬಾಟಲಿಗಳಲ್ಲಿ 40 ಸಾವಿರಕ್ಕೂ ಹೆಚ್ಚು ಮಾರಣಾಂತಿಕ ಬ್ಯಾಕ್ಟೀರಿಯಾಗಳು ➤ ಅಧ್ಯಯನ ವರದಿ Read More »

ರಾಷ್ಟ್ರೀಯ ನ್ಯೂಸ್

ನಾಲ್ವರು ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

(ನ್ಯೂಸ್ ಕಡಬ) newskadaba.com ಶ್ರೀಲಂಕಾ, ಮಾ. 14. ತಮಿಳುನಾಡಿನ ನಾಲ್ವರು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ ಘಟನೆ ನಡೆದಿದೆ. ಬಂಧಿತರನ್ನು ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಕೊಟ್ಟೈಪಟ್ಟಣಂ ಕರಾವಳಿ ಗ್ರಾಮದ ಮೀನುಗಾರರಾದ ಎಲ್. ಅರೋಕಿಯ ರಾಜ್ (54), ಎ. ಅಶೋಕ್ (28), ಎ. ಕರುಪ್ಪು (22) ಮತ್ತು ಎಸ್.ಶಕ್ತಿ (21) ಎಂದು ಗುರುತಿಸಲಾಗಿದೆ. ಬಂಧಿತರನ್ನು ಪರುಥಿತುರೈನಲ್ಲಿರುವ ಶ್ರೀಲಂಕಾ ನೌಕಾ ನೆಲೆಗೆ ಹೆಚ್ಚಿನ ವಿಚಾರಣೆಗಾಗಿ ಕೊಂಡೊಯ್ಯಲಾಗಿದೆ.

ನಾಲ್ವರು ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ Read More »

ರಾಷ್ಟ್ರೀಯ ನ್ಯೂಸ್

ಕೊಳವೆ ಬಾವಿಗೆ ಬಿದ್ದು 5 ವರ್ಷದ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಮಹಾರಾಷ್ಟ್ರ, ಮಾ. 14. ತೆರೆದ ಕೊಳವೆ ಬಾವಿಗೆ ಬಿದ್ದಿದ್ದ 5 ವರ್ಷದ ಬಾಲಕ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿ ನಡೆದಿದೆ. ಈತ ಜಮೀನೊಂದರಲ್ಲಿ ತೆರೆದಿಟ್ಟ ಕೊಳವೆ ಬಾವಿಗೆ ಬಿದ್ದಿದ್ದು, ಈ ವಿಚಾರ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆಯೇ ಎನ್‌ ಡಿಆರ್‌ ಎಫ್‌ ರಕ್ಷಣಾ ಸಿಬ್ಬಂದಿಗಳು ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದಾರೆ. ಆ್ಯಂಬುಲೆನ್ಸ್, ಆಕ್ಸಿಜನ್‌, ವೈದ್ಯರು ಎಲ್ಲರೂ ಘಟನಾ ಸ್ಥಳದಲ್ಲಿದ್ದು ಬಾಲಕನ ಚಲನವಲನವನ್ನು ಗಮನಿಸಿ ಆತನಿಗೆ ಕೃತಕ ಆಕ್ಸಿಜನ್‌ ನೆರವನ್ನು ನೀಡಿದ್ದಾರೆ. ಆದರೂ ದುರದೃಷ್ಟವಶಾತ್ ಬಾಲಕ

ಕೊಳವೆ ಬಾವಿಗೆ ಬಿದ್ದು 5 ವರ್ಷದ ಬಾಲಕ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜಮ್ಮು- ಕಾಶ್ಮೀರದ ವಿವಿಧೆಡೆ ಎನ್ಐಎ ದಾಳಿ

(ನ್ಯೂಸ್ ಕಡಬ) newskadaba.com ಶ್ರೀನಗರ, ಮಾ. 14. ಭಯೋತ್ಪಾದನೆಗೆ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳವು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್, ಪುಲ್ವಾಮಾ, ಅನಂತನಾಗ್ ಮತ್ತು ಶೋಪಿಯಾನ್‌ ಪ್ರದೇಶಗಳಲ್ಲಿ ಶಂಕಿತರ ನಿವಾಸಕ್ಕೆ ಇಂದು ಬೆಳಗ್ಗೆ ದಾಳಿ ಮಾಡಿ ತನಿಖೆ ನಡೆಸಿದ ಘಟನೆ ವರದಿಯಾಗಿದೆ. ದೇಶದಲ್ಲಿ ಭಯೋತ್ಪಾದಕ ಕೃತ್ಯವೆಸೆಗಲು ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎನ್‌ ಐಎ ಅಧಿಕಾರಿಗಳು ಹಲವೆಡೆ ಹಣದ ಮೂಲವನ್ನು ಹುಡುಕುವ ನಿಟ್ಟಿನಲ್ಲಿ ದಾಳಿ ನಡೆಸಿದ್ದಾರೆ.

ಜಮ್ಮು- ಕಾಶ್ಮೀರದ ವಿವಿಧೆಡೆ ಎನ್ಐಎ ದಾಳಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಂದೇ ಭಾರತ್ ಎಕ್ಸ್‌ಪ್ರೆಸ್‌ ನ ಮೊದಲ ಮಹಿಳಾ ಲೋಕೋ ಪೈಲಟ್ ಆಗಿ ಸುರೇಖಾ ಯಾದವ್            

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 14. ಭಾರತದ ಮೊದಲ ಮಹಿಳಾ ಲೋಕೋಮೋಟಿವ್ ಪೈಲಟ್ ಸುರೇಖಾ ಯಾದವ್ ಅವರು ಸೊಲ್ಲಾಪುರದಿಂದ ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ವರೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಚಲಾಯಿಸಿದ್ದು, ವಂದೇ ಭಾರತ್ ಎಕ್ಸ್‌ಪ್ರೆಸ್‌ ನ ಮೊದಲ ಮಹಿಳಾ ಲೋಕೋಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ವಂದೇ ಭಾರತ್ ನಾರಿ ಶಕ್ತಿಯಿಂದ ನಡೆಸಲ್ಪಡುತ್ತಿದೆ. ಸುರೇಖಾ ಯಾದವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ನ

ವಂದೇ ಭಾರತ್ ಎಕ್ಸ್‌ಪ್ರೆಸ್‌ ನ ಮೊದಲ ಮಹಿಳಾ ಲೋಕೋ ಪೈಲಟ್ ಆಗಿ ಸುರೇಖಾ ಯಾದವ್             Read More »

ರಾಷ್ಟ್ರೀಯ ನ್ಯೂಸ್

2023 ನಾಟು ನಾಟು ಹಾಡಿಗೆ ಕೋಟಿ ಕೋಟಿ ಬೆಟ್ಟಿಂಗ್ ಕಟ್ಟಿದ ಸೆಲೆಬ್ರಿಟಿಗಳು

(ನ್ಯೂಸ್ ಕಡಬ) newskadaba.com. ಬೆಂಗಳೂರು. ಮಾ. 13. ನಾಟು ನಾಟು ಹಾಡು ಆಸ್ಕರ್ ಗೆಲ್ಲೋದು ಗ್ಯಾರೆಂಟಿ ಎನ್ನುವುದು ಜನರ ನಂಬಿಕೆ ಆಗಿತ್ತು. ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿಗಾಗಿ ಇಡೀ ಭಾರತವೇ ಪ್ರಾರ್ಥಿಸುತ್ತಿತ್ತು. ಮತ್ತೊಂದೆಡೆ, ಈ ಹಾಡು ಆಸ್ಕರ್ ಗೆಲ್ಲುತ್ತಾ? ಇಲ್ಲವಾ ಎನ್ನುವ ಬಗ್ಗೆ ಜೋರಾಗಿ ಬೆಟ್ಟಿಂಗ್ ನಡೆದೆದಿದೆ. ಆನ್ಲೈನ್ ಪ್ಲಾಟ್ಫಾರ್ಮ ನಲ್ಲಿ ಕೋಟಿಗಟ್ಟಲೆ ಹಣ ಕಟ್ಟಿರುವ ವರದಿ ಆಗಿದೆ. ಭಾರತದ ಪ್ರಮುಖ ನಗರಗಳಾದ ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಆನ್ಲೈನ್ ಬುಕ್ಕಿಗಳು 1:4 ರ ರೇಂಜ್ ನಲ್ಲಿ

2023 ನಾಟು ನಾಟು ಹಾಡಿಗೆ ಕೋಟಿ ಕೋಟಿ ಬೆಟ್ಟಿಂಗ್ ಕಟ್ಟಿದ ಸೆಲೆಬ್ರಿಟಿಗಳು Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಕೇರಳದ ಕಣ್ಣೂರಿನಲ್ಲಿ ಬಾಂಬ್ ಸ್ಫೋಟ ➤ಇಬ್ಬರು ಗಂಭೀರ!

(ನ್ಯೂಸ್ ಕಡಬ) newskadaba.com.ಕೇರಳ. 13. ಕಣ್ಣೂರು ಜಿಲ್ಲೆಯಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಇಬ್ಬರು ಗಂಭೀರ  ಗಾಯಗೊಂಡ ಘಟನೆ ನಡೆದಿದೆ. ಭಾನುವಾರ ರಾತ್ರಿ ಕಣ್ಣೂರು ಜಿಲ್ಲೆಯ ಕಕ್ಕಯಂಗಡದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮನೆಯ ಒಳಗೆ ಬಾಂಬ್ ಸ್ಫೋಟಗೊಂಡಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಕೇರಳದ ಕಣ್ಣೂರಿನಲ್ಲಿ ಬಾಂಬ್ ಸ್ಫೋಟ ➤ಇಬ್ಬರು ಗಂಭೀರ! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top